Road Trips: ಈ ರಸ್ತೆಯಲ್ಲಿ ರೋಡ್ ಟ್ರಿಪ್ ಹೋದ್ರೆ ಮತ್ತೆ ನಿಮಗೆ ಬೇರೆ ಯಾವ ಪ್ರವಾಸವೂ ಇಷ್ಟವಾಗಲ್ಲ!

Road Trips: ನೀವು ಹೊಸ ವರ್ಷ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದಾದರೂ ಪ್ರವಾಸಿ ಸ್ಥಳಕ್ಕೆ ಹೋಗಲು ಯೋಚನೆ ಮಾಡುತ್ತಿದ್ದರೆ, ಇಲ್ಲಿವೆ ನೋಡಿ ಆ ಪ್ರವಾಸಿ ಸ್ಥಳಗಳಿಗೆ ಹೋಗಲು ಬಳಸುವ ರಸ್ತೆಗಳು. ಈ ರಸ್ತೆಗಳಲ್ಲಿ ಪ್ರಯಾಣಿಸುವುದು ನಿಮಗೆ ಬೇರೆಯದ್ದೇ ರೀತಿಯ ಅನುಭವ ನೀಡುತ್ತದೆ.

ದೆಹಲಿಯಿಂದ ಮುಂಬೈ ಹೋಗುವ ರಸ್ತೆ

ದೆಹಲಿಯಿಂದ ಮುಂಬೈ ಹೋಗುವ ರಸ್ತೆ

 • Share this:
  ನಮ್ಮಲ್ಲಿ ಪ್ರವಾಸಿ ಸ್ಥಳಗಳಿಗೆ (Tourist Place) ಪ್ರವಾಸಕ್ಕೆ ಹೋಗುವುದು ಒಂದು ರೀತಿಯ ಅನುಭವ ನೀಡಿದರೆ, ಇನ್ನೊಂದೆಡೆ ಆ ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಗಳು ಬೇರೆಯದ್ದೇ ಅನುಭವ ನೀಡುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ನೀವು ಹೊಸ ವರ್ಷ (New Year) ಬರಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದಾದರೂ ಪ್ರವಾಸಿ ಸ್ಥಳಕ್ಕೆ ಹೋಗಲು ಯೋಚನೆ ಮಾಡುತ್ತಿದ್ದರೆ, ಇಲ್ಲಿವೆ ನೋಡಿ ಆ ಪ್ರವಾಸಿ ಸ್ಥಳಗಳಿಗೆ ಹೋಗಲು ಬಳಸುವ ರಸ್ತೆಗಳು. ಈ ರಸ್ತೆಗಳಲ್ಲಿ ಪ್ರಯಾಣಿಸುವುದು (Road Trip) ನಿಮಗೆ ಬೇರೆಯದ್ದೇ ರೀತಿಯ ಅನುಭವ ನೀಡುತ್ತದೆ.

  1. ಪುರಿಯಿಂದ ಕೊನಾರ್ಕ್ ಹೋಗುವ ಮಾರ್ಗ

  ಪುರಿಗೆ (Puri) ಹೋಗಲು ಅನೇಕರು ಕೋನಾರ್ಕ್ (Konark) ಸೂರ್ಯ ದೇವಾಲಯ ನೋಡಲು ಈ ರಸ್ತೆ ಪ್ರವಾಸ ಕೈಗೊಳ್ಳುತ್ತಾರೆ. ಪುರಿ-ಕೊನಾರ್ಕ್ ಹೆದ್ದಾರಿಯಲ್ಲಿ ಪ್ರಯಾಣಿಸಲು ಶುರು ಮಾಡಿದಂತೆಯೇ, ಒಡಿಶಾದ ನೈಸರ್ಗಿಕ ಸೌಂದರ್ಯ ನೋಡಬಹುದು.

  ಈ ಮಾರ್ಗದ ವಿಶೇಷತೆ ಎಂದರೆ ಈ ರಸ್ತೆ ಸಮುದ್ರಕ್ಕೆ ಸಮಾನಾಂತರವಾಗಿ ಚಲಿಸಬಹುದು. ಅಲ್ಲದೆ, ಈ ಪ್ರವಾಸವು ಮುಂಬೈ-ಪುಣೆ ನಡುವಿನ ಪ್ರವಾಸಕ್ಕಿಂತ ಚಿಕ್ಕದಾಗಿದೆ ಮತ್ತು ಪ್ರಯಾಣಿಕರಿಗೆ ಸೂಕ್ತವಾದ ರಸ್ತೆಯಾಗಿದೆ.

  2. ಮುಂಬೈನಿಂದ ಗೋವಾಗೆ ಹೋಗುವ ರಸ್ತೆ

  ನೀವು ಮುಂಬೈನಿಂದ (Mumbai) ಗೋವಾಗೆ (Goa) ರಸ್ತೆ ಪ್ರವಾಸಕ್ಕೆ ಹೋಗುತ್ತಿದ್ದರೆ, ಈ ರಸ್ತೆಯು ರಮಣೀಯ ಸೌಂದರ್ಯದಿಂದ ತುಂಬಿರುತ್ತದೆ. ಪಶ್ಚಿಮ ಘಟ್ಟಗಳು ನಿಮ್ಮ ದೃಷ್ಟಿಯನ್ನು ಹಾಗೆಯೇ ತನ್ನೆಡೆಗೆ ಸೆಳೆದುಕೊಂಡು ಬಿಡುತ್ತದೆ.

  ನೀವು ಮುಂಬೈನಿಂದ ಗೋವಾ ಹೋಗಲು ರಾಷ್ಟೀಯ ಹೆದ್ದಾರಿ 4 ಮೂಲಕ ಪುಣೆ-ಕೊಲ್ಹಾಪುರ ಮಾರ್ಗ ಹಿಡಿಯಬಹುದು ಮತ್ತು ತಡೆರಹಿತವಾಗಿ ಚಾಲನೆ ಮಾಡಿದರೆ ಇದನ್ನು 10 ಗಂಟೆಗಳಲ್ಲಿ ಕ್ರಮಿಸಬಹುದು. ಹಾಗೂ, ರೋಮಾಂಚನ ಅನ್ವೇಷಕರಿಗೆ ರಾಷ್ಟೀಯ ಹೆದ್ದಾರಿ 66 ಮೂಲಕ ಚಿಪ್ಲುನ್-ರತ್ನಗಿರಿ ಮಾರ್ಗವಿದ್ದು ಮತ್ತು ಇದನ್ನು ತಡೆರಹಿತವಾಗಿ 12 ಗಂಟೆಗಳಲ್ಲಿ ಕ್ರಮಿಸಬಹುದು.

  3. ರೋಮಾಂಚನ ಈ ಮುಂಬೈನಿಂದ ಪುಣೆಗೆ ಹೋಗುವ ರಸ್ತೆ

  ನೀವು ಮುಂಬೈ (Mumbai)-ಪುಣೆ (Pune) ಹೆದ್ದಾರಿಯ ಮೂಲಕ ಪ್ರಯಾಣಿಸುವಾಗ, ನೀವು ಅದ್ಭುತ ಕಾಂಕ್ರೀಟ್ ಕಟ್ಟಡಗಳನ್ನು ನೋಡುತ್ತೀರಿ. ಇದು ನಿಮ್ಮ ಪ್ರಯಾಣವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ.

  ಮುಂಬೈನ ಸ್ಥಳೀಯರಿಗೆ ಇದು ಜನಪ್ರಿಯ ರಸ್ತೆ ಪ್ರವಾಸವಾಗಿದೆ. ಅವರು ಆಗಾಗ್ಗೆ, ವಿಶೇಷವಾಗಿ ವಾರಾಂತ್ಯದಲ್ಲಿ ಸುಮ್ಮನೆ ಈ ರಸ್ತೆಯಲ್ಲಿ ಹೋಗಿ ಬರುತ್ತಾರೆ. ಈ ರಸ್ತೆಯ ವಿಶೇಷತೆ ಎಂದರೆ ಇದು ನೈಸರ್ಗಿಕ ಸೌಂದರ್ಯದಿಂದ ಕೂಡಿದೆ.

  4. ಚೆನ್ನೈನಿಂದ ಪಾಂಡಿಚೇರಿಗೆ ಹೋಗುವ ರಸ್ತೆ

  ಈ ರಸ್ತೆ ಪ್ರವಾಸವನ್ನು ಕೋಸ್ಟ್ ರಸ್ತೆಯ ಮೂಲಕ ಕೇವಲ 3 ಅಥವಾ 4 ಗಂಟೆಗಳಲ್ಲಿ ಕ್ರಮಿಸಬಹುದು. ಒಂದು ಬದಿಯಲ್ಲಿ ಸಮುದ್ರದ ಸುಂದರವಾದ ದೃಶ್ಯ, ನೀರಿನ ಮೇಲೆ ಸೂರ್ಯನ ಪ್ರತಿಬಿಂಬವು ಈ ಪ್ರವಾಸದ ಉತ್ಸಾಹವನ್ನು ಹೆಚ್ಚಿಸುತ್ತದೆ. ನೀವು ಮಹಾಬಲಿಪುರಂ ದಾಟಿ ಹೋಗುವಾಗ ಅಲ್ಲಿ ನೀವು ಸುಂದರವಾದ ಕಡಲ ತೀರಗಳನ್ನು ನೋಡಲು ನಿಲ್ಲಬಹುದು.

  ಇದನ್ನು ಓದಿ: Electric plane: ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನವಿದು! ಇದರ ವಿಶೇಷತೆ ಏನು ಗೊತ್ತಾ?

  5. ಗುವಾಹಟಿಯಿಂದ ತವಾಂಗ್ ಹೋಗುವ ರಸ್ತೆ

  ಇದು ಈಶಾನ್ಯ ಭಾರತದ ಅತ್ಯಂತ ಬೇಡಿಕೆಯ ರಸ್ತೆ ಪ್ರವಾಸಗಳಲ್ಲಿ ಒಂದಾಗಿದೆ ಮತ್ತು ಸುಮಾರು 14 ಗಂಟೆಗಳಲ್ಲಿ ಇದನ್ನು ಕ್ರಮಿಸಬಹುದು. ರಸ್ತೆಗಳು ಒರಟಾಗಿದ್ದರೂ, ನಿಮ್ಮನ್ನು ಪ್ರತಿ ತಿರುವಿನಲ್ಲೂ ರಮಣೀಯ ಸೌಂದರ್ಯದಿಂದ ಸ್ವಾಗತಿಸಲಾಗುತ್ತದೆ.

  ಇದು ಸುದೀರ್ಘ ರಸ್ತೆ ಪ್ರವಾಸವಾಗಿರುವುದರಿಂದ, ನೈಂಗ್ಮಾಪಾ ಮಠದಲ್ಲಿ ಬೌದ್ಧ ಸಂಸ್ಕೃತಿ ನೋಡಲು ನೀವು ಪಶ್ಚಿಮ ಕಮೆಂಗ್‌ನ ದಿರಾಂಗ್ ನಲ್ಲಿ ನಿಲ್ಲಬಹುದು ಅಥವಾ ಅದರ ಐತಿಹಾಸಿಕ ಆಕರ್ಷಣೆಗಳನ್ನು ಅನ್ವೇಷಿಸಲು ಅಸ್ಸಾಂನ ತೇಜ್ಪುರದಲ್ಲಿ ನಿಲ್ಲಬಹುದು.

  6. ಅಹ್ಮದಾಬಾದ್‌ನಿಂದ ಕಛ್‌ಗೆ ಹೋಗುವ ರಸ್ತೆ

  ಅಹ್ಮದಾಬಾದ್‌ನಿಂದ ಕಛ್‌ಗೆ ಹೋಗಲು ನಿಮಗೆ ಸುಮಾರು 7 ಗಂಟೆಗಳು ಬೇಕಾಗುತ್ತವೆ. ಆದರೆ ಮಾರ್ಗದ ಮಧ್ಯೆ ರಮಣೀಯ ಸೌಂದರ್ಯ ಆನಂದಿಸಲು ನೀವು ಕೆಲವು ಸ್ಥಳಗಳಲ್ಲಿ ನಿಲ್ಲಬಹುದು.

  ನೀವು ಈ ರಸ್ತೆಯಲ್ಲಿ ಪ್ರಯಾಣಿಸುವಾಗ ರುಚಿಕರವಾದ ತಿಂಡಿ ತಿನಿಸುಗಳನ್ನು ಸಹ ಸೇವಿಸಬಹುದು. ಅಹ್ಮದಾಬಾದ್‌ನಿಂದ ಕಛ್‌ವರೆಗಿನ ರಸ್ತೆಗಳಲ್ಲಿ ಸಾಲಾಗಿರುವ ವಿಶಿಷ್ಟ ಗುಡಿಸಲುಗಳನ್ನು ದಾಟಿಕೊಂಡು ಹೋಗುವಾಗ ಗುಜರಾತಿನ ಕಲೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು.

  ಇದನ್ನು ಓದಿ: Viral Video: 4 ಲಕ್ಷ ಸಂಗ್ರಹಿಸಿ ಬೀದಿ ನಾಯಿಗೆ ಕೃತಕ ಕಾಲು ಜೋಡಿಸಿದ ಶ್ವಾನ ಪ್ರೇಮಿಗಳು!

  7. ಡಾರ್ಜಿಲಿಂಗ್‌ನಿಂದ ಪೆಲ್ಲಿಂಗ್

  ಈ ರಸ್ತೆ ಪ್ರವಾಸದ ವಿಶೇಷತೆ ಎಂದರೆ ಭವ್ಯವಾದ ಪರ್ವತಗಳು, ರೋಮಾಂಚಕ ಚಹಾ ತೋಟಗಳು ಮತ್ತು ಎಲ್ಲಾ ಬದಿಗಳಲ್ಲಿನ ಸುಂದರವಾದ ಭೂದೃಶ್ಯಗಳು ನಿಜವಾಗಿಯೂ ಮನಸ್ಸಿಗೆ ಮುದ ನೀಡುತ್ತದೆ. ಈ ಎರಡು ಸ್ಥಳಗಳ ನಡುವಿನ ಅಂತರ 72 ಕಿಲೋಮೀಟರ್ ಆಗಿದ್ದು, ಇದನ್ನು 4 ಗಂಟೆಗಳಲ್ಲಿ ಕ್ರಮಿಸಬಹುದು. ಆದರೂ, ನಿಮಗೆ ಬಿಡುವು ಇದ್ದರೆ, ನೀವು ಚಹಾ ತೋಟದಲ್ಲಿ ನಿಲ್ಲಿಸಬಹುದು ಮತ್ತು ತಾಜಾ ಚಹಾ ಆನಂದಿಸಬಹುದು.

  8. ಕೋಲ್ಕತ್ತಾದಿಂದ ದಿಘಾ ಹೋಗುವ ರಸ್ತೆ

  ನೀವು ಕೋಲ್ಕತ್ತಾದಲ್ಲಿದ್ದರೆ ಈ ರಸ್ತೆ ಪ್ರವಾಸವು ನಿಮಗೆ ತ್ವರಿತವಾದ ವಾರಾಂತ್ಯದ ಪ್ರವಾಸ ಆಗಬಹುದು. 184 ಕಿಲೋ ಮೀಟರ್‌ನ ಈ ಸುಂದರವಾದ ರಸ್ತೆಯು ಸುಂದರ ಭೂದೃಶ್ಯಗಳಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿ 116ಬಿ ಮತ್ತು 16 ಮೂಲಕ 4 ಗಂಟೆಗಳಲ್ಲಿ ಕೋಲ್ಕತ್ತಾದಿಂದ ದಿಘಾ ತಲುಪಬಹುದು.

  9. ಬೆಂಗಳೂರಿಂದ ಊಟಿಗೆ ಹೋಗುವ ರಸ್ತೆ

  ಈ ರಸ್ತೆ ಪ್ರವಾಸವು ರಮಣೀಯ ಭೂದೃಶ್ಯಗಳು ಮತ್ತು ಹಚ್ಚ ಹಸಿರು ಪರ್ವತಗಳಿಂದ ಕೂಡಿದ ರಸ್ತೆಯ ಮೂಲಕ ನೀವು ಹಾದು ಹೋಗುತ್ತೀರಿ. ಪ್ರಾಚೀನ ನಗರ ಮೈಸೂರಿನ ಐತಿಹಾಸಿಕ ಅರಮನೆ ನೋಡುವುದರ ಜೊತೆಗೆ ನೀವು ಬಂಡೀಪುರದ ದಟ್ಟವಾದ, ಉಲ್ಲಾಸದಾಯಕ ಕಾಡುಗಳ ಮೂಲಕ ಹಾದು ಹೋಗುತ್ತೀರಿ. ಚಹಾ ತೋಟಗಳ ಸಾಟಿಯಿಲ್ಲದ ಸೌಂದರ್ಯ ಮತ್ತು ಮಾರ್ಗದಲ್ಲಿ ನಯವಾದ ಸರೋವರಗಳು ನಿಮ್ಮ ಪ್ರಯಾಣಕ್ಕೆ ಅರ್ಥ ನೀಡುತ್ತದೆ ಎಂದರೆ ತಪ್ಪಾಗುವುದಿಲ್ಲ.

  10. ದೆಹಲಿ-ಆಗ್ರಾ-ಜೈಪುರ ಮಧ್ಯದ ರಸ್ತೆ

  ಈ ರಸ್ತೆ ಪ್ರವಾಸವು ನಿಮ್ಮನ್ನು ರಾಷ್ಟ್ರೀಯ ಹೆದ್ದಾರಿ 8 ಮತ್ತು ಯಮುನಾ ಎಕ್ಸ್ ಪ್ರೆಸ್ ವೇ ಮೂಲಕ ದೆಹಲಿ, ಆಗ್ರಾ ಮತ್ತು ಜೈಪುರದ ಮೂರು ಸಾಂಸ್ಕೃತಿಕ ಮತ್ತು ಐತಿಹಾಸಿಕ ವೈವಿಧ್ಯಮಯ ನಗರಗಳಿಗೆ ಹೋಗಬಹುದು. ಈ ಮಾರ್ಗವು ಅಸಾಧಾರಣವಾಗಿ ರಮಣೀಯವಾಗಿರುವುದರಿಂದ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಢಾಬಾಗಳಿಂದ ತುಂಬಿರುವುದರಿಂದ, ಈ ಪ್ರವಾಸವು ನಿಮಗೆ ನೀರಸ ಎಂದೆನಿಸುವುದಿಲ್ಲ.
  Published by:Harshith AS
  First published: