Independence Day 2022 Quotes: ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಲು ಇಲ್ಲಿವೆ ಸ್ಫೂರ್ತಿದಾಯಕ ಸಂದೇಶಗಳು

Happy Independence Day Quotes: ಅಮೃತೋತ್ಸವದ ಈ ಸಂದರ್ಭದಲ್ಲಿ ನಾವು-ನೀವೆಲ್ಲಾ ನಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುತ್ತೇವೆ. ಈ ಸಂದೇಶಗಳು ಕೇವಲ ‘ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂಬುದಾಗಿರದೇ ವಿಶೇಷವಾಗಿ ಒಂದು ಉತ್ತಮ ಸಂದೇಶವಿರುವ ಸಾಲುಗಳಾಗಿದ್ದರೆ ಹೇಗಿರುತ್ತದೆ ಹೇಳಿ. ಉತ್ತಮ ಸಂದೇಶಗಳನ್ನು ಹೇಗೆ ಕಳಿಸುವುದು ಎಂದು ಈಗ ಯೋಚಿಸುತ್ತಿದ್ದೀರಾ, ನಾವು ನಿಮಗೆ ಸಹಾಯ ಮಾಡಲೆಂದೆ ಕೆಲ ಉಲ್ಲೇಖಗಳನ್ನು ಹೊತ್ತು ತಂದಿದ್ದೇವೆ ನೋಡೋಣ ಬನ್ನಿ

ಸ್ವಾತಂತ್ರ್ಯ ದಿನ 2022

ಸ್ವಾತಂತ್ರ್ಯ ದಿನ 2022

 • Share this:
ಸುಮಾರು 200 ವರ್ಷಗಳ ದಬ್ಬಾಳಿಕೆಯ ಆಡಳಿತದ ಬ್ರಿಟಿಷರ (British) ಕಪಿಮುಷ್ಟಿಯಿಂದ ಬಿಡಿಸಿಕೊಂಡು ಸ್ವಾತಂತ್ರ್ಯ ಪಡೆದ ಸಂಭ್ರಮಕ್ಕೆ 75 ವರ್ಷ ತುಂಬುತ್ತಿದೆ. ಅದೆಷ್ಟೋ ಮಹನಿಯರು ತಮ್ಮ ರಕ್ತ ಸುರಿಸಿ ವಿದೇಶಿಗರ ದಾಸ್ಯದಿಂದ ದೇಶವನ್ನು (Country) ಮುಕ್ತಗೊಳಿಸಲು ಅವಿರತ ಹೋರಾಟ (Struggle) ನಡೆಸಿದ್ದರು. ಅವರ ಒಳ್ಳೆಯ ಉದ್ದೇಶ, ಸುದೀರ್ಘ ಹೋರಾಟ, ಪಟ್ಟು ಬಿಡದ ನಿರ್ಧಾರ, ತ್ಯಾಗ-ಬಲಿದಾನ ಇವೆಲ್ಲವುಗಳ ಸಾಕಾರದಿಂದಾಗಿ ಪುಣ್ಯ ಭೂಮಿ ಭಾರತಕ್ಕೆ (India) ಸ್ವಾತಂತ್ರ್ಯ (freedom)  ಲಭಿಸಿತು. 15 ಆಗಸ್ಟ್ 1947 ರಂದು ಬ್ರಿಟಿಷರು ನಟ್ಟ ನಡುರಾತ್ರಿ ದೇಶದಿಂದ ಕಾಲ್ಕಿಳುತ್ತಿದ್ದಂತೆ ದೇಶ ಸಂಭ್ರಮದಲ್ಲಿ (celebration) ಮುಳುಗಿತ್ತು. 

75ನೇ ಸ್ವಾತಂತ್ರ್ಯ ದಿನ ಆಚರಿಸಲು ನಡೆಯುತ್ತಿದೆ ಸಕಲ ಸಿದ್ಧತೆ
ಅಂದಿನಿಂದ ಇಂದಿನವರೆಗೆ ಪ್ರತಿ ಸ್ವಾತಂತ್ರ್ಯೋತ್ಸವವೂ ಪ್ರತಿಯೊಬ್ಬ ಭಾರತೀಯನಿಗೂ ವಿಶೇಷವಾಗಿದೆ. ಅದರಲ್ಲೂ ಈ ಬಾರಿಯ ಸಂಭ್ರಮ ಮತ್ತಷ್ಟು ಇಮ್ಮಡಿಯಾಗಿದೆ. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ದೇಶ ಈಗಾಗ್ಲೇ ಆಗಸ್ಟ್ 15 ಅನ್ನು ಆಚರಿಸಲು ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಅಮೃತೋತ್ಸವದ ಈ ಸಂದರ್ಭದಲ್ಲಿ ನಾವು-ನೀವೆಲ್ಲಾ ನಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುತ್ತೇವೆ. ಈ ಸಂದೇಶಗಳು ಕೇವಲ ‘ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂಬುದಾಗಿರದೇ ವಿಶೇಷವಾಗಿ ಒಂದು ಉತ್ತಮ ಸಂದೇಶವಿರುವ ಸಾಲುಗಳಾಗಿದ್ದರೆ ಹೇಗಿರುತ್ತದೆ ಹೇಳಿ. ಉತ್ತಮ ಸಂದೇಶಗಳನ್ನು ಹೇಗೆ ಕಳಿಸುವುದು ಎಂದು ಈಗ ಯೋಚಿಸುತ್ತಿದ್ದೀರಾ, ನಾವು ನಿಮಗೆ ಸಹಾಯ ಮಾಡಲೆಂದೆ ಕೆಲ ಉಲ್ಲೇಖಗಳನ್ನು ಹೊತ್ತು ತಂದಿದ್ದೇವೆ ನೋಡೋಣ ಬನ್ನಿ

2022ರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಉತ್ತಮ ಸಂದೇಶದ ಸಾಲುಗಳು


 • ನಮ್ಮ ಧರ್ಮ ಯಾವುದೇ ಇರಲಿ, ಅಂತಿಮವಾಗಿ ನಾವೆಲ್ಲರೂ ಭಾರತೀಯರು. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 • ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮಗೆ ಸ್ವಾತಂತ್ರ್ಯ ನೀಡಿದವರ ಜೀವನ ಮತ್ತು ತ್ಯಾಗಕ್ಕೆ ನನ್ನ ಶ್ರದ್ಧಾಂಜಲಿ.

 • ಭಾರತವು ಮಾನವ ಜನಾಂಗದ ತೊಟ್ಟಿಲು, ಮಾನವ ಮಾತಿನ ಜನ್ಮಸ್ಥಳ, ಇತಿಹಾಸದ ತಾಯಿ, ದಂತಕಥೆಯ ಅಜ್ಜಿ ಮತ್ತು ಸಂಪ್ರದಾಯದ ಮುತ್ತಜ್ಜಿ. ಮಾನವನ ಇತಿಹಾಸದಲ್ಲಿ ನಮ್ಮ ಅತ್ಯಮೂಲ್ಯ ಮತ್ತು ಬೋಧಪ್ರದ ವಸ್ತುಗಳು ಭಾರತದಲ್ಲಿ ಮಾತ್ರ ನಿಧಿಯಾಗಿವೆ.

 • ಈ ದೇಶ ಮತ್ತು ನಮ್ಮ ರಾಷ್ಟ್ರಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ದೇಶಭಕ್ತರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 • ನಮ್ಮ ಹಿಂದಿನ ವೀರರ ಶ್ರಮ ವ್ಯರ್ಥವಾಗುವುದಿಲ್ಲ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 • ಈ ದೇಶವನ್ನು ಆತ್ಮೀಯವಾಗಿ ಪ್ರೀತಿಸುವ ಮತ್ತು ಪ್ರತಿದಿನ ಪ್ರಗತಿಗಾಗಿ ದುಡಿಯುವ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

 • ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಮಾತ್ರವಲ್ಲದೆ ಪ್ರತಿದಿನವೂ ದೇಶಭಕ್ತರಾಗಿರಿ. ನಿಮಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

 • ಸ್ವಾತಂತ್ರ್ಯವನ್ನು ಸಾಧ್ಯವಾದಷ್ಟು ಕಷ್ಟದಿಂದ ಗಳಿಸಲಾಯಿತು ಆದರೆ ಅದನ್ನು ರಕ್ಷಿಸಲು ಹೋರಾಡಲು ಮರೆಯಬಾರದು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 • ಇಂದು ಸ್ವಾತಂತ್ರ್ಯವನ್ನು ಆಚರಿಸೋಣ, ಆದರೆ ಅದನ್ನು ತರಲು ಹೋರಾಡಿದವರಿಗಾಗಿ ಕಂಬನಿ ಮಿಡಿಯೋಣ. ಭಾರತದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ.

 • ನಮ್ಮ ರಾಷ್ಟ್ರವನ್ನು ಸಂಪತ್ತು, ಶಾಂತಿ ಮತ್ತು ಸಂತೋಷದ ಸ್ಥಳವನ್ನಾಗಿ ಮಾಡಲು ನಾವು ಏನನ್ನಾದರೂ ಮಾಡಬಹುದೆಂದು ಯೋಚಿಸೋಣ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುರಕ್ಷಿತ ಮತ್ತು ಸಂತೋಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

 • ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಮುಂದೆ ಸಾಗಲು ಒಟ್ಟಾಗಿ ಕೆಲಸ ಮಾಡೋಣ.

 • ಮತ್ತೊಮ್ಮೆ, ನಾವು ಮಹಾನ್ ರಾಷ್ಟ್ರದಿಂದ ಶ್ರೇಷ್ಠ ಜನರು ಎಂದು ಇತರ ರಾಷ್ಟ್ರಗಳಿಗೆ ತೋರಿಸಲು ಇದು ಸಮಯ. ಮತ್ತು ನಮ್ಮ ಪ್ರೀತಿಯ ರಾಷ್ಟ್ರದ ಸಮೃದ್ಧಿ ಮತ್ತು ಸುಧಾರಣೆಯ ಕಡೆಗೆ ನಮ್ಮ ಹೋರಾಟವನ್ನು ಮುಂದುವರಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 • ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಕೆಲಸವನ್ನು ಮಾಡಿ ನಮಗೆ ಅದನ್ನು ನೀಡಿದರು. ನಾವು ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ಮಾಡೋಣ. ಸ್ವಾತಂತ್ರ್ಯ ದಿನದ ಶುಭಾಶಯಗಳು.


ಇದನ್ನೂ ಓದಿ: Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ

 • ನಾವು ಇಂದಿನ ಸ್ವಾತಂತ್ರ್ಯ ಹೋರಾಟಗಾರರು. ನಾವು ಈ ದೇಶದಲ್ಲಿ ಸ್ವತಂತ್ರರಲ್ಲದವರಿಗಾಗಿ ಹೋರಾಡಬೇಕು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 • ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದು ಬಣ್ಣಗಳು ಅಥವಾ ಆಕಾರಗಳನ್ನು ನೋಡುವುದಿಲ್ಲ. ನಾವು ಸಾಕಷ್ಟು ದ್ವೇಷ ಮತ್ತು ಹಿಂಸೆಯನ್ನು ಹೊಂದಿದ್ದೇವೆ ಮತ್ತು ಈಗ ನಾವು ನಮ್ಮ ಹೊಸ ಭವಿಷ್ಯವನ್ನು ನಿರ್ಮಿಸಬೇಕಾಗಿದೆ, ಪ್ರೀತಿ ಮತ್ತು ತಿಳುವಳಿಕೆಯಿಂದ ಬದುಕೋಣ.

 • ಸ್ವಾತಂತ್ರ್ಯವನ್ನು ಗಳಿಸುವುದಕ್ಕಿಂತ ರಕ್ಷಿಸುವುದು ಕಷ್ಟ. ಹೀಗಾಗಿ ಅದನ್ನು ಜವಾಬ್ದಾರಿಯಿಂದ ಕಾಪಾಡಿಕೊಳ್ಳೋಣ.

 • ನಮ್ಮ ರಾಷ್ಟ್ರವನ್ನು ಗೌರವಿಸಲು ಮತ್ತು ನಮಗೆ ಸ್ವಾತಂತ್ರ್ಯ ನೀಡಿದವರ ತ್ಯಾಗವನ್ನು ಎಂದಿಗೂ ಮರೆಯದಿರಲು ನಾವು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

 • ನಮ್ಮ ದೇಶದ ವೀರರು, ಮಹಾತ್ಮರು ಇಲ್ಲದಿದ್ದರೆ ಸ್ವತಂತ್ರ ದೇಶದಲ್ಲಿ ಬದುಕುವುದು ಹೇಗೆ ಎಂದು ನಮಗೆ ತಿಳಿಯುತ್ತಿರಲಿಲ್ಲ. ಎಂದಿಗೂ ಅವರಿಗೆ ಋಣಿಗಳಾಗಿರೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!

 • ಸ್ವಾತಂತ್ರ್ಯವಿಲ್ಲದೆ, ನಮಗೆ ಹೆಸರು, ಒಂದು ದೃಷ್ಟಿ, ಒಂದು ಗುರುತು, ಒಂದು ರಾಷ್ಟ್ರವಿಲ್ಲ. ಯುದ್ಧದ ಸಮಯದಲ್ಲಿ ನಮ್ಮ ದೇಶವು ಸಾಯಲು ಯೋಗ್ಯವಾಗಿದ್ದರೆ, ಶಾಂತಿಯ ಸಮಯದಲ್ಲಿ ಅದು ಬದುಕಲು ಯೋಗ್ಯವಾಗಿದೆ ಎಂದು ನಾವು ಅರಿತುಕೊಳ್ಳಬೇಕು.

 • ಇಂದು ಈ ಮಹಾನ್ ರಾಷ್ಟ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುವ ದಿನ. ಈ ಸ್ವಾತಂತ್ರ್ಯದ ಮನೋಭಾವವು ನಮ್ಮೆಲ್ಲರನ್ನೂ ಜೀವನದಲ್ಲಿ ಯಶಸ್ಸು ಮತ್ತು ವೈಭವದತ್ತ ಕೊಂಡೊಯ್ಯಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.


ಇದನ್ನೂ ಓದಿ: National Flag: ಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ? ಬಿಜೆಪಿ ಎಂಪಿಯ ಹೇಳಿಕೆಯಿಂದ ವಿವಾದ

 • ನಾವೆಲ್ಲರೂ ತುಂಬಾ ವಿಭಿನ್ನವಾಗಿದ್ದೇವೆ, ಆದರೆ ನಮ್ಮನ್ನು ಒಂದುಗೂಡಿಸುವ ಒಂದು ವಿಷಯವಿದೆ ಅದೆಂದರೆ ಸ್ವಾತಂತ್ರ್ಯ. ನಾವು ಅದನ್ನು ಗೌರವಿಸಬೇಕು ಮತ್ತು ಅದನ್ನು ಪಡೆಯಲು ಎಷ್ಟು ಕಷ್ಟವಾಯಿತು ಎಂಬುದನ್ನು ಎಂದಿಗೂ ಮರೆಯಬಾರದು. ಈ ಸುಂದರ ಸ್ವಾತಂತ್ರ್ಯ ದಿನವನ್ನು ಆನಂದಿಸೋಣ.


ಈ ಮೇಲಿನ ಸಾಲುಗಳು ಕೇವಲ ಶುಭಾಶಯಕ್ಕೆ ಮಾತ್ರ ಸೀಮಿತವಾಗಿರದೆ, ಆ ಪದಗಳಲ್ಲಿರುವ ಅರ್ಥ ಪ್ರತಿ ನಾಗರೀಕನನ್ನು ಬಡಿದೆಬ್ಬಿಸುತ್ತದೆ. ದೇಶಕ್ಕಾಗಿ ನಾವು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಒತ್ತಿ ಹೇಳುತ್ತದೆ. ಹಾಗಾದರೆ ಆಗಸ್ಟ್ 15 ರಂದು ನೀವು ಸಹ ಈ ಸಾಲುಗಳನ್ನು ನಿಮ್ಮವರಿಗೆ ಕಳಿಸಬಹುದು.
Published by:Ashwini Prabhu
First published: