World Veterinary Day 2022: ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ಇಲ್ಲಿದೆ

ಇಂದು ವಿಶ್ವ ಪಶುವೈದ್ಯಕೀಯ ದಿನ (World Veterinary Day). ವಿಶ್ವ ಪಶುವೈದ್ಯಕೀಯ ದಿನವನ್ನು ಪ್ರಪಂಚದಾದ್ಯಂತ ವಾರ್ಷಿಕವಾಗಿ ಏಪ್ರಿಲ್ ಕೊನೆಯ ಶನಿವಾರದಂದು ಆಚರಿಸಲಾಗುತ್ತದೆ.

ವಿಶ್ವ ಪಶುವೈದ್ಯಕೀಯ ದಿನ 2022

ವಿಶ್ವ ಪಶುವೈದ್ಯಕೀಯ ದಿನ 2022

 • Share this:
  ಮನುಷ್ಯರಿಗೆ (Human) ರೋಗ (Sick) ಬಂದರೆ ನಾವು ವೈದ್ಯರ (Doctor) ಬಳಿಗೆ ಹೋಗುತ್ತೇವೆ. ಏಕೆಂದರೆ, ಆರೋಗ್ಯಕ್ಕೆ (Health) ನಾವು ಮಹತ್ವ ಕೊಡಲೇಬೇಕಾಗಿದೆ. ಇಲ್ಲದಿದ್ದರೆ, ನಾನಾ ತೊಂದರೆಗಳನ್ನು ಅನುಭವಿಸಬಹುದು, ಪ್ರಾಣ ಹಾನಿಯೂ ಆಗಬಹುದು. ಅದೇ ರೀತಿ, ಪ್ರಾಣಿಗಳ (Animals) ಆರೋಗ್ಯವೂ ಅಷ್ಟೇ ಮುಖ್ಯ. ಆದರೆ, ಪಶುಗಳು ತಮಗೆ ಹುಷಾರಿಲ್ಲವೆಂದು ತಾವೇ ವೈದ್ಯರ ಬಳಿಗೆ ಹೋಗಲು ಆಗಲ್ಲ. ಈ ಹಿನ್ನೆಲೆ ಮನೆಯಲ್ಲಿ, ತೋಟದಲ್ಲಿ ಸಾಕುವ ಪಶುಗಳನ್ನು ಸಾಕುವವರು ಅವುಗಳ ಆರೈಕೆ ಚೆನ್ನಾಗಿ ಮಾಡಬೇಕು, ಆರೋಗ್ಯದಲ್ಲಿ ಏರುಪೇರು ಕಂಡಾಗ ಪಶು ವೈದ್ಯರ (Veterinary Doctors) ಬಳಿ ಕರೆದುಕೊಂಡುಹೋಗಬೇಕು. ಅಂದಹಾಗೆ, ಇಂದು ವಿಶ್ವ ಪಶುವೈದ್ಯಕೀಯ ದಿನ (World Veterinary Day). ವಿಶ್ವ ಪಶುವೈದ್ಯಕೀಯ ದಿನವನ್ನು ಪ್ರಪಂಚದಾದ್ಯಂತ ವಾರ್ಷಿಕವಾಗಿ ಏಪ್ರಿಲ್ ಕೊನೆಯ ಶನಿವಾರದಂದು ಆಚರಿಸಲಾಗುತ್ತದೆ.

  ಈ ವರ್ಷ, ಅಂದರೆ 2022ರಂದು ಈ ದಿನವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪಶುವೈದ್ಯರು ನಿರ್ವಹಿಸುವ ಕೆಲಸವನ್ನು ಹೈಲೈಟ್ ಮಾಡಲು ಮತ್ತು ಉತ್ತೇಜಿಸುವ ಗುರಿಯನ್ನು ಈ ವಿಶೇಷ ದಿನವು ಹೊಂದಿದೆ.

  ವಿಶ್ವ ಪಶು ವೈದ್ಯಕೀಯ ದಿನದ ಇತಿಹಾಸ

  1863 ರಲ್ಲಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಎಡಿನ್‌ಬರ್ಗ್‌ನ ಪಶುವೈದ್ಯಕೀಯ ಕಾಲೇಜು ಪ್ರೊಫೆಸರ್ ಜಾನ್ ಗಮ್ಗೀ ಅವರು ಅಂತಾರಾಷ್ಟ್ರೀಯ ಪಶುವೈದ್ಯಕೀಯ ಕಾಂಗ್ರೆಸ್ ಸಭೆಯನ್ನು ನಡೆಸಿದರು. ಈ ಸಭೆಯ ಕಾರ್ಯಸೂಚಿಯು ಎಪಿಜೂಟಿಕ್‌ ಅಥವಾ ಪ್ರಾಣಿ ಸಾಂಕ್ರಾಮಿಕ ರೋಗಗಳು ಮತ್ತು ಯುರೋಪಿನಲ್ಲಿ ಜಾನುವಾರು ವ್ಯಾಪಾರದ ಪ್ರಮಾಣಿತ ನಿಯಮಗಳ ಕುರಿತು ಚರ್ಚೆಯನ್ನು ಒಳಗೊಂಡಿತ್ತು. ನಂತರ, ಈ ಅಂತಾರಾಷ್ಟ್ರೀಯ ಪಶುವೈದ್ಯಕೀಯ ಕಾಂಗ್ರೆಸ್ ಅನ್ನು ವಿಶ್ವ ಪಶುವೈದ್ಯಕೀಯ ಕಾಂಗ್ರೆಸ್ ಎಂದು ಕರೆಯಲಾಯಿತು.

  ಇನ್ನು, ಅಧಿಕೃತ ವೆಬ್‌ಸೈಟ್ ಪ್ರಕಾರ, 8ನೇ ವಿಶ್ವ ಪಶುವೈದ್ಯಕೀಯ ಕಾಂಗ್ರೆಸ್‌ನಲ್ಲಿ, ಶಾಶ್ವತ ಸಮಿತಿಯನ್ನು ರಚಿಸಲಾಯಿತು. ಕಾಂಗ್ರೆಸ್‌ಗಳ ನಡುವೆ ಸಾಂಸ್ಥಿಕ ಲಿಂಕ್ ಆಗಲು ಸಹಾಯವಾಗುವಂತೆ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.

  70ಕ್ಕೂ ಅಧಿಕ ರಾಷ್ಟ್ರಗಳ ಸದಸ್ಯತ್ವ

  1959 ರಲ್ಲಿ, ವರ್ಲ್ಡ್ ವೆಟರ್ನರಿ ಅಸೋಸಿಯೇಷನ್ ​​(WVA) ಅನ್ನು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಸ್ಥಾಪಿಸಲಾಯಿತು. 2001 ರಲ್ಲಿ ವರ್ಲ್ಡ್ ವೆಟರ್ನರಿ ಅಸೋಸಿಯೇಷನ್ ವಿಶ್ವ ಪಶುವೈದ್ಯಕೀಯ ದಿನವನ್ನು ಆರಂಬಿಸಿತು. ಈ ಸಂಘವು ಈಗ 70 ಕ್ಕೂ ಹೆಚ್ಚು ರಾಷ್ಟ್ರಗಳ ಸದಸ್ಯರನ್ನು ಮತ್ತು ಪ್ರಪಂಚದಾದ್ಯಂತದ ರಾಷ್ಟ್ರೀಯ ಪಶುವೈದ್ಯಕೀಯ ಸಂಘಗಳನ್ನು ಒಳಗೊಂಡಿದೆ.

  ಇದನ್ನೂ ಓದಿ: Twitter: ಟ್ವಿಟರ್​ನ ಹಕ್ಕಿಯ ಲೋಗೊದ ಹಿಂದಿನ ಸ್ವಾರಸ್ಯಕರವಾದ ಕಥೆ ಗೊತ್ತಾ? ಅದನ್ನು ಮಾಡಿದವರು ಯಾರು?

  ವಿಶ್ವ ಪಶು ವೈದ್ಯಕೀಯ ದಿನವನ್ನು ಏಕೆ ಆಚರಿಸಲಾಗುತ್ತದೆ?

  ವಿಶ್ವ ಪಶುವೈದ್ಯಕೀಯ ಸಂಘವು ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಪ್ರಾಣಿಗಳ ಸುರಕ್ಷತೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಇದು ವ್ಯವಹರಿಸುತ್ತದೆ. ಇದು ಜಾನುವಾರುಗಳನ್ನು ಸಾಕಲು ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಸಹ ಖಾತ್ರಿಗೊಳಿಸುತ್ತದೆ. ಹಾಗೂ, ವಿಶ್ವ ಪಶುವೈದ್ಯಕೀಯ ದಿನವು ಪ್ರಪಂಚದಾದ್ಯಂತ ಪ್ರಾಣಿಗಳ ಕಲ್ಯಾಣವನ್ನು ಕಾಪಾಡುವಲ್ಲಿ ಪಶುವೈದ್ಯರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

  ವಿಶ್ವ ಪಶು ವೈದ್ಯಕೀಯ ದಿನದ ಥೀಮ್

  ಕೋವಿಡ್ - 19 ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಪಶುವೈದ್ಯರ ಮೇಲೆ ಹೊರೆಯನ್ನು ಹೆಚ್ಚಿಸಿದೆ. ಈ ಪರಿಸ್ಥಿತಿಯನ್ನು ನಿರ್ವಹಿಸಲು, ವೃತ್ತಿಪರರಾದ ಪಶುವೈದ್ಯರು ತಮ್ಮ ವೈಯಕ್ತಿಕ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡಿಕೊಳ್ಳಲು ಸರಿಯಾದ ಶಿಕ್ಷಣ, ತರಬೇತಿ ಮತ್ತು ಮಾರ್ಗದರ್ಶನವನ್ನು ಖಚಿತಪಡಿಸಿಕೊಳ್ಳಲು ಸಂಘಗಳು, ಸಂಸ್ಥೆಗಳು ಮತ್ತು ಸರ್ಕಾರಗಳಿಂದ ಬೆಂಬಲದ ಅಗತ್ಯವಿದೆ.

  2022ರ ವಿಶ್ವ ಪಶುವೈದ್ಯಕೀಯ ದಿನದ ಥೀಮ್‌ ಏನು?

  ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ವರ್ಷದ ಥೀಮ್‌ "ಪಶುವೈದ್ಯರು, ಪಶುವೈದ್ಯಕೀಯ ಸಂಘಗಳು ಮತ್ತು ಇತರರಿಂದ ಪಶುವೈದ್ಯಕೀಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಹಾಗೂ ಈ ಪ್ರಮುಖ ಕಾರಣಕ್ಕೆ ಗಮನವನ್ನು ತರಲು ಪ್ರಯತ್ನಗಳನ್ನು ಆಚರಿಸುವುದು’’ ಆಗಿದೆ.

  ಇದನ್ನೂ ಓದಿ: Hindu-Muslim: ಮುಸ್ಲಿಂ ಮನೆ ಅಂಗಳದಲ್ಲಿ ಹಿಂದೂ ಹುಡುಗಿ ಮದುವೆ! ಭಾವೈಕ್ಯತೆಗೆ ಸಾಕ್ಷಿಯಾದ ಕುಟುಂಬಗಳು

  ಇದರ ಜತೆಗೆ, ಈ ವೃತ್ತಿಪರರನ್ನು ತಮ್ಮ ಕೆಲಸದ ಸಮಯದಲ್ಲಿ ಉದ್ಭವಿಸುವ ದೈನಂದಿನ ಸವಾಲುಗಳು ಮತ್ತು ಬಿಕ್ಕಟ್ಟುಗಳಿಂದ ರಕ್ಷಿಸಲು ಇನ್ನೇನು ಮಾಡಬಹುದು ಎಂಬುದರ ಮೇಲೆಯೂ 2022ರ ವಿಶ್ವ ಪಶುವೈದ್ಯಕೀಯ ದಿನದ ಥೀಮ್ ಕೇಂದ್ರೀಕರಿಸುತ್ತದೆ.
  Published by:Annappa Achari
  First published: