Kattathila Mutt: ಮಧ್ವಾಚಾರ್ಯರು ಕಡೆಯದಾಗಿ ಭೇಟಿ ನೀಡಿದ ಕಟತ್ತಿಲ ಮಠದ ಬಗ್ಗೆ ನಿಮಗೆ ತಿಳಿಯಬೇಕೇ! ಹಾಗಾದರೆ ಇದನ್ನು ಓದಲೇಬೇಕು

ಹದಿಮೂರನೇ ಶತಮಾನದಲ್ಲಿದ್ದ ಮಧ್ವಾಚಾರ್ಯರಯ ದೇಶದೆಲ್ಲೆಡೆ ಸಂಚಾರ ಮಾಡಿದ್ದರು ಉಡುಪಿಯಲ್ಲಿ ಅಷ್ಟಮಠಗಳ ಸ್ಥಾಪನೆ ಮಾಡಿದ ನಂತರ ಅವರು ಅಲ್ಲಿಯೇ ಅದೃಶ್ಯರಾದರು. ಆದರೆ ಇವರು ಅದೃಶ್ಯರಾಗುವ ಮೊದಲು ಕಡೆಯದಾಗಿ ಭೇಟಿ ಕೊಟ್ಟ ಸ್ಥಳವೇ ಈ ಕಟತ್ತಿಲ ಮಠ.

ಕಟತ್ತಿಲ ಮಠ
(ಚಿತ್ರ ಕೃಪೆ: ದುರ್ಗಾ ಭಟ್)

ಕಟತ್ತಿಲ ಮಠ (ಚಿತ್ರ ಕೃಪೆ: ದುರ್ಗಾ ಭಟ್)

  • Share this:
ಭಾರತ ವೈವಿಧ್ಯಮಯವಾದ ವಿಚಾರಗಳಿಂದ ವಿಶ್ವ ಪ್ರಸಿದ್ಧ ಎಂಬುದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಈ ವೈವಿದ್ಯತೆಗೆ ಇಲ್ಲಿ ಸ್ಥಳೀಯ ಮಟ್ಟದಲ್ಲಿರುವ ವಿವಿಧ ರೀತಿಯಾದ ಜನ ಜೀವನ, ಧಾರ್ಮಿಕ ನಂಬಿಕೆಗಳು, ವೈವಿಧಮಯವಾದ ಸಂಪ್ರದಾಯಗಳು, ಆಚಾರ ವಿಚಾರಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರದೇಶಗಳ ವೈವಿಧ್ಯತೆ (Diversities) ದೇಶದ ವೈವಿಧ್ಯತೆಗೆ ಕಾರಣವಾಗಿದೆ. ಕರಾವಳಿ (Coastal) ಪ್ರದೇಶದಲ್ಲಿನ ವೈವಿಧ್ಯತೆಯು  ರಾಜ್ಯ ಮತ್ತು ದೇಶದ ವೈವಿಧ್ಯತೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಇಲ್ಲಿರುವ ದೇಗುಲಗಳು (Temples), ಮಠಗಳು (Mutt) ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಇಲ್ಲಿನ ಅನೇಕ ಮಠಗಳಲ್ಲಿ ಒಂದು ಮಧ್ವಾಚಾರ್ಯರು (Madhvacharya) ಸ್ಥಾಪಿಸಿದ ಬಂಟ್ವಾಳದ (Bantwal) ಕಟತ್ತಿಲ (Kattathila) ಮಠವೂ (Mutt) ಒಂದಾಗಿದೆ.

ಮಧ್ವಾಚಾರ್ಯರು ಕಡೆಯದಾಗಿ ಭೇಟಿ ನೀಡಿದ ಮಠ

ಹದಿಮೂರನೇ ಶತಮಾನದಲ್ಲಿದ್ದ ಮಧ್ವಾಚಾರ್ಯರಯ ದೇಶದೆಲ್ಲೆಡೆ ಸಂಚಾರ ಮಾಡಿದ್ದರು ಉಡುಪಿಯಲ್ಲಿ ಅಷ್ಟಮಠಗಳ ಸ್ಥಾಪನೆ ಮಾಡಿದ ನಂತರ ಅವರು ಅಲ್ಲಿಯೇ ಅದೃಶ್ಯರಾದರು. ಆದರೆ ಇವರು ಅದೃಶ್ಯರಾಗುವ ಮೊದಲು ಕಡೆಯದಾಗಿ ಭೇಟಿ ಕೊಟ್ಟ ಸ್ಥಳವೇ ಈ ಕಟತ್ತಿಲ ಮಠ. ಇವರು ಇಲ್ಲಿ ತಮ್ಮ ಎಲ್ಲಾ ಜ್ಞಾನವನ್ನು ತಾಮ್ರದ ಹಾಳೆಗಳಲ್ಲಿ ಬರೆದು ಅದನ್ನು ಈ ಮಠದ ಮಣ್ಣಿನಡಿಯಲ್ಲಿ ಹುದುಗಿಸಿಟ್ಟರು ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ: Kantheshwara Temple: ದಿನಕ್ಕೆ 3 ಬಾರಿ ಶಿವಲಿಂಗದ ಬಣ್ಣ ಬದಲಾಗುತ್ತೆ! ದರ್ಶನ ಪಡೆಯಿರಿ

ಕಟತ್ತಿಲ ಹೆಸರಿನ ವಿಶೇಷತೆ

ಮಧ್ವಾಚಾರ್ಯರು ಕಡೆಯದಾಗಿ ಭೇಟಿಕೊಟ್ಟ ಸ್ಥಳವಾದ್ದರಿಂದ " ಕಡೆಯ" ಅನ್ನುವ ಪದದಿಂದ ಕಡೆಯ ಸ್ಥಳ ಎಂದಾಗಿ ಮುಂದೆ ಕಡ್ತಿಲ ಎನ್ನುವ ಹೆಸರು ಬಂದಿತು ಎನ್ನುತ್ತಾರೆ. ಆ ಹೆಸರು ಮುಂದೆ ಕಟತ್ತಿಲ ಎಂದು ಬದಲಾಯಿತು ಎನ್ನಲಾಗುತ್ತದೆ. ಇದನ್ನು ಸಂಸ್ಕೃತದಲ್ಲಿ ಸೇತು ತಿಲ ಎನ್ನುತ್ತಾರೆ.

ಸೇತು ಎಂದರೆ ಕಟ್ಟ ಅನ್ನುವ ಅರ್ಥವಿದೆ ಆದ್ದರಿಂದ ಇದು ಕಟತ್ತಿಲ ಆಯಿತು ಎಂದು ಸಹ ಹೇಳುತ್ತಾರೆ. ಇದರ ಆಡಳಿತವನ್ನು ಹಿಂದಿನಿಂದಲೂ ಉಡುಪಿಯ ಅದಮಾರು ಮಠದವರು ನಡೆಸಿಕೊಂಡು ಬರುತ್ತಿದ್ದಾರೆ.

ವೇಣುಗೋಪಾಲಕೃಷ್ಣ ಇಲ್ಲಿನ ವಿಶೇಷ ದೇವರು

ಇಲ್ಲಿ ವೇಣುಗೋಪಾಲಕೃಷ್ಣನನ್ನು ವಿಶೇಷವಾಗಿ ಆರಾಧನೆ ಮಾಡಲಾಗುತ್ತದೆ. ಇಲ್ಲಿನ ಮೂಲ ವೇಣುಗೋಪಾಲ ವಿಗ್ರಹವು ಪ್ರಸ್ತುತ ಅದಮಾರು ಮಠದಲ್ಲಿದೆ. ಇದು ಮಧ್ವಾಚಾರ್ಯರಿಂದ ಸ್ಥಾಪಿತವಾದ ವಿಗ್ರಹವಾಗಿದೆ. ಆದರೆ ಇದರ ಪೂಜೆಯನ್ನು ಬ್ರಹ್ಮಚರ್ಯನೇ ಮಾಡಬೇಕು ಎನ್ನುವ ಕಾರಣದಿಂದ ಮತ್ತು ದೇವರ ನೈವೇದ್ಯಕ್ಕೆ ಮಠದ ಆದಾಯ ಸಾಕಾಗದೆ ಇರುವುದರಿಂದ ಮೂಲ ವಿಗ್ರಹವನ್ನು ಉಡುಪಿಯ ಅದಮಾರು ಮಠಕ್ಕೆ ನೀಡಲಾಯಿತು.

ಪುಸ್ತಕ ತೀರ್ಥ ಇಲ್ಲಿನ ವಿಶೇಷತೆ

700 ವರ್ಷಗಳ ಇತಿಹಾಸವಿರುವ ಈ ಮಠದಲ್ಲಿ ಪುಸ್ತಕ ತೀರ್ಥ ವಿಶೇಷವಾಗಿದೆ. ಮಠದ ಸಮೀಪದಲ್ಲಿಯೇ ಪುಸ್ತಕ ತೀರ್ಥವಿದ್ದು ಹಿಂದೆ ಮಧ್ವಾಚಾರ್ಯರು ತಮ್ಮ ಸಿದ್ಧಾಂತಗಳನ್ನು ಇಲ್ಲಿ ತಾಮ್ರೆದ ಹಾಳೆಗಳಲ್ಲಿ ಬರೆದು ಮಣ್ಣಿನಡಿಯಲ್ಲಿ ಇಟ್ಟಿದ್ದಾರೆಂಬ ನಂಬಿಕೆಯಿದೆ. ಈ ಪುಸ್ತಕ ತೀರ್ಥದಲ್ಲಿ ಇಂದಿಗೂ ತೀರ್ಥದ ರೂಪದಲ್ಲಿ ನೀರು ಕಾಣ ಸಿಗುತ್ತದೆ.

ಪುಸ್ತಕ ತೀರ್ಥ


ಭೂತ ರಾಜರ ಸನ್ನಿದಿ

ಇಲ್ಲಿಗೆ ಬಹಳ ವರ್ಷಗಳ ಹಿಂದೆ ವಾದಿರಾಜರು ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಇದರ ಕುರುಹಾಗಿ  ಅವರಿಂದ ಶಾಪಗ್ರಸ್ಥನಾದ ಅವರ ಶಿಷ್ಯ ಭೂತರಾಜನನ್ನು ಇಲ್ಲಿ ಆರಾಧಿಸಲಾಗುತ್ತದೆ.

ಮಠದ ಜೀರ್ಣೋದ್ಧಾರ ಕಾರ್ಯಗಳು

ಊರಿನ ಹಿರಿಯರು ಹೇಳುವಂತೆ ಸುಮಾರು ವರ್ಷಗಳ ಹಿಂದೆ ಈ ಮಠವು ಕೇವಲ ಒಂದೇ ಗೋಪುರದಲ್ಲಿದ್ದು ನಂತರ ಬೆಂಕಿ ಅನಾಹುತಕ್ಕೆ ತುತ್ತಾದ ಕಾರಣದಿಂದ ಮುಂದೆ ಊರಿನವರ ಸಹಕಾರದೊಂದಿಗೆ ಮಠವನ್ನು ಪುನರ್ ನಿರ್ಮಿಸಲಾಯಿತು. ನಂತರದಲ್ಲಿಯೂ ಕೆಲವು ಬಾರಿ ಜೀರ್ಣದ್ಧೋರ ಕಾರ್ಯಗಳು ನಡೆದಿವೆ.

ಮಠದ ನಡೆಯುವ ಆಚರಣೆಗಳು

ಇಲ್ಲಿ ಪ್ರತಿ ಶನಿವಾರ ಭಜನಾ ಸೇವೆ ನಡೆಯುತ್ತದೆ. ವಿಶು ಆಚರಣೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ವರ್ಷಂಪ್ರತಿ ಅದಮಾರು ಮಠದ ಸಹಯೋಗದೊಂದಿಗೆ ನಾಲ್ಕು ದಿನದ ವರ್ಷಾವಧಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಉಡುಪಿಯ ಅದಮಾರು ಮಠದಲ್ಲಿರುವ ಮೂಲ ವಿಗ್ರಹವನ್ನು ತಂದು ಪೂಜೆ ಮಾಡಲಾಗುತ್ತದೆ.

ಹಾಲು ಪಾಯಸ ಹರಕೆ

ಪ್ರಮುಖವಾಗಿ ಈ ಮಠಕ್ಕೆ ಬರುವ ಭಕ್ತಾಧಿಗಳು ವಿದ್ಯಾಭ್ಯಾಸದ ಕುರಿತು, ಸಂತಾನ ಪ್ರಾಪ್ತಿಗಾಗಿ, ಆರೋಗ್ಯ ಸಮಸ್ಯೆಯ ನಿವಾರಣೆಗಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಕೃಷ್ಣನಿಗೆ ಪ್ರಿಯವಾದ ಹಾಲು ಪಾಯಾಸದ ಹರಕೆಯನ್ನು ಸಲ್ಲಿಸುತ್ತಾರೆ.

ಈ ಮಠದಲ್ಲಿ ಈ ಬಾರಿ ಉಡುಪಿಯ ಅದಮಾರು ಮಠದ ಕಿರಿಯ ಸ್ವಾಮೀಜಿಯರು ಪವಿತ್ರ ಚಾತುರ್ಮಾಸ ವೃತವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Shravana Masa: ಶ್ರಾವಣಾ ಬಂತು ಶ್ರಾವಣಾ! ಈ ಆಚರಣೆಗಳನ್ನು ನೀವೂ ಮಾಡಬಹುದು!

ಪೇಟೆಯ ಸದ್ದು ಗದ್ದಲಗಳಿಲ್ಲದೆ ಶಾಂತ ಪರಿಸರದಲ್ಲಿರುವ ಈ ಮಠ ಹೊರಗಿನ ಜನತೆಗೆ ಅಷ್ಟೊಂದು ಪರಿಚಯವಿಲ್ಲ. ಆದರೂ ಇಲ್ಲಿರುವ ಪುಸ್ತಕ ತೀರ್ಥ ನೋಡಲು ಹೊರ ಊರಿನವರು ಬರುತ್ತಾರೆ. ಮಠದ ಎದುರಿನಲ್ಲಿ ಹರಿಯುವ ಹೊಳೆ, ಸುತ್ತಲೂ ಇರುವ ಹಚ್ಚ ಹಸಿರಿನ ಪರಿಸರ ಮಠದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
Published by:Nalini Suvarna
First published: