ಬೋಟ್ ಹತ್ತಲು ಬೆನ್ನು ನೀಡಿದ ಜೈಸಲ್​ಗೆ ಸಿಕ್ತು ಭರ್ಜರಿ ಗಿಫ್ಟ್

news18
Updated:September 9, 2018, 1:21 PM IST
ಬೋಟ್ ಹತ್ತಲು ಬೆನ್ನು ನೀಡಿದ ಜೈಸಲ್​ಗೆ ಸಿಕ್ತು ಭರ್ಜರಿ ಗಿಫ್ಟ್
news18
Updated: September 9, 2018, 1:21 PM IST
-ನ್ಯೂಸ್ 18 ಕನ್ನಡ

ಕೇರಳದ ಮಹಾಪ್ರಳಯದ ಸಂತ್ರಸ್ತರ ಜೀವ ರಕ್ಷಣೆಯ ವೇಳೆ ಆ ಯುವಕ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿದ್ದರು. ಇಷ್ಟು ಹೇಳಿದರೇನೇ ಆ ಯುವಕ ಯಾರೆಂಬುದು ಎಲ್ಲರ ಕಣ್ಮುಂದೆ ಬರುತ್ತದೆ. ಹೌದು, ಅವರೇ ಜೈಸಲ್ ಕೆ.ಪಿ. ಸಂತ್ರಸ್ತರ ರಕ್ಷಣೆ ವೇಳೆ ನೆಲಮಟ್ಟದಿಂದ ರಕ್ಷಣಾ ಪಡೆಯ ಬೋಟ್ ಎತ್ತರದಲ್ಲಿತ್ತು. ಹೆಂಗಸರು ಸೇರಿದಂತೆ ವಯಸ್ಸಾದವರು ಬೋಟ್ ಏರಲು ಕಷ್ಟ ಪಡುವ ಸ್ಥಿತಿಯಲ್ಲಿತ್ತು. ರಕ್ಷಣಾ ಪಡೆಯಲ್ಲಿದ್ದ ಜೈಸಲ್ ಹಿಂದೆ ಮುಂದೆ ಯೋಚಿಸಿಲ್ಲ. ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಜನರು ಬೋಟ್ ಏರಲು ನೆರವಾಗಿದ್ದರು. ಈ ವಿಡಿಯೋ ಸಾಮಾಜಿ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಜೈಸಲ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಈಗ ಅದೇ ಜೈಸಲ್​ಗೆ ಮಹೀಂದ್ರಾ ವಾಹನ ಶೋ ರೂಂ ಭರ್ಜರಿ ಗಿಫ್ಟ್ ನೀಡಿ ಗೌರವಿಸಿದೆ.


ಪ್ರಳಯ ಸಮಯದಲ್ಲಿ ಜೈಸಲ್ ಮಾಡಿದ ಸಮಾಜ ಸೇವೆಯನ್ನು ಗೌರವಿಸಿ ಕ್ಯಾಲಿಕಟ್​ನ ಇರಂ ಮೋಟರ್ಸ್​ ಮಹೀಂದ್ರಾ ಕಂಪನಿಯ ಹೊಸ ವಾಹನ ಮೊರಾಝೊ ಕಾರನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದೆ. ಇರಂ ಮೋಟರ್ಸ್​ ಶೋ ರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳದ ಕಾರ್ಮಿಕ ಸಚಿವ ಟಿ.ಪಿ ರಾಮಚಂದ್ರನ್ ಕಾರಿನ ಕೀಯನ್ನು ಜೈಸಲ್​ಗೆ ಹಸ್ತಾಂತರಿಸಿ ಅಭಿನಂದಿಸಿದರು. ಇದೇ ವೇಳೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಜೈಸಲ್ ತಿಳಿಸಿದ್ದಾರೆ.ಕಾರು ಉಡುಗೊರೆ ಲಭಿಸಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ ಜೈಸಲ್, ತಮ್ಮ ಜಿಲ್ಲೆಯ ಜನರ ಸೇವೆಗಾಗಿ ಈ ವಾಹನವನ್ನು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಜೈಸಲ್​ ಕಾರ್ಯಕ್ಕೆ ಮಲಯಾಳಂ ಚಿತ್ರ ನಿರ್ದೇಶಕ ವಿನಯನ್ ಒಂದು ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು.ಈ ಕಾರ್ಯಕ್ರಮದಲ್ಲಿ ಇರಂ ಸಂಸ್ಥೆಯ ಮುಖ್ಯಸ್ಥ ಸಿದ್ದಿಕ್ ಅಹಮದ್, ಮೇಯರ್ ತೋಟ್ಟತಿಲ್ ರವೀಂದ್ರನ್, ಕ್ಯಾಲಿಕಟ್ ಡಿಸಿ ಯು.ವಿ ಜೋಸ್ ಭಾಹವಹಿಸಿದ್ದರು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ