• Home
 • »
 • News
 • »
 • trend
 • »
 • Panipuri: ಸ್ವಯಂ ಚಾಲಿತ ಪಾನಿಪುರಿ ಯಂತ್ರ ಬಂದಾಯ್ತು..! ಇನ್ಮುಂದೆ ಪಾನಿಪುರಿ ತಿನ್ನೋ ಮುಂಚೆ ಯೋಚನೆ ಮಾಡ್ಬೇಕಾಗಿಲ್ಲ...

Panipuri: ಸ್ವಯಂ ಚಾಲಿತ ಪಾನಿಪುರಿ ಯಂತ್ರ ಬಂದಾಯ್ತು..! ಇನ್ಮುಂದೆ ಪಾನಿಪುರಿ ತಿನ್ನೋ ಮುಂಚೆ ಯೋಚನೆ ಮಾಡ್ಬೇಕಾಗಿಲ್ಲ...

ಪಾನಿಪುರಿ

ಪಾನಿಪುರಿ

ಪಾನಿಪುರಿ ಸರ್ವ್ ಮಾಡುವ ಈ ಹೊಸ ಸ್ವಯಂಚಾಲಿತ ಯಂತ್ರಕ್ಕೆ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಯಾಕೆಂದರೆ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಜನರು ಮೊದಲು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ.

 • Share this:

  ಪಾನಿಪುರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೀದಿ ಬದಿ ಚಾಟ್ಸ್ ಆದರೂ ಕೂಡ ಪಾನಿಪುರಿ ತಿನ್ನೋಕೆ ಜನ ಕ್ಯೂನಲ್ಲಿ ನಿಂತಿರುತ್ತಾರೆ. ಅದೇನೋ ರುಚಿ, ಆ ಟೇಸ್ಟ್​ ಯಾವ ಫೈವ್ ಸ್ಟಾರ್ ಹೋಟೆಲ್​ನಲ್ಲಿ ಕೂಡ ಸಿಗಲ್ಲ ಅನ್ನೋದು ಪಾನಿಪುರಿ ಪ್ರಿಯರ ಮಾತು. ಈಗ ಪಾನಿಪುರಿ ಸರ್ವ್ ಮಾಡೋಕೆ ಒಂದು ಯಂತ್ರ ಕೂಡ ಬಂದಿದೆ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕೆಂದರೆ ಹೈದ್ರಾಬಾದ್​ ಮೂಲದ ಯುವ ಉದ್ಯಮಿಯೊಬ್ಬ ಕೋವಿಡ್​-19 ಸಮಯದ ವೇಳೆ, ಪಾನಿಪುರಿ ಸರ್ವ್ ಮಾಡುವ ಯಂತ್ರವನ್ನು ಕಂಡುಹಿಡಿದಿದ್ದಾನೆ. ತನ್ನ ಬ್ರಿಲಿಯಂಟ್ ಐಡಿಯಾದ ಮೂಲಕ ಪಾನಿಪುರಿ ಪ್ರಿಯರಿಗೆ ಸಂತಸದ ಸುದ್ದಿ ಕೊಟ್ಟಿದ್ದಾನೆ. ಕೊರೋನಾ ಸಮಯವಾದ್ದರಿಂದ ದೈಹಿಕ ಅಂತರ ಪಾಲನೆ ಹಾಗೂ ಸ್ವಚ್ಛತೆಗೆ ಆದ್ಯತೆ ಕೊಟ್ಟಿರುವ ಜನರು ಈ ಸ್ವಯಂ ಚಾಲಿತ ಪಾನಿಪುರಿ ಯಂತ್ರವನ್ನು ಇಷ್ಟ ಪಡದೇ ಇರಲು ಸಾಧ್ಯವೇ ಇಲ್ಲ.


  ಇದು ಸಂಪೂರ್ಣ ಸ್ವಯಂ ಚಾಲಿತ ಪಾನಿಪುರಿ ಬಡಿಸುವ ಯಂತ್ರವಾಗಿದೆ. ಇದೇ ಮೊದಲ ಬಾರಿಗೆ ಇಂತಹ ಯಂತ್ರದ ಅನ್ವೇಷಣೆಯಾಗಿದ್ದು, ಸುಮಾರು 300 ಪುರಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಈ ಮೆಷಿನ್​ಗಿದೆ. ಜೊತೆಗೆ ಸ್ವಯಂಚಾಲಿತವಾಗಿ ಕ್ಲೀನ್ ಕೂಡ ಮಾಡಿಕೊಳ್ಳುತ್ತದೆ. ಈ ಯಂತ್ರದಲ್ಲಿ ಆರ್​ಎಫ್​​ಐಡಿ ಸೆಕ್ಯೂರ್​ ಪೇಮೆಂಟ್​ ಸಿಸ್ಟಂ ಕೂಡ ಇದೆ.


  ಪಾನಿಪುರಿ ಪ್ರಿಯರು ಅಲ್ಲಿ ಸೂಚಿಸಿರುವ ಕೆಲವು ಬಟನ್​ಗಳನ್ನು ಒತ್ತಿದರೆ ಆಟೋಮೆಟಿಕ್​ ಆಗಿ ಪಾಲಿಪುರಿ ಸರ್ವ್ ಆಗುತ್ತದೆ. ಬಳಿಕ ರುಚಿಯಾದ ಪಾನಿಪುರಿ ಸವಿದು, ಅಲ್ಲೇ ಪೇಮೆಂಟ್ ಕೂಡ ಮಾಡಿ ಹೋಗಬಹುದು.


  ಇದನ್ನೂ ಓದಿ:Karnataka Weather Today: ಬಿರುಸುಗೊಂಡ ಮುಂಗಾರು; ಸೆ.12ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ
  ಈ ಹೊಸ ಸ್ವಯಂಚಾಲಿನ ಯಂತ್ರವನ್ನು ಕಂಡುಹಿಡಿದಿರುವ ನಾಗಿರೆಡ್ಡಿ ಮನೋ ಮಾತನಾಡಿ, ನಾನು ಕಾಲೇಜಿಗೆ ಹೋಗುತ್ತಿದ್ದಾಗಲೇ ಇಂತಹ ಒಂದು ಆಲೋಚನೆ ನನ್ನ ಮನಸ್ಸಿಗೆ ಬಂದಿತ್ತು. ಕೊರೋನಾ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಇಂತಹ ಆವಿಷ್ಕಾರ ಅಗತ್ಯ ಎನಿಸಿತು. ಈ ಯಂತ್ರ ಮನುಷ್ಯರ ಸಂಪರ್ಕವೇ ಇಲ್ಲದೇ, ಸ್ವಯಂಚಾಲಿತವಾಗಿ ಪಾನಿಪುರಿ ಸರ್ವ್ ಮಾಡುತ್ತದೆ.ಭಾರತೀಯ ವಿಜ್ಞಾನ ಸಂಸ್ಥೆಯು ಈ ಯಂತ್ರವನ್ನು ಅನುಮೋದಿಸಿದೆ ಎಂದು ಹೇಳಿದರು.


  ಇಂತಹ ಹೊಸ ಆವಿಷ್ಕಾರಕ್ಕೆ ನನ್ನ ಪೋಷಕರ ಬೆಂಬಲವೂ ಸಿಕ್ಕಿತು. ಮಾರುಕಟ್ಟೆಗಳಲ್ಲಿ ಭಾಗಶಃ ಸ್ವಯಂಚಾಲಿತ ಯಂತ್ರಗಳಿರುವುದು ನನಗೆ ತಿಳಿದಿದೆ. ಆದರೆ ಅವುಗಳು ಸಂಪೂರ್ಣ ಆಟೋಮೆಟಿಕ್ ಆಗಿರಲಿಲ್ಲ. ಹೀಗಾಗಿ ಪೂರ್ಣ ಸ್ವಯಂಚಾಲಿತ ಯಂತ್ರವನ್ನು ಕಂಡುಹಿಡಿಯುವ ಆಲೋಚನೆ ನನ್ನ ಮನಸ್ಸಿಗೆ ಬಂದಿತು ಎಂದರು.


  ಪಾನಿಪುರಿ ಸರ್ವ್ ಮಾಡುವ ಈ ಹೊಸ ಸ್ವಯಂಚಾಲಿತ ಯಂತ್ರಕ್ಕೆ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಯಾಕೆಂದರೆ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಜನರು ಮೊದಲು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಮನುಷ್ಯರ ಕೈಗಳು ಸರ್ವ್ ಮಾಡುವ ಬದಲು ಇಲ್ಲಿ ಯಂತ್ರವೇ ಪಾನಿಪುರಿ ನೀಡುತ್ತದೆ. ಹೀಗಾಗಿ ಉತ್ತಮ ಯಶಸ್ಸು ಸಿಗುವ ನಿರೀಕ್ಷೆಯೂ ಸಾಕಷ್ಟಿದೆ ಎಂದು ಮನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ:Celebrities: ಇತ್ತೀಚೆಗೆ ತೂಕ ಇಳಿಸಿಕೊಂಡು ಸಖತ್ ಸ್ಲಿಮ್​ ಆದ ಟಾಪ್ 5 ಸೆಲೆಬ್ರಿಟಿಗಳು ಇವರೇ..!


  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

  Published by:Latha CG
  First published: