Viral Photo: ಚಂಡಮಾರುತಕ್ಕೆ ನಲುಗಿದ ಬೆಕ್ಕಿನ ಮರಿಗಳ ಆರೈಕೆ ಮಾಡಿದ ಕೋಳಿ! ಮಮತೆ ಅಂದ್ರೆ ಇದೇ ನೋಡಿ

ಇಂಟರ್ನೆಟ್ ಮನಸ್ಸಿಗೆ ತಟ್ಟುವಂತಹ, ಹೃದಯವನ್ನು ಹಗುರಾಗಿಸುವಂತಹ, ಜೊತೆಗೆ ಅನೇಕ ರೀತಿಯಲ್ಲಿ ಅಚ್ಚರಿಗಳನ್ನು ಉಂಟು ಮಾಡುವ ಸಾವಿರಾರು ಫೋಟೋ ಮತ್ತು ವಿಡಿಯೋಗಳಿಂದ ತುಂಬಿ ಹೋಗಿದೆ. ಅವುಗಳಲ್ಲಿ ಕೆಲವೊಂದು ಅತ್ಯಂತ ವಿಶೇಷ ವಿಡಿಯೋಗಳು ವೈರಲ್ ಆಗುತ್ತವೆ ಕೂಡ. ಕೋಳಿ ಮತ್ತು ಬೆಕ್ಕುಗಳ ಅಂತದ್ದೇ ಫೋಟೋವೊಂದು ಈಗ ವೈರಲ್ ಆಗಿದೆ. ಕೋಳಿಯೊಂದು, ಚಂಡ ಮಾರುತದ ಕಾರಣದಿಂದ ಭಯಗೊಂಡಿರುವ ಎರಡು ಬೆಕ್ಕಿನ ಮರಿಗಳಿಗೆ ತನ್ನ ರೆಕ್ಕೆಗಳ ಕೆಳಗೆ ರಕ್ಷಣೆ ನೀಡುತ್ತಿರುವ ಫೋಟೋ ಅದು.

ಬೆಕ್ಕಿನ ಮರಿಗಳ ಆರೈಕೆ ಮಾಡುತ್ತಿರುವ ಕೋಳಿ

ಬೆಕ್ಕಿನ ಮರಿಗಳ ಆರೈಕೆ ಮಾಡುತ್ತಿರುವ ಕೋಳಿ

  • Share this:
ಇಂಟರ್ನೆಟ್ (Internet) ಮನಸ್ಸಿಗೆ ತಟ್ಟುವಂತಹ, ಹೃದಯವನ್ನು (Heart) ಹಗುರಾಗಿಸುವಂತಹ, ಜೊತೆಗೆ ಅನೇಕ ರೀತಿಯಲ್ಲಿ ಅಚ್ಚರಿಗಳನ್ನು (Surprise) ಉಂಟು ಮಾಡುವ ಸಾವಿರಾರು ಫೋಟೋ (Photo) ಮತ್ತು ವಿಡಿಯೋಗಳಿಂದ (Video) ತುಂಬಿ ಹೋಗಿದೆ. ಅವುಗಳಲ್ಲಿ ಕೆಲವೊಂದು ಅತ್ಯಂತ ವಿಶೇಷ ವಿಡಿಯೋಗಳು (Special Video) ವೈರಲ್ (Viral )ಆಗುತ್ತವೆ ಕೂಡ. ಕೋಳಿ (Hen) ಮತ್ತು ಬೆಕ್ಕುಗಳ (Cats) ಅಂತದ್ದೇ ಫೋಟೋವೊಂದು ಈಗ ವೈರಲ್ ಆಗಿದೆ. ಕೋಳಿಯೊಂದು, ಚಂಡ ಮಾರುತದ (Strom) ಕಾರಣದಿಂದ ಭಯಗೊಂಡಿರುವ (Fear) ಎರಡು ಬೆಕ್ಕಿನ ಮರಿಗಳಿಗೆ ತನ್ನ ರೆಕ್ಕೆಗಳ (Wing) ಕೆಳಗೆ ರಕ್ಷಣೆ (Protection) ನೀಡುತ್ತಿರುವ ಫೋಟೋ ಅದು.

ಬೆಕ್ಕಿನ ಮರಿಗಳ ಆರೈಕೆ ಮಾಡುತ್ತಿರುವ ಒಂದು ಕೋಳಿ
ಈ ವೈರಲ್ ಪೋಟೋವನ್ನು ಟ್ವಿಟ್ಟರ್‍ನಲ್ಲಿ ಭಾನುವಾರ ಬ್ಯುಟೆಂಗೆಬಿಡೆನ್ ಎಂಬ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ “ಚಂಡಮಾರುತದ ಸಂದರ್ಭದಲ್ಲಿ ಭಯಗೊಂಡಿದ್ದ ಬೆಕ್ಕಿನ ಮರಿಗಳ ಆರೈಕೆ ಮಾಡುತ್ತಿರುವ ಒಂದು ಕೋಳಿ” ಎಂದು ಫೋಟೊಗೆ ಅಡಿಬರಹವನ್ನು ಕೂಡ ನೀಡಲಾಗಿದೆ.

ಪ್ರಾಣಿಗಳು ಮತ್ತು ಪಕ್ಷಿಯ ನಡುವಿನ ಈ ಅನ್ಯೋನ್ಯತೆಯ ಸುಂದರ ಫೋಟೋವನ್ನು ಎಲ್ಲಿ ತೆಗೆಯಲಾಗಿದೆ ಮತ್ತು ಯಾರು ತೆಗೆದಿರುವುದು ಎಂಬ ಮಾಹಿತಿ ತಿಳಿದು ಬಂದಿಲ್ಲ.

ವೈರಲ್ ಫೋಟೋಗೆ ಹರಿದು ಬಂದ ಕಾಮೆಂಟ್ಗಳು
ಪ್ರೀತಿ, ಅಕ್ಕರೆ, ಸ್ನೇಹ, ಕಾಳಜಿ ಮುಂತಾದ ಹೃದಯದ ಸಂಬಂಧಗಳಿಗೆ ಸ್ಪೂರ್ತಿಯಂತಿರುವ ಈ ಪೋಸ್ಟಿಗೆ ಟ್ವಿಟ್ಟರ್‍ನಲ್ಲಿ ಇದು ವರೆಗೆ 74,000 ಕ್ಕಿಂತಲೂ ಹೆಚ್ಚಿನ ಮೆಚ್ಚುಗೆಗಳು ದೊರೆತಿವೆ. ಅಷ್ಟೇ ಅಲ್ಲ, ಸುಮಾರು 8,000 ಕ್ಕಿಂತಲೂ ಹೆಚ್ಚು ಬಳಕೆದಾರರು ಇದನ್ನು ಮರು ಟ್ವೀಟ್ ಮಾಡಿದ್ದಾರೆ.ಈ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿರುವ ಡೆನಿಸ್ ಕ್ರುಶೆ ಎಂಬ ಬಳಕೆದಾರರು, “ಪ್ರಬಲರು ದುರ್ಬಲರನ್ನು ರಕ್ಷಿಸುತ್ತಿದ್ದಾರೆ. ಅದ್ಭುತವಾದ ಕರುಣೆಯೊಂದಿಗೆ ವಿಭಿನ್ನ ಪ್ರಬೇಧಗಳು. ಮನುಷ್ಯರು ಸುಂದರ ಪ್ರಾಣಿಗಳಿಂದ ಬಹಳಷ್ಟು ಕಲಿಯಬಹುದು” ಎಂದು ಪ್ರತಿಕ್ರಿಯೆಯನ್ನು ಬರೆದಿದ್ದಾರೆ. “ಈ ಫೋಟೋ ಎಲ್ಲರನ್ನು ಸಸ್ಯಹಾರಿಗಳನ್ನಾಗಿ ಮಾಡಬೇಕು” ಎಂದು ಮತ್ತೊಬ್ಬ ನೆಟ್ಟಿಗ ಬರೆದಿದ್ದರೆ, ಇನ್ನೊಬ್ಬರು “ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಕರುಣಾಮಯಿಗಳಾಗಿರುತ್ತವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್

“ಬೆಕ್ಕುಗಳ ಮೇಲಿರುವ ಬ್ಯಾಕ್ಟೀರಿಯಾದಿಂದ ಕೋಳಿ ಅಪಾಯದಲ್ಲಿದೆ ಎಂದು ನೀವು ಅರಿತುಕೊಳ್ಳುವ ವರೆಗೆ ಮಾತ್ರ ಇದು ಮುದ್ದು ಎನಿಸುತ್ತದೆ. ದಯವಿಟ್ಟು ಇಂತಹ ವಿಷಯಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ” ಎಂದು ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ಸಲಹೆ ನೀಡಿದ್ದಾರೆ. ಇನ್ನು ಕೆಲವರು ತಮ್ಮ ಮನೆಯಲ್ಲಿರುವ ಪ್ರಾಣಿ-ಪಕ್ಷಿಗಳ ಒಡನಾಟದ ಸಂಗತಿಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಬೆಕ್ಕುಗಳು ಸ್ವಭಾವತ ಪಕ್ಷಿ ಭಕ್ಷರಾದ ಕಾರಣ, ಪೋಸ್ಟಿನಲ್ಲಿ ಇಂತಹ ಅಪರೂಪದ ದೃಶ್ಯವನ್ನು ಕಂಡು ಕೆಲವು ನೆಟ್ಟಿಗರು ಅಚ್ಚರಿಯ ಜಿಫ್‍ಗಳನ್ನು ಹಾಕಿದ್ದಾರೆ.

ಇಂತಹ ಬೇರೆ ಬೇರೆ ಪೋಟೋ ಮತ್ತು ವಿಡಿಯೋಗಳ ಪೋಸ್ಟ್
ಬ್ಯುಟೆಂಗೆಬಿಡೆನ್ ಎಂಬ ಹೆಸರಿನ ಖಾತೆಯಲ್ಲಿ ಆಗಾಗ ಇಂತಹ ಅತ್ಯುತ್ತಮ ಪೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ ಮತ್ತು ಅವು ಬಹಳಷ್ಟು ಬಳಕೆದಾರರಿಗೆ ಮೆಚ್ಚುಗೆಯಾಗುತ್ತದೆ. ಇದೇ ಖಾತೆಯಲ್ಲಿ ಕಳೆದ ತಿಂಗಳು ಪೋಸ್ಟ್ ಮಾಡಲಾಗಿದ್ದ, ಮಹಿಳೆಯೊಬ್ಬಳು ಕಲ್ಲಂಗಡಿ ಹಣ್ಣಿನ ಮೇಲೆ ಸುಂದರ ಕಲಾತ್ಮಕ ಚಿತ್ತಾರವನ್ನು ಕೆತ್ತುತ್ತಿದ್ದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಲ್ಲದೆ ಆ ವಿಡಿಯೋ 7.5 ಲಕ್ಷ ವೀಕ್ಷಣೆಗಳನ್ನು ಕಂಡಿತ್ತು ಮತ್ತು 35,000 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿತ್ತು.

ಇದನ್ನೂ ಓದಿ:  Snakes: ಮಲಗಿದ್ದವನ ಮೇಲೆ ದೊಡ್ಡ ಹಾವಿನ ಓಡಾಟ, ಗೊತ್ತೇ ಆಗಲಿಲ್ವಾ?

ಅದನ್ನು ಹೊರತು ಪಡಿಸಿಯೂ, ಸಾಮಾಜಿಕ ಮಾಧ್ಯಮದಲ್ಲಿ ಜನಮನ ಸೆಳೆಯುವ ಸಾವಿರಾರು ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿರುತ್ತವೆ. ಟ್ಯಾಟೂ ಕಲೆಯ ವಿಡಿಯೋ ಕೂಡ ಇದರಲ್ಲಿ ಒಂದಾಗಿದೆ. ವಿನೂತನ ಶೈಲಿಯ ಟ್ಯಾಟೂ ವಿನ್ಯಾಸಗಳು, ಅವುಗಳನ್ನು ಗ್ರಾಹಕರ ಮೈಮೇಲೆ ಬಿಡಿಸುವ ವಿಡಿಯೋಗಳು ಸಾಕಷ್ಟು ವೀಕ್ಷಣೆಗಳನ್ನು ಕಾಣುತ್ತವೆ.

ಸಾಮಾಜಿಕ ಮಾಧ್ಯಮದಲ್ಲಿ ಮೇ 29 ರಂದು ಪೋಸ್ಟ್ ಮಾಡಿದ ವಿಡಿಯೋ ಒಂದರಲ್ಲಿ, ಪುಟ್ಟ ರಕೂನ್‍ಗಳು ಪರಸ್ಪರ ಆಡುವುದು ಮತ್ತು ಕ್ಯಾಮಾರಾಗೆ ಪೋಸ್ ನೀಡುವ ದೃಶ್ಯಗಳಿವೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, 42,000 ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ.
Published by:Ashwini Prabhu
First published: