ಕಳೆದ 17 ವರ್ಷಗಳಿಂದ ಶಾಲಾ ಕಾಲೇಜಿಗೆ ಒಂದೇ ಒಂದು ದಿನ ಗೈರಾಗಿಲ್ವಂತೆ ಈ ವಿದ್ಯಾರ್ಥಿ..!

ವಿನೋತ್ ತನ್ನ ಹಾಜರಾತಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಇದುವೇ ಸಾಕ್ಷಿ.

zahir | news18
Updated:March 13, 2019, 3:46 PM IST
ಕಳೆದ 17 ವರ್ಷಗಳಿಂದ ಶಾಲಾ ಕಾಲೇಜಿಗೆ ಒಂದೇ ಒಂದು ದಿನ ಗೈರಾಗಿಲ್ವಂತೆ ಈ ವಿದ್ಯಾರ್ಥಿ..!
PC: NIE
  • News18
  • Last Updated: March 13, 2019, 3:46 PM IST
  • Share this:
ಇಂದಿನ ಕಾಲದಲ್ಲಿ ಶಾಲಾ ಕಾಲೇಜುಗಳಿಗೆ ಚಕ್ಕರ್ ಹೊಡೆಯದವರು ಯಾರಿದ್ದಾರೆ ಹೇಳಿ? ಅದರಲ್ಲೂ ಕಾಲೇಜಿನಲ್ಲಿ​ ಕ್ಲಾಸ್​ಗೆ ಬಂಕ್ ಹಾಕುವುದು ವಿದ್ಯಾರ್ಥಿಗಳ ಜೀವನದ ಜನ್ಮ ಸಿದ್ಧ ಹಕ್ಕು ಎಂಬಂತಾಗಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದ್ದಾರೆ.  ಕಳೆದ 17 ವರ್ಷಗಳಿಂದ ಶಾಲಾ ಕಾಲೇಜಿಗೆ ಗೈರಾಗದೇ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕವೇ ಹೊಸ ದಾಖಲೆಯನ್ನು ಬರೆದಿದ್ದಾರೆ.

ಹೆಸರು ಜಿ.ವಿ ವಿನೋತ್ ಕುಮಾರ್. ಚೆನ್ನೈ ಮೂಲದ ಇವರು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿ. ಕಳೆದ 17 ವರ್ಷಗಳಿಂದ ಶಾಲಾ ಕಾಲೇಜಿಗೆ ಒಂದೇ ಒಂದು ದಿನ ಗೈರು ಹಾಜರಾಗಿಲ್ಲ. ಬಾಳ್ಯದಿಂದಲೇ ಶಾಲೆಯಲ್ಲಿ ಶೇ.100 ರಷ್ಟು ಹಾಜರಾತಿ ಪಡೆಯುತ್ತಿದ್ದ ವಿನೋತ್​ 12ನೇ ತರಗತಿ ಮುಗಿಸಿದಾಗ ಶಾಲೆಯಿಂದ ವಿಶೇಷ ಸಾಧನೆಗೆ ಪ್ರಮಾಣ ಪತ್ರ ನೀಡಲಾಗಿತ್ತು. ಇದರಿಂದ ಖುಷಿ ಮತ್ತು ಉತ್ಸಾಹವನ್ನು ಹೆಚ್ಚಿಸಿಕೊಂಡ ಯುವ ವಿದ್ಯಾರ್ಥಿ ಏನೇ ತೊಂದರೆಗಳಿದ್ದರೂ ಶಾಲೆಗೆ ಹಾಜರಾಗುವುದನ್ನು ತಪ್ಪಿಸುತ್ತಿರಲಿಲ್ಲ.

ಇದೇ ಸಂದರ್ಭದಲ್ಲಿ ಪುಣ್ಯಾತ್ಮರೊಬ್ಬರು 14 ವರ್ಷಗಳಿಂದ ಯಾವುದೇ ರಜೆಯನ್ನು ತೆಗೆದುಕೊಳ್ಳದೇ ಹಾಜರಾತಿ ದಾಖಲೆ ಮಾಡಿರುವುದು ವಿನೋತ್ ಕಿವಿಗೆ ಬಿದ್ದಿದೆ. ಮುಂದೆ ಈ ದಾಖಲೆಯನ್ನು ಮುರಿಯಲು ಅಸೌಖ್ಯದ ಸಂದರ್ಭದಲ್ಲೂ ಕಾಲೇಜಿಗೆ ಹೋಗುತ್ತಿದ್ದರಂತೆ. ಇದೀಗ ಆ ದಾಖಲೆ ಅಳಿಸಿ ಹಾಕಿ 3 ವರ್ಷ ಮುಂದಕ್ಕೆ ಹೋಗಿದ್ದಾರೆ.

ವಿನೋತ್ ತನ್ನ ಹಾಜರಾತಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಇದುವೇ ಸಾಕ್ಷಿ. 2015 ಮತ್ತು 2016 ರಲ್ಲಿ ತಮಿಳುನಾಡಿನಲ್ಲಿ ಉಂಟಾದ ಪ್ರವಾಹ ಹಾಗೂ ಚಂಡಮಾರುತ ಸಂದರ್ಭದಲ್ಲೂ, ವಿನೋತ್ ಮಾತ್ರ ಕಾಲೇಜಿಗೆ ತೆರಳುತ್ತಿದ್ದನು. ಅಲ್ಲದೆ ಕೆಲವೊಮ್ಮೆ ಕ್ಲಾಸಿನಲ್ಲಿ ಏಕೈಕ ವಿದ್ಯಾರ್ಥಿಯಾಗಿ ಕೂಡ ಹಾಜರಾಗಿದ್ದನು. ಎಲ್ಲ ಕಷ್ಟಗಳನ್ನು ದಾಟಿ ತನ್ನ ಗುರಿಯನ್ನು ಈಡೇರಿಸಿಕೊಳ್ಳಬೇಕೆಂಬ ಪ್ರತಿಜ್ಞೆ ಮಾಡಿಕೊಂಡಿದ್ದನು.

ಇಂತಹ ಅಪರೂಪದ ಸಾಧನೆಗೆ ಹೆತ್ತವರ ಪ್ರೋತ್ಸಾಹವೇ ಮುಖ್ಯ ಕಾರಣ. ಸ್ವತಃ ಶಿಕ್ಷಕರಾಗಿರುವ ನನ್ನ ತಂದೆಯವರು ಪ್ರತಿ ದಿನ ತಪ್ಪದೇ ನನ್ನನ್ನು ಶಾಲೆಗೆ ಬಿಡುತ್ತಿದ್ದರು. ಇದು ಕೂಡ ತನ್ನ ವರ್ಷಪೂರ್ತಿ ಹಾಜರಾತಿಗೆ ಒಂದು ಕಾರಣ ಎನ್ನಬಹುದು. ಈಗ ತನ್ನ ಮುಂದಿರುವುದು ವಿಶ್ವದಾಖಲೆ. ಸತತ 19 ವರ್ಷ ಶೇ. 100 ರಷ್ಟು ಹಾಜರಾತಿ ಮೂಲಕ ಹೊಸ ದಾಖಲೆ ಬರೆಯಬೇಕೆಂಬ ಗುರಿ ಹೊಂದಿದ್ದೇನೆ. ಹೀಗೆ ವಿನೋತ್ ಹೇಳುವಾಗ ಆ ಗುರಿಯನ್ನು ಸಾಧಿಸಿಯೇ ತೀರುವೆ ಎಂಬ ಮಿಂಚು ಆತನ ಕಣ್ಣಲ್ಲಿತ್ತು.

ಇದನ್ನೂ ಓದಿ: ಮತದಾನದಲ್ಲಿ ನೋಟಾ ಆಯ್ಕೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಏಕೆ ಗೊತ್ತಾ?
First published:March 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading