World Heritage Day 2022: ನಿಮಗೆ ಗೊತ್ತೇ ಇದರ ಹಿನ್ನೆಲೆ, ಆಚರಣೆ ಮಹತ್ವ? ಇಲ್ಲಿದೆ ಸಮಗ್ರ ಮಾಹಿತಿ

ಸ್ಥಳೀಯ ಸಮುದಾಯಗಳು ಮತ್ತು ಜನರು ತಮ್ಮ ಜೀವನದಲ್ಲಿ ಸಾಂಸ್ಕೃತಿಕ ಪರಂಪರೆಯ ಮೌಲ್ಯವನ್ನು ಗುರುತಿಸಿ ಅರಿಯುವುದು ಹಾಗೂ ಅದನ್ನು ಪ್ರೋತ್ಸಾಹಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ವಿಶ್ವ ಪಾರಂಪರಿಕ ದಿನ

ವಿಶ್ವ ಪಾರಂಪರಿಕ ದಿನ

 • Share this:
  ವಿಶ್ವ ಪರಂಪರೆಯ ದಿನ (World Heritage Day) ಅಥವಾ ವಿಶ್ವ ಪಾರಂಪರಿಕ ದಿನ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಪ್ರದೇಶದ ಐತಿಹಾಸಿಕ (History) ಮಹತ್ವ, ಸಂಪ್ರದಾಯ ಹಾಗೂ ಪರಂಪರೆಯ ಭವ್ಯತೆಯನ್ನು ಸಾರುವ ಅಂತಾರಾಷ್ಟ್ರೀಯ ಮಟ್ಟದ ಸ್ಮಾರಕಗಳು (Monuments) ಮತ್ತು ತಾಣಗಳಿಗೆ ಮುಡಿಪಾದ ದಿನವನ್ನು ನಾವು ಇಂದು ವಿಶ್ವ ಪಾರಂಪರಿಕ ದಿನವನ್ನಾಗಿ ಪ್ರತಿ ವರ್ಷ ಏಪ್ರಿಲ್ 18 ರಂದು ವ್ಯಾಪಕವಾಗಿ ಆಚರಿಸುತ್ತಿದ್ದೇವೆ. ಈ ದಿನವನ್ನು ಮೊದಲ ಬಾರಿಗೆ ಪರಿಚಯಿಸಿ ಎಲ್ಲೆಡೆ ಅನುಷ್ಠಾನಕ್ಕೆ 1983 ರಲ್ಲಿ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (UNESCO) ತಂದಿತು. ಪ್ರಪಂಚದ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಮಹಾನ್ ಗುರಿಯನ್ನು ಈ ದಿನ ಹೊಂದಿದೆ.

  ಈ ದಿನವನ್ನು ವಿಶ್ವ ಪರಂಪರೆಯ ದಿನವನ್ನಾಗಿ ಆಚರಿಸುವ ಕಲ್ಪನೆಯು ಯುನೆಸ್ಕೋದ 2 ನೇ ಸಾಮಾನ್ಯ ಸಮ್ಮೇಳನದಲ್ಲಿ ಗುರುತಿಸಲಾಯಿತು.

  ವಿಶ್ವ ಪಾರಂಪರಿಕ ದಿನದ ಥೀಮ್

  ಪ್ರತಿ ಅಂತಾರಾಷ್ಟ್ರೀಯ ದಿನಗಳಿಗೆ ಇರುವಂತೆ ಈ ಆಚರಣೆಯೂ ಸಹ ಥೀಮ್ ಆಧಾರಿತ ಈವೆಂಟ್ ಆಗಿದ್ದು ಪ್ರತಿ ಬಾರಿ ಅದಕ್ಕೆ ವಿಶೇಷವಾದ ಥೀಮ್ ನೀಡಲಾಗುತ್ತದೆ. ಹಾಗಾಗಿ, ಈ ಸಂಬಂಧ ನಡೆಯುವ ಈವೆಂಟ್‌ಗಳು ವಿಶ್ವ ಪರಂಪರೆಯ ದಿನದಂದು ನಿರ್ದಿಷ್ಟ ವಿಷಯದ ಸುತ್ತ ಕೇಂದ್ರೀಕೃತವಾಗಿರುತ್ತವೆ. ಥೀಮ್‌ಗೆ ಈವೆಂಟ್‌ಗಳನ್ನು ಅರ್ಪಿಸುವ ಉಪಕ್ರಮವನ್ನು ಸ್ಮಾರಕಗಳು ಮತ್ತು ಸೈಟ್‌ಗಳ ಅಂತರರಾಷ್ಟ್ರೀಯ ಮಂಡಳಿಯು 1983 ರಲ್ಲಿ ಜಾರಿಗೆ ತಂದಿತು. 2022ರ ವಿಶ್ವ ಪರಂಪರೆಯ ದಿನದ ವಿಷಯ ಅಥವಾ ಥೀಮ್ ಅನ್ನು"ಪರಂಪರೆ ಮತ್ತು ಹವಾಮಾನ" ಎಂದು ನಿರ್ಧರಿಸಲಾಗಿದೆ.

  ಹವಾಮಾನದ ಕುರಿತೂ ಜನರಲ್ಲಿ ಜಾಗೃತೆ

  ಪರಂಪರೆಯ ಜೊತೆ ಜೊತೆಗೆ ಈಗ ಆಗುತ್ತಿರುವ ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಡ್ಡ ಪರಿಣಾಮಗಳು ಉಂಟಾಗದಿರಲಿ ಎಂಬ ಉದ್ದೇಶದೊಂದಿಗೆ ಜನರಲ್ಲಿ ಹವಾಮಾನ ಮಹತ್ವದ ಕುರಿತು ಜಾಗೃತಿ ಮೂಡಿಸುವುದಾಗಿದೆ. ಅದಕ್ಕಾಗಿ ಯುನೆಸ್ಕೋ ತನ್ನ ಸಹಯೋಗಿಗಳು ಈ ಥೀಮ್‌ಗೆ ಸಂಬಂಧಿಸಿದಂತೆ ಹೇಗೆ ಪರಂಪರೆಯ ಅತ್ಯಮೂಲ್ಯ ಜ್ಞಾನ ವಾತಾವರಣ ಕಲುಷಿತಗೊಳ್ಳದಂತೆ ರಕ್ಷಿಸಬಹುದು ಎಂಬುದರ ಕುರಿತು ಜಾಗೃತಿ ಅಭಿಯಾನ ಮೂಡಿಸಲು ಕರೆ ನೀಡಿದೆ.

  ಇದನ್ನೂ ಓದಿ: Viral News: 17 ವರ್ಷದ ನಂತ್ರ ಬೆಕ್ಕನ್ನು ಅರಮನೆಯಿಂದ ಹೊರಹಾಕಿದ್ರು, 12 ಸಾವಿರ ಜನ ಮಾಡಿದ್ದೇನು?

   ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು

  ಭಾರತವು ಒಟ್ಟು 3691 ಪಾರಂಪರಿಕ ಸ್ಮಾರಕಗಳು ಮತ್ತು ತಾಣಗಳನ್ನು ಹೊಂದಿದ್ದು ಅವುಗಳಲ್ಲಿ, 40 ಸ್ಮಾರಕ/ತಾಣಗಳನ್ನು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣಗಳು ಎಂದು ಘೋಷಿಸಲ್ಪಟ್ಟಿವೆ. ಭಾರತದಲ್ಲಿ ಮಂಚೂಣಿಯಾಗಿ ಕಾಣಬಹುದಾದ ಸಾಂಸ್ಕೃತಿಕ ವಿಶ್ವ ಪರಂಪರೆಯ ತಾಣಗಳೆಂದರೆ ತಾಜ್ ಮಹಲ್, ಹಂಪಿ, ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಸೂರ್ಯ ದೇವಾಲಯ, ಸಂಚಿ ಸ್ತೂಪ, ರಾಣಿ ಕಿ ವಾವ್, ರಾಜಸ್ಥಾನದ ಬೆಟ್ಟದ ಕೋಟೆಗಳು ಹೀಗೆ ಪಟ್ಟಿ ಮುಂದುವರಿಯುತ್ತದೆ.

  ಪ್ರಾಕೃತಿಕ ತಾಣಗಳಿಗೂ ವಿಶ್ವಪಾರಂಪರಿಕ ಗರಿ

  ಇನ್ನು ನೈಸರ್ಗಿಕವಾಗಿ ಪರಂಪರೆಯ ತಾಣಗಳಲ್ಲಿ ಪಶ್ಚಿಮ ಘಟ್ಟಗಳು, ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ, ಕಾಜಿರಂಗ ವನ್ಯಜೀವಿ ಅಭಯಾರಣ್ಯ, ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ, ನಂದಾದೇವಿ ಮತ್ತು ಹೂವಿನ ರಾಷ್ಟ್ರೀಯ ಉದ್ಯಾನವನಗಳು ಮುಂತಾದವುಗಳನ್ನು ಸೇರಿಸಲಾಗಿದೆ. ಆದರೂ, ಹೆಚ್ಚಿನ ಸಂಖ್ಯೆಯ ಸಂರಕ್ಷಿತ ಸೈಟ್‌ಗಳನ್ನು ಸಹ ಗುರುತಿಸಲಾಗಿದ್ದು ಉತ್ತರ ಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿ ಸುಮಾರು 745 ಸೈಟುಗಳಿದ್ದರೆ ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು ಇದರ ವ್ಯಾಪ್ತಿಯಲ್ಲಿ 506 ಸಂರಕ್ಷಿತ ಸೈಟುಗಳಿವೆ.

  ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ

  ಇಂದು, ದೇಶದಲ್ಲಿ ಇನ್ನು ಹಲವಾರು ಐತಿಹಾಸಿಕವಾಗಿ ಸಿರಿವಂತ ಪರಂಪರೆಗಳ ಖಾಲಿ ಸ್ಥಳಗಳು ಒಂದೆಡೆ ಮೌನವಾಗಿ ನಿಂತಿದ್ದು, ತಮಗೊದಗಿ ಬಂದ ದುರಂತದ ಕರಾಳ ಕಥೆಯನ್ನು ಹೇಳುತ್ತಿರುವಂತಿವೆ. ಒಂದೊಮ್ಮೆ ಜನರಿಂದ ಆವರಿಸಲ್ಪಡುತ್ತಿದ್ದ ಈ ತಾಣಗಳು ಲಾಕ್‌ಡೌನ್‌ ಪರಿಣಾಮದಿಂದಾಗಿ ಇಂದು ನೀರವ ಮೌನಕ್ಕೆ ಜಾರಿದಂತಾಗಿವೆ.

  ವಿಶ್ವ ಪಾರಂಪರಿಕ ದಿನದ ಮಹತ್ವ

  ಸ್ಥಳೀಯ ಸಮುದಾಯಗಳು ಮತ್ತು ಜನರು ತಮ್ಮ ಜೀವನದಲ್ಲಿ ಸಾಂಸ್ಕೃತಿಕ ಪರಂಪರೆಯ ಮೌಲ್ಯವನ್ನು ಗುರುತಿಸಿ ಅರಿಯುವುದು ಹಾಗೂ ಅದನ್ನು ಪ್ರೋತ್ಸಾಹಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಅದರ ದುರ್ಬಲತೆಯ ಬಗ್ಗೆಯೂ ಸಹ ಜಾಗೃತಿ ಮೂಡಿಸುವುದರ ಮೂಲಕ ಅದು ನಶಿಸದಂತೆ ತಡೆಹಿಡಿಯುವ ಸಾರ್ಥಕ ದೂರದೃಷ್ಟಿಯನ್ನು ಈ ದಿನಾಚರಣೆ ಹೊಂದಿದೆ.

  ವಿಶ್ವ ಪರಂಪರೆಯ ದಿನವನ್ನು ಸ್ಮರಿಸುವ ಗುರಿಯು ಪ್ರಪಂಚದಾದ್ಯಂತದ ಜನರನ್ನು ಅವರ ಇತಿಹಾಸ, ಪರಂಪರೆ ಮತ್ತು ಸಂಪ್ರದಾಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಒಟ್ಟಿಗೆ ತರುವುದಾಗಿದೆ.

  ಇದನ್ನೂ ಓದಿ: Viral News: ಬಡ ಹುಡುಗನಿಗೆ ಈ ಟ್ರಾಫಿಕ್ ಪೊಲೀಸೇ ಟೀಚರ್; ಬಿಡುವಿನ ವೇಳೆ ಪಾಠ ಮಾಡೋ ಮಾಸ್ಟರ್

  ಇದು ಇತರ ಸಮುದಾಯಗಳ ಜನರು ಪರಸ್ಪರರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಇದರ ಪರಿಣಾಮದಿಂದಾಗಿ ಸಹಬಾಳ್ವೆಯನ್ನು ಉತ್ತೇಜಿಸಬಹುದು. ICOMOS ಪ್ರಪಂಚದಾದ್ಯಂತ UNESCO ಸಹಯೋಗದೊಂದಿಗೆ ವೈಭವದ ಆಚರಣೆಗಳನ್ನು ಆಯೋಜಿಸುತ್ತದೆ ಮತ್ತು ಪ್ರವಾಸೋದ್ಯಮ ಹಾಗೂ ಇತಿಹಾಸದ ಉತ್ಸಾಹಿಗಳು ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

  ಕೊರೊನಾವೈರಸ್ ಲಾಕ್‌ಡೌನ್‌ನಿಂದ ಜಗತ್ತು ಈಗ ಸ್ವಲ್ಪ ಸ್ಥಗಿತವಾದಂತಾಗಿದ್ದು ಈ ಸ್ಥಗಿತದ ದುಷ್ಪರಿಣಾಮ ಉಂಟಾಗದಂತೆ ಈ ವರ್ಷ ICMOS ಈ ದಿನಾಚರಣೆಯ ವಿಷಯವನ್ನು ಹಂಚಿಕೆಯ ಸಂಸ್ಕೃತಿಗಳು, ಹಂಚಿಕೆಯ ಪರಂಪರೆ, ಹಂಚಿಕೆಯ ಜವಾಬ್ದಾರಿ ಅಡಿಗಳಲ್ಲಿ ಆಯೋಜಿಸಿದೆ.
  Published by:Annappa Achari
  First published: