HOME » NEWS » Trend » HERE IS WHY TRUCK DRIVERS WRITE HORN OK PLEASE ON TRUCK BACK SIDE RMD

ಲಾರಿಯ ಹಿಂಭಾಗದಲ್ಲಿ ಬರೆಯುವ ‘ಹಾರ್ನ್​ ಒಕೆ ಪ್ಲೀಸ್​’ ಶಬ್ದದ ಅರ್ಥವೇನು ಗೊತ್ತಾ?; ಇಲ್ಲಿದೆ ಕುತೂಹಲಕಾರಿ ವಿಚಾರ

ಲಾರಿಯ ಹಿಂಭಾಗದಲ್ಲಿ ಹಾರ್ನ್​ ಪ್ಲೀಸ್​ ಎಂದರಷ್ಟೇ ಬರೆದರೆ ಸಾಕಲ್ಲ ಎಂಬುದು ಅನೇಕರ ಪ್ರಶ್ನೆ. ಇನ್ನು, ‘ಹಾರ್ನ್​ ಒಕೆ ಪ್ಲೀಸ್​’ ಎಂಬುದಕ್ಕೆ ಯಾವುದೆ ಅರ್ಥವಿಲ್ಲ ಎಂದು ಅನೇಕರು ವಾದಿಸಿದ್ದೂ ಇದೆ. ಆದರೆ, ಇದನ್ನು ಸುಮ್ಮನೆ ಬರೆಯುವುದಿಲ್ಲ. ಇದಕ್ಕೆ ಬೆರೆಯದೇ ಆದ ಅರ್ಥವಿದೆ.

Rajesh Duggumane | news18-kannada
Updated:February 15, 2020, 3:13 PM IST
ಲಾರಿಯ ಹಿಂಭಾಗದಲ್ಲಿ ಬರೆಯುವ ‘ಹಾರ್ನ್​ ಒಕೆ ಪ್ಲೀಸ್​’ ಶಬ್ದದ ಅರ್ಥವೇನು ಗೊತ್ತಾ?; ಇಲ್ಲಿದೆ ಕುತೂಹಲಕಾರಿ ವಿಚಾರ
ಹಾರ್ನ್​ ಒಕೆ ಪ್ಲೀಸ್​
  • Share this:
ಹೆದ್ದಾರಿಗಳಲ್ಲಿ ಲಾರಿಗಳ ಓಡಾಟ ಹೆಚ್ಚು. ನೀವು ಕಾರಿನಲ್ಲೋ ಅಥವಾ ಬೈಕ್​ನಲ್ಲೋ ಹೋಗುವಾಗ ಬೇಡ ಬೇಡವೆಂದರೂ ಲಾರಿಯ ಹಿಂಭಾಗ ಕಾಣುತ್ತದೆ. ಅಲ್ಲಿ ಮನೆಯವರ ಹೆಸರು, ದೇವರ ಹೆಸರು ಹೀಗೆ ಜಾಗದವಿದ್ದಲ್ಲೆಲ್ಲ ಕುಲ ಗೋತ್ರದ ಬಗ್ಗೆ ಬರೆದಿರುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಲಾರಿ ಹಿಂಭಾಗದಲ್ಲಿ ‘ಹಾರ್ನ್​ ಒಕೆ ಪ್ಲೀಸ್​’ ಎಂದು ಬರೆದಿರುತ್ತದೆ. ಅಷ್ಟಕ್ಕೂ ಇದನ್ನು ಬರೆಯುವುದೇಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಲಾರಿಯ ಹಿಂಭಾಗದಲ್ಲಿ ಹಾರ್ನ್​ ಪ್ಲೀಸ್​ ಎಂದರಷ್ಟೇ ಬರೆದರೆ ಸಾಕಲ್ಲ ಎಂಬುದು ಅನೇಕರ ಪ್ರಶ್ನೆ. ಇನ್ನು, ‘ಹಾರ್ನ್​ ಒಕೆ ಪ್ಲೀಸ್​’ ಎಂಬುದಕ್ಕೆ ಯಾವುದೆ ಅರ್ಥವಿಲ್ಲ ಎಂದು ಅನೇಕರು ವಾದಿಸಿದ್ದೂ ಇದೆ. ಆದರೆ, ಇದನ್ನು ಸುಮ್ಮನೆ ಬರೆಯುವುದಿಲ್ಲ. ಇದಕ್ಕೆ ಬೆರೆಯದೇ ಆದ ಅರ್ಥವಿದೆ.

‘ಹಾರ್ನ್​ ಒಕೆ ಪ್ಲೀಸ್​’ನಲ್ಲಿ ‘ಹಾರ್ನ್​ ಪ್ಲೀಸ್​’ ಒಂದು ಶಬ್ದವಾದರೆ, ‘ಒಕೆ’ ಎನ್ನುವುದೆ ಮತ್ತೊಂದು ಶಬ್ದ. ಸೈಡ್​ ಮಿರರ್​ ಇಲ್ಲದ ಲಾರಿಗಳಲ್ಲಿ ಚಾಲಕನಿಗೆ ಹಿಂಭಾಗದಿಂದ ಯಾವ ವಾಹನಗಳು ಬರುತ್ತಿವೆ ಎನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಹಿಂಬದಿಯಿಂದ ಬರುವ ವಾಹನಗಳು ಹಾರ್ನ್​ ಮಾಡುವ ಮೂಲಕ ಸೈಡ್​ ಕೇಳಬೇಕು. ಇದು ಹಾರ್ನ್​ ಪ್ಲೀಸ್​ನ ಅರ್ಥ.

ಇದನ್ನೂ ಓದಿ: ಬೆದರಿಕೆಯೊಡ್ಡಿದ ಕಾಂಗ್ರೆಸ್ ಶಾಸಕಿಗೆ ಡೋಂಟ್ ಕೇರ್ ಎಂದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್

ಹಾಗಿದ್ದರೆ ಒಕೆ ಶಬ್ದದ ಅರ್ಥವೇನು? ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಡೀಸೆಲ್​ ಕೊರತೆ ಉಂಟಾಗಿತ್ತು. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಈ ಕಾರಣಕ್ಕೆ ಲಾರಿಗಳಿಗೆ ಕೆರೋಸಿನ್​ ಬಳಕೆ ಮಾಡುತ್ತಿದ್ದರು. ಹೀಗಾಗಿ ಕೆರೋಸಿನ್​ ಹಾಕಿ ಓಡಿಸುವ ಲಾರಿಗಳಿಗೆ ‘ಆನ್​ ಕೆರೋಸಿನ್​’ ಎಂದು ಹಾಕಲಾಗುತ್ತಿತ್ತು. ‘ಆನ್​ ಕೆರೋಸಿನ್ ​’ ಎನ್ನುವುದು ಉದ್ದವಾಗುತ್ತದೆ ಎನ್ನುವ ಕಾರಣಕ್ಕೆ ‘ಒಕೆ’ ಎಂದು ಬರೆಯಲಾಗುತ್ತಿತ್ತು.

ಈಗ ಎಲ್ಲ ಲಾರಿಗಳು ಡೀಸೆಲ್​ ಮೇಲೆ ಸಂಚಾರ ನಡೆಸುತ್ತವೆ. ಆದಾಗ್ಯೂ ‘ಆನ್​ ಕೆರೋಸಿನ್’ ಎಂದು ಬರೆಯುವುದು ಇಂದೂ ಮುಂದುವರಿದುಕೊಂಡು ಬಂದಿದೆ. ಇದು ‘ಹಾರ್ನ್​ ಒಕೆ ಪ್ಲೀಸ್​’ನ ಅರ್ಥ.

ಮಾಹಾರಾಷ್ಟ್ರದಲ್ಲಿ ಹಾರ್ನ್​ ಒಕೆ ಪ್ಲೀಸ್​ ಬ್ಯಾನ್​!:ಲಾರಿಗಳ ಹಿಂಭಾಗದಲ್ಲಿ  ಹಾರ್ನ್​ ಒಕೆ ಪ್ಲೀಸ್ ಎಂದು ಬರೆಯುವದರ ಮೇಲೆ ನಿಷೇಧ ಹೇರಿತ್ತು. ಎಲ್ಲ ವಾಹನಗಳಿಗೂ ಸೈಡ್​ ಮಿರರ್​ ಇರುತ್ತದೆ. ಚಾಲಕನಿಗೆ ಹಿಂಬದಿಯಿಂದ ಯಾವ ವಾಹನಗಳು ಬರುತ್ತವೆ ಎನ್ನುವುದು ಇದರ ಮೂಲಕವೇ ಗೊತ್ತಾಗುತ್ತದೆ. ಹಾರ್ನ್​ ಪ್ಲೀಸ್​ ಎಂದು ಬರೆದಿದೆ ಎನ್ನುವ ಕಾರಣಕ್ಕೆ ಹಿಂಭಾಗದಿಂದ ಬರುವ ವಾಹನಗಳು ಸುಖಾಸುಮ್ಮನೆ ಹಾರ್ನ್​ ಮಾಡುತ್ತವೆ. ಇದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಮಹಾ ಸರ್ಕಾರ ಅಭಿಪ್ರಾಯಪಟ್ಟಿತ್ತು.
Youtube Video
First published: February 15, 2020, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories