Deepavali Gift: ನಿಮ್ಮ ಪ್ರೀತಿಪಾತ್ರರಿಗೆ ದೀಪಾವಳಿ ಹಬ್ಬಕ್ಕೆ ಏನು ಉಡುಗೊರೆ ಕೊಡಬೇಕು ಎನ್ನುವ ಗೊಂದಲದಲ್ಲಿದ್ದೀರಾ..? ಇದನ್ನು ಒಮ್ಮೆ ಓದಿ

Deepavali Gift Idea: ನಮ್ಮ ಮನೆಯಲ್ಲಿ ಆಚರಿಸುವ ದೀಪಾವಳಿ ಹಬ್ಬದ ತಯಾರಿ ಒಂದು ಕಡೆಯಾದರೆ, ಇನ್ನೊಂದೆಡೆ ನಮ್ಮ ಪ್ರೀತಿಪಾತ್ರರಿಗೆ ಏನಪ್ಪಾ ಉಡುಗೊರೆ ಕೂಡುವುದು ಎಂಬ ಗೊಂದಲದಲ್ಲಿರುತ್ತೇವೆ. ನಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಆಯ್ಕೆಯ ವಿಷಯ ಬಂದಾಗ ನಮ್ಮ ತಲೆಯಲ್ಲಿ ತಕ್ಷಣಕ್ಕೆ ಯಾವುದು ಉಡುಗೊರೆ ತೆಗೆದುಕೊಳ್ಳಬೇಕು ಎಂದು ನೆನಪಿಗೆ ಬಂದರೂ ಆ ಉಡುಗೊರೆ ಅವರಿಗೆ ಇಷ್ಟ ಆಗುತ್ತೆ ಅಥವಾ ಇಲ್ಲ ಎನ್ನುವ ಗೊಂದಲ ಬೇರೆ ನಮ್ಮನ್ನು ಕಾಡುತ್ತಿರುವುದು ಸಹಜ ವಿಷಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಹಬ್ಬಗಳು(Festival) ಸಾಲು ಸಾಲಾಗಿದ್ದು, ಮುಂದೆ ಬರುವಂತಹ ದೀಪಾವಳಿ(Deepavali) ಹಬ್ಬಕ್ಕೆ ನಾವೆಲ್ಲರೂ ಭರದಿಂದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾ ಇರುತ್ತೇವೆ. ಅದರಲ್ಲೂ ಹಬ್ಬಕ್ಕೆ ಅಂದ ಮೇಲೆ ನಮ್ಮ ಹತ್ತಿರದವರಿಗೆ ಏನಾದರೂ ಉಡುಗೊರೆ(Gift) ನೀಡಿದರೆ ಹಬ್ಬದ ಖುಷಿ ದುಪ್ಪಟ್ಟಾಗುತ್ತದೆ ಅಲ್ಲವೇ.ಉತ್ಸಾಹದಿಂದ ಹಬ್ಬ ಆಚರಿಸಲು ಸಜ್ಜಾಗಿದ್ದೇವೆ. ಅದ್ದೂರಿ, ಸಡಗರದಿಂದ ಹಬ್ಬ ಆಚರಿಸಲು ಮನೆಯನ್ನು ಅಲಂಕರಿಸುವ ವಸ್ತುಗಳಿಂದ ಹಿಡಿದು ಸಿಹಿ ತಿನಿಸುಗಳು, ದೀಪಾವಳಿ ಹಬ್ಬಕ್ಕೆ ಹಚ್ಚುವ ಪಟಾಕಿಯವರೆಗೆ ಎಲ್ಲವನ್ನೂ ಮನೆಗೆ ತೆಗೆದುಕೊಂಡು ಬರಲು ಈಗಿನಿಂದಲೇ ಯೋಜನೆ ಹಾಕಿಕೊಳ್ಳುತ್ತಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಾ ಇರುತ್ತೇವೆ.

ನಮ್ಮ ಮನೆಯಲ್ಲಿ ಆಚರಿಸುವ ದೀಪಾವಳಿ ಹಬ್ಬದ ತಯಾರಿ ಒಂದು ಕಡೆಯಾದರೆ, ಇನ್ನೊಂದೆಡೆ ನಮ್ಮ ಪ್ರೀತಿಪಾತ್ರರಿಗೆ ಏನಪ್ಪಾ ಉಡುಗೊರೆ ಕೂಡುವುದು ಎಂಬ ಗೊಂದಲದಲ್ಲಿರುತ್ತೇವೆ. ನಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಆಯ್ಕೆಯ ವಿಷಯ ಬಂದಾಗ ನಮ್ಮ ತಲೆಯಲ್ಲಿ ತಕ್ಷಣಕ್ಕೆ ಯಾವುದು ಉಡುಗೊರೆ ತೆಗೆದುಕೊಳ್ಳಬೇಕು ಎಂದು ನೆನಪಿಗೆ ಬಂದರೂ ಆ ಉಡುಗೊರೆ ಅವರಿಗೆ ಇಷ್ಟ ಆಗುತ್ತೆ ಅಥವಾ ಇಲ್ಲ ಎನ್ನುವ ಗೊಂದಲ ಬೇರೆ ನಮ್ಮನ್ನು ಕಾಡುತ್ತಿರುವುದು ಸಹಜ ವಿಷಯ.

ನೀವು ನಿಮ್ಮ ಪ್ರೀತಿಪಾತ್ರರಿಗೆ ಯಾವುದೋ ಒಂದು ಉಡುಗೊರೆ ಅಥವಾ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸಿದ ಉಡುಗೊರೆಯ ಪ್ಯಾಕ್ ಹುಡುಕುತ್ತಿರುವಾಗ, ನಾವು ನಿಮಗಾಗಿ ಕೆಲವೊಂದು ಉಡುಗೊರೆಯ ಆಯ್ಕೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಅವರ ಸೌಂದರ್ಯವನ್ನು ಹೆಚ್ಚಿಸುವ ಉಡುಗೊರೆ

ಇದನ್ನೂ ಓದಿ: ಈ ರಾಶಿಯವರನ್ನು ನಂಬಲೇ ಬೇಡಿ ಮೋಸ ಹೋಗುವುದು ಪಕ್ಕಾ

ನಿಮ್ಮ ಪ್ರೀತಿಪಾತ್ರರಿಗೆ ಸ್ಕಿನ್ ಕೇರ್‌ಗಳನ್ನು ಉಡುಗೊರೆಯಾಗಿ ನೀಡುವುದು ಸಹ ತುಂಬಾ ಒಳ್ಳೆಯ ಆಯ್ಕೆಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಚರ್ಮದ ಆರೈಕೆಯು ತುಂಬಾ ಮುಖ್ಯವಾಗಿದ್ದು, ಈ ಹಬ್ಬದಂದು ಉಡುಗೊರೆಯಾಗಿ ನೀಡಲು ಇದು ತುಂಬಾ ಉತ್ತಮವಾದ ಆಯ್ಕೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸುಂದರವಾದ ಉಡುಗೊರೆಯೊಂದಿಗೆ ನಿಮ್ಮ ಪ್ರೀತಿಪಾತ್ರರನ್ನು ಮುದ್ದು ಮಾಡುವುದರಿಂದ ಈ ಹಬ್ಬದ ಸಡಗರಕ್ಕೆ ಇನ್ನಷ್ಟು ಮೆರುಗು ಮತ್ತು ಪ್ರೀತಿ ತುಂಬಿದಂತಾಗುತ್ತದೆ.

ನೀವು ಏನು ತೆಗೆದುಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದರೆ ಸುಗಂಧ ದ್ರವ್ಯಗಳು (ಪರ್ಫ್ಯೂಮ್‌) ಸರಿಯಾದ ಆಯ್ಕೆ

ಅದು ಯಾವುದೇ ಸಂದರ್ಭವಾಗಿರಲಿ, ಸುಗಂಧ ದ್ರವ್ಯಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಯಾವಾಗಲೂ ಸರಿಯಾದ ಆಯ್ಕೆಯಾಗಿದೆ. ನೀವು ಇದನ್ನು ಉಡುಗೊರೆಯಾಗಿ ನೀಡಿದಾಗ ಅದು ಗಮನಾರ್ಹ ಪ್ರಭಾವ ಬೀರುತ್ತದೆ. ನಮ್ಮ ಪ್ರೀತಿಪಾತ್ರರಿಗೆ ಏನು ನೀಡಬೇಕು ಎಂಬುದರ ಬಗ್ಗೆ ನಾವು ಸಂಪೂರ್ಣವಾಗಿ ಗೊಂದಲದಲ್ಲಿರುವಾಗ ಈ ಸುಗಂಧ ದ್ರವ್ಯಗಳು ನಿಮ್ಮ ರಕ್ಷಣೆಗೆ ಬರುತ್ತವೆ.

ತಿನಿಸುಗಳ ಉಡುಗೊರೆಗಳು

ಇದನ್ನೂ ಓದಿ: ಮಂಡಿ-ಮೊಣಕೈ ಕಪ್ಪಾಗಿದೆಯಾ? ಹಾಗಾದ್ರೆ ಇಷ್ಟು ಮಾಡಿ ಸಾಕು

ನೀವು ನಿಮ್ಮ ಆಪ್ತರಿಗೆ ಈ ತಿನಿಸುಗಳ ಉಡುಗೊರೆ ನೀಡಲು ಈ ಹಬ್ಬಗಳ ಸಮಯ ತುಂಬಾನೇ ಸೂಕ್ತವಾಗಿರುತ್ತವೆ. ಇದರಲ್ಲಿ ಚಾಕಲೇಟ್, ಸಿಹಿ ತಿನಿಸು, ನೆಚ್ಚಿನ ತಿಂಡಿಗಳ ಬುಟ್ಟಿ ಅಥವಾ ಆರೋಗ್ಯಕರ ತಿನಿಸುಗಳ ಬುಟ್ಟಿ ಹೀಗೆ ಒಟ್ಟಿನಲ್ಲಿ ತಿನಿಸುಗಳ ಉಡುಗೊರೆಯು ನಿಮ್ಮ ಆಪ್ತರ ಮುಖದಲ್ಲಿ ನಗು ತರುವುದಂತೂ ಗ್ಯಾರಂಟಿ. ಇವು ಈ ಹಬ್ಬದ ಸಮಯದಲ್ಲಿ ಅತ್ಯುತ್ತಮವಾದ ಉಡುಗೊರೆ ಆಯ್ಕೆಯಾಗಬಹುದು. ಈಗಂತೂ ಮಾರುಕಟ್ಟೆಯಲ್ಲಿ ವಿಭಿನ್ನ ತರಹದ ಬುಟ್ಟಿಯಲ್ಲಿ ತುಂಬಿದ ತಿನಿಸುಗಳ ಉಡುಗೊರೆಗಳು ಬಂದಿರುವುದು ಇನ್ನೂ ವಿಶೇಷವಾಗಿದೆ.
Published by:Sandhya M
First published: