ನಿಮ್ಮ ಮನೆಯ ಅಂಗಳದಲ್ಲಿಯೇ ಅನಾನಸ್ ಬೆಳೆಯಲು ಇಲ್ಲಿವೆ ಟಿಪ್ಸ್

ಮನೆಗೆ ತಂದ ಅನಾನಸ್ ಅನ್ನೇ ಬಳಸಿ ಮನೆಯ ತೋಟದಲ್ಲಿ ಅದನ್ನು ಬೆಳೆಸಬಹುದಾಗಿದೆ, ಈ ಹಣ್ಣಿನ ಮೇಲಿನ ಕಿರೀಟದಂತೆ ಇರುವ ಭಾಗವನ್ನು ಬಳಸಿಕೊಂಡು ಮನೆಯಲ್ಲಿಯೇ ಈ ಹಣ್ಣನ್ನು ಬೆಳೆಸಬಹುದು.

ಅನಾನಸ್

ಅನಾನಸ್

  • Share this:
ನಾವು ಹಣ್ಣುಗಳನ್ನು ದುಡ್ಡು ಕೊಟ್ಟು ಮಾರುಕಟ್ಟೆಯಿಂದ ಮನೆಗೆ ತಂದು ತಿನ್ನುತ್ತೇವೆ. ಆದರೆ ಎಷ್ಟೋ ಹಣ್ಣುಗಳನ್ನು ನಮ್ಮ ಮನೆಯ ಉದ್ಯಾನವನದಲ್ಲಿಯೇ ಬೆಳೆಸಬಹುದು ಮತ್ತು ಅದಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ.ಮನೆಯಲ್ಲಿಯೇ ಉದ್ಯಾನವನ ಮತ್ತು ತಮ್ಮದೇ ಆದ ಸ್ವಂತ 'ಗಾರ್ಡನಿಂಗ್ ಲವರ್ಸ್ ವಿತ್ ಆಕಾಶ್' ಎಂಬ ಯೂಟ್ಯೂಬ್ ಚಾನೆಲ್ನಡೆಸುವಂತಹ ಆಕಾಶ್ ಜೈಸ್ವಾಲ್ ಮಾರುಕಟ್ಟೆಯಲ್ಲಿ ದೊರೆಯುವಂತಹ ಅನಾನಸ್ ಹಣ್ಣನ್ನು ಮನೆಯ ಉದ್ಯಾನವನದಲ್ಲಿ ಹೇಗೆ ಬೆಳೆಯಬಹುದು ಎಂದು ಹಂತ ಹಂತವಾಗಿ ತೋರಿಸಿಕೊಟ್ಟಿದ್ದಾರೆ.ಅನಾನಸ್ ಹಣ್ಣನ್ನು ಬಹುತೇಕವಾಗಿ ಎಲ್ಲಾ ಕಡೆ ಬಳಸಲಾಗುತ್ತದೆ, ಕತ್ತರಿಸಿದ ಹಣ್ಣಿನ ತುಂಡುಗಳನ್ನು ಬೆಳಗ್ಗೆ ಸಲಾಡ್‌ನಲ್ಲಿ, ಕೇಸರಿಬಾತ್ ಮೇಲೆ ಸಹ ಇದನ್ನು ಹಾಕುತ್ತಾರೆ. ಕೇಕ್ಗಳ ಮೇಲೆ ಸಹ ಅನಾನಸ್ ಹಣ್ಣಿನ ತುಂಡು ಹಾಕುವುದನ್ನು ನಾವು ನೋಡುತ್ತೇವೆ.ಅನಾನಸ್ ಹಣ್ಣಿನಲ್ಲಿ 86% ರಷ್ಟು ನೀರಿನಂಶವಿದ್ದು, ಇದರಲ್ಲಿ ದೇಹದ ಆರೋಗ್ಯಕ್ಕೆ ಅವಶ್ಯಕವಾಗಿರುವಂತಹ ಎಲ್ಲಾ ಪೋಷಕಾಂಶಗಳು ಅಧಿಕವಾಗಿರುತ್ತದೆ.

ಈ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ದೇಹಕ್ಕೆ ಬೇಕಾಗುವ ಶಕ್ತಿಯನ್ನು ಸಹ ಒದಗಿಸುವುದು ಎಂದು ತಿಳಿದುಬಂದಿದೆ. ಅನಾನಸ್ ತಮ್ಮನ್ನು ಪುನರುತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈ ಹಣ್ಣಿನ ಮೇಲಿನ ಕಿರೀಟದಂತೆ ಇರುವ ಭಾಗವನ್ನು ಬಳಸಿಕೊಂಡು ಮನೆಯಲ್ಲಿಯೇ ಈ ಹಣ್ಣನ್ನು ಬೆಳೆಸಬಹುದು.ಆದ್ದರಿಂದ ಹಣ್ಣಿನ ಮೇಲಿನ ಅರ್ಧ ವ್ಯರ್ಥವಾಗಲು ಬಿಡುವ ಬದಲು, ನಿಮ್ಮ ಹಿತ್ತಲಿನಲ್ಲಿರುವ ಉದ್ಯಾನವನದಲ್ಲಿ ಮತ್ತೆ ಸರಿಯಾಗಿ ಬೆಳೆಸಬಹುದಾಗಿದೆ.ಅನಾನಸ್ ಉಷ್ಣವಲಯದ ಸಸ್ಯವಾಗಿದ್ದು, ವಸಂತ ಋತುವಿನ ಕಾಲದಲ್ಲಿ ಬೆಳೆಯಲಾಗುತ್ತದೆ. ಆಕಾಶ್ ಜೈಸ್ವಾಲ್ ದೈನಂದಿನ ಬಳಕೆಗಾಗಿ ಹೆಚ್ಚು ಇಷ್ಟಪಡುವ ಅನಾನಸ್ ಅನ್ನು ಮನೆಯಲ್ಲಿಯೇ ಹೇಗೆ ಬೆಳೆಯಬೇಕು ಎಂಬುದರ ಬಗ್ಗೆ ಹೇಳಿದ್ದಾರೆ.

ಅಂಗಡಿಯಲ್ಲಿ ನೀವು ಖರೀದಿಸಿದ ಅನಾನಸ್‌ನಿಂದ ಮತ್ತೆ ಹೊಸದಾಗಿ ಹಣ್ಣನ್ನು ಮನೆಯ ಉದ್ಯಾನವನದಲ್ಲಿ ಬೆಳೆಸಲು, ಸರಿಯಾದ ಹಣ್ಣಿನ ತುಂಡನ್ನು ಆರಿಸುವುದು ಬಹಳ ಮುಖ್ಯ ಎಂದು ಆಕಾಶ್ ಹೇಳುತ್ತಾರೆ. ಅನಾನಸ್ ಮೇಲಿನ ಎಲೆಗಳು ತುಂಬಾ ತಾಜಾ ಆಗಿರಬೇಕು. ಹಣ್ಣಿನ ಮೇಲ್ಭಾಗದ ಕಿರೀಟದಂತಿರುವ ಎಲೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದರಿಂದಲೇ ಹೊಸದಾಗಿ ಹಣ್ಣನ್ನು ಬೆಳೆಯಬಹುದಾಗಿದೆ ಎಂದು ಇವರು ಹೇಳುತ್ತಾರೆ.

ಮೊದಲಿಗೆ ಅನಾನಸ್ ಹಣ್ಣಿನ ಮೇಲ್ಭಾಗದಲ್ಲಿರುವ ಕಿರೀಟದ ಬುಡದಿಂದ ಎಲೆಗಳನ್ನು ಕಿತ್ತುಕೊಳ್ಳಿ, ಆಗ ನಿಮಗೆ ಹಣ್ಣಿನ ಮಧ್ಯದಲ್ಲಿ ಇರುವ ಕಾಂಡವು ಕಾಣಸಿಗುತ್ತದೆ.

ಇದನ್ನೂ ಓದಿ: Bigg Boss 8 Elimination: ಬಿಗ್​ ಬಾಸ್​ ಮನೆಯಲ್ಲಿ ಮಿಡ್​ ನೈಟ್​ ಎಲಿಮಿನೇಷನ್​: ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ..!

ಕೆಳಭಾಗವನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಹಾಗೆಯೇ ತೆರೆದಿಡಿ, ಅದರಲ್ಲಿರುವ ಹೆಚ್ಚುವರಿ ದ್ರವವನ್ನು ಹಣ್ಣಿನಿಂದ ಹೊರಹಾಕಲು ಹಾಗೆಯೇ ತೆರೆದಿಡಿ.

ಒಣಗಿದ ನಂತರ, ಕಿರೀಟವನ್ನು ನೀರಿನ ಬಟ್ಟಲಿನಲ್ಲಿ ನೆನೆಸಿಡಿ. ಕಿರೀಟದಂತಿರುವ ಕೆಳಭಾಗದಿಂದ ಬೇರುಗಳು ಬರಲು ಪ್ರಾರಂಭಿಸುತ್ತವೆ. ಆದರೂ ಉತ್ತಮವಾದ ಫಲಿತಾಂಶಗಳಿಗಾಗಿ ಹಣ್ಣನ್ನು 10 ರಿಂದ 15 ದಿನಗಳವರೆಗೆ ನೆನೆಸಿಡುವುದು ಉತ್ತಮ ಎಂದು ಆಕಾಶ್ ಹೇಳುತ್ತಾರೆ.

ಈ ಅವಧಿಯಲ್ಲಿ, ಪ್ರತಿ ಮೂರು ದಿನಗಳಿಗೊಮ್ಮೆ ನೀರನ್ನು ಬದಲಾಯಿಸುವುದು ಅವಶ್ಯಕ.


ಬೇರುಗಳೊಂದಿಗೆ ಸಸಿ ಸಿದ್ಧವಾದ ನಂತರ, ಅದನ್ನು ಕಸಿ ಮಾಡುವ ಸಮಯ. ಇದನ್ನು ದೊಡ್ಡದಾದ ಮಡಕೆಯಲ್ಲಿ ಅಥವಾ ನೇರವಾಗಿ ಮಣ್ಣಿನಲ್ಲಿ ಈ ಸಸಿಯನ್ನು ನೆಡಬಹುದಾಗಿದೆ ಎಂದು ಆಕಾಶ್ ವಿವರಿಸುತ್ತಾರೆ. ನೀವು ಮಡಕೆ ಬಳಸುತ್ತಿದ್ದರೆ, ಅದು ಸಾಕಷ್ಟು ದೊಡ್ಡದಾಗಿರುವಂತೆ ನೋಡಿಕೊಳ್ಳಿ. ಅನಾನಸ್ ಹಣ್ಣಿನ ಗಿಡದ ಎತ್ತರವು 14 ಇಂಚು ಮತ್ತು 18 ಇಂಚುಗಳ ನಡುವೆ ಇರುತ್ತದೆ. ಮಡಕೆ ಚಿಕ್ಕದಾಗಿದ್ದರೆ, ಸಸ್ಯವು ಹಣ್ಣುಗಳನ್ನು ನೀಡಲು ವಿಫಲವಾಗುತ್ತದೆ.ಸಸಿಯನ್ನು ನೆಡುತ್ತಿದ್ದರೆ, 50% ಸಾಮಾನ್ಯ ಮಣ್ಣು, 20% ಸಗಣಿ ಗೊಬ್ಬರ ಮತ್ತು 30% ಕೆಂಪು ಮರಳಿನ ಮಿಶ್ರಣವನ್ನು ಮಾಡಿ ಇದಕ್ಕೆ ಹಾಕುವುದು ಸೂಕ್ತ ಎಂದು ಇವರು ಹೇಳುತ್ತಾರೆ

ಇದನ್ನೂ ಓದಿ: Shyam Singha Roy: ರಿಲೀಸ್​ಗೆ ಸಜ್ಜಾಗುತ್ತಿದೆ ಸಾಯಿ ಪಲ್ಲವಿ-ನಾನಿ ಅಭಿನಯದ ಶ್ಯಾಮ್​ ಸಿಂಗ ರಾಯ್​ ಚಿತ್ರ..!

ಅನಾನಸ್ ಅಥವಾ ಅನನಾಸ್ ಸಸ್ಯವು ಪಕ್ವವಾಗಲು ಸುಮಾರು ಆರು ತಿಂಗಳು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ನಿಮ್ಮ ಸಸ್ಯವು ಆರೋಗ್ಯಕರವಾಗಿ ಬೆಳೆಯುವಂತೆ ನೋಡಿಕೊಳ್ಳಲು ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು.

ಕೆಂಪು ಮರಳು ಸುಲಭವಾಗಿ ಲಭ್ಯವಿಲ್ಲದಿದ್ದರೆ, ನೀವು ಅದರ ಬದಲಿಗೆ ಪರ್ಯಾಯವಾಗಿ ಕೋಕೋ ಪೀಟ್ ಬಳಸಬಹುದು ಎಂದು ಆಕಾಶ್ ಹೇಳುತ್ತಾರೆ.

ಪೌಷ್ಟಿಕಾಂಶಗಳಿಗಾಗಿ ಪ್ರತಿ 15 ದಿನಗಳಿಗೊಮ್ಮೆ ಈ ಮಣ್ಣನ್ನು ಕಾಂಪೋಸ್ಟ್‌ನೊಂದಿಗೆ ಮಿಶ್ರಣ ಮಾಡಿರಿ.

ಅನಾನಸ್ ಗಟ್ಟಿಮುಟ್ಟಾದ ಸಸ್ಯವಾಗಿದ್ದು, ಅತಿಯಾದ ನೀರು ಹಾಕುವ ಅಗತ್ಯವಿಲ್ಲ.

ಬೇರು ಬಿಡುವ ಹಂತದಲ್ಲಿ ಸಸ್ಯವನ್ನು ನೆರಳಿನಲ್ಲಿಡಬೇಕು ಮತ್ತು ಅದನ್ನು ನೆಲದಲ್ಲಿ ನೆಟ್ಟಾಗ ಸಸಿಯನ್ನು ನೇರ ಸೂರ್ಯನ ಬೆಳಕಿನ ಅಡಿಯಲ್ಲಿ ಇಡಬೇಕು.
Published by:Anitha E
First published: