ಮರಿಗಳಿಗಾಗಿ ತನ್ನ ಜೀವವನ್ನೇ ಬಲಿ ನೀಡಿದ ತಾಯಿ ಬಾತುಕೋಳಿ!; ಎಂಥವರ ಕಣ್ಣಲ್ಲೂ ಕಣ್ಣೀರು ತರಿಸುತ್ತೆ ಈ ವಿಡಿಯೋ

ತಾಯಿ ಬಾತುಕೋಳಿ ಸಣ್ಣ ಹೊಂಡದಲ್ಲಿ ತನ್ನ ಮರಿಗಳಿಗೆ ಬೆಚ್ಚಗಿನ ರಕ್ಷಿಣೆ ನೀಡುತ್ತಿರುತ್ತದೆ. ಆ ಸಮಯದಲ್ಲಿ ಹೆಬ್ಬಾವುವೊಂದು ಬಾತುಕೋಳಿ ಮರಿಗಳನ್ನು ತಿನ್ನಲು ಬರುತ್ತದೆ.

news18-kannada
Updated:October 25, 2020, 6:55 PM IST
ಮರಿಗಳಿಗಾಗಿ ತನ್ನ ಜೀವವನ್ನೇ ಬಲಿ ನೀಡಿದ ತಾಯಿ ಬಾತುಕೋಳಿ!; ಎಂಥವರ ಕಣ್ಣಲ್ಲೂ ಕಣ್ಣೀರು ತರಿಸುತ್ತೆ ಈ ವಿಡಿಯೋ
ಬಾತುಕೋಳಿ
  • Share this:
ಮಕ್ಕಳಿಗೆ ಕಿಂಚ್ಚುತ್ತು ಏನು ತೊಂದರೆ ಆಗದಂತೆ ನೋಡಿಕೊಳ್ಳುವವಳು ಎಂದರೆ ಅದು ತಾಯಿ. ತಾಯಿ ಇಂದ ಮಾತ್ರ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ. ಮಗನಿಗೆ ಚಿಕ್ಕ ಗಾಯವಾದರು ತಾಯಿ ನೊಂದುಕೊಳ್ಳುತ್ತಾಳೆ, ಬೇಸರಿಸುತ್ತಾಳೆ. ಅದು ಮನುಷ್ಯರಾದರು ಅಷ್ಟೇ ಪ್ರಾಣಿ, ಪಕ್ಷಿಯಾದರೂ ಅಷ್ಟೇ. ತಾಯಿ ಪ್ರೀತಿಯೇ ಶೇಷ್ಠ. ಏಕೆಂದರೆ ಇಲ್ಲೊಂದು ಕರುಣಾಜನಕ ವಿಡಿಯೋ ಇದೆ. ತಾಯಿ ಬಾತುಕೋಳಿ ತನ್ನ ಮರಿಗಳನ್ನು ಹೆಬ್ಬಾವಿನಿಂದ ರಕ್ಷಿಸುವ ವಿಡಿಯೋ ಎಂಥವರ ಕಣ್ಣಲ್ಲೂ ಕಣ್ಣೀರು ತರಿಸದೆ ಇರಲಾರದು.

ತಾಯಿ ಬಾತುಕೋಳಿ ಸಣ್ಣ ಹೊಂಡದಲ್ಲಿ ತನ್ನ ಮರಿಗಳಿಗೆ ಬೆಚ್ಚಗಿನ ರಕ್ಷಿಣೆ ನೀಡುತ್ತಿರುತ್ತದೆ. ಆ ಸಮಯದಲ್ಲಿ ಹೆಬ್ಬಾವುವೊಂದು ಬಾತುಕೋಳಿ ಮರಿಗಳನ್ನು ತಿನ್ನಲು ಬರುತ್ತದೆ. ಆಗ ತಾಯಿ ಬಾತುಕೋಳಿ ಹೆಬ್ಬಾವಿಗೆ ಹೆದರದೆ ತನ್ನ ಮರಿಗಳನ್ನು ಅಲ್ಲಿಂದ ಓಡಿಹೋಗಲು ಸೂಚನೆ ನೀಡುತ್ತದೆ.

ತಾಯಿ ಬಾತುಕೋಳಿಯ ಸೂಚನೆಯಂತೆ ಮರಿಗಳು ಹೆಬ್ಬಾವಿನಿಂದ ಬಾಚಾವ್​ ಆಗುತ್ತದೆ. ಆದರೆ ಹೆಬ್ಬಾವು ಮಾತ್ರ ತಾಯಿ ಬಾತುಕೋಳಿಯನ್ನು ತನ್ನ ಬಾಲದಲ್ಲಿ ಸುತ್ತುತ್ತಾ ಆಹಾರವಾಗಿ ಸೇವಿಸುತ್ತದೆ. ಮರಿಗಳಿಗಾಗಿ ತಾಯಿ ಬಾತುಕೋಳಿ ತನ್ನ ಜೀವವನ್ನೇ ಹೆಬ್ಬಾವಿಗೆ ಆಹಾರವನ್ನಾಗಿಸಿದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸದ್ಯ ವೈರಲ್​ ಆಗುತ್ತಿದೆ.

ಐಎಫ್​ಎಸ್​ ಅಧಿಕಾರಿ ಸುಧಾ ರಮೇಶ್​ ಈ ವಿಡಿಯೋವನ್ನು ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಾಯಿ ಪ್ರೀತಿಯೇ ಶ್ರೇಷ್ಠವೆಂದು ಬರೆದಿದ್ದಾರೆ. ಇನ್ನು ಕೆಲವರು ಮರಿಗಳಿಗಾಗಿ ತಾಯಿ ಬಾತುಕೋಳಿ ಜೀವದಾನ ಮಾಡಿರುವುದನ್ನು ಕಂಡು ಬೇಸರಿಸಿದ್ದಾರೆ.ಇದು ಸೊಂಟದ ವಿಷ್ಯಾ!; ಈ ಯುವತಿಯ ಸೊಂಟದ ಸುತ್ತಳತೆ ಎಷ್ಟು ಗೊತ್ತಾ?

Published by: Harshith AS
First published: October 25, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading