• Home
  • »
  • News
  • »
  • trend
  • »
  • Dolphins in India: ಭಾರತದ ಈ ಸ್ಥಳಗಳಲ್ಲಿ ಡಾಲ್ಫಿನ್‌ಗಳನ್ನು ವೀಕ್ಷಿಸಬಹುದು ನೋಡಿ!

Dolphins in India: ಭಾರತದ ಈ ಸ್ಥಳಗಳಲ್ಲಿ ಡಾಲ್ಫಿನ್‌ಗಳನ್ನು ವೀಕ್ಷಿಸಬಹುದು ನೋಡಿ!

ಡಾಲ್ಫಿನ್​

ಡಾಲ್ಫಿನ್​

ಡಾಲ್ಫಿನ್​ ಸಮುದ್ರದಲ್ಲಿ ಆಕರ್ಷಕವಾಗಿ ಈಜುವುದನ್ನು ನೋಡುವ ಅವಕಾಶವು ನಿಜವಾಗಿಯೂ ಅಪರೂಪದ ಅನುಭವವಾಗಿರುತ್ತದೆ. ಹಾಗಿದ್ರೆ ನೀವೇನಾದರೂ ಪ್ರಸಿದ್ಧ ಬೀಜ್‌ಗಳ ಕಡೆಗೆ ಪ್ರಯಾಣ ಬೆಳೆಸುತ್ತಿದ್ದರೆ ಡಾಲ್ಫಿನ್‌ಗಳನ್ನು ಹೊಂದಿರುವ ಸ್ಥಳಗಳನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸುವುದನ್ನು ಮರೆಯಬೇಡಿ.

ಮುಂದೆ ಓದಿ ...
  • Share this:

ಡಾಲ್ಫಿನ್ (Dolphins)‌,  ಈ ಜಲಚರಗಳನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಈ ಭವ್ಯವಾದ ಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿಯೇ ವೀಕ್ಷಿಸುವು ಇನ್ನಷ್ಟು ವಿಶಿಷ್ಟವಾಗಿರುತ್ತದೆ. ಹೌದು, ಡಾಲ್ಫಿನ್ ವೀಕ್ಷಣೆ ಭಾರತದಲ್ಲಿ ಜನಪ್ರಿಯ ಚಟುವಟಿಕೆಯಾಗಿದೆ. ಅವುಗಳು ಸಮುದ್ರದಲ್ಲಿ ಆಕರ್ಷಕವಾಗಿ ಈಜುವುದನ್ನು ನೋಡುವ ಅವಕಾಶವು ನಿಜವಾಗಿಯೂ ಅಪರೂಪದ ಅನುಭವವಾಗಿರುತ್ತದೆ. ಹಾಗಿದ್ರೆ ನೀವೇನಾದರೂ ಪ್ರಸಿದ್ಧ ಬೀಜ್‌ಗಳ ಕಡೆಗೆ ಪ್ರಯಾಣ (Trip) ಬೆಳೆಸುತ್ತಿದ್ದರೆ ಡಾಲ್ಫಿನ್‌ಗಳನ್ನು ಹೊಂದಿರುವ ಸ್ಥಳಗಳನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸುವುದನ್ನು ಮರೆಯಬೇಡಿ. ನೀವು ಪ್ರಯಾಣಿಸುವ ಬೋಟ್‌ಗಳ (Boat) ಪಕ್ಕದಲ್ಲೇ ಅವುಗಳು ಈಜುವುದನ್ನು ನೋಡುವುದು, ನಿಮ್ಮ ಜೊತೆ ಅವು ಸಂಭಾಷಣೆ ನಡೆಸಲು ಯತ್ನಿಸುವ ಅಪರೂಪದ ಅನುಭವವನ್ನು ಪಡೆದುಕೊಳ್ಳಬಹುದು. ಅಂದಹಾಗೆ ಡಾಲ್ಫಿನ್-ವೀಕ್ಷಣೆಗಾಗಿ ಭಾರತದಲ್ಲಿ ಕೆಲವು ಆಕರ್ಷಕ ಸ್ಥಳಗಳ (Places) ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.


ಡಾಲ್ಫಿನ್‌ ವೀಕ್ಷಣೆಗೆ ಈ ಸ್ಥಳಗಳು ಬೆಸ್ಟ್‌!


ಗೋವಾ – ಗೋವಾದಲ್ಲಿ ನೀವು ಡಾಲ್ಫಿನ್‌ಗಳನ್ನು ನೋಡುವಂಥ ವಿಶಿಷ್ಟ ಅನುಭವ ಪಡೆಯಬಹುದು. ಇಲ್ಲಿನ ಮೊರ್ಜಿಮ್ ಬೀಚ್, ಸಿಂಕ್ವೆರಿಮ್ ಬೀಚ್, ಕೊಕೊ ಬೀಚ್ ಅಥವಾ ಕ್ಯಾವೆಲೋಸಿಮ್ ಬೀಚ್ ಹೀಗೆ ಅರೇಬಿಯನ್ ಸಮುದ್ರದಲ್ಲಿ ಡಾಲ್ಫಿನ್‌ಗಳನ್ನು ನೋಡಬಹುದಾಗಿದೆ. ಇವುಗಳ ಉತ್ತಮ ವೀಕ್ಷಣೆಗಾಗಿ ಮುಂಜಾನೆ ಭೇಟಿ ನೀಡಿದರೆ ಉತ್ತಮ. ವಿಶೇಷವಾಗಿ ಬೆಳಿಗ್ಗೆ 7 ರಿಂದ 9 ರವರೆಗೆ ನೀವು ಡಾಲ್ಫಿನ್‌ಗಳ ನೋಡುವಂಥ ಉತ್ತಮ ಅನುಭವವನ್ನು ಪಡೆಯುತ್ತೀರಿ. ಇನ್ನು ಡಾಲ್ಫಿನ್‌ಗಳು ಮುಂಜಾನೆ 10 ರಿಂದ ಮಧ್ಯಾಹ್ನದ ನಡುವೆ ಮತ್ತು ಮಧ್ಯಾಹ್ನ 2 ರಿಂದ ಮುಸ್ಸಂಜೆಯವರೆಗೆ ಹೆಚ್ಚು ಸಕ್ರಿಯವಾಗಿರುತ್ತವೆ. ಒಂದು ಟೆಲಿಫೋಟೋ ಲೆನ್ಸ್‌ಗಳು ಅಥವಾ ಬೈನಾಕ್ಯುಲರ್‌ಗಳನ್ನು ಹೊಂದಿದ್ದರೆ ಡಾಲ್ಫಿನ್‌ಗಳನ್ನು ಸುಲಭವಾಗಿ ಗುರುತಿಸಬಹುದು.


ಲಕ್ಷದ್ವೀಪ – ಇಲ್ಲಿ ನೀವು ಡಾಲ್ಫಿನ್ ಹೊಂದಿರುವ ನದಿಗಳನ್ನು ಕಾಣಬಹುದು. ಲಕ್ಷದ್ವೀಪದಲ್ಲಿ ಡಾಲ್ಫಿನ್‌ಗಳನ್ನು ಗುರುತಿಸಲು ಉತ್ತಮ ಸ್ಥಳಗಳೆಂದರೆ ಕಡಮತ್ ದ್ವೀಪ, ಅಗತ್ತಿ ದ್ವೀಪ ಮತ್ತು ಬಂಗಾರಮ್ ದ್ವೀಪ. ಸಾಮಾನ್ಯವಾಗಿ ಚಳಿಗಾಲ ಮತ್ತು ಅಕ್ಟೋಬರ್‌ನಿಂದ ಮೇ ಅವಧಿಯಲ್ಲಿ ಇಲ್ಲಿಗೆ ನೀವು ಭೇಟಿ ನೀಡಬಹುದು. ಅಲ್ಲದೇ ಲಕ್ಷದ್ವೀಪದಲ್ಲಿ ಡಾಲ್ಫಿನ್‌ಗಳನ್ನು ವೀಕ್ಷಿಸುವುದು ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಇದು ಪರಿಪೂರ್ಣ ಸಮಯವಾಗಿದೆ. ಇಲ್ಲಿ ಡಾಲ್ಫಿನ್ ಸ್ಪಾಟಿಂಗ್ ಜೊತೆಗೆ, ಪ್ರವಾಸಿಗರು ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್ ಮತ್ತು ಕ್ಯಾನೋಯಿಂಗ್‌ನಂತಹ ಜಲ ಕ್ರೀಡೆಗಳನ್ನು ಸಹ ಆನಂದಿಸಬಹುದು.


ಮಹಾರಾಷ್ಟ್ರ – ಇನ್ನು ಮಹಾರಾಷ್ಟ್ರದಲ್ಲಿಯೂ ನೀವು ಡಾಲ್ಫಿನ್‌ಗಳನ್ನು ನೋಡಬಹುದು. ಇಲ್ಲಿನ ಮುರುದ್ ಬೀಚ್, ತರ್ಕರ್ಲಿ ಬೀಚ್, ಕುರಾವ್ಡೆ ಬೀಚ್, ದಾಭೋಲ್ ಬಂದರು ಮತ್ತು ಹರಿಹರೇಶ್ವರ, ಭೋಗ್ವೆ ಬೀಚ್, ಅಂಜಾರ್ಲೆ ಬೀಚ್, ನಿವಾಟಿ ಬೀಚ್ ಮತ್ತು ಲಾಡ್ಘರ್ ಬೀಚ್‌ಗಳು ಡಾಲ್ಫಿನ್ ವೀಕ್ಷಣೆಗೆ ಜನಪ್ರಿಯ ತಾಣಗಳಾಗಿವೆ. ಇಲ್ಲಿನ ನೀವು ವೈವಿದ್ಯಮಯ ಡಾಲ್ಫಿನ್‌ಗಳನ್ನು ನೋಡುವಂಥ ಅನುಭವ ಪಡೆಯಬಹುದು.


ಇದನ್ನೂ ಓದಿ: ಗೃಹಿಣಿಯರ ನೋವನ್ನು ನೀಗಿಸಲು ಬಂದೇ ಬಿಡ್ತು ಪರಿಸರ ಸ್ನೇಹಿ ಒಲೆ!


ತಮಿಳುನಾಡು - ರಾಮೇಶ್ವರಂ ತನ್ನ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ಡಾಲ್ಫಿನ್‌ಗಳನ್ನು ನೋಡಲು ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಬಾಟಲ್‌ನೋಸ್ ಡಾಲ್ಫಿನ್‌ಗಳು, ಸಾಮಾನ್ಯ ಡಾಲ್ಫಿನ್‌ಗಳು, ರಿಸ್ಸೋಸ್ ಡಾಲ್ಫಿನ್‌ಗಳು ಮತ್ತು ಸ್ಪಿನ್ನರ್ ಡಾಲ್ಫಿನ್‌ಗಳನ್ನು ನೋಡಬಹುದು. ಅಲ್ಲದೇ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಅಭಯಾರಣ್ಯ, ಮತ್ತು ಗಲ್ಫ್ ಆಫ್ ಮನ್ನಾರ್ ನ್ಯಾಷನಲ್ ಪಾರ್ಕ್‌ಗಳಲ್ಲೂ ಡಾಲ್ಫಿನ್‌ ವೀಕ್ಷಿಸಬಹುದು. ಜೊತೆಗೆ ತಮಿಳುನಾಡಿನ ಇತರ ಜನಪ್ರಿಯ ಸ್ಥಳಗಳಲ್ಲಿ ಕೂಡ ಡಾಲ್ಫಿನ್‌ ನೋಡಲು ಸಿಗುತ್ತದೆ.




ಒಟ್ಟಾರೆ ಡಾಲ್ಫಿನ್‌ಗಳನ್ನು ನೋಡುವುದು ಒಂದು ಅಪರೂಪದ ಅನುಭವವಂತೂ ಹೌದು. ಹಾಗಿದ್ದರೆ ನೀವೂ ಕೂಡ ಇಂಥ ಅನುಭವವನ್ನು ಪಡೆಯಬೇಕಿದ್ದರೆ ಪ್ರವಾಸ ಹೊರಡುವಾಗ ಇಂಥ ಸ್ಥಳಗಳನ್ನು ಲಿಸ್ಟ್‌ ನಲ್ಲಿ ಸೇರಿಸಲು ಮರೆಯಬೇಡಿ. ಅದರಲ್ಲೂ ಮಕ್ಕಳು ಇದನ್ನು ಇನ್ನಷ್ಟು ನೋಡಿ ಇನ್ನಷ್ಟು ಖುಷಿ ಪಡುತ್ತಾರೆ. ಹಾಗಾಗಿ ದೋಣಿಯಲ್ಲಿ ವಿಹರಿಸಿ ಮತ್ತು ಭಾರತದಲ್ಲಿನ ಈ ಬುದ್ಧಿವಂತ ಜಲಚರಗಳ ಆಕರ್ಷಕ ಜಗತ್ತನ್ನು ಅನ್ವೇಷಿಸಿ.

First published: