ಕಸದ ಬುಟ್ಟಿಯಿಂದ ನೊಣಗಳನ್ನು ದೂರವಿಡುವ ವಿಡಿಯೋ ವೈರಲ್: ಸಿಕ್ತು ಲಕ್ಷಗಟ್ಟಲೆ ವೀಕ್ಷಣೆ 

ಹೆಚ್ಚಿನ ಮನೆಗಳಲ್ಲಿ ಕಂಡು ಬರುವ ಈ ಸಮಸ್ಯೆಗೆ ಈಗ ಟಿಕ್‍ಟಾಕ್‍ನಲ್ಲಿ ಪರಿಹಾರವೊಂದು ಸಿಕ್ಕಿದೆ. @sisterpledgecleans ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ, ನೊಣಗಳಿಂದ ಮುಕ್ತಿ ಪಡೆಯುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಗೆ ಇಷ್ಟವಾಗಿದೆ.

ನೊಣ ದೂರ ಇಡುವ ಉಪಾಯ

ನೊಣ ದೂರ ಇಡುವ ಉಪಾಯ

  • Share this:
ಬೇಸಿಗೆಯಲ್ಲಿ ತಾಪಮಾನ ಹೆಚ್ಚಿದಂತೆ ಸನ್‍ಬರ್ನ್ ಮತ್ತು ಹೀಟ್ ರ‍್ಯಾಶಸ್ ಪ್ರತಿ ವರ್ಷ ಎದುರಾಗುವ ಮಾಮೂಲು ಸಂಗತಿ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ನೊಣಗಳು, ಕ್ರಿಮಿಗಳು ಮತ್ತು ಕೀಟಗಳ ಹಾವಳಿ ಕೂಡ ಹೆಚ್ಚಾಗುತ್ತದೆ. ಮನೆಯಲ್ಲಿ ದೊಡ್ಡ ಕಸದ ಬುಟ್ಟಿ ಇಟ್ಟುಕೊಂಡಿರುವವರಿಗೆ ಅದರ ಸುತ್ತ ನೊಣಗಳು ಹೇಗೆ ಮುತ್ತಿಕೊಳ್ಳುತ್ತವೆ ಮತ್ತು ಬೇಸಿಗೆ ಹಾಗೂ ಮಳೆಗಾಲದಲ್ಲಿ ಹೇಗೆ ಹುಳಗಳು ಪ್ರವೇಶಿಸುತ್ತವೆ ಎಂಬುದು ತಿಳಿದೇ ಇರುತ್ತದೆ. ಇದೊಂದು ದೊಡ್ಡ ಸಮಸ್ಯೆ, ಏಕೆಂದರೆ, ಸೋಂಕುಗಳನ್ನು ತರುವ ಆ ನೊಣಗಳು ಯಾವುದೇ ವಯಸ್ಸಿನ ಜನರಿಗೆ ಕೂಡ ಅದನ್ನು ಹರಡಬಲ್ಲವು. ನೀವು ಯಾವುದೇ ರೀತಿಯ ರಾಸಾಯನಿಕ ಸ್ಪ್ರೇಗಳನ್ನು ಸಿಂಪಡಿಸಿದರೂ, ಈ ನೊಣಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ.

ಹೆಚ್ಚಿನ ಮನೆಗಳಲ್ಲಿ ಕಂಡು ಬರುವ ಈ ಸಮಸ್ಯೆಗೆ ಈಗ ಟಿಕ್‍ಟಾಕ್‍ನಲ್ಲಿ ಪರಿಹಾರವೊಂದು ಸಿಕ್ಕಿದೆ. @sisterpledgecleans ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ, ನೊಣಗಳಿಂದ ಮುಕ್ತಿ ಪಡೆಯುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಗೆ ಇಷ್ಟವಾಗಿದೆ.


ಆ ವಿಡಿಯೋದಲ್ಲಿರುವ ದೃಶ್ಯದಲ್ಲಿ, ಮಹಿಳೆಯೊಬ್ಬರು ಎರಡು ದೊಡ್ಡ ಕಸದ ಬುಟ್ಟಿಗಳನ್ನು ಮೊದಲು ಚೆನ್ನಾಗಿ ಸ್ವಚ್ಚಗೊಳಿಸುತ್ತಾರೆ. ಅದಾದ ಬಳಿಕ ಅವರು ಆ ಎರಡೂ ಕಸದ ಬುಟ್ಟಿಗಳ ಒಳಗೆ ಉಪ್ಪನ್ನು ಸಿಂಪಡಿಸುತ್ತಾರೆ. ಉಪ್ಪು, ಯಾವುದೇ ಸೋರಿಕೆಯಾದ ದ್ರವವನ್ನು ನೆನೆಸುತ್ತದೆ ಮತ್ತು ನೊಣಗಳು ಹಾಗೂ ಹುಳಗಳು ಅದನ್ನು ತಿನ್ನಲು ಬಂದಾಗ, ಅವು ಸತ್ತು ಹೋಗುತ್ತವೆ ಎಂದು ಆಕೆ ಹೇಳುತ್ತಾರೆ.

ಇದನ್ನೂ ಓದಿ:ಒಟಿಟಿ ವೇದಿಕೆಯಲ್ಲಿ ಲಾಂಚ್ ಆಗಲಿದೆ​ ಹಿಂದಿ ಬಿಗ್ ಬಾಸ್​ ಸೀಸ್​ನ್​ 15: ನಿರೂಪಣೆ ಮಾಡಲಿದ್ದಾರೆ ಕರಣ್​ ಜೋಹರ್​

ಈ ವಿಡಿಯೋ 5 ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿದೆ. “ನಿಮ್ಮ ಕಸದ ಬುಟ್ಟಿಗೆ ನೊಣಗಳು ಬಾರದಂತೆ ತಡೆಯುವ ಉಪಾಯ ಇಲ್ಲಿದೆ. ಸ್ವಚ್ಚ ಕಸದ ಬುಟ್ಟಿಗಳ ಒಳಗೆ ಸಾಕಷ್ಟು ಪ್ರಮಾಣದಲ್ಲಿ ಉಪ್ಪನ್ನು ಸಿಂಪಡಿಸಿ. ಉಪ್ಪು, ಯಾವುದೇ ಸೋರಿಕೆಯಾದ ದ್ರವವನ್ನು ನೆನೆಸುತ್ತದೆ ಮತ್ತು ನೊಣಗಳು ಹಾಗೂ ಹುಳಗಳು ಅದನ್ನು ತಿನ್ನಲು ಬಂದಾಗ ಅವು ಸತ್ತು ಹೋಗುತ್ತವೆ” ಎಂದು ಅವಳು ವಿಡಿಯೋದಲ್ಲಿ ಹೇಳುತ್ತಾರೆ.

ಆ ಪೋಸ್ಟ್‌ನಲ್ಲಿದ್ದ ವಿವರಣೆ ಹೀಗಿದೆ: “ಟೇಬಲ್ ಸಾಲ್ಟ್ ಕೆಲವೊಂದು ವಿಷಯಗಳಿಗೆ ಒಳ್ಳೆಯ ಪರಿಹಾರ ಎಂಬುದು ನನಗೆ ತಿಳಿದಿತ್ತು. ಗೊಂಡೆ ಹುಳುಗಳನ್ನು ಕೊಲ್ಲಲು ಅದು ನೈಸರ್ಗಿಕ ಮತ್ತು ವಿಷಕಾರಿಯಲ್ಲದ ಮಾರ್ಗ ( ಅವುಗಳ ಮೇಲೆ ಸಿಂಪಡಿಸಿ, ಅವು ಕುಗ್ಗುತ್ತವೆ ಮತ್ತು ಸಾಯುತ್ತವೆ). ಕಾರ್ಪೆಟ್‍ನಲ್ಲಿರುವ ಕುಟ್ಟೆ ಹುಳುಗಳನ್ನು ಕೂಡ ಇದರಿಂದ ಸಾಯಿಸಬಹುದು. ಕಾರ್ಪೆಟ್ ಮೇಲೆ ಉಪ್ಪನ್ನು ಸಿಂಪಡಿಸಿ, ಹುಳು ಮತ್ತು ಅದರ ಮೊಟ್ಟೆಗಳನ್ನು ಕುಗ್ಗಲು ಬಿಡಿ, ಕೆಲವು ಗಂಟೆಗಳ ನಂತರ ವ್ಯಾಕ್ಯೂಮ್ ಮಾಡಿ. (ಒಂದು ತಿಂಗಳ ವರೆಗೆ ಇದನ್ನು ನಿತ್ಯವೂ ಮಾಡಿ)- ವ್ಯಾಕ್ಯುಮ್ ಬ್ಯಾಗ್‍ನೊಳಗೆ ಸ್ವಲ್ಪ ಉಪ್ಪನ್ನು ಹಾಕಿದರೆ, ಅವು ಅದರೊಳಗೆಯೇ ಚಿಗಟೆಗಳು ಮತ್ತು ತಿಗಣೆಗಳನ್ನು ಸಾಯಿಸುತ್ತದೆ”.

ಇದನ್ನೂ ಓದಿ: Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್​ ವೀಕ್ ಟ್ವಿಸ್ಟ್..!

ಬಹಳಷ್ಟು ಮಂದಿ ಈ ಸಮಸ್ಯೆಗೆ ಪರಿಹಾರ ನೀಡಿದ್ದಕ್ಕಾಗಿ‌ ಧನ್ಯವಾದಗಳನ್ನು ಹೇಳಿದ್ದಾರೆ. “ಓಹ್ ಧನ್ಯವಾಧಗಳು!! ನಮ್ಮ ಕಪ್ಪುಬುಟ್ಟಿ ನೊಣಗಳಿಂದ ತುಂಬಿ ಹೋಗಿದೆ. ಆದರೆ ಕಂಪೋಸ್ಟ್ ಬುಟ್ಟಿ ಅಲ್ಲ. ಏನೂ ಅರ್ಥವಿಲ್ಲ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು “ನಾನು ನೆನ್ನೆಯಷ್ಟೆ ನನ್ನ ಕಸದಬುಟ್ಟಿಗಳನ್ನು ಸ್ವಚ್ಚಗೊಳಿಸಿದೆ, ನಾನಿದನ್ನು ಮೊದಲೇ ಏಕೆ ನೋಡಲಿಲ್ಲ.” ಎಂದು ಇನ್ನೊಬ್ಬರು ಬರೆದಿದ್ದಾರೆ.
Published by:Anitha E
First published: