Elephant Viral Video: ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಮೂಕಪ್ರಾಣಿ, ರಭಸದ ನೀರಿನ ವಿರುದ್ಧ ಕೊನೆಗೂ ಗೆದ್ದ ಬೀಗಿದ ಆನೆ!

ಕೇರಳದ ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿದ ಕಾಡು ಆನೆಯೊಂದು ಬದುಕುಳಿಯಲು ಹೆಣಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕ್ಷುಬ್ಧ ಪ್ರವಾಹಗಳ ನಡುವೆ 3 ತಾಸುಗಳ ಕಾಲ ಹೋರಾಡಿ ಪ್ರಾಣ ಉಳಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದ ಹಲವು ಜಿಲ್ಲೆಗಳಲ್ಲಿ ವರುಣ (Rain) ಆರ್ಭಟ ಹೆಚ್ಚಾಗಿದೆ. ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಕೇರಳದಲ್ಲಿ (Kerala) ಭಾರೀ ಮಳೆ ಸುರಿದಿದ್ದು, ಭೂಕುಸಿತ ಮತ್ತು ನದಿಗಳ ಪ್ರವಾಹಗಳು ಉಂಟಾಗುತ್ತಿವೆ. ಪ್ರವಾಹದಲ್ಲಿ ಸಿಲುಕಿದ್ರೆ ಮನುಷ್ಯರೇ ಬದುಕೋದು ಕಷ್ಟ. ಅಂತರಲ್ಲಿ ಪ್ರಾಣಿಗಳ (Animals) ಗತಿ ಏನು? ಮಾತನಾಡಲು ಬಾರದ ಮೂಕ ಪ್ರಾಣಿಗಳು ಒದ್ದಾಡಬೇಕು. ಅದೇ ರೀತಿಯ ಘಟನೆ ಕೇರಳದಲ್ಲಿ ನಡೆದಿದೆ. ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿದ ಕಾಡು ಆನೆಯೊಂದು (Elephant) ಬದುಕುಳಿಯಲು ಹೆಣಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕ್ಷುಬ್ಧ ಪ್ರವಾಹಗಳ ನಡುವೆ 3 ತಾಸುಗಳ ಕಾಲ ಹೋರಾಡಿ ಪ್ರಾಣ ಉಳಿಸಿಕೊಂಡಿದೆ.

ಕೊನೆಗೂ ನನ್ನ ಪ್ರಾಣ ಉಳಿಯಿತು
ಅಯ್ಯೋ, ಇದೇನಪ್ಪಾ ಈ ರೀತಿ ಮಳೆ ಬಂದು ನಾನು ಸಿಕ್ಕಿ ಹಾಕಿಕೊಂಡಿದ್ದೇನೆ. ಅಷ್ಟಕ್ಕೂ ನಾನು ಕೇರಳದ ತ್ರಿಶೂರ್ ಜಿಲ್ಲೆಯ ಆನೆ. ನಮ್ಮ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ತುಂಬಾ ಮಳೆಯಾಗುತ್ತಿದೆ. ಓಡಾಡೋದೆ ಕಷ್ಟ ಆಗಿ ಹೋಗಿದೆ. ಆಹಾರ ಹುಡುಕಿಕೊಂಡು ಹೋಗ್ತಾ ಇದ್ದೆ. ಇದಕ್ಕಿದ್ದ ಹಾಗೆ ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿ ಬಿಟ್ಟಿ. ಅಯ್ಯೋ, ಅಯ್ಯೋ ನೀರು ಎಷ್ಟು ಇತ್ತು ಎಂದ್ರೆ ನನಗೆ ಭಯವೇ ಆಗಿ ಬಿಡ್ತು.

ನೀರು ನನ್ನ ಕಿವಿ ದಾಟಿ ಬಂದಿತ್ತು. ನಾನು ನನ್ನ ಕಥೆ ಇವತ್ತು ಮುಗಿಯಿತು. ಇವತ್ತು ನನ್ನ ಪ್ರಾಣ ಹೋಗಿ ಬಿಡುತ್ತೆ ಅಂತ ದೇವರನ್ನು ನೆನೆಸಿಕೊಳ್ಳುತ್ತಿದ್ದೆ. ಸದ್ಯ ಅಷ್ಟರಲ್ಲೇ ಮರವೊಂದು ಕಾಣಿಸಿತು. ಆ ಮರದ ಬಳಿ ನಾನು ಹೋದೆ. ಹೇಗೋ ಮೂರು ತಾಸು ಒದ್ದಾಡಿ, ಭಯದಲ್ಲೇ ದಾಟಿ ಪ್ರಾಣ ಉಳಿಸಿಕೊಂಡೆ. ಮುಳುಗೋರಿಗೆ ಹುಲ್ಲು ಕಡ್ಡಿ ಆಸರೆ ಆದ್ರೆ ಬದುಕುತ್ತಾರಂತೆ. ನನಗೂ ಆ ಮರದಿಂದ ಪ್ರಾಣ ಉಳಿಯಿತು. ದೇವರೇ ಧನ್ಯವಾದ.

ಆನೆಯ ವೀರಾವೇಶದ ಯುದ್ಧ
ಮಲಯಾಳಂ ವರದಿಯ ಪ್ರಕಾರ, ಪ್ರಕ್ಷುಬ್ಧ ಪ್ರವಾಹಗಳ ನಡುವೆ, ಆನೆಯು ಒಂದೆರಡು ಮರಗಳ ಬಳಿ ಸುರಕ್ಷಿತ ಸ್ಥಳಕ್ಕೆ ಪ್ರವೇಶಿಸಲು ಸುಮಾರು ಮೂರು ಗಂಟೆಗಳ ಕಾಲ ವೀರಾವೇಶದ ಯುದ್ಧವನ್ನು ನಡೆಸುತ್ತದೆ. ಕೊನೆಗೆ ಕಾಡು ಸೇರುತ್ತದೆ.

ಇದನ್ನೂ ಓದಿ: Elephant Video: ಕಬ್ಬು ತುಂಬಿ ಬರುತ್ತಿದ್ದ ಲಾರಿ ಅಡ್ಡ ಹಾಕಿದ ಆನೆಗಳು! ಮುಂದೇನಾಯ್ತ? ವಿಡಿಯೋ ವೈರಲ್

ಪರಂಬಿಕುಲಂ ಅಣೆಕಟ್ಟು ತೆರೆದ ನಂತರ ಪ್ರವಾಹ
ಕೇರಳದಲ್ಲಿ ಕಂಡು ಕೇಳರಿಯದಷ್ಟು ಮಳೆಯಾಗುತ್ತಿದೆ. ಪರಂಬಿಕುಲಂ ಅಣೆಕಟ್ಟು ತೆರೆದ ನಂತರ ಚಾಲಕುಡಿ ನದಿಯಲ್ಲಿ ಹರಿಯುವ ನೀರಿನಲ್ಲಿ, ಪಾಲಿಪಾರ ಪ್ರದೇಶದಲ್ಲಿ ಆನೆ ಸಿಕ್ಕಿಬಿದ್ದಿತ್ತು. ಆನೆಯನ್ನು ನೋಡಿದ ನಿವಾಸಿಗಳು ಏನೂ ಮಾಡಲಾಗದೇ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತಾರೆ. ಆದ್ರೆ ಅವರು ಏನೂ ಮಾಡಲು ಆಗಲ್ಲ. ಕೊನೆಗೆ ಆನೆಯೇ ತನ್ನನ್ನು ತಾನು ರಕ್ಷಿಸಿಕೊಂಡು ಕಾಡು ಸೇರಿದೆ.

ದಡದಲ್ಲಿ ನಿಂತಿದ್ದ ಜನರ ಸಮೂಹ
ಆನೆ ಸಿಲುಕಿದ್ದನ್ನು ನೋಡಲು ನೂರಾರು ಜನ ದಡದ ಬಳಿ ಸೇರಿದ್ದರು. ಆನೆಯನ್ನು ರಕ್ಷಸಲು ಕೆಲವರಿಗೆ ಮನಸ್ಸು ಇದ್ದರೂ, ಪ್ರವಾಹದಿಂದ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Viral Video: ಸಾಗರದೊಳಗೂ ಭಾರತದ ತ್ರಿವರ್ಣ ಧ್ವಜ! ವಿಡಿಯೋ ನೋಡಿ ಜನರ ಸಂಭ್ರಮ

ಕೇರಳದಲ್ಲಿ ಮಳೆಯಿಂದ 12 ಮಂದಿ ಸಾವು
ಭಾನುವಾರದಿಂದ ಕೇರಳದಲ್ಲಿ ಮಳೆ ಸಂಬಂಧಿತ ವಿವಿಧ ಘಟನೆಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಕೇರಳದ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆಗಸ್ಟ್ 4ರವರೆಗೆ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯ ಎಚ್ಚರಿಕೆ ಮತ್ತು ಉಳಿದ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
Published by:Savitha Savitha
First published: