Costliest Mango: ಇದು ಅಂತಿಂಥ ಮಾವಿನ ಹಣ್ಣು ಅಲ್ಲ! ಇದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ

ನೀವು ಎಂದಾದರೂ ಸುಮ್ಮನೆ ಹೀಗೆ ಮಾವಿನ ಹಣ್ಣನ್ನು ತಿನ್ನುತ್ತಾ ಯೋಚಿಸಿದ್ದೀರಾ? ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಮಾವಿನ ಹಣ್ಣು ಯಾವುದು ಅಂತ. ಬನ್ನಿ ಹಾಗಾದರೆ ಇಲ್ಲೊಬ್ಬ ಖ್ಯಾತ ಕೈಗಾರಿಕೋದ್ಯಮಿಯೊಬ್ಬರು ವಿಶ್ವದ ದುಬಾರಿ ಮಾವಿನ ಹಣ್ಣಿನ ಬಗ್ಗೆ ಫೋಟೋ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೇಸಿಗೆಕಾಲ (Summer) ಬಂತೆಂದರೆ ಸಾಕು, ಮಾವಿನ ಹಣ್ಣಿನ ಸೀಸನ್ (Mango Season) ಶುರುವಾಗುತ್ತದೆ. ಯಾರಿಗೆ ತಾನೇ ಈ ಮಾವಿನ ಹಣ್ಣುಗಳು ಎಂದರೆ ಇಷ್ಟವಿರುವುದಿಲ್ಲ ಹೇಳಿ? ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನ ರೀತಿಯ ಮಾವಿನ ಹಣ್ಣುಗಳನ್ನು ನಾವೆಲ್ಲಾ ನೋಡುತ್ತೇವೆ. ಇದು ನೋಡಲು ಮತ್ತು ಬಣ್ಣದಲ್ಲಿ ಎಷ್ಟು ವಿಭಿನ್ನವಾಗಿ ಇರುತ್ತದೆಯೋ, ರುಚಿಯಲ್ಲಿಯೂ ಸಹ ಅಷ್ಟೇ ವಿಭಿನ್ನತೆಯನ್ನು ಹೊಂದಿರುತ್ತವೆ ಎಂದು ಹೇಳಬಹುದು. ನೀವು ಎಂದಾದರೂ ಸುಮ್ಮನೆ ಹೀಗೆ ಮಾವಿನ ಹಣ್ಣನ್ನು ತಿನ್ನುತ್ತಾ ಯೋಚಿಸಿದ್ದೀರಾ? ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ (Costliest) ಮಾವಿನ ಹಣ್ಣು ಯಾವುದು ಅಂತ. ಬನ್ನಿ ಹಾಗಾದರೆ ಇಲ್ಲೊಬ್ಬ ಖ್ಯಾತ ಕೈಗಾರಿಕೋದ್ಯಮಿಯೊಬ್ಬರು ವಿಶ್ವದ ದುಬಾರಿ ಮಾವಿನ ಹಣ್ಣಿನ ಬಗ್ಗೆ ಫೋಟೋ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.

ಮಾವಿನ ಹಣ್ಣಿನ ದುಬಾರಿ ತಳಿಗಳಲ್ಲಿ ಒಂದರ ಫೋಟೋ  ಪೋಸ್ಟ್
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಮಾವಿನ ಹಣ್ಣಿನ ದುಬಾರಿ ತಳಿಗಳಲ್ಲಿ ಒಂದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಮಿಯಾಝಾಕಿ ಮಾವಿನ ಹಣ್ಣಿನ ತಳಿಯನ್ನು ತೋರಿಸುತ್ತದೆ, ಇದು ಮುಖ್ಯವಾಗಿ ಜಪಾನ್ ನಲ್ಲಿ ಬೆಳೆಯಲಾಗುವ ಮಾವಿನ ತಳಿಯಾಗಿದೆ.ಭಾರತದಲ್ಲಿ ಈ ಬೆಳೆ ಬಹಳ ವಿರಳವಾಗಿದೆ ಮತ್ತು ಅದನ್ನು ಬೆಳೆಯುವವರು ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಹರ್ಷ್ ಗೋಯೆಂಕಾ ಅವರು ತಮ್ಮ ಟ್ವೀಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಯಾವುದು ಈ ದುಬಾರಿ ಮಾವಿನ ಹಣ್ಣು
"ಅಸಾಮಾನ್ಯವಾದ ಗುಲಾಬಿ (ಪಿಂಕ್) ಬಣ್ಣದ ಜಪಾನಿನ ಮಾವು ಮಿಯಾಝಾಕಿ ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಹೇಳಲಾಗುತ್ತಿದ್ದು, ಪ್ರತಿ ಕಿಲೋ ಗ್ರಾಂ ಗೆ 2.7 ಲಕ್ಷದಂತೆ ಮಾರಾಟವಾಗುತ್ತಿದೆ. ಮಧ್ಯಪ್ರದೇಶದ ಜಬಲ್ಪುರದ ಪರಿಹಾರ್ ಎಂಬ ರೈತರೊಬ್ಬರು ಈ ತಳಿಯ ಮಾವಿನ ಹಣ್ಣಿನ ಮರಗಳ ರಕ್ಷಣೆಗೆ ಮೂರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ" ಎಂದು ಆರ್‌ಪಿಜಿ ಗ್ರೂಪ್ ನ ಅಧ್ಯಕ್ಷರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Crab: ರೋಮಗಳಿರೋ ವಿಶಿಷ್ಟ ಏಡಿ ನೋಡಿದ್ದೀರಾ? ಈಗ ವೈರಲ್ ಆಗಿದೆ

ಇದು ಇಡೀ ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಕಳೆದ ವರ್ಷ ಹಣ್ಣಿನ ಬೆಲೆ ಪ್ರತಿ ಕೆ.ಜಿ.ಗೆ 2.70 ಲಕ್ಷ ರೂಪಾಯಿಗೆ ಏರಿತ್ತು. ಸುದ್ದಿ ಸಂಸ್ಥೆಯ ಒಂದು ವರದಿಯ ಪ್ರಕಾರ, ಪರಿಹಾರ್ ಅವರು ರೈಲು ಪ್ರಯಾಣದ ಸಮಯದಲ್ಲಿ ಒಬ್ಬ ವ್ಯಕ್ತಿಯಿಂದ ಮಿಯಾಝಾಕಿಯ ಸಸಿಯನ್ನು ಪಡೆದರು. ಮರವು ಮಾಣಿಕ್ಯ ಬಣ್ಣದ ಜಪಾನೀಸ್ ಮಾವಿನ ಹಣ್ಣುಗಳನ್ನು ಹೊಂದಿರುತ್ತದೆ ಎಂದು ದಂಪತಿಗಳಿಗೆ ತಿಳಿದಿರಲಿಲ್ಲ.

ಎಗ್ಸ್ ಆಫ್ ಸನ್ ಶೈನ್
ಮಿಯಾಝಾಕಿ ಮಾವಿನ ಹಣ್ಣುಗಳನ್ನು ಅವುಗಳ ಆಕಾರ ಮತ್ತು ಉರಿಯುವ ಕೆಂಪು ಬಣ್ಣದಿಂದಾಗಿ ಹೆಚ್ಚಾಗಿ "ಎಗ್ಸ್ ಆಫ್ ಸನ್ ಶೈನ್" ಜಪಾನೀ ಭಾಷೆಯಲ್ಲಿ ತೈಯೋ-ನೋ-ಟಮಾಗೊ ಎಂದು ಕರೆಯಲಾಗುತ್ತದೆ.

ಮಿಯಾಝಾಕಿ ಮಾವಿನ ಹಣ್ಣುಗಳು ಜಪಾನಿನ ನಗರದಿಂದ ತಮ್ಮ ಹೆಸರನ್ನು ಪಡೆಯುತ್ತವೆ, ಅಲ್ಲಿ ಅವುಗಳನ್ನು ಬೆಳೆಯಲಾಗುತ್ತದೆ. ಸರಾಸರಿ, ಒಂದು ಮಾವಿನ ಹಣ್ಣಿನ ತೂಕ ಸುಮಾರು 350 ಗ್ರಾಂ ಆಗಿರುತ್ತದೆ. ಉತ್ಕರ್ಷಣ ನಿರೋಧಕಗಳು, ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲಗಳಿಂದ ಸಮೃದ್ಧವಾಗಿರುವ ಮಾವಿನ ಹಣ್ಣುಗಳನ್ನು ಏಪ್ರಿಲ್ ಮತ್ತು ಆಗಸ್ಟ್ ನಡುವಿನ ಗರಿಷ್ಠ ಸುಗ್ಗಿಯ ಋತುವಿನಲ್ಲಿ ಬೆಳೆಯಲಾಗುತ್ತದೆ.

ಈ ಮಾವಿನ ಹಣ್ಣುಗಳು ಹೆಚ್ಚಾಗಿ ಎಲ್ಲಿ ಬೆಳೆಯುತ್ತಾರೆ
ಜಪಾನಿನ ವ್ಯಾಪಾರ ಉತ್ತೇಜನ ಕೇಂದ್ರದ ಪ್ರಕಾರ, ಮಿಯಾಝಾಕಿ ಒಂದು ರೀತಿಯ "ಇರ್ವಿನ್" ಮಾವು ಆಗಿದ್ದು, ಇದು ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿ ಬೆಳೆಯುವ ಹಳದಿ "ಪೆಲಿಕಾನ್ ಮಾವು" ಗಿಂತ ಭಿನ್ನವಾಗಿದೆ.ಮಿಯಾಝಾಕಿಯ ಮಾವಿನ ಹಣ್ಣುಗಳನ್ನು ಜಪಾನಿನಾದ್ಯಂತ ಸಾಗಿಸಲಾಗುತ್ತದೆ ಮತ್ತು ಅವುಗಳ ಉತ್ಪಾದನಾ ಪ್ರಮಾಣವು ಒಕಿನಾವಾ ನಂತರ ಜಪಾನ್ ನಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Liquor sales: ಭಾರತದಲ್ಲಿ ಕಳೆದ ವರ್ಷ ಅತಿಹೆಚ್ಚು ಮಾರಾಟವಾದ ಟಾಪ್​ 10 ವಿಸ್ಕಿ ಬ್ರಾಂಡ್​ಗಳು ಇವಂತೆ

70 ರ ದಶಕದ ಉತ್ತರಾರ್ಧ ಮತ್ತು 80 ರ ದಶಕದ ಆರಂಭದಲ್ಲಿ ಮಿಯಾಝಾಕಿಯಲ್ಲಿ ಮಾವಿನ ಹಣ್ಣಿನ ಉತ್ಪಾದನೆ ಪ್ರಾರಂಭವಾಯಿತು ಎಂದು ಸ್ಥಳೀಯ ಸುದ್ದಿ ವರದಿಗಳು ಹೇಳುತ್ತವೆ. ನಗರದ ಬೆಚ್ಚಗಿನ ಹವಾಮಾನ, ದೀರ್ಘ ಗಂಟೆಗಳ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯಿಂದಾಗಿ ಮಿಯಾಝಾಕಿಯ ರೈತರು ಮಾವು ಕೃಷಿಯನ್ನು ಶುರು ಮಾಡಲು ಸಾಧ್ಯವಾಯಿತು ಎಂದು ವರದಿಗಳು ತಿಳಿಸಿವೆ. ಇದು ಈಗ ಇಲ್ಲಿನ ಪ್ರಬಲ ಉತ್ಪನ್ನವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
Published by:Ashwini Prabhu
First published: