• Home
  • »
  • News
  • »
  • trend
  • »
  • Sree Padmanabhaswamy temple: ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು!

Sree Padmanabhaswamy temple: ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು!

 ಶ್ರೀ ಪದ್ಮನಾಭಸ್ವಾಮಿ ದೇವಾಲಯ

ಶ್ರೀ ಪದ್ಮನಾಭಸ್ವಾಮಿ ದೇವಾಲಯ

8ನೇ ಶತಮಾನದ ಶ್ರೀ ಪದ್ಮನಾಭಸ್ವಾಮಿ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿರುವ ಭಾರತದ 108 ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ವಿಷ್ಣುವು ಹೆಡೆಯ ಸರ್ಪವಾದ ಅನಂತನ ಮೇಲೆ ಮಲಗಿರುವ ವಿಗ್ರಹವನ್ನು ಹೊಂದಿದೆ. ಪುರಾತನವಾದ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಫಲಿತಾಂಶವೇ ಇಂದು ನಾವೆಲ್ಲರೂ ನೋಡುತ್ತಿರುವ ವಿಶೇಷ ದೇವಾಲಯವಾಗಿದೆ. ಈ ದೇವಸ್ಥಾನದ ಕೆಲ ರೋಚಕ ಮಾಹಿತಿ ಇಲ್ಲಿದೆ ನೋಡಿ.

ಮುಂದೆ ಓದಿ ...
  • Share this:

ಬಗ್ಕೇಗೆರಳದ ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯವು (Sri Padmanabhaswamy Temple)  ಪ್ರಪಂಚದ ಅತ್ಯಂತ ಶ್ರೀಮಂತ ದೇವಾಲಯವೆಂದೆ ಖ್ಯಾತಿ ಗಳಿಸಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. 8ನೇ ಶತಮಾನದ ಶ್ರೀ ಪದ್ಮನಾಭಸ್ವಾಮಿ ದೇವಾಲಯವು ವಿಷ್ಣುವಿಗೆ (Vishnu) ಸಮರ್ಪಿತವಾಗಿರುವ ಭಾರತದ 108 ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ವಿಷ್ಣುವು ಹೆಡೆಯ ಸರ್ಪವಾದ ಅನಂತನ ಮೇಲೆ ಮಲಗಿರುವ ವಿಗ್ರಹವನ್ನು (Idol) ಹೊಂದಿದೆ. ರಾಜ ಮಾರ್ತಾಂಡ ವರ್ಮನ ಕಾಲದಲ್ಲಿ ಈ ದೇವಾಲಯವು ಹೊಸದಾಗಿ ನಿರ್ಮಾಣವಾಯಿತು. ಪುರಾತನವಾದ ಈ ದೇವಾಲಯದ (Temple) ಜೀರ್ಣೋದ್ಧಾರ ಕಾರ್ಯದ ಫಲಿತಾಂಶವೇ ಇಂದು ನಾವೆಲ್ಲರೂ ನೋಡುತ್ತಿರುವ ವಿಶೇಷ ದೇವಾಲಯವಾಗಿದೆ.


ದೇವಸ್ಥಾನದ ಸಂಪೂರ್ಣ ಜವಬ್ದಾರಿ ಯಾರ ಮೇಲಿದೆ?
ಭಕ್ತ ರಾಜ ಮಾರ್ತಾಂಡ ವರ್ಮ ದೇವಸ್ಥಾನ ಮತ್ತು ರಾಜ್ಯದ ಜನರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಾನೇ ಸ್ವತಃ ತೆಗೆದುಕೊಂಡು, ಇದು ನಮ್ಮ ರಾಜಮನೆತನದ ಕರ್ತವ್ಯ ಎಂದು ಆ ದೇವಸ್ಥಾನದ ಸಂಪೂರ್ಣ ಜವಬ್ದಾರಿಯನ್ನು ಆತನೇ ತೆಗೆದುಕೊಂಡನು.


ಇದರ ನಂತರ ತ್ರಿಪದಿದಾನದ ಸಂಪ್ರದಾಯದಂತೆ, ದೇವಸ್ಥಾನ ಮತ್ತು ದೈವದ ಕೆಲಸಗಳಿಗೆ ದಾನ ನೀಡುವುದು ರಾಜಮನೆತನಕ್ಕೆ ಒಂದು ಸಂಪ್ರದಾಯ ಆಯಿತು. ತಿರುವಾಂಕೂರಿನ ಕೊನೆಯ ಮಹಾರಾಜ ಮಹಾರಾಜ ಶ್ರೀ ಪದ್ಮನಾಭ ದಾಸ ಶ್ರೀ ಚಿತ್ತಿರ ತಿರುನಾಳ್ ಬಾಲ ರಾಮ ವರ್ಮ ಅವರು 1965 ರಲ್ಲಿ ಧಾರ್ಮಿಕ ಅರ್ಪಣೆಗಳು ಮತ್ತು ದೇಣಿಗೆಗಳನ್ನು ಮುಂದುವರಿಸಲು ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ ಟ್ರಸ್ಟ್ ಒಂದನ್ನು ರಚಿಸಿದರು.


ಇಂದಿಗೂ, ದೇವಾಲಯವನ್ನು ರಾಜಮನೆತನದ ನೇತೃತ್ವದ ಟ್ರಸ್ಟ್ ನಡೆಸುತ್ತಿದೆ. ಈ ದೇವಸ್ಥಾನಕ್ಕೆ ನೀಡುವ ದೇಣಿಗೆಯನ್ನು ಕೇವಲ ರಾಜ್ಯದವರೇ ನೀಡಬೇಕೆಂದು ಸೀಮಿತವಾಗಿಲ್ಲ. ಅದು ಎಲ್ಲಿಂದಲಾದರೂ ಮತ್ತು ಯಾರಾದರೂ ನೀಡಬಹುದಾಗಿದೆ. ಆದರೆ ದೇವಸ್ಥಾನಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ ಇದೆ. ನಾವಿಂದು ಈ ದೇವಸ್ಥಾನಕ್ಕೆ ಹರಿದು ಬರುವ ಅಪಾರವಾದ ದೇಣಿಗೆಯ ಕಾರಣದಿಂದಲೇ ನಾವಿಲ್ಲಿ ಚರ್ಚೆ ನಡೆಸುತ್ತಿದ್ದೆವೆ.


ಇದನ್ನೂ ಓದಿ:  Kukke Subrahmanya Tample: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಸೇವಾ ದರದಲ್ಲಿ ಭಾರೀ ಹೆಚ್ಚಳ!


ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಸಂಪತ್ತಿನ ಒಳನೋಟ
2011ರ ಜೂನ್‌ನಲ್ಲಿ ದೇವಸ್ಥಾನದ ನಿರ್ವಹಣೆಯಲ್ಲಿ ಪಾರದರ್ಶಕತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ಫಲವಾಗಿ ಹಾಗೂ ದೇವಸ್ಥಾನದ ಸಂಕೀರ್ಣದ ತನಿಖೆಯ ಫಲಿತಾಂಶವಾಗಿ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಆರು ಭೂಗತ ಪೆಟ್ಟಿಗೆಗಳು ಪತ್ತೆಯಾಗಿದ್ದವು.


ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಸಂಪತ್ತು ಮತ್ತು ರಹಸ್ಯಗಳು:
ಅಲ್ಲಿ ದೊರಕಿದ ಪೆಟ್ಟಿಗೆಗಳನ್ನು ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂದು ಹೆಸರಿಸಲಾಯಿತು. ಈ ಆರು ಪೆಟ್ಟಿಗೆಗಳಲ್ಲಿ ಅವರು ಐದನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಚಿನ್ನದ ನಾಣ್ಯಗಳು, ಪ್ರತಿಮೆಗಳು, ಆಭರಣಗಳು, ಅಮೂಲ್ಯ ಕಲ್ಲುಗಳು, ಕಿರೀಟಗಳು ಮತ್ತು ಸಿಂಹಾಸನಗಳು ದೊರಕಿದವು. ಈ ಚಿನ್ನದ ಸಂಗ್ರಹವು ಇದುವರೆಗೂ ಚಿನ್ನ ಮತ್ತು ಅಮೂಲ್ಯ ಕಲ್ಲುಗಳ ವಸ್ತುಗಳ ಸಂಗ್ರಹವಾದ ದಾಖಲಾದ ಅತಿದೊಡ್ಡ ಸಂಗ್ರಹ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.


ಈ ಪೆಟ್ಟಿಗೆಯಲ್ಲಿ ದೊರೆತ ಅಮೂಲ್ಯ ವಸ್ತುಗಳಾವುವು?
ಈ ಐದು ಪೆಟ್ಟಿಗೆಗಳಲ್ಲಿ 4-ಅಡಿ ಎತ್ತರ ಮತ್ತು 3-ಅಡಿ ಅಗಲದ ಘನ ಶುದ್ಧ-ಚಿನ್ನದ ಮಹಾವಿಷ್ಣುವಿನ ವಿಗ್ರಹ ಅದಕ್ಕೆ ಹೊಂದಿಸಿದ ವಜ್ರಗಳು ಮತ್ತು ಅಮೂಲ್ಯವಾದ ಕಲ್ಲುಗಳಿಂದ ವಿಶೇಷ ವಿಗ್ರಹವಾಗಿತ್ತು. ಇದರ ಜೊತೆಗೆ ದೇವರ 18 ಅಡಿ ವಿಗ್ರಹವನ್ನು ಅಳವಡಿಸಲು ತಯಾರಿಸಲಾದ ಘನ ಚಿನ್ನದ ಸಿಂಹಾಸನ, ಸಾವಿರಾರು ಶುದ್ಧ ಚಿನ್ನದ ಸರಗಳು, ಅದರಲ್ಲಿ ಒಂದು ಚಿನ್ನದ ಸರ 18 ಅಡಿ ಉದ್ದವಿತ್ತು. ರೋಮನ್ ಸಾಮ್ರಾಜ್ಯ ಮತ್ತು ಮಧ್ಯಕಾಲೀನ ಕಾಲದ ಚಿನ್ನದ ನಾಣ್ಯಗಳು ಇರುವ ಕೆಲವು ತುಂಬಿದ ಚೀಲಗಳು ದೊರಕಿವೆ. ಇನ್ನು ಅನೇಕಾನೇಕ ಚಿನ್ನದ ವಸ್ತುಗಳು ಸಿಕ್ಕಿವೆ. ಅವುಗಳನ್ನು ಎಣಿಸಲು ಸಾಧ್ಯವೇ ಇಲ್ಲ ಎಂದು ತನಿಖಾಧಿಕಾರಿಗಳು ವಿವರಿಸುತ್ತಾರೆ.


ಇದನ್ನೂ ಓದಿ:  Tirupati Temple: ತಿರುಪತಿಗೆ 1 ಕೋಟಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ!


ಈ ದೇವಸ್ಥಾನದ ಆಡಳಿತ ನಿರ್ವಹಣೆ ಯಾರ ತೆಕ್ಕೆಗೆ?
ಈ ದೇವಾಲಯದ ಸಂಪತ್ತಿನ ಸರಿಯಾದ ಮೌಲ್ಯಮಾಪನಕ್ಕಾಗಿ ಮತ್ತು ಆ ದೇವಾಲಯದ ನಿರ್ವಹಣೆಯ ಆಡಳಿತವನ್ನು ಬದಲಿಸಬೇಕೆಂಬ ಉದ್ದೇಶದಿಂದ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಯಿತು. ಆದರೆ 2020 ರಲ್ಲಿ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರಕರಣದಲ್ಲಿ ನ್ಯಾಯಾಲದ ತೀರ್ಪು ರಾಜಮನೆತನದ ಪರವಾಗಿ ಬಂದಿತು. ಈಗ ಈ ದೇವಾಲಯದ ಸಂಪೂರ್ಣ ಆಡಳಿತದ ನಿರ್ವಹಣೆ ಮತ್ತು ಅದರಿಂದ ಬರುವ ಎಲ್ಲ ಆದಾಯಕ್ಕೂ ರಾಜಮನೆತನದ ಕುಟುಂಬವೇ ಸಮಸ್ತ ಅಧಿಕಾರವನ್ನು ಹೊಂದಿದೆ.

Published by:Ashwini Prabhu
First published: