Heat Wave: ಬಿಸಿಗಾಳಿಯಿಂದ ತತ್ತರಿಸುತ್ತಿರುವ ಅಮೆರಿಕ ಜನ! ಹವಾಮಾನ ವೈಪರೀತ್ಯ

ಹವಾಮಾನದಲ್ಲಿನ ವೈಪರೀತ್ಯ ಬದಲಾವಣೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಬಿಸಿ ಗಾಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಅಮೇರಿಕಾದ ಹೆಚ್ಚಿನ ಪ್ರದೇಶಗಳು ಅಪಾಯದಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಜೀವ ರಕ್ಷಣೆಯ ಆಸರೆಯ ನೆಲೆ ಪ್ರಕೃತಿಯಾಗಿದೆ. ಪ್ರಕೃತಿಯಲ್ಲಿನ ಸಮತೋಲನ ಜೀವಿಗಳಿಗೆ ಸುಭದ್ರತೆಯನ್ನು ನೀಡುತ್ತದೆ. ಆದರೆ ಇತ್ತೀಚಿಗೆ ಮಾನವನ ಪ್ರಕೃತಿ (Nature) ವಿರೋಧಿ ಕೃತ್ಯಗಳಿಂದ ಮತ್ತು ನೈಸರ್ಗಿಕವಾಗಿ (Natural) ನಡೆಯುವ ದುರ್ಟಘನೆಗಳಿಂದ ಹವಾಮಾನದಲ್ಲಿ (Climate) ವ್ಯತಿರಿಕ್ತವಾದ ಬದಲಾವಣೆಯಾಗುತ್ತಿದೆ. ಇದು ಅಪಾರ ಜೀವರಾಶಿಗಳ ನಾಶಕ್ಕೆ ಕಾರಣವಾಗುತ್ತಿದೆ. ಪ್ರಸ್ತುತ ಅಮೇರಿಕಾದಲ್ಲಿ (America) ಹವಾಮಾನ ಬದಲಾವಣೆಯಿಂದಾಗಿ ಶಾಖದ ಅಲೆಗಳು ಅಂದರೆ ಬಿಸಿಗಾಳಿಯ (Heat Wave) ಪ್ರಮಾಣ ಅಧಿಕವಾಗಿದ್ದು 85ಮಿಲಿಯನ್ (85 Million) ಗಿಂತಲೂ ಅಧಿಕ ಜನ ಅಪಾಯದಲ್ಲಿದ್ದಾರೆ.

ಶಾಖ ಸೂಚ್ಯಂಕದ (Heat Index) ಮೌಲ್ಯಗಳ ಪ್ರಕಾರ ಈ ವಾರಾಂತ್ಯದಲ್ಲಿ ಅಮೇರಿಕಾದ 85ಮಿಲಿಯನ್ ಗಿಂತಲೂ ಅಧಿಕ ಜನ ಶಾಖದ ಎಚ್ಚರಿಕೆಯ (Heat Alert) ಅಡಿಯಲ್ಲಿದ್ದಾರೆ. ಇಲ್ಲಿನ ನಗರಗಳಲ್ಲಿ ಬಿಸಿ ಗಾಳಿಯ ಮಟ್ಟವು 100 ಡಿಗ್ರಿಗಿಂತಲೂ ಅಧಿಕವಾಗಿದೆ. ಇದು ಜನರನ್ನು ಹೊರಗಡೆ ಬಂದು ಬಿಸಿಲಿಗೆ ಮೈಯೊಡ್ಡದಂತೆ ಮಾಡಿದೆ.

ಇದನ್ನೂ ಓದಿ: US Recession?: ಯುಎಸ್ ಮತ್ತೊಂದು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ? ಪ್ರಮುಖ ಸೂಚಕಗಳು ಏನು ಹೇಳುತ್ತವೆ?

ಕ್ಯಾಲಿಫೋರ್ನಿಯದಲ್ಲಿ ಕಾಡ್ಗಿಚ್ಚು
ಬರಗಾಲ ಮತ್ತು ಹವಾಮಾನ ಬದಲಾವಣೆಯ ಪರಿಣಾಮವಾಗಿ ಕ್ಯಾಲಿಫೋರ್ನಿಯಾದ ಮಾರಿಪೋಸಾ ಕೌಂಟಿಯಲ್ಕಿ ಕಾಡ್ಗಿಚ್ಚು ಉಂಟಾಗಿದ್ದು 9,500 ಎಕರೆಗಳಲ್ಲಿ ಬೆಂಕಿಯು ಹರಡಿದೆ.

ಕ್ಯಾಲಿಫೋರ್ನಿಯಾದ ಅರಣ್ಯ ಮತ್ತು ಅಗ್ನಿಶಾಮಕ ಸಂರಕ್ಷಣಾ ಇಲಾಖೆಯು ಬೆಂಕಿ ನಂದಿಸಲು ಕಾರ್ಯನಿರ್ವಹಿಸಿದೆ. 500 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು ವಿಮಾನದ ಸಹಾಯದಿಂದ ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿದ್ದಾರೆ ಅಪಾರ ಪ್ರಮಾಣದಲ್ಲಿ ಆಸ್ತಿ ಮತ್ತು ಜೀವ ಹಾನಿಗಳಾಗಿದೆ. ಬೆಂಕಿಯಿಂದ ರಕ್ಷಿಸಲು ಸುಮಾರು 6000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.

ಒಟ್ಟಾರೆಯಾಗಿ, ಯುಎಸ್ನ ಪಶ್ಚಿಮ ಭಾಗದಲ್ಲಿ 73% ಕ್ಕಿಂತ ಹೆಚ್ಚು ಮಂದಿ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ 97% ಕ್ಕಿಂತ ಹೆಚ್ಚು ಭಾಗವು ತೀವ್ರ ಬರಗಾಲವನ್ನು ಎದುರಿಸುತ್ತಿದೆ. ಆದಾಗ್ಯೂ, ತೀವ್ರ ಬರ ಪರಿಸ್ಥಿತಿಗಳು ಈಗ ಟೆಕ್ಸಾಸ್‌ನ 84% ಕ್ಕಿಂತ ಹೆಚ್ಚು ಆವರಿಸಿವೆ, ಕಳೆದ ವಾರ ಸುಮಾರು 76% ಇದ್ದು ಇದೀಗ ಶಾಖದ ಪ್ರಮಾಣ ಹೆಚ್ಚಾಗಿದೆ. ಒಕ್ಲಹೋಮಾದ ಅರ್ಧಕ್ಕಿಂತ ಹೆಚ್ಚು ಪ್ರದೇಶ ಈಗ ತೀವ್ರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿದೆ.

ವಿಪತ್ತು ಪರಿಹಾರ ಘೋಷಿಸಿದ ಬಿಡೆನ್
ಹವಾಮಾನ ಬದಲಾವಣೆ ಅಕ್ಷರಶಃ, ಸಾಂಕೇತಿಕವಾಗಿ ಅಲ್ಲ, ಸ್ಪಷ್ಟ ಮತ್ತು ಪ್ರಸ್ತುತ ಅಪಾಯವಾಗಿದೆ" ಎಂದು ಬಿಡೆನ್ ಹೇಳಿದರು, ಹವಾಮಾನ ವಿಪತ್ತುಗಳನ್ನು ತಡೆದುಕೊಳ್ಳಲು ಅಮೇರಿಕಾದ ಜನತೆಗೆ ಮೂಲಸೌಕರ್ಯವನ್ನು ನಿರ್ಮಿಸಲು ಸಹಾಯ ಮಾಡಲು $ 2.3 ಶತಕೋಟಿ ಹೂಡಿಕೆಯನ್ನು ಘೋಷಿಸಿದರು.

ಶಾಖದಿಂದಾಗಿ ಹೆಚ್ಚುತ್ತಿರುವ ಮಾರಕ ಪರಿಣಾಮ
ಬಿಸಿ ಗಾಳಿಯ ಪರಿಣಾಮ ಪ್ರಾಣಾಂತಿಕವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 1998 ಮತ್ತು 2017 ರ ನಡುವೆ, ಶಾಖದ ಅಲೆಗಳ ಪರಿಣಾಮವಾಗಿ 166,000 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ . ಯುಕೆಯಲ್ಲಿ 2020 ರ ಬೇಸಿಗೆಯಲ್ಲಿ ಶಾಖದ ಪ್ರಮಾಣ ಅಧಿಕವಾಗಿದ್ದು 2,500 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪ್ರಸ್ತುತ ಮತ್ತೊಮ್ಮೆ ಜಾಗತಿಕ ತಾಪಮಾನದಲ್ಲಿ ವ್ಯತಿರಿಕ್ತವಾದ ಬದಲಾವಣೆಯಗುತ್ತಿದ್ದು. ಅಮೆರಿಕಾದಲ್ಲಿ ಅಪಾಯದ ಮಟ್ಟವನ್ನು ಹೆಚ್ಚಿಸಿದೆ.

ಇದನ್ನೂ ಓದಿ: Climate Change Impact: ಹವಾಮಾನ ಬದಲಾವಣೆಯ ಪ್ರಭಾವ; ಗಾಳಿ, ಸೌರ ಶಕ್ತಿಗಳಿಗೆ ಫುಲ್ ಡಿಮ್ಯಾಂಡ್

ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹವಾಮಾನ ಬದಲಾವಣೆಯು ತೀವ್ರವಾದ ಬಿಸಿ ವಾತಾವರಣದ ಆವರ್ತನ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತಿದೆ. ಮತ್ತು ಇದು ಕಾಡ್ಗಿಚ್ಚುಗಳನ್ನು ಸೃಷ್ಟಿಸುತ್ತದೆ. ಅಲ್ಲದೆ ಮನುಷ್ಯರು, ಪ್ರಾಣಿಗಳು ಮಾತ್ರವಲ್ಲದೆ ಸಕಲ ಜೀವರಾಶಿಗಳ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಮುಂದೊಂದು ದಿನ ಹವಾಮಾನದ ವೈಪರೀತ್ಯ ಬದಲಾವಣೇಯಿಂದ ಈಡೀ ಭೂಮಿಯೇ ನಾಶವಾದರೂ ಯಾವುದೇ ಅನುಮಾನವಿಲ್ಲ.
Published by:Nalini Suvarna
First published: