ಟೈಟಾನಿಕ್ (Titanic) ಹಡಗು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇದರ ಸಿನಿಮಾವನ್ನು ನೋಡಿದವರು ಕಡಿಮೆ ಮಂದಿ ಇರಬಹುದು. ಆದರೆ, ಟೈಟಾನಿಕ್ ಅಂತ ಒಂದು ಹಡಗು ಇತ್ತು, ಅದು ಮುಳುಗಿ ಹೋಯ್ತು ಎಂದು ಹಲವರಿಗೆ ಗೊತ್ತಿರುತ್ತದೆ. ಆ ಹಡಗಿನಲ್ಲಿ ಸಾವಿರಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ 1500 ಜನರು ಸಾವನ್ನಪ್ಪಿದ್ದಾರೆ. ಮುಳುಗಿದ 100 ವರ್ಷಗಳ ನಂತರ, ಟೈಟಾನಿಕ್ ಇನ್ನೂ ಅತ್ಯಂತ ಪ್ರಸಿದ್ಧ ಪ್ರಯಾಣಿಕ ಲೈನರ್ ಆಗಿದೆ. ಐಷಾರಾಮಿ ಕ್ರೂಸ್ ಲೈನರ್ ಏಪ್ರಿಲ್ 15,1912 ರಂದು ಸೌತಾಂಪ್ಟನ್, ಇಂಗ್ಲೆಂಡ್‌ನಿಂದ ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ಗೆ (Newyork) ತನ್ನ ಸಮುದ್ರಯಾನದಲ್ಲಿ ಮುಳುಗಿತು. ದುರದೃಷ್ಟಕರ ಹಡಗಿನಲ್ಲಿ ನಡೆದ ದುರಂತ ಕಥೆಯ ಮೇಲೆ ಮಾಡಿದ ಅನೇಕ ಸಾಕ್ಷ್ಯಚಿತ್ರಗಳು (Documentry) ಮತ್ತು ಚಲನಚಿತ್ರಗಳು (Films) ಪ್ರಸಿದ್ಧಿಯಾಗಿವೆ.
ಆದರೆ ಐಷಾರಾಮಿ ಹಡಗಿನಲ್ಲಿ ಪ್ರಯಾಣಿಕರಿಗೆ ಏನು ಆಹಾರ ಕೊಡಲಾಗ್ತಿತ್ತು ಗೊತ್ತಾ? ಅಂದು ಏನಾಗಿತ್ತು ಮತ್ತು ಪ್ರಯಾಣಿಕರು ಏನನ್ನು ಸೇವನೆ ಮಾಡಿದ್ದರು ಎಂಬುದು ಇಂದು ವೈರಲ್ ಆಗ್ತಾ ಇದೆ. ಇದರ ಸುತ್ತ ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳು ಇಂದಿಗೂ ಇವೆ. ಅತ್ಯಂತ ಐಷಾರಾಮಿ ಹಡಗು ಎಂದೇ ಹೆಸರು ಪಡೆದಿದ್ದ ಟೈಟಾನಿಕ್ ತನ್ನ ಪ್ರಯಾಣಿಕರಿಗೆ ಏನು ಊಟ ನೀಡಿತ್ತು ಗೊತ್ತಾ?
ಟೈಟಾನಿಕ್ ಹಡಗು ಮುಳುಗಿ 111ನೇ ವರ್ಷದ ಸಂದರ್ಭದಲ್ಲಿ, ಟೇಸ್ಟ್ ಅಟ್ಲಾಸ್ ಎಂಬ ಜನಪ್ರಿಯ ಇನ್‌ಸ್ಟಾಗ್ರಾಮ್ ಪುಟವು ಹಡಗಿನಲ್ಲಿ ನೀಡಲಾಗುತ್ತಿದ್ದ ಆಹಾರಗಳ ಮಾಹಿತಿಯನ್ನು ನೀಡಿದೆ. ಮೆನುಗಳ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಏಪ್ರಿಲ್ 15ರ ರಾತ್ರಿ ಹಡಗು ಮುಳುಗಿದಾಗ ಆಹಾರವಾಗಿ, ಚಿಕನ್ ಕರಿ, ಬೇಯಿಸಿದ ಮೀನು, ಮಟನ್ ಮುಂತಾದ ರುಚಿಕರವಾದ ಭಕ್ಷ್ಯಗಳನ್ನು ಪ್ರಯಾಣಿಕರಿಗೆ ನೀಡಿತ್ತು.
ಇದನ್ನೂ ಓದಿ: ಮನುಷ್ಯ ಸತ್ತ ನಂತರ ಏನಾಗುತ್ತೆ? ಸಾವಿನ ನಂತರದ ಕೂತೂಹಲಕಾರಿ ರಹಸ್ಯ ಇಲ್ಲಿದೆ!
ಡೂಮ್ಡ್ ಎರಡನೇ ದರ್ಜೆಯ ಪ್ರಯಾಣಿಕರಿಗೆ ಪ್ಲಮ್ ಪುಡಿಂಗ್ ತಯಾರಿಸಿತ್ತು. ಮೂರು ವರ್ಗಗಳ ಮೆನುಗಳ ನಡುವೆ ಅಗಾಧ ವ್ಯತ್ಯಾಸವನ್ನು ಕಾಣಬಹುದು ಎಂದು ಟೇಸ್ಟ್ ಅಟ್ಲಾಸ್ ಪೋಸ್ಟ್ ಬಹಿರಂಗಪಡಿಸಿದೆ.
ಪ್ರಥಮ ದರ್ಜೆಯ ಪ್ರಯಾಣಿಕರಿಗೆ ಮೆನುವು ಹೇಗಿತ್ತೆಂದರೆ ಅದು ಹಬ್ಬದೂಟಕ್ಕಿಂತ ಕಡಿಮೆಯಿರಲಿಲ್ಲ. ಕಾರ್ನ್ಡ್ ಬೀಫ್, ತರಕಾರಿಗಳು, ಗ್ರಿಲ್ಡ್ ಮಟನ್ ಚಾಪ್ಸ್, ಕಸ್ಟರ್ಡ್ ಪುಡ್ಡಿಂಗ್, ಪಾಟೆಡ್ ಸೀಗಡಿಗಳು, ನಾರ್ವೇಯನ್ ಆಂಚೊವಿ ಮತ್ತು ವಿವಿಧ ಬಗೆಯ ಚೀಸ್‌ಗಳನ್ನು ಸೇರಿದಂತೆ ಇನ್ನೂ ಹಲವು ಖಾದ್ಯಗಳನ್ನು ಒಳಗೊಂಡಿತ್ತು. ಆದರೆ, ಹಡಗಿನಲ್ಲಿದ್ದ ಮೂರನೇ ವರ್ಗಕ್ಕೆ ಉಪಹಾರ ಮತ್ತು ರಾತ್ರಿಯ ಊಟಕ್ಕೆ ಸೀಮಿತವಾದ ಭಕ್ಷ್ಯಗಳನ್ನು ನೀಡಲಾಗಿತ್ತು.
ಓಟ್ಮೀಲ್ ಗಂಜಿ ಮತ್ತು ಹಾಲು, ಆಲೂಗಡ್ಡೆ, ಹ್ಯಾಮ್ ಮತ್ತು ಮೊಟ್ಟೆಗಳು, ತಾಜಾ ಬ್ರೆಡ್ ಮತ್ತು ಬೆಣ್ಣೆ, ಮಾರ್ಮಲೇಡ್ ಮತ್ತು ಸ್ವೀಡಿಷ್ ಬ್ರೆಡ್ ಗಳನ್ನು ಒಳಗೊಂಡಿತ್ತು. ಆದರೆ, ಪ್ರಯಾಣಿಕರು ಯಾವುದೇ ವರ್ಗಕ್ಕೆ ಸೇರಿದವರಾಗಿರಲಿ, ಟೈಟಾನಿಕ್ ಎಲ್ಲರಿಗೂ ಐಷಾರಾಮಿ ಭೋಜನವನ್ನೇ ಬಡಿಸಿತ್ತು ಎಂದು ಟೇಸ್ಟ್ ಅಟ್ಲಾಸ್ ತಿಳಿಸಿದೆ.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 24 ಬೆರಳುಗಳಿರೋ ಗಂಡು ಮಗು ಜನನ!
ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಹಡಗಿನ ಊಟದ ಕೋಣೆಗಳ ವೈಭವದ ಬಗ್ಗೆ ವಿಸ್ಮಯವನ್ನು ವ್ಯಕ್ತಪಡಿಸಿದರು. ಇತರರು ವಿವಿಧ ವರ್ಗಗಳಿಗೆ ಬಡಿಸುವ ಆಹಾರದಲ್ಲಿನ ಸಂಪೂರ್ಣ ವ್ಯತ್ಯಾಸಗಳ ಬಗ್ಗೆ ಚರ್ಚಿಸಿದರು. ಟೈಟಾನಿಕ್ ಹಡಗಿನ ಕಥೆ ತುಂಬಾ ಇದೆ. ಇದರ ಸಿನಿಮಾ ಕೂಡ ನೀವು ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ