ನಮ್ಮ ದೇಶದಲ್ಲಿ ಅನೇಕ ಪ್ರಮುಖವಾದ ಯಾತ್ರಾ ಸ್ಥಳಗಳಿವೆ, ಅವುಗಳಲ್ಲಿ ಉತ್ತರಾಖಂಡದ (Uttarakhand) ಚಮೋಲಿ ಜಿಲ್ಲೆಯ ಸಿಖ್ಖರ ಪ್ರಮುಖ ಯಾತ್ರಾ ಸ್ಥಳವಾಗಿರುವ ಹೇಮಕುಂಡ್ ಸಾಹಿಬ್ ಯಾತ್ರಾ ಸ್ಥಳ (Hemkund Sahib Yatra) ಸಹ ಒಂದು ಅಂತ ಹೇಳಬಹುದು. ಈ ಯಾತ್ರಾ ಸ್ಥಳವನ್ನು ನೋಡಲು ಎರಡು ಕಣ್ಣುಗಳೇ ಸಾಲುವುದಿಲ್ಲ, ಅಂತಹ ಒಂದು ಆಕರ್ಷಕ ಹಾಗೂ ಪವಿತ್ರವಾದ ಯಾತ್ರಾ ಸ್ಥಳ ಇದು.
ಸುಮಾರು 4,329 ಮೀಟರ್ ಎತ್ತರದಲ್ಲಿರುವ ಹೇಮಕುಂಡ್ ಸರೋವರದ ಪ್ರಶಾಂತ ದಡದಲ್ಲಿರುವ ಪ್ರಸಿದ್ಧ ಸಿಖ್ ದೇವಾಲಯಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಮೇ 20 ರಂದು ತೆರೆಯಲಿರುವ ಯಾತ್ರಾ ಸ್ಥಳ, ಆದರೆ ಮಕ್ಕಳು ಮತ್ತು ವೃದ್ದರಿಗೆ ನೋ ಎಂಟ್ರಿ..
ಭಾರೀ ಹಿಮಪಾತದಿಂದಾಗಿ, ಉತ್ತರಾಖಂಡದ ಚಮೋಲಿ ಜಿಲ್ಲಾಡಳಿತವು ಈ ವರ್ಷ ಮೇ 20 ರಿಂದ ಪ್ರಾರಂಭವಾಗಲಿರುವ ಹೇಮಕುಂಡ್ ಸಾಹಿಬ್ ಯಾತ್ರೆಯಲ್ಲಿ ಭಾಗವಹಿಸಲು 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ದರನ್ನು ಮತ್ತು ಚಿಕ್ಕ ಮಕ್ಕಳನ್ನು ನಿಷೇಧಿಸಿದೆ. ಪವಿತ್ರ ಯಾತ್ರಾ ಸ್ಥಳದ ಬಳಿ ಸುಮಾರು 7 ರಿಂದ 8 ಅಡಿಗಳಷ್ಟು ಹಿಮಪಾತ ಕಂಡು ಬಂದಿದ್ದು, ಅಧಿಕಾರಿಗಳು ಮುಂಜಾಗ್ರತೆ ಕ್ರಮವಾಗಿ ಈ ನಿಷೇಧವನ್ನು ವಿಧಿಸಿದ್ದಾರೆ.
ಅಷ್ಟೇ ಅಲ್ಲದೆ ಯಾತ್ರಾರ್ಥಿಗಳ ಸಂಖ್ಯೆ ಸಹ ಈ ಬಾರಿ ಸೀಮಿತವಾಗಿರುತ್ತದೆ. ಮುಂದಿನ ಸೂಚನೆ ಬರುವವರೆಗೂ ಈ ನಿಷೇಧ ಜಾರಿಯಲ್ಲಿರುತ್ತದೆ ಅಂತ ಚಮೋಲಿ ಜಿಲ್ಲಾಡಳಿತವು ತಿಳಿಸಿದೆ.
ಇಲ್ಲಿರುವ ಗುರುದ್ವಾರವು ಸಿಖ್ಖರಲ್ಲಿ ಹೆಚ್ಚಿನ ಮಹತ್ವ ಹೊಂದಿದೆ. ಗುರು ಗ್ರಂಥ ಸಾಹಿಬ್ ಪ್ರಕಾರ, ಗುರು ಗೋವಿಂದ್ ಸಿಂಗ್, ತಮ್ಮ ಹಿಂದಿನ ಅವತಾರಗಳಲ್ಲಿ ಒಂದರಲ್ಲಿ ಈ ಹೇಮಕುಂಡ್ ಸರೋವರದ ದಡವನ್ನು ಧ್ಯಾನ ಮಾಡಲು ಆಯ್ಕೆ ಮಾಡಿದ್ದರು ಅಂತ ಹೇಳಲಾಗುತ್ತದೆ.
ರಾಮಾಯಣ ಮಹಾಕಾವ್ಯದಲ್ಲಿ ಬರುವ ಭಗವಾನ್ ರಾಮನ ಕಿರಿಯ ಸಹೋದರ ಲಕ್ಷ್ಮಣನು ಯುದ್ಧದಲ್ಲಿ ಗಂಭೀರ ಗಾಯಗಳನ್ನು ಅನುಭವಿಸಿದ ನಂತರ ಈ ಹೇಮಕುಂಡದ ಪ್ರಶಾಂತ ದಡಕ್ಕೆ ಬಂದು, ಇಲ್ಲಿ ಕುಳಿತುಕೊಂಡು ಧ್ಯಾನ ಮಾಡುವ ಮೂಲಕ ಆ ಗಾಯಗಳನ್ನು ಗುಣಪಡಿಸಿಕೊಂಡಿದ್ದಲ್ಲದೆ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಂಡಿದ್ದನೆಂದು ಹೇಳುತ್ತದೆ ಇಲ್ಲಿನ ಪ್ರತೀತಿ.
ಈ ಯಾತ್ರಾ ಸ್ಥಳವು ಲಕ್ಷ್ಮಣನಿಗೆ ಸಮರ್ಪಿತವಾದ ದೇವಾಲಯವನ್ನು ಸಹ ಹೊಂದಿದೆ, ಅಲ್ಲಿಯೇ ಲಕ್ಷ್ಮಣನು ಧ್ಯಾನ ಮಾಡಿದ್ದನೆಂದು ನಂಬಲಾಗಿದ್ದು ಅನೇಕ ಹಿಂದುಗಳು ಸಹ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಈ ವರ್ಷ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತವು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದೆ..
ಈ ವರ್ಷ ತೀರ್ಥಯಾತ್ರೆ ಕೈಗೊಳ್ಳಲಿರುವವರಿಗಾಗಿ ಅನುಕೂಲ ಮಾಡಲು ಜಿಲ್ಲಾಡಳಿತ ಈಗಾಗಲೇ ಸಜ್ಜಾಗಿದೆ. ವಿದ್ಯುತ್, ಶುದ್ಧ ನೀರು, ಶೌಚಾಲಯಗಳು, ತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ ಸೌಲಭ್ಯಗಳಂತಹ ಮೂಲಸೌಕರ್ಯಗಳನ್ನು ಸಂದರ್ಶಕರಿಗೆ ಈಗಾಗಲೇ ವ್ಯವಸ್ಥೆ ಮಾಡಲಾಗುತ್ತಿದೆ.
ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಸರಿಯಾದ ಪಾರ್ಕಿಂಗ್ ಸೌಲಭ್ಯಗಳು, ರಸ್ತೆಗಳು, ರಸ್ತೆಬದಿಯ ಆಶ್ರಯಗಳು ಮತ್ತು ಆ ಆಶ್ರಯಗಳಿಗೆ ಹೋಗಲು ಮತ್ತು ಅಲ್ಲಿನ ದಾರಿಗಳು ಪ್ರವಾಸಿಗರಿಗೆ ಅರ್ಥವಾಗಲು ಅನೇಕ ರೀತಿಯ ಸಂಕೇತಗಳನ್ನು ಒಳಗೊಂಡಿರುವ ಬೋರ್ಡ್ ಗಳನ್ನು ಸಹ ಅಲ್ಲಿ ಅಳವಡಿಸಲಾಗುತ್ತಿದೆ.
ಹೇಮಕುಂಡ್ ಸಾಹಿಬ್ ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ ಮತ್ತು ಇದು ಎಲ್ಲಾ ಧರ್ಮಗಳ ಜನರಿಗೆ ತೆರೆದಿರುತ್ತದೆ ಮತ್ತು ಯಾರು ಬೇಕಾದರೂ ಈ ಸ್ಥಳಕ್ಕೆ ಭೇಟಿ ನೀಡಬಹುದು.
ಹೇಮಕುಂಡ್ ಸಾಹಿಬ್ ಗೆ ತೀರ್ಥಯಾತ್ರೆಯು ಸವಾಲಿನದ್ದಾಗಿದೆ, ಏಕೆಂದರೆ ಇದಕ್ಕೆ ಸ್ವಲ್ಪ ಕಠಿಣ ಚಾರಣ ಬೇಕಾಗುತ್ತದೆ. ಸಂದರ್ಶಕರು ಮುಖ್ಯ ಗುರುದ್ವಾರ ತಾಣವನ್ನು ತಲುಪಲು ಸರಿ ಸುಮಾರು 13 ಕಿಲೋ ಮೀಟರ್ ದೂರವನ್ನು ಚಾರಣ ಮಾಡಬೇಕಾಗುತ್ತದೆ.
ಈ ಸ್ಥಳಕ್ಕೆ ಹೋಗುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ