Parking Spot: ಈ ದೇಶದಲ್ಲಿ ಮಹಿಳೆಯರಿಗಾಗಿ ಇದೆ ವಿಶೇಷ ಪಾರ್ಕಿಂಗ್ ಸ್ಪಾಟ್! ಹೇಗಿದೆ ಅಂತ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ. ಕಾರು ಪಾರ್ಕಿಂಗ್ ಸ್ಥಳಗಳನ್ನು ತೋರಿಸುವ ಈ ಫೋಟೋ. ಈ ಉದ್ದವಾದ, ವಿಶಾಲವಾದ ಮತ್ತು ಗುಲಾಬಿ ಬಣ್ಣದಿಂದ ಕೂಡಿದ ವಿಭಾಗಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಡಲಾಗಿದೆ.

ಮಹಿಳೆಯರಿಗಾಗಿ ವಿಶೇಷ ಪಾರ್ಕಿಂಗ್

ಮಹಿಳೆಯರಿಗಾಗಿ ವಿಶೇಷ ಪಾರ್ಕಿಂಗ್

  • Share this:
ಸಾಮಾನ್ಯವಾಗಿ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿ ಮಹಿಳೆಯರಿಗೆ (Women's) ಅಂತಾನೆ  ಆಸನಗಳನ್ನು ಕಾಯ್ದಿರಿಸಲಾಗಿರುವುದನ್ನು ನಾವು ನೋಡಬಹುದು. ಬಸ್ ನಲ್ಲಿ ಕೆಲವು ಮುಂದಿನ ಆಸನಗಳನ್ನು ಮಹಿಳೆಯರಿಗೆ ಕಾಯ್ದಿರಿಸಲಾಗಿರುತ್ತದೆ. ಇನ್ನೂ ರೈಲು ಪ್ರಯಾಣದಲ್ಲೂ (Travel) ಟಿಕೆಟ್ ಬುಕ್ (Ticket Book) ಮಾಡುವಾಗ ಮಹಿಳೆಯರಿಗೆ ಅಂತಾನೇ ಆಸನಗಳ ವಿಚಾರದಲ್ಲಿ ಸ್ವಲ್ಪ ಸಡಿಲಿಕೆ ಇರುತ್ತದೆ. ಕೆಲವು ಸ್ಥಳಗಳಲ್ಲಿ ಕುಳಿತುಕೊಳ್ಳಲು ಇರುವ ಆಸನಗಳಲ್ಲಿಯೂ ಸ್ವಲ್ಪ ಮಟ್ಟಿಗಿನ ಆಸನಗಳನ್ನು ಮಹಿಳೆಯರಿಗೆ ಅಂತಾನೆ ಕಾಯ್ದಿರಿಸಲಾಗಿರುತ್ತದೆ. ಏಕೆಂದರೆ ಕೆಲವು ಮಹಿಳೆಯರ ಕಂಕುಳಲ್ಲಿ ಮಗು (Baby) ಇರುತ್ತದೆ, ಕೆಲವು ಮಹಿಳೆಯರಿಗೆ ಈ ಬಸ್ ನಲ್ಲಿ ಹೆಚ್ಚು ಹೊತ್ತು ನಿಂತುಕೊಂಡು ಪ್ರಯಾಣ ಮಾಡುವುದಕ್ಕೆ ಆಗುವುದಿಲ್ಲ ಅಂತ ಕೆಲವು ಆಸನಗಳನ್ನು ಅವರಿಗಾಗಿ ಕಾಯ್ದಿರಿಸಲಾಗಿರುತ್ತದೆ. ಇದೆಲ್ಲವೂ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲೆಂದು ಮಾಡಿರುತ್ತಾರೆ.

ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಮಹಿಳೆಯರ ಪಾರ್ಕಿಂಗ್ ಸ್ಪಾಟ್
ಈಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ. ಕಾರು ಪಾರ್ಕಿಂಗ್ ಸ್ಥಳಗಳನ್ನು ತೋರಿಸುವ ಈ ಫೋಟೋ ರೆಡ್ಡಿಟ್ ನಲ್ಲಿ ಜೋರಾಗಿಯೇ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಎಂದರೆ ಈ ಚಿತ್ರವನ್ನು ಕ್ಲಿಕ್ ಮಾಡಿದ ನಿಖರವಾದ ಸ್ಥಳವನ್ನು ಪೋಸ್ಟ್ ವಿವರಿಸದಿದ್ದರೂ, ಶೀರ್ಷಿಕೆಯು ದಕ್ಷಿಣ ಕೊರಿಯಾ, ಚೀನಾ ಮತ್ತು ಜರ್ಮನಿಯಲ್ಲಿ ಅಂತಹ ಉಪಕ್ರಮಗಳ ಬಗ್ಗೆ ಮಾತನಾಡುತ್ತದೆ.

ಇದನ್ನೂ ಓದಿ:  Viral News: ಪ್ರೀತಿಪಾತ್ರರ ಮೃತ ದೇಹವನ್ನು ತಿಂದರೆ, ಶತ್ರುವಿನ ಮೃತ ದೇಹವನ್ನು ಏನ್​ ಮಾಡ್ತಾರೆ ನೋಡಿ ಈ ಬುಡಕಟ್ಟು ಜನಾಂಗದವರು

ಚಿತ್ರದಲ್ಲಿ ನಾಲ್ಕು ಗುಲಾಬಿ ಬಣ್ಣದ ಪಾರ್ಕಿಂಗ್ ಸ್ಪಾಟ್ ಗಳು ಕಾಣಿಸುತ್ತವೆ, ಅದು ಮಾಲ್ ಒಳಗೆ ಇರುವ ಪಾರ್ಕಿಂಗ್ ಸ್ಪಾಟ್ ಗಳನ್ನು ಕ್ಲಿಕ್ ಮಾಡಲಾಗಿದೆ ಎಂದು ತೋರುತ್ತದೆ. ಈ ಉದ್ದವಾದ, ವಿಶಾಲವಾದ ಮತ್ತು ಗುಲಾಬಿ ಬಣ್ಣದಿಂದ ಕೂಡಿದ ವಿಭಾಗಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಡಲಾಗಿದೆ. ನಾಲ್ಕು ದಿನಗಳ ಹಿಂದೆ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಗೆ ಇದುವರೆಗೂ 28,000 ಕ್ಕೂ ಹೆಚ್ಚು ಅಪ್‌ವೋಟ್ ಗಳು ಮತ್ತು 3,700 ಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ.

ಫೋಟೋ ನೋಡ್ ನೆಟ್ಟಿಗರ ಕಾಮೆಂಟ್ ಹೀಗಿತ್ತು
ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, ಈ ಕಾಯ್ದಿರಿಸಿದ ಪಾರ್ಕಿಂಗ್ ಸ್ಥಳಗಳು ಗರ್ಭಿಣಿ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಚಿಕ್ಕ ಮಕ್ಕಳು, ನವಜಾತ ಶಿಶುಗಳನ್ನು ಹೊಂದಿರುವ ಮಹಿಳೆಯರಿಗೂ ಲಭ್ಯವಿದೆ ಎಂದು ಹೇಳಿದರು. ಈ ಪಾರ್ಕಿಂಗ್ ಸ್ಥಳಗಳು ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಕಂಡು ಬರುತ್ತವೆ ಎಂದು ಬಳಕೆದಾರರು ಹೇಳಿದರು.

"ಮಹಿಳೆಯರು ತಮ್ಮದೇ ಆದ ಪಾರ್ಕಿಂಗ್ ಸ್ಥಳಗಳನ್ನು ಪಡೆಯುತ್ತಾರೆ ಎಂದು ಜನರು ಅಸಮಾಧಾನಗೊಳ್ಳುವುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ನಾವು ವಾಸಿಸುವ ಸಮಾಜದಲ್ಲಿ ಮಹಿಳೆಯರು ಸುರಕ್ಷಿತ ಭಾವನೆ ಹೊಂದಲು ಸಹಾಯ ಮಾಡುವ ನಿಟ್ಟಿನಲ್ಲಿ ಇದು ಒಂದು ಉತ್ತಮವಾದ ಹೆಜ್ಜೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು "ಮಹಿಳೆಯರಿಗೆ ಏಕೆ ಈ ಸವಲತ್ತು ಅಂತ ಜನರಿಗೆ ಬೇಸರ ಆಗುತ್ತಿಲ್ಲ, ಪ್ರತಿಯೊಬ್ಬರೂ ಸ್ವಾರ್ಥಿಗಳೇ ಮತ್ತು ಬೇರೆಯವರಿಗೆ ಸಹಾಯ ಆಗುತ್ತಿದೆ ಮತ್ತು ರಕ್ಷಣೆ ನೀಡಲಾಗುತ್ತಿದೆ ಎನ್ನುವ ವಿಚಾರದ ಬಗ್ಗೆ ಅವರಿಗೆ ದ್ವೇಷವಿರುತ್ತದೆ, ಅದು ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

‘ಮಹಿಳೆಯರಿಗೆ ಮಾತ್ರ’ ಪಾರ್ಕಿಂಗ್ ಸ್ಥಳವನ್ನು ಪ್ರಾರಂಭಿಸಿದ ಮೊದಲ ದೇಶ?
ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಉಪಕ್ರಮವನ್ನು ತುಂಬಾನೇ ಶ್ಲಾಘಿಸಿದರು. "ಈ ಐಡಿಯಾ ಒಳ್ಳೆಯದು, ಆದರೆ ಇಡೀ ಪಾರ್ಕಿಂಗ್ ಪ್ರದೇಶಕ್ಕೆ ಬಣ್ಣ ಹಚ್ಚುವುದು ಸಹ ಉತ್ತಮವಾದ ಆಲೋಚನೆಯಾಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ದಕ್ಷಿಣ ಕೊರಿಯಾದ ಸರ್ಕಾರವು 2014 ರಲ್ಲಿ ಸಿಯೋಲ್ ನಲ್ಲಿ ಈ ವಿಶೇಷ ‘ಮಹಿಳೆಯರಿಗೆ ಮಾತ್ರ’ ಪಾರ್ಕಿಂಗ್ ಸ್ಥಳಗಳನ್ನು ಪ್ರಾರಂಭಿಸಿತು. ನಗರವು ಅಂತಹ ಉಪಕ್ರಮಗಳಿಗಾಗಿ ಸುಮಾರು 100 ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿದ್ದು, ಇದರಲ್ಲಿ "ಶೀ ಸ್ಪಾಟ್" ಎಂದು ಕರೆಯಲ್ಪಡುವ ಪಾರ್ಕಿಂಗ್ ಸ್ಥಳಗಳು ಸೇರಿವೆ.

ಇದನ್ನೂ ಓದಿ:  Viral Video: ರೈಲಿನಲ್ಲಿ ಚಾಕೊಲೇಟ್ ಮಾರಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಈ ವೃದ್ಧೆ, ವಿಡಿಯೋವನ್ನೊಮ್ಮೆ ನೋಡಿ

ಜರ್ಮನಿಯು 2012 ರಲ್ಲಿ ಟ್ರೈಬ್ಜ್ ಪಟ್ಟಣದಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಿತು. ಈ ದೇಶಗಳಲ್ಲದೆ, ಕುವೈತ್, ಮಲೇಷ್ಯಾ, ಇಂಡೋನೇಷ್ಯಾ, ಆಸ್ಟ್ರಿಯಾ ಮತ್ತು ಇಟಲಿ ಕೂಡ ‘ಮಹಿಳೆಯರಿಗೆ ಮಾತ್ರ’ ಪಾರ್ಕಿಂಗ್ ಸ್ಥಳಗಳನ್ನು ಹೊಂದಿವೆ.
Published by:Ashwini Prabhu
First published: