• Home
  • »
  • News
  • »
  • trend
  • »
  • ಗರ್ಭಪಾತ ಅಥವಾ ಮಗುವಿನ ಸಾವಿನ ನೋವಿನಲ್ಲಿರುವವರಿಗೆ ಧೈರ್ಯ ಕೊಡುವ ಯೋಧರಿವರು, ಸಮಾಜಕ್ಕೆ ಇಂಥವರು ಬೇಕು!

ಗರ್ಭಪಾತ ಅಥವಾ ಮಗುವಿನ ಸಾವಿನ ನೋವಿನಲ್ಲಿರುವವರಿಗೆ ಧೈರ್ಯ ಕೊಡುವ ಯೋಧರಿವರು, ಸಮಾಜಕ್ಕೆ ಇಂಥವರು ಬೇಕು!

ಸರೀನಾ ಕೌರ್ ದೋಸಾಂಜ್ ಮತ್ತು ವಿಕ್

ಸರೀನಾ ಕೌರ್ ದೋಸಾಂಜ್ ಮತ್ತು ವಿಕ್

ಗರ್ಭಪಾತ ಹಾಗೂ ಶಿಶು ಮರಣದ ನೋವು ಇಂತಹ ಕಟ್ಟುಪಾಡುಗಳನ್ನು ತೊಡೆದು ಹಾಕಲೆಂದೇ ಸರೀನಾ ಕೌರ್ ದೋಸಾಂಜ್ ಮತ್ತು ಅವರ ಪತಿ ವಿಕ್, ಹಿಮ್ಮತ್ ಕಲೆಕ್ಟಿವ್ ಎಂಬ ಚ್ಯಾರಿಟಿಯನ್ನು ಸ್ಥಾಪಿಸಿದ್ದಾರೆ. ಈ ಚ್ಯಾರಿಟಿ ದಕ್ಷಿಣ ಏಷ್ಯಾದ ಪುರುಷರು ಹಾಗೂ ಮಹಿಳೆಯರಿಗೆ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಮುಂದೆ ಓದಿ ...
  • Share this:

ಅಪರೂಪದ ಅನುವಂಶಿಕ ಕಾಯಿಲೆಯಿಂದಾಗಿ ತಮ್ಮ ಐದು ಮಕ್ಕಳನ್ನು (Children) ಕಳೆದುಕೊಂಡ ಇಮ್ತಿಯಾಜ್ ಫಾಜಿಲ್ 24 ಬಾರಿ ಗರ್ಭವತಿಯಾದರೂ ಆಕೆ ಜೀವಂತವಾಗಿ ಹೊಂದಿರುವುದು ಬರೇ ಇಬ್ಬರು ಮಕ್ಕಳನ್ನು ಮಾತ್ರ. 1999 ರಲ್ಲಿ ಆಕೆ ಮೊದಲ ಬಾರಿಗೆ ಗರ್ಭವತಿಯಾದರು ನಂತರ 23 ವರ್ಷಗಳಲ್ಲಿ 17 ಬಾರಿ ಗರ್ಭಪಾತಗಳಿಗೆ (Miscarriage) ಒಳಗಾದರು ಹಾಗೂ ಅವರ ಐದು ಶಿಶುಗಳು ಅಪರೂಪದ ಅನುವಂಶಿಕ ಕಾಯಿಲೆಯಿಂದಾಗಿ ಮರಣ ಹೊಂದಿದವು. 49 ರ ಹರೆಯದ ಇಮ್ತಿಯಾಜ್ ಮ್ಯಾಂಚೆಸ್ಟರ್‌ನ ಲೆವೆನ್‌ಶುಲ್ಮ್‌ನವರಾಗಿದ್ದು ಸುದ್ದಿಮಾಧ್ಯಮದೊಂದಿಗೆ ತಮ್ಮ ನೋವನ್ನು (Pain) ಹಂಚಿಕೊಂಡಿದ್ದಾರೆ. ತಮಗಾದ ನಷ್ಟದ ಬಗ್ಗೆ ಮಾತನಾಡುವುದು ಸುಲಭದ ವಿಚಾರವಲ್ಲದಿದ್ದರೂ ಸುದ್ದಿಮಾಧ್ಯಮಗಳಿಗೆ ತಿಳಿಸಲು ಆಕೆ ನಿರ್ಧರಿಸಿದ್ದರು ಏಕೆಂದರೆ ಇಂತಹ ವಿಷಯಗಳನ್ನು ದಕ್ಷಿಣ ಏಷ್ಯಾದ ಸಮೂಹಗಳಲ್ಲಿ ಮಾತನಾಡುವುದು ನಿಷಿದ್ಧವಾಗಿದೆ.


ಇಂತಹ ವಿಷಯಗಳನ್ನು ನಿಷೇಧಿತ ವಿಷಯವಾಗಿ ಪರಿಗಣಿಸುತ್ತಾರೆ. ಈ ನಿಯಮವನ್ನು ಇಮ್ತಿಯಾಜ್ ಬದಲಾಯಿಸಲು ಬಯಸಿದರು ಹಾಗೂ ತಮಗಾದ ನಷ್ಟದ ಕುರಿತು ಜಗತ್ತಿಗೆ ತಿಳಿಸಲು ಬಯಸಿದರು. ಈ ಮೂಲಕ ಸುತ್ತಲೂ ಪಸರಿಸಿದ್ದ ಕಳಂಕವನ್ನು ತೊಡೆದುಹಾಕುವ ನಿರ್ಧಾರವನ್ನು ಆಕೆ ಮಾಡಿದರು.


ಗರ್ಭಪಾತ, ಶಿಶು ಮರಣದ ಬಗ್ಗೆ ಮಾತನಾಡುವುದು ನಿಷಿದ್ಧ
ತಮ್ಮದೇ ಕುಟುಂಬದವರು ಶಿಶುಗಳ ಮರಣದ ಬಗ್ಗೆ ತಮ್ಮೊಂದಿಗೆ ಮಾತನಾಡಬಾರದು ಎಂಬುದು ನಿಯಮವಾಗಿದೆ ಎಂದು ಇಮ್ತಿಯಾಜ್ ಹೇಳುತ್ತಾರೆ. ಇಮ್ತಿಯಾಜ್ ಹೇಳುವಂತೆ ಒಬ್ಬ ತಾಯಿಗೆ ತನ್ನ ಮಕ್ಕಳನ್ನು ಕಳೆದುಕೊಳ್ಳುವುದು ಎಂದರೆ ಅದರಷ್ಟು ದುಃಖಕರವಾದ ವಿಷಯ ಇನ್ನೊಂದಿರಲಿಕ್ಕಿಲ್ಲ.


ಇದನ್ನೂ ಓದಿ: Invention Story: ಈ ಮಗ ಅಮ್ಮನಿಗೋಸ್ಕರ ರೋಬೋಟ್​ ಮಾಡಿದ್ದಾನೆ, ನೀವ್ ಏನ್ ಮಾಡಿದ್ದೀರಾ?


ಆಕೆಗದು ಮರಣಕ್ಕೆ ಸಮನಾಗಿರುತ್ತದೆ, ಹಾಗಾಗಿಯೇ ಈ ವಿಷಯದ ಬಗ್ಗೆ ಯಾರೂ ಕೆದಕುವುದಿಲ್ಲ ಎಂಬುದು ಇಮ್ತಿಯಾಜ್ ಮಾತಾಗಿದೆ. ಆ ದುಃಖವನ್ನು ತಮ್ಮಲ್ಲಿಯೇ ಇರಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ನಷ್ಟವನ್ನು ಆಕೆ ಅನುಭವಿಸಿದರೂ ಯಾರೂ ಆಕೆಯ ಆರೋಗ್ಯದ ಬಗ್ಗೆ ಯಾವ ಕಾಳಜಿಯೂ ತೋರಲಿಲ್ಲ. ಇನ್ನೂ ಮಕ್ಕಳ ಬಗ್ಗೆಯೇ ಯೋಚಿಸುತ್ತಿರುವೆಯಾ ಎಂದು ಯಾರೂ ನನ್ನನ್ನು ಕೇಳಲಿಲ್ಲ ಎಂದು ಇಮ್ತಿಯಾಜ್ ಹೇಳುತ್ತಾರೆ. ನಿಜವಾಗಿ ಹೇಳಬೆಕೆಂದರೆ ನನ್ನ ಮಕ್ಕಳ ಬಗ್ಗೆ ನಾನು ಯೋಚಿಸದೇ ಇರುವ ಒಂದು ದಿನ ಕೂಡ ಇಲ್ಲ ಎಂದು ಅವರು ಹೇಳುತ್ತಾರೆ.


Himmat Charity is a refuge for those suffering from miscarriage and death of children stg-asp
ಇಮ್ತಿಯಾಜ್ ಫಾಜಿಲ್


ಇಂತಹ ಕಟ್ಟುಪಾಡುಗಳನ್ನು ತೊಡೆದು ಹಾಕಲೆಂದೇ ಸರೀನಾ ಕೌರ್ ದೋಸಾಂಜ್ ಮತ್ತು ಅವರ ಪತಿ ವಿಕ್, ಹಿಮ್ಮತ್ ಕಲೆಕ್ಟಿವ್ ಎಂಬ ಚ್ಯಾರಿಟಿಯನ್ನು ಸ್ಥಾಪಿಸಿದ್ದಾರೆ. ಈ ಚ್ಯಾರಿಟಿ ದಕ್ಷಿಣ ಏಷ್ಯಾದ ಪುರುಷರು ಹಾಗೂ ಮಹಿಳೆಯರಿಗೆ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ದಂಪತಿಗಳು ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ವಾಲ್ಸಾಲ್‌ ಮೂಲದವರಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಗರ್ಭಪಾತದ ನೋವನ್ನು ಸ್ವತಃ ಅನುಭವಿಸಿದವರು. ಇದೊಂದು ರೀತಿ ಹೃದಯಕ್ಕೆ ಉಂಟಾಗುವ ನೋವಾಗಿದ್ದು ಆ ನೋವು ಅನುಭವಿಸಿದವರಿಗೆ ಈ ಮಾತು ಅಷ್ಟು ಸುಲಭವಾಗಿ ಮಾತನಾಡುವಂತಹದ್ದಲ್ಲ ಎಂದೇ ತಿಳಿಸಿದ್ದಾರೆ. ಎಷ್ಟೋ ಜನರು ಆ ನೋವನ್ನು ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡು ಹೊರಗೆ ಸಾಮಾನ್ಯರಾಗಿರುತ್ತಾರೆ ಎಂಬುದು ಸರೀನಾ ಮಾತಾಗಿದೆ.


ವಿಕ್ ದಂಪತಿಗಳ ಚ್ಯಾರಿಟಿ ಹಿಮ್ಮತ್
ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಯಾರಾದರೂ ಗರ್ಭಪಾತದ ನೋವನ್ನು ಅನುಭವಿಸುತ್ತಿರುವವರು ಈ ನೋವನ್ನು ಮುಚ್ಚಿಟ್ಟುಕೊಂಡು ಹೊರಗೆ ನಗುತ್ತಿದ್ದಾರೆ. ಇಂತಹ ವಿಷಯಗಳನ್ನು ಹೊರಗೆ ಮಾತನಾಡಿಕೊಳ್ಳಬಾರದು ಎಂಬುದು ಒಂದು ಕಳಂಕವಾಗಿದ್ದು ಅದನ್ನು ತೊಡೆದುಹಾಕಬೇಕು ಎಂಬುದು ಸರೀನಾ ಅಭಿಪ್ರಾಯವಾಗಿದೆ.


ತಮಗಾದ ಆಘಾತವನ್ನು ನಿಭಾಯಿಸಲು ವಿಕ್ ದಂಪತಿಗಳು ಸಹಾಯ ಮಾಡಿದ್ದಾರೆ ಎಂದು ಇತರರು ಹೇಳಿದರೆ ಇನ್ನಿತರರು ಇವರು ಮಾಡುವ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಹಂಚಿಕೊಳ್ಳುವುದರಿಂದ ಅದು ಅರ್ಧದಷ್ಟು ಪರಿಹಾರವಾಗುತ್ತದೆ ಎಂಬುದು ವಿಕ್ ದಂಪತಿಗಳ ನಂಬಿಕೆಯಾಗಿದೆ.


ಇದನ್ನೂ ಓದಿ:  Nigeria: ಅವಳಿ ಮಕ್ಕಳ ಜನನಕ್ಕೆ ಪ್ರಸಿದ್ಧಿ ಪಡೆದ ನೈಜೀರಿಯಾ, ಇಲ್ಲಿ ನಡೆಯುತ್ತೆ ವಾರ್ಷಿಕ ಹಬ್ಬ


ನಮ್ಮ ಸಮುದಾಯದಲ್ಲಿ ಗರ್ಭಪಾತ, ಶಿಶು ಮರಣ ಹೊಂದಿದಾಗ ಇದನ್ನು ಕಳಂಕ ಎಂದು ಭಾವಿಸದೇ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸರೀನಾ ಹೇಳುತ್ತಾರೆ. ಇಂತಹ ಘಟನೆಗಳನ್ನು ಜನರು ಸಾಮಾನ್ಯವೆಂದು ಪರಿಗಣಿಸಬೇಕು ಹಾಗೂ ಅದರ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎಂಬುದೇ ನಮ್ಮ ಆಶಯ ಎಂದು ದಂಪತಿಗಳು ಹೇಳಿದ್ದಾರೆ. ಶಿಶುಗಳ ಮರಣದಿಂದ ಸಾಕಷ್ಟು ನೋವು ಅನುಭವಿಸಿರುವ ಇಮ್ತಿಯಾಜ್ ಹೇಳಿಕೆ ಕೂಡ ಇದೇ ಆಗಿದೆ. ತನ್ನಂತೆಯೇ ನೋವು ಅನುಭವಿಸುತ್ತಿರುವ ಇತರರಿಗೆ ನೆರವಾಗುವುದು ಅವರ ಉದ್ದೇಶವಾಗಿದೆ.

Published by:Ashwini Prabhu
First published: