Tourist Places: ಕೊಡಗಿನಲ್ಲಿ ನೀವು ನೋಡಬಹುದಂತಹ ಅದ್ಭುತ ಪ್ರವಾಸಿ ತಾಣಗಳಿವು

ಒಂದೆರಡು ದಿನಗಳಲ್ಲಿ ಪೂರ್ತಿ ಕೊಡಗನ್ನು ನೋಡಲು ಸಾಧ್ಯವೇ? ಅಷ್ಟೊಂದು ಸ್ಥಳಗಳನ್ನು ಕಡಿಮೆ ಸಮಯದಲ್ಲಿ ಹೇಗೆ ನೋಡಿ ಆನಂದಿಸುವುದು ಅಂತ ತುಂಬಾ ಜನರಿಗೆ ಗೊಂದಲವಂತೂ ಇದ್ದೇ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ಯಾವ ಸ್ಥಳವನ್ನು ಮೊದಲು ನೋಡುವುದರಿಂದ ಶುರು ಮಾಡಿ ಇಲ್ಲಿರುವ ಅದ್ಬುತ ಸ್ಥಳಗಳನ್ನು ಒಂದೇ ದಿನದಲ್ಲಿ ನೋಡಿ ಮುಗಿಸುವುದು ಹೇಗೆ ಅಂತ ಇಲ್ಲಿ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೊಡಗು (Kodagu) ಅಂತ ಹೆಸರು ಕೇಳಿದರೆ ಸಾಕು ಬಹುತೇಕರ ಮುಖದಲ್ಲಿ ಅದೇನೋ ಒಂದು ರೀತಿಯ ಖುಷಿ ಅಂತ ಹೇಳಬಹುದು. ಕೆಲಸದ ಒತ್ತಡದಿಂದ (Work Stress) ಮತ್ತು ದಿನ ನಿತ್ಯದ ಜಂಜಾಟಗಳಿಂದ ಒಂದೆರಡು ದಿನ ಎಲ್ಲಿಯಾದರೂ ಹೋಗಿ ಆರಾಮಾಗಿ ಇದ್ದು ಬರಬೇಕು ಅಂತ ಅನ್ನಿಸಿದರೆ ಬಹುತೇಕ ಬೆಂಗಳೂರಿಗರು ಕೊಡಗಿನತ್ತ ಪ್ರಯಾಣ (Travel) ಬೆಳೆಸುವುದನ್ನು ನಾವು ನೋಡುತ್ತೇವೆ. ಒಂದೆರಡು ದಿನಗಳಲ್ಲಿ ಪೂರ್ತಿ ಕೊಡಗನ್ನು ನೋಡಲು ಸಾಧ್ಯವೇ? ಅಷ್ಟೊಂದು ಸ್ಥಳಗಳನ್ನು ಕಡಿಮೆ ಸಮಯದಲ್ಲಿ ಹೇಗೆ ನೋಡಿ ಆನಂದಿಸುವುದು ಅಂತ ತುಂಬಾ ಜನರಿಗೆ ಗೊಂದಲವಂತೂ ಇದ್ದೇ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ಯಾವ ಸ್ಥಳವನ್ನು (Places) ಮೊದಲು ನೋಡುವುದರಿಂದ ಶುರು ಮಾಡಿ ಇಲ್ಲಿರುವ ಅದ್ಬುತ ಸ್ಥಳಗಳನ್ನು ಒಂದೇ ದಿನದಲ್ಲಿ ನೋಡಿ ಮುಗಿಸುವುದು ಹೇಗೆ ಅಂತ ಇಲ್ಲಿ ಓದಿ.

ಮಂಜು ಮುಸುಕಿದ ಬೆಟ್ಟಗಳು, ಬೆರಗುಗೊಳಿಸುವ ಜಲಪಾತಗಳು ಮತ್ತು ಚೇತೋಹಾರಿ ಹಸಿರಿನಿಂದ ಕೂಡಿರುವ ಕೊಡಗು ನಗರ ಜೀವನದಿಂದ ಸ್ವಲ್ಪ ದೂರ ಹೋಗಿ ವಿಶ್ರಮಿಸಲು ಬಯಸುವವರಿಗೆ ಸೂಕ್ತವಾದ ಪ್ರವಾಸಿ ತಾಣವಾಗಿದೆ. ಈ ನೈಸರ್ಗಿಕ ಸ್ವರ್ಗವನ್ನು ಪ್ರೀತಿಯಿಂದ "ಭಾರತದ ಸ್ಕಾಟ್ಲೆಂಡ್" ಎಂದು ಕರೆಯಲಾಗುತ್ತದೆ. ಮಡಿಕೇರಿಯು ಕೊಡಗು ಜಿಲ್ಲೆಯ ಕೇಂದ್ರಸ್ಥಾನವಾಗಿದೆ. ಇದು ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಂತಹ ನೆರೆಯ ನಗರಗಳೊಂದಿಗೆ ರಸ್ತೆ ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಹಲವಾರು ಭಾರತೀಯ ನಗರಗಳೊಂದಿಗೆ ರೈಲು ಸಂಪರ್ಕವನ್ನು ಒದಗಿಸುವ ಮೈಸೂರು ರೈಲ್ವೆ ನಿಲ್ದಾಣವು ಇದಕ್ಕೆ ಹತ್ತಿರವಾದ ರೈಲ್ವೆ ನಿಲ್ದಾಣ ಹೊಂದಿದೆ ಮತ್ತು ಇದಕ್ಕೆ ಹತ್ತಿರದ ವಿಮಾನ ನಿಲ್ದಾಣ ಎಂದರೆ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ಕೇರಳದ ಕಣ್ಣೂರು ಎಂದು ಹೇಳಬಹುದು.

ಒಂದೇ ದಿನದಲ್ಲಿ ನೀವು ನೋಡಬಹುದಾದ 6 ಅದ್ಭುತ ಸ್ಥಳಗಳು
1. ಗೋಲ್ಡನ್ ಟೆಂಪಲ್
ಗೋಲ್ಡನ್ ಟೆಂಪಲ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ನಾಮ್ಡ್ರೋಲಿಂಗ್ ಮೊನಾಸ್ಟರಿಯೊಂದಿಗೆ ನಿಮ್ಮ ಒಂದು ದಿನದ ಕೊಡಗಿನ ಪ್ರೇಕ್ಷಣೀಯ ಪ್ರವಾಸವನ್ನು ಪ್ರಾರಂಭಿಸಿ. ಇದು ಮಡಿಕೇರಿಯಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಬೈಲಕುಪ್ಪೆಯಲ್ಲಿದೆ. ಬೈಲಕುಪ್ಪೆ ಟಿಬೇಟ್ ನ ನಂತರದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ಎಂದು ಹೇಳಬಹುದು. 1963 ರಲ್ಲಿ ಇದರ ಅಡಿಪಾಯವನ್ನು ಹಾಕಲಾಯಿತು. ಆರಂಭದಲ್ಲಿ ಬಿದಿರಿನ ರಚನೆಯಾಗಿತ್ತು, ಇಂದು ಇದು ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ಬೌದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಇದು ಸಾವಿರಾರು ಲಾಮಾಗಳು, ಸನ್ಯಾಸಿಗಳು ಮತ್ತು ಸನ್ಯಾಸಿನಿಯರಿಗೆ ನೆಲೆಯಾಗಿದೆ, ಇದು ಟಿಬೆಟಿಯನ್ ಬೌದ್ಧ ಧರ್ಮದ ನೈಂಗ್ಮಾ ಪಂಥದ ವಿಶ್ವದ ಅತಿದೊಡ್ಡ ಬೋಧನಾ ಕೇಂದ್ರವಾಗಿದೆ. ಹಲವಾರು ಸುಂದರವಾದ ಟಿಬೆಟಿಯನ್ ವರ್ಣಚಿತ್ರಗಳು ದೇವಾಲಯದ ಒಳಾಂಗಣವನ್ನು ಅಲಂಕರಿಸುತ್ತವೆ. ಪ್ರಾರ್ಥನಾ ಮಂದಿರದಲ್ಲಿ, ಮೂರು ಟಿಬೆಟಿಯನ್ ದೇವತೆಗಳ ಬೃಹತ್ ಚಿನ್ನದ ಪ್ರತಿಮೆಗಳಿವೆ.

ಇದನ್ನೂ ಓದಿ:  Travel: ಜೀವನದಲ್ಲಿ ಒಮ್ಮೆಯಾದ್ರೂ ಪ್ರಯಾಣ ಮಾಡಲೇಬೇಕಾದ ಭಾರತದ 10 ಸುಂದರ ರೈಲು ಮಾರ್ಗಗಳಿವು

ಬುದ್ಧ ಶಾಕ್ಯಮುನಿಯ ಪ್ರತಿಮೆಯನ್ನು ಮಧ್ಯದಲ್ಲಿ ಇರಿಸಲಾಗಿದ್ದು, ಎಡಕ್ಕೆ ಗುರು ಪದ್ಮಸಂಭವ ಮತ್ತು ಬಲಭಾಗದಲ್ಲಿ ಬುದ್ಧ ಅಮಿತಾಯುಸ್ ಇದ್ದಾರೆ. ಮಡಿಕೇರಿಯಿಂದ ಬಸ್ಸಿನಲ್ಲಿ ಕೂತು ನೀವು ಅಲ್ಲಿಗೆ ತಲುಪಬಹುದು. ಇದಕ್ಕೆ ಹತ್ತಿರದ ಬಸ್ ನಿಲ್ದಾಣವೆಂದರೆ ಕುಶಾಲನಗರ. ಇಲ್ಲಿಂದ, ಒಂದು ಆಟೋರಿಕ್ಷಾವನ್ನು ತೆಗೆದುಕೊಂಡು ನೀವು ಗೋಲ್ಡನ್ ಟೆಂಪಲ್ ಗೆ ಹೋಗಬಹುದು. ಟೆಂಪಲ್ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

2. ಕಾವೇರಿ ನಿಸರ್ಗಧಾಮ
ಗೋಲ್ಡನ್ ಟೆಂಪಲ್ ನೋಡಿಕೊಂಡು ನೀವು ಕೇವಲ 8 ಕಿಲೋ ಮೀಟರ್ ಕ್ರಮಿಸಿದರೆ ಸಾಕು ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡಬಹುದು. ಇದು ಕಾವೇರಿ ನದಿಯಿಂದ ರೂಪುಗೊಂಡ ಸುಂದರವಾದ ದ್ವೀಪವಾಗಿದೆ ಮತ್ತು 64 ಎಕರೆಗಳಷ್ಟು ಸೊಂಪಾದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿಗೆ ತಲುಪಲು ನೀವು ತೂಗು ಹಗ್ಗದ ಸೇತುವೆಯನ್ನು ದಾಟಬೇಕು.

ಹಸಿರಿನಿಂದ ತುಂಬಿರುವ ಈ ಸ್ಥಳವು ಪ್ರಕೃತಿಯನ್ನು ತುಂಬಾನೇ ಇಷ್ಟಪಡುವವರಿಗೆ ಸೂಕ್ತವಾಗಿದೆ. ಈ ದ್ವೀಪದಲ್ಲಿ ಭೇಟಿ ನೀಡಲೇಬೇಕಾದ ಕೆಲವು ಆಕರ್ಷಣೆಗಳೆಂದರೆ ಜಿಂಕೆ ಉದ್ಯಾನವನ ಮತ್ತು ಪಕ್ಷಿ ಉದ್ಯಾನವನ, ಅಲ್ಲಿ ನೀವು ಪಕ್ಷಿಗಳಿಗೆ ಆಹಾರವನ್ನು ಸಹ ನೀಡಬಹುದು. ಇದಲ್ಲದೆ, ನೀವು ಕಾವೇರಿ ನದಿಯ ಪ್ರಶಾಂತ ನೀರಿನಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಇದು ನದಿ ಬದಿಯ ಕುಟೀರಗಳಲ್ಲಿ ರಾತ್ರಿ ತಂಗುವ ಆಯ್ಕೆಗಳನ್ನು ಸಹ ನೀಡುತ್ತದೆ. ನಿಸರ್ಗಧಾಮವು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

3. ಮಡಿಕೇರಿ ಕೋಟೆ
ಮಡಿಕೇರಿ ಕೋಟೆಯು ಕುಶಾಲನಗರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಮಡಿಕೇರಿ ಪಟ್ಟಣದ ಹೃದಯ ಭಾಗದಲ್ಲಿದೆ. ಮೂಲತಃ ಮಣ್ಣಿನ ರಚನೆಯಾದ ಈ ಕೋಟೆಯನ್ನು ಟಿಪ್ಪು ಸುಲ್ತಾನ್ ಗ್ರಾನೈಟ್ ನಲ್ಲಿ ಮರು ನಿರ್ಮಾಣ ಮಾಡಿದರಂತೆ. ಕೂರ್ಗ್ ಯುದ್ಧದ ನಂತರ 1834 ರಲ್ಲಿ ಬ್ರಿಟಿಷರು ಈ ಕೋಟೆಯನ್ನು ವಶಪಡಿಸಿಕೊಂಡರು. ಅವರು ಕೋಟೆ ಸಂಕೀರ್ಣದೊಳಗೆ ಒಂದು ಚರ್ಚ್ ಅನ್ನು ನಿರ್ಮಿಸಿದರು ಮತ್ತು ಗಡಿಯಾರ ಗೋಪುರವನ್ನು ಸಹ ನಿರ್ಮಿಸಿದರು.

ಚರ್ಚ್ ಕಟ್ಟಡದ ಪಕ್ಕದಲ್ಲಿ ಒಂದು ವಸ್ತುಸಂಗ್ರಹಾಲಯವಿದೆ. ಇದು ವಿವಿಧ ಕಲಾಕೃತಿಗಳ ಮೂಲಕ ಕೊಡಗಿನ ಇತಿಹಾಸವನ್ನು ಪ್ರದರ್ಶಿಸುತ್ತದೆ. ಇದೇ ಆವರಣದಲ್ಲಿ ಒಂದು ಗಣಪತಿ ದೇವಾಲಯವೂ ಇದೆ. ಸೋಮವಾರವನ್ನು ಹೊರತುಪಡಿಸಿ ಬಾಕಿ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ.

4. ಅಬ್ಬೆ ಫಾಲ್ಸ್
ನಮ್ಮ ಮುಂದಿನ ನಿಲುಗಡೆ ಅಬ್ಬೆ ಜಲಪಾತವಾಗಿದೆ. ಇದು ಮಡಿಕೇರಿಯಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಆಟೋ ರಿಕ್ಷಾ ಅಥವಾ ಕ್ಯಾಬ್ ಮೂಲಕ ಅಲ್ಲಿಗೆ ತಲುಪಬಹುದು. ಕಾಫಿ ಮತ್ತು ಮಸಾಲೆಯ ಸೊಂಪಾದ ತೋಟಗಳ ನಡುವೆ ನೆಲೆಗೊಂಡಿರುವ ಅಬ್ಬೆ ಜಲಪಾತವು ಕೊಡಗಿನ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಇದು 70 ಅಡಿ ಎತ್ತರದಿಂದ ಕೆಳಕ್ಕೆ ಧುಮುಕುತ್ತದೆ ಮತ್ತು ಕೆಳಭಾಗದಲ್ಲಿ ಆಳವಾದ ಕೊಳವನ್ನು ರೂಪಿಸುತ್ತದೆ.

ಇದನ್ನೂ ಓದಿ: Indian Tourism: ಮಳೆಗಾಲದಲ್ಲಿ ಟೂರ್ ಹೋಗಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ

ಜಲಪಾತದ ಎದುರುಗಡೆಯೇ ಒಂದು ತೂಗು ಸೇತುವೆ ಇದೆ. ಸೇತುವೆಯ ಮೇಲೆ ನಿಂತುಕೊಂಡು ಜಲಪಾತದ ಅತ್ಯುತ್ತಮ ನೋಟವನ್ನು ನೀವು ಆನಂದಿಸಬಹುದು. ಮಾನ್ಸೂನ್ ಸಮಯದಲ್ಲಿ ಮತ್ತು ಚಳಿಗಾಲದ ಆರಂಭಿಕ ತಿಂಗಳುಗಳಲ್ಲಿ ಈ ಜಲಪಾತದಲ್ಲಿ ತುಂಬಾ ನೀರಿರುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

5. ಓಂಕಾರೇಶ್ವರ ದೇವಾಲಯ
ಅಬ್ಬೆ ಜಲಪಾತಕ್ಕೆ ಭೇಟಿ ನೀಡಿದ ನಂತರ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನಕ್ಕೆ ಹೋಗಿ. ಈ ಶಿವನ ದೇವಾಲಯವು ಹತ್ತೊಂಬತ್ತನೇ ಶತಮಾನದಲ್ಲಿ ರಾಜ ಇಮ್ಮಡಿ ಲಿಂಗರಾಜೇಂದ್ರನು ತಪಸ್ಸಿನ ಕ್ರಿಯೆಯಾಗಿ ನಿರ್ಮಿಸಿದನು ಎಂದು ಹೇಳಲಾಗುತ್ತದೆ.

ಈ ದೇವಾಲಯವು ಒಂದು ಸುಂದರವಾದ ಕೊಳವನ್ನು ಸಹ ಹೊಂದಿದೆ, ಅದರ ಮಧ್ಯದಲ್ಲಿ ಮಂಟಪವಿದೆ. ದೈವಿಕ ಆಶೀರ್ವಾದವನ್ನು ಪಡೆಯುವುದರ ಜೊತೆಗೆ, ನೀವು ದೇವಾಲಯದ ವಾಸ್ತುಶಿಲ್ಪದ ಅನನ್ಯತೆಯನ್ನು ಮೆಚ್ಚಬಹುದು. ದೇವಾಲಯವು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12.00 ರವರೆಗೆ ಮತ್ತು ಸಂಜೆ 5:00 ರಿಂದ ರಾತ್ರಿ 8.00 ರವರೆಗೆ ತೆರೆದಿರುತ್ತದೆ.

6. ರಾಜಾಸೀಟ್
ಆ ದಿನದ ನಿಮ್ಮ ಕೊನೆಯ ತಂಗುದಾಣವು ರಾಜಾಸೀಟ್ ಆಗಿರುತ್ತದೆ. ಇದು ಓಂಕಾರೇಶ್ವರ ದೇವಾಲಯದಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿದೆ. ಒಂದು ಕಾಲದಲ್ಲಿ ಕೊಡಗಿನ ರಾಜಮನೆತನದವರಿಗೆ ಅಚ್ಚುಮೆಚ್ಚಿನ ಸೂರ್ಯಾಸ್ತದ ತಾಣವಾಗಿದ್ದ ರಾಜಾಸೀಟ್ ಇಂದು ಕೊಡಗಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ವೀಕ್ಷಣಾ ವೇದಿಕೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಲಾದ ಉದ್ಯಾನವನ್ನು ಒಳಗೊಂಡಿದೆ.

ಸುತ್ತಮುತ್ತಲಿನ ಕಣಿವೆ ಮತ್ತು ದೂರದ ಪರ್ವತಗಳ ವಿಹಂಗಮ ನೋಟಗಳನ್ನು ಒದಗಿಸುವ ರಾಜಾಸೀಟ್ ನಿಸ್ಸಂದೇಹವಾಗಿ ಒಂದು ದಿನದಲ್ಲಿ ಕೊಡಗಿನಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಸ್ಪಷ್ಟವಾದ ದಿನದಂದು, ನೀವು ಇಲ್ಲಿಂದ ಸೂರ್ಯಾಸ್ತದ ಆಕರ್ಷಕ ನೋಟವನ್ನು ನೋಡಬಹುದು. ಇದಲ್ಲದೆ, ನೀವು ಸೂರ್ಯಾಸ್ತದ ನಂತರ ಹಿಂತಿರುಗಿದರೆ ಆನಂದಿಸಲು ಸಂಗೀತ ಕಾರಂಜಿ ಪ್ರದರ್ಶನವನ್ನು ನೀವು ನೋಡಬಹುದು. ಇದು ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ, ಆದರೆ ಈ ಸ್ಥಳವು ಬೆಳಿಗ್ಗೆ 5.30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ.

ಕೊಡಗಿನಲ್ಲಿ ಭೇಟಿ ನೀಡಬಹುದಾದ ಇತರ ಜನಪ್ರಿಯ ಸ್ಥಳಗಳು
1. ತಲಕಾವೇರಿ
ತಲಕಾವೇರಿ ಭಾರತದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಉದ್ಭವ ಸ್ಥಳವಾಗಿದೆ. ಇದು ಮಡಿಕೇರಿ ಪಟ್ಟಣದಿಂದ ಸುಮಾರು 44 ಕಿಲೋ ಮೀಟರ್ ದೂರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ಮಧ್ಯದಲ್ಲಿದೆ.

ಕಾವೇರಿ ದೇವಿಗೆ ಸಮರ್ಪಿತವಾದ ಮೇಲ್ಭಾಗದಲ್ಲಿ ಒಂದು ಸುಂದರವಾದ ದೇವಾಲಯವಿದೆ. ಮುಖ್ಯ ದೇವತೆಯಲ್ಲದೆ, ಭಗವಾನ್ ಗಣೇಶ ಮತ್ತು ಅಗಸ್ಥೀಶ್ವರನನ್ನು ಸಹ ಇಲ್ಲಿ ಪೂಜಿಸಲಾಗುತ್ತದೆ.

2. ನಾಗರಹೊಳೆ ರಾಷ್ಟ್ರೀಯ ಉದ್ಯಾನ
ನಾಗರಹೊಳೆ ರಾಷ್ಟ್ರೀಯ ಉದ್ಯಾನವು ವನ್ಯಜೀವಿ ಪ್ರಿಯರಿಗೆ ಸ್ವರ್ಗವಾಗಿದೆ. ಈ ಉದ್ಯಾನವನವು ಬೆರಗುಗೊಳಿಸುವ ವೈವಿಧ್ಯಮಯ ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳಿಗೆ ನೆಲೆಯಾಗಿದೆ.

ಇದನ್ನೂ ಓದಿ:  Bachelor Party: ಬ್ಯಾಚುಲರ್ ಪಾರ್ಟಿ ಮಾಡಲು ಭಾರತದ ಈ ಸ್ಥಳಗಳೇ ಬೆಸ್ಟ್

ಇದು ಮಡಿಕೇರಿಯಿಂದ ಲಾಂಗ್ ಡ್ರೈವ್ ಆಗಿದ್ದು, ತಲುಪಲು ಸುಮಾರು ಮೂರೂವರೆ ಗಂಟೆಗಳು ಬೇಕಾಗುತ್ತದೆ. ಆದ್ದರಿಂದ, ಉದ್ಯಾನಕ್ಕೆ ಹತ್ತಿರವಿರುವ ಹೋಟೆಲ್ ನಲ್ಲಿ ರಾತ್ರಿಯಿಡೀ ಇದ್ದು, ಮರುದಿನ ಬೆಳಿಗ್ಗೆ ಸಫಾರಿ ತೆಗೆದುಕೊಳ್ಳಿ.

3. ಮಲ್ಲಳ್ಳಿ ಜಲಪಾತ
ಸೋಮವಾರಪೇಟೆ ಬಳಿಯ ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಮಲ್ಲಳ್ಳಿ ಜಲಪಾತವು ಕೊಡಗಿನ ಅತ್ಯಂತ ಆಕರ್ಷಕ ಜಲಪಾತಗಳಲ್ಲಿ ಒಂದಾಗಿದೆ. ಇದು ಮಡಿಕೇರಿಯಿಂದ 53 ಕಿಲೋ ಮೀಟರ್ ಮತ್ತು ಕುಶಾಲನಗರದಿಂದ 47 ಕಿಲೋ ಮೀಟರ್ ದೂರದಲ್ಲಿದೆ.

4. ಮರ್ಕರಾ ಗೋಲ್ಡ್ ಎಸ್ಟೇಟ್
ಮಡಿಕೇರಿ ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿರುವ ಮರ್ಕರಾ ಗೋಲ್ಡ್ ಎಸ್ಟೇಟ್ ಖಾಸಗಿ ಕಾಫಿ ಮತ್ತು ಮಸಾಲೆ ಎಸ್ಟೇಟ್ ಆಗಿದೆ.

ಕೂರ್ಗ್ ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಎಸ್ಟೇಟ್ ಗೆ ಭೇಟಿ ನೀಡಿದರೆ ಕಾಫಿ ಬೆಳೆಗಳನ್ನು ಬೆಳೆಯುವುದು, ಕೊಯ್ಲು ಮಾಡುವುದು ಮತ್ತು ಸಂಸ್ಕರಣೆ ಮಾಡುವ ಬಗ್ಗೆ ತಿಳಿಯಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ.

ಭೇಟಿ ನೀಡಲು ಉತ್ತಮ ಸಮಯ
ಕೊಡಗಿಗೆ ಭೇಟಿ ನೀಡಲು ವರ್ಷದ ಅತ್ಯುತ್ತಮ ಸಮಯವೆಂದರೆ ಅದು ಚಳಿಗಾಲ (ಅಕ್ಟೋಬರ್ ನಿಂದ ಫೆಬ್ರವರಿವರೆಗೆ) ಮತ್ತು ಬೇಸಿಗೆಯ ಆರಂಭದಲ್ಲಿ ಎಂದರೆ ಮಾರ್ಚ್ ನಿಂದ ಏಪ್ರಿಲ್ ವರೆಗೆ ಅಂತ ಹೇಳಬಹುದು. ಈ ತಿಂಗಳುಗಳಲ್ಲಿ ತಾಪಮಾನವು ಸ್ವಲ್ಪ ಏರಿದರೂ, ಹವಾಮಾನವು ಆರಾಮದಾಯಕವಾಗಿ ಆಹ್ಲಾದಕರವಾಗಿರುತ್ತದೆ.

ಜನಸಂದಣಿಯಿಲ್ಲದೆ ಕೊಡಗನ್ನು ಆನಂದಿಸಲು ನೀವು ಬಯಸಿದರೆ, ಚಳಿಗಾಲದಲ್ಲಿ ಭೇಟಿ ನೀಡುವುದು ಉತ್ತಮ. ಜೂನ್ ನಲ್ಲಿ ಮಳೆಗಾಲ ಪ್ರಾರಂಭವಾಗುವುದರೊಂದಿಗೆ, ಇಡೀ ಪ್ರದೇಶವು ಮಾನ್ಸೂನ್ ವಂಡರ್ ಲ್ಯಾಂಡ್ ಆಗಿ ಬದಲಾಗುತ್ತದೆ. ಆದಾಗ್ಯೂ, ಜೂನ್ ನಿಂದ ಸೆಪ್ಟೆಂಬರ್ ವರೆಗೆ ಭಾರೀ ಮಳೆಯ ಕಾರಣದಿಂದಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಉತ್ತಮ ಸಮಯವಲ್ಲ.
Published by:Ashwini Prabhu
First published: