ಮುಸ್ಲಿಂ ಯುವಕನನ್ನು ರಕ್ಷಿಸಿದ ಪೊಲೀಸ್​ ವೀಡಿಯೋ ವೈರಲ್​


Updated:May 26, 2018, 1:54 PM IST
ಮುಸ್ಲಿಂ ಯುವಕನನ್ನು ರಕ್ಷಿಸಿದ ಪೊಲೀಸ್​ ವೀಡಿಯೋ ವೈರಲ್​

Updated: May 26, 2018, 1:54 PM IST
ಉತ್ತರಖಂಡ: ರಾಮನಗರದಲ್ಲಿ ಮುಸ್ಲಿಂ ಯುವಕನ ಮೇಲೆ ಕೇಸರಿ ಪಡೆ ಭಯೋತ್ಪಾದಕರು ದಾಳಿ ನಡೆಸಲು ಮುಂದಾದದ ಸಂದರ್ಭದಲ್ಲಿ ಸಿಖ್​ ಪೊಲೀಸ್​ ಯುವಕನನ್ನು ರಕ್ಷಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹಿಂದೂ ಯುವತಿಯನ್ನು ಭೇಟಿಯಾಗಿದ್ದ ಮುಸ್ಲಿಂ ಸಮುದಾಯದ ಯುವಕನ ಮೇಲೆ ಕೆಲ ತೀವ್ರವಾದಿಗಳ ಗುಂಪು ದಾಳಿ ನಡೆಸಲು ಮುಂದಾಗಿದೆ. ಗಿರಿಜಾ ದೇವಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಈ ವೇಳೆ ಕೆಲ ಸ್ಥಳೀಯರು ಸಬ್​ ಇನ್ಸ್​ಪೆಕ್ಟರ್​ ಗಗನ್​ದೀಪ್​ ಸಿಂಗ್​ಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಸಮಾಧಾನ ಪಡಿಸಲು ಮುಂದಾಗಿದ್ದಾರೆ.

ಪೊಲೀಸರ ಮಾತಿಗೆ ಕಿಮ್ಮತ್ತು ನೀಡದ ಗುಂಪು ಯುವಕನ ಮೇಲೆ ದಾಳಿ ನಡೆಸಿದೆ, ಕೂಡಲೇ ಕಾರ್ಯ ಪ್ರವೃತ್ತರಾದ ಗಗನ್​ ದೀಪ್​ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಗುಂಪು ಪೊಲೀಸರ ವಿರುದ್ಧವೇ ಘೋಷಣೆ ಕೂಗಿದ್ದಾರೆ. ಇಷ್ಟೆಲ್ಲಾ ರಾದ್ಧಾಂತ ನಡೆದರೂ ಹುಡುಗನಿಗೆ ಒಂಚೂರು ಗಾಯಗಳಾಗದಂತೆ ಕಾಪಾಡಿಕೊಂಡು ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದ ಕೀರ್ತಿ ಗಗನ್​ ದೀಪ್​ಗೆ ಸಲ್ಲುತ್ತದೆ.

ಇದೀಗ ಗಗನ್​ ದೀಪ್​ ಕೆಲಸ ಇಂಟರ್​ನೆಟ್​ನಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು ಈ ವೀಡಿಯೋ ವೈರಲ್​ ಆಗಿದೆ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ