Viral News: ಪಿಜ್ಜಾ ಮಧ್ಯೆ ಈ ಸಣ್ಣ ‘ಟೇಬಲ್’ ಇಡೋದು ಯಾಕೆ ಗೊತ್ತಾ? ಇಲ್ಲಿದೆ ಆಶ್ಚರ್ಯಕರ ಮಾಹಿತಿ

Why Pizza Comes With Small Table: ಪಿಜ್ಜಾ ಸ್ಟೂಲ್ ಅಥವಾ ಟೇಬಲ್ ಎಂದು ಕರೆಯಲ್ಪಡುವ ಸಣ್ಣ ಪ್ಲಾಸ್ಟಿಕ್ ಟೇಬಲ್, ಪಿಜ್ಜಾದ ಬಾಕ್ಸ್‌ನ ಮೇಲ್ಭಾಗವು ಕುಸಿಯುವುದನ್ನು ಮತ್ತು ಒಳಗಿನ ಪಿಜ್ಜಾ ಸ್ಪರ್ಶಿಸುವುದನ್ನು ತಡೆಯಲು ಬಳಸುವ ವಸ್ತುವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಪ್ರಪಂಚದಾದ್ಯಂತ ಪಿಜ್ಜಾ(Pizza) ಪ್ರಿಯರ ಕೊರತೆಯೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ನೀವು ಆರ್ಡರ್ ಮಾಡುವ ಪಿಜ್ಜಾದ ಬಾಕ್ಸ್ ತೆಗೆದು ನೋಡಿದರೆ ನಿಮಗೆ ಅದರ ಮಧ್ಯೆ ಒಂದು ಚಿಕ್ಕ ‘ಟೇಬಲ್’(Small table) ಇಟ್ಟಿರುವುದನ್ನು ನಾವೆಲ್ಲಾ ಗಮನಿಸಿರುತ್ತೀರಿ.ಆದರೆ ಅದನ್ನು ಅಲ್ಲಿ ಏಕೆ ಇಟ್ಟಿದ್ದಾರೆ ಎಂದು ಯಾರು ತಿಳಿದುಕೊಳ್ಳಲು ಯಾವತ್ತೂ ಪ್ರಯತ್ನಿಸಿರುವುದಿಲ್ಲ. ಏಕೆಂದರೆ ನಾವು ಪಿಜ್ಜಾ ಮನೆಗೆ ತಂದ ನಂತರ ಯಾರೇ ಹೇಳಿದರೂ ಮತ್ತು ಯಾರಿಗಾಗಿಯೂ ಸ್ವಲ್ಪ ಸಮಯವೂ ಕಾಯುವುದಿಲ್ಲ.ಪ್ರತಿ ಪಿಜ್ಜಾದ ಬಾಕ್ಸ್‌ನಲ್ಲಿ(Pizza Box) ಪಿಜ್ಜಾದ ಮಧ್ಯೆ ಭಾಗದಲ್ಲಿ ಒಂದು ಸಣ್ಣ ಪ್ಲಾಸ್ಟಿಕ್ ಟೇಬಲ್, ಕೆಲವೊಮ್ಮೆ ಕುರ್ಚಿಗಳೊಂದಿಗೆ ಇಟ್ಟಿರುವುದನ್ನು ನಾವು ನೋಡುತ್ತೇವೆ. ಅನೇಕರು ಇಷ್ಟು ವರ್ಷಗಳಿಂದ ಪಿಜ್ಜಾ ತಿನ್ನುತ್ತಿದ್ದರೂ ಈ ಒಂದು ಸರಳ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿರುವುದಿಲ್ಲ.

ಪಿಜ್ಜಾದ ಮಧ್ಯೆ ಯಾವಾಗಲೂ ಒಂದು ಸಣ್ಣ ಪ್ಲಾಸ್ಟಿಕ್ ಟೇಬಲ್ ಏಕೆ ಇಟ್ಟಿರುತ್ತಾರೆ?

ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ತಮ್ಮ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರಿಂದ ನೀವು ಇನ್ನು ಮುಂದೆ ಆಶ್ಚರ್ಯಪಡುವ ಅವಶ್ಯಕತೆ ಇಲ್ಲ.

ಪಿಜ್ಜಾ ಸ್ಟೂಲ್ ಅಥವಾ ಟೇಬಲ್ ಎಂದು ಕರೆಯಲ್ಪಡುವ ಸಣ್ಣ ಪ್ಲಾಸ್ಟಿಕ್ ಟೇಬಲ್, ಪಿಜ್ಜಾದ ಬಾಕ್ಸ್‌ನ ಮೇಲ್ಭಾಗವು ಕುಸಿಯುವುದನ್ನು ಮತ್ತು ಒಳಗಿನ ಪಿಜ್ಜಾ ಸ್ಪರ್ಶಿಸುವುದನ್ನು ತಡೆಯಲು ಬಳಸುವ ವಸ್ತುವಾಗಿದೆ. ಈ ತಮಾಷೆಯ ವೈರಲ್ ವಿಡಿಯೋದಲ್ಲಿ, ಇನ್‌ಸ್ಟಾಗ್ರಾಮ್ ಬಳಕೆದಾರರು ಪ್ಲಾಸ್ಟಿಕ್ ಟೇಬಲ್‌ನ ಅನೇಕ ರೀತಿಯ ವಿಪರ್ಯಾಸ ಬಳಕೆಯನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಂಧಿವಾತ ಸಮಸ್ಯೆ ಇದ್ರೆ ಅಪ್ಪಿ ತಪ್ಪಿ ಈ ಆಹಾರಗಳನ್ನು ತಿನ್ನಬೇಡಿ

ಇನ್‌ಸ್ಟಾಗ್ರಾಮ್ ಬಳಕೆದಾರರಾದ ಶಜಾಬ್ ಫಾರೂಕಿ ಫೋಟೋ ಹಂಚಿಕೆ ಅಪ್ಲಿಕೇಶನ್‌ನಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ಜೊತೆಗೆ ಶೀರ್ಷಿಕೆಯಲ್ಲಿ "ಇದನ್ನು ಏತಕ್ಕಾಗಿ ಬಳಸುತ್ತಾರೆ ಎಂದು ನಾನು ತಿಳಿದುಕೊಳ್ಳಲು ಇಷ್ಟು ವರ್ಷಗಳು ಬೇಕಾಯಿತು" ಎಂದು ಬರೆದಿದ್ದಾರೆ. ಈ ವಿಡಿಯೋದಲ್ಲಿ, ಈ ಪಿಜ್ಜಾ ಕಟ್ಟರ್ ಅನ್ನು ಹೇಗೆ ಬಳಸಬಹುದು ಎಂಬುದರ ಪ್ರಾತ್ಯಕ್ಷಿಕೆ ತೋರಿಸಲು ಹೋಗಿ ಏನು ಅವಾಂತರ ಆಗಿದೆ ನೀವೇ ನೋಡಿ.

ವಿಡಿಯೋದಲ್ಲಿ, ಪಿಜ್ಜಾ ಕಟ್ಟರ್ ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಶಜಾಬ್ ತೋರಿಸಲು ಪ್ರಾರಂಭಿಸುತ್ತಾನೆ ಮತ್ತು ತನ್ನ ಸ್ನೇಹಿತ ಒಂದು ತುಂಡನ್ನು ತೆಗೆದುಕೊಳ್ಳುವುದನ್ನು ತಡೆಯಲು ಅದನ್ನು ತುಂಡು ಮಾಡಿ ಒತ್ತುತ್ತಾನೆ. "ಇದು ಪಿಜ್ಜಾ ಕಟ್ಟರ್ ಎಂದು ಯಾರು ಭಾವಿಸಿದ್ದರು" ಎಂದು ಶಜಾಬ್ ಉಲ್ಲಾಸದಿಂದ ವಿಡಿಯೋ ಬಗ್ಗೆ ಬರೆದಿದ್ದಾರೆ.

ವೈರಲ್​ ಆದ ವಿಡಿಯೋ 

ಈ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಣ್ಣ ಕ್ಲಿಪ್ ಅನ್ನು 20 ಮಿಲಿಯನ್‌ಗೂ ಹೆಚ್ಚು ಜನರು ನೋಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ತುಂಬಾನೇ ಇಷ್ಟಪಟ್ಟಿದ್ದರು ಮತ್ತು ಸಣ್ಣ ಪ್ಲಾಸ್ಟಿಕ್ ಟೇಬಲ್ ಅನ್ನು ಯಾವುದಕ್ಕಾಗಿ ಬಳಸಬಹುದು ಎಂಬುದರ ಬಗ್ಗೆ ತಮ್ಮದೇ ಆದ ಅನಿಸಿಕೆಗಳನ್ನು ಪೋಸ್ಟ್ ಮಾಡಿದ್ದಾರೆ.

ಒಬ್ಬ ಬಳಕೆದಾರನು "ಇಲ್ಲ, ಇದು ನನ್ನ ಗೊಂಬೆಗಳಿಗೆ ನೀಡಿದ ಟೇಬಲ್" ಎಂದು ಬರೆದುಕೊಂಡರೆ , ಇನ್ನೊಬ್ಬರು "ಇದನ್ನು ನಾನು ಟೂತ್ ಪಿಕ್ ಎಂದು ಭಾವಿಸಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಪ್ರತಿದಿನ ಈ ಕೆಲಸಗಳನ್ನು ಮಾಡಿದ್ರೆ ಜಿಮ್​ಗೆ ಹೋಗೋದೇ ಬೇಡ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು
Published by:Sandhya M
First published: