ಗಿಫ್ಟ್ (Gift) ಎಂದರೆ ಯಾರು ತಾನೇ ಬೇಡಪ್ಪಾ ನಮಗೆ ಅಂತ ಹೇಳುತ್ತಾರೆ ನೀವೇ ಹೇಳಿ? ಅದರಲ್ಲೂ ನಮಗೆ ಪ್ರೀತಿಸುವವರು ಅಥವಾ ಹೆಚ್ಚು ಇಷ್ಟಪಡುವವರು ನಮಗೆ ಅಂತ ಗಿಫ್ಟ್ ಅನ್ನ ಸರ್‌ಪ್ರೈಸ್ (Surprise) ಆಗಿ ಕೊಟ್ಟರಂತೂ ನಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ ಅಂತ ಹೇಳಬಹುದು. ಅದರಲ್ಲೂ ಮಕ್ಕಳು ಚೆನ್ನಾಗಿ ಓದಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಅಂತ ಸೇರಿಕೊಂಡಾಗ ಅವರಿಗೆ ಬರುವ ಮೊದಲ ಸಂಬಳದಲ್ಲಿ ತಮ್ಮ ಹೆತ್ತವರಿಗೆ ತಂದು ಕೊಡುವ ಗಿಫ್ಟ್ ಗಳನ್ನು ನೋಡಿದಾಗ ಅವರಿಗೆ ಆಗುವ ಖುಷಿ ಬಹುಶಃ ಇನ್ನ್ಯಾರಿಗೂ ಆಗುವುದಿಲ್ಲ ಅಂತ ಹೇಳಬಹುದು. ಹೀಗೆ ಮಕ್ಕಳು ತಮ್ಮ ಹೆತ್ತವರಿಗೆ ಅವರ ಮೊದಲ ಸಂಬಳದಲ್ಲಿ ಸರ್‌ಪ್ರೈಸ್ ಗಿಫ್ಟ್ ಗಳನ್ನು ತಂದು ಕೊಟ್ಟಿರುವ ಮತ್ತು ಹೆತ್ತವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅವರಿಗೆ ಒಳ್ಳೆಯ ಉಡುಗೊರೆ (Gift) ತಂದು ಕೊಟ್ಟಿರುವ ಮತ್ತು ಹೆತ್ತವರು ತಮ್ಮ ಮಕ್ಕಳಿಗೆ ಗಿಫ್ಟ್ ಗಳನ್ನು ನೀಡುವ ಮೂಲಕ ಸಂತೋಷಪಡಿಸಿರುವ ಅನೇಕ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಿಂದೆಯಿಂದಲೂ ನೋಡುತ್ತಲೇ ಬಂದಿದ್ದೇವೆ ಅಂತ ಹೇಳಬಹುದು.
ಗಿಫ್ಟ್ ಕೊಟ್ಟಾಗ ನೀಡುವ ಪ್ರತಿಕ್ರಿಯೆಯನ್ನ ವಿಡಿಯೋ ಮಾಡೋ ಟ್ರೆಂಡ್ ಶುರುವಾಗಿದೆ!
ಆದರೆ ಈಗ ಹೊಸದಾಗಿ ಶುರುವಾದ ಟ್ರೆಂಡ್ ಎಂದರೆ ಹಾಗೆ ಸರ್‌ಪ್ರೈಸ್ ಆಗಿ ಕೊಟ್ಟ ಗಿಫ್ಟ್ ಅನ್ನು ತೆರೆದು ನೋಡಿದಾಗ ಅವರ ಪ್ರತಿಕ್ರಿಯೆಯನ್ನು ವೀಡಿಯೋದಲ್ಲಿ ಸೆರೆ ಹಿಡಿದು, ಆ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ ಅಂತ ಹೇಳಬಹುದು. ಇಲ್ಲಿಯೂ ಇಂತಹದೇ ಒಂದು ವಿಡಿಯೋ ಇದೇ ನೋಡಿ. ಮೊದಲ ಸಂಬಳ ಪಡೆದ ಮಗಳೊಬ್ಬಳು ತನ್ನ ತಂದೆಗೆ ಹೋಮ್ ಥಿಯೇಟರ್ ಅನ್ನು ಗಿಫ್ಟ್ ಆಗಿ ನೀಡಿದ್ದಾಳೆ.
View this post on Instagram
ಮೊದಲ ಸಂಬಳದಲ್ಲಿ ತಂದೆಗೆ ಗಿಫ್ಟ್ ತಂದು ಕೊಟ್ಟ ಮಗಳು
ವೃತ್ತಿಯಲ್ಲಿ ವೈದ್ಯೆಯಾಗಿರುವ ಇನ್ಶಾ ಸಮೀನಾ ಅವರು ತಮ್ಮ ತಂದೆಗೆ ಮೊದಲ ಸಂಬಳದಲ್ಲಿ ಹೋಮ್ ಥಿಯೇಟರ್ ಅನ್ನು ಉಡುಗೊರೆಯಾಗಿ ಕೊಟ್ಟ ನಂತರ ಅವರ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಸೆರೆ ಹಿಡಿದು ಅದನ್ನು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ತುಂಡುಡುಗೆ ತೊಟ್ಟು ಮೆಟ್ರೋ ಹತ್ತಿದ ಹುಡುಗಿ! ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ಎಂದ ನೆಟ್ಟಿಗರು!
ಈ ವಿಡಿಯೋದಲ್ಲಿ ಇನ್ಶಾ ಮತ್ತು ಅವಳ ತಂದೆ ಒಂದು ಅಂಗಡಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನನ್ನೋ ನೋಡಿ ತುಂಬಾನೇ ದುಬಾರಿಯಾಗಿದೆ ಅಂತ ಅಲ್ಲಿಂದ ಹೊರ ಬರುತ್ತಾರೆ.
"ಇನ್ಶಾ, ಏನು ತಗೊಳೋದು ಬೇಡ ಇಲ್ಲಿ, ಮನೆಗೆ ಹೋಗೋಣ ಬಾ" ಅಂತ ಹೇಳುವುದನ್ನು ನಾವು ನೋಡಬಹುದು. ನಂತರ ತಂದೆ ಮುಖದಲ್ಲಿ ಆ ಕೋಪ ಎದ್ದು ಕಾಣುತ್ತಿರುತ್ತದೆ, ಆದರೆ ಆ ದುಬಾರಿ ಬೆಲೆಯನ್ನು ಮಗಳು ಪಾವತಿಸಿದಾಗ ಆ ತಂದೆಯ ಮುಖದಲ್ಲಿ ಥಟ್ಟನೆ ನಗು ಬಂದು ಬಿಡುತ್ತದೆ.
ಗಿಫ್ಟ್ ಪ್ಯಾಕ್ ತೆರೆದು ನೋಡಿದ ತಂದೆ ಫುಲ್ ಖುಷ್
ಇನ್‌ಸ್ಟಾಗ್ರಾಮ್ ರೀಲ್ ನಲ್ಲಿ ಒಂದು ದಿನದ ನಂತರ ತಂದೆಯು ಉತ್ಸಾಹದಿಂದ ಮನೆಗೆ ಬಂದ ಆ ಹೋಮ್ ಥಿಯೇಟರ್ ನ ಪ್ಯಾಕೇಜ್ ಅನ್ನು ತುಂಬಾನೇ ಖುಷಿ ಖುಷಿಯಿಂದ ತೆಗೆಯುತ್ತಿರುವುದನ್ನು ನಾವು ನೋಡಬಹುದು. ವಿಡಿಯೋದ ಕೊನೆಯಲ್ಲಿ ತಂದೆ ಗಿಫ್ಟ್ ಅನ್ನ ನೋಡಿ ಸಂತೋಷದಿಂದ ಡ್ಯಾನ್ಸ್ ಮಾಡಲು ಶುರು ಮಾಡುವುದನ್ನು ನಾವು ನೋಡಬಹುದು.
ಇದನ್ನೂ ಓದಿ: ಜನರನ್ನು ಕಂಡರೆ ಕೂಗುತ್ತಾರೆ, ಓಡಿ ಹೋಗುತ್ತಾರೆ ಸಹೋದರರು, ಈ ಸಮಸ್ಯೆಗೆ ಕಾರಣ ಏನು?
"ಅಂತಿಮವಾಗಿ ನನ್ನ ಮೊದಲ ಸಂಬಳದಿಂದ ಅಪ್ಪನಿಗೆ ಒಂದು ಉಡುಗೊರೆ ಅಂತ ತಂದುಕೊಟ್ಟೆ, ನೀವು ಅದನ್ನು ನೋಡಬಹುದು. ಅಪ್ಪ ಅದನ್ನು ನೋಡಿ ತುಂಬಾನೇ ಸಂತೋಷಪಟ್ಟರು" ಎಂದು ಇನ್ಶಾ ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಹೃದಯಸ್ಪರ್ಶಿ ಇನ್ಸ್ಟಾ ರೀಲ್ ವೀಡಿಯೋ ತುಂಬಾನೇ ವೈರಲ್ ಆಗಿದ್ದು, 1.3 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ತಂದೆಯ ಪ್ರತಿಕ್ರಿಯೆಯನ್ನು ನೆಟ್ಟಿಗರು ತುಂಬಾನೇ ಇಷ್ಟಪಟ್ಟಿದ್ದಾರೆ. ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಕ್ಯಾಶ್ ಕೌಂಟರ್ ನಲ್ಲಿ ಅಂಕಲ್ ಮುಖದ ಭಾವ ತುಂಬಾನೇ ಚೆನ್ನಾಗಿತ್ತು" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ