Heart Warming Story: ಗಂಡ ಬಸ್ ಡ್ರೈವರ್ ಹೆಂಡತಿ ಕಂಡಕ್ಟರ್! 20 ವರ್ಷದ ಲವ್​ಸ್ಟೋರಿ, ಲವ್ಲೀ ಆಗಿದೆ ಲೈಫ್ ಜರ್ನಿ

ಕೇರಳದ ಬಸ್ಸೊಂದರಲ್ಲಿ ಚಾಲಕ ಮತ್ತು ಕಂಡಕ್ಟರ್‌ ಆಗಿ ಒಟ್ಟಿಗೆ ಬಸ್ ಓಡಿಸುವ ದಂಪತಿಯ ಹೃದಯ ಸ್ಪರ್ಶಿ ಕಥೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಜನರಲ್ಲಿ ಕಾಯಕ ಜೀವನದ ಉತ್ಸಾಹವನ್ನು ಹೆಚ್ಚಿಸುತ್ತಿದೆ.

ಒಂದೇ ಬಸ್ಸಿನಲ್ಲಿ ಕೆಲಸ ಮಾಡುತ್ತಿರುವ ಕೇರಳದ ದಂಪತಿಗಳು

ಒಂದೇ ಬಸ್ಸಿನಲ್ಲಿ ಕೆಲಸ ಮಾಡುತ್ತಿರುವ ಕೇರಳದ ದಂಪತಿಗಳು

  • Share this:
 ಪ್ರತಿನಿತ್ಯ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತಲೇ ಇರುತ್ತೇವೆ. ಪ್ರತಿಯೊಬ್ಬರು ತಮ್ಮ ಪ್ರಯಾಣ ಸುಂದರವಾಗಿ ಮತ್ತು ಆನಂದವಾಗಿ ಇರಬೇಕು ಎಂದು ಬಯಸುತ್ತಾರೆ. ಒಂದು ದಿನದಲ್ಲಿ ಮನುಷ್ಯನ ಖುಷಿ, ನೆಮ್ಮದಿ  ಅವನ ಆ ದಿನದ ಅನೇಕ ವಿಚಾರಗಳನ್ನು, ಅವನು ಅನುಭವಿಸಿದ ಸಂತೋಷಗಳನ್ನು, ಆನಂದದ ಕ್ಷಣಗಳನ್ನು ಅವಲಂಭಿಸಿರುತ್ತದೆ. ಜೊತೆಗೆ ಅವನ ಆ ದಿನ ತನ್ನ ಪ್ರಯಾಣದಲ್ಲಿನ ಅನುಭವವು ಮುಖ್ಯವಾಗಿರುತ್ತದೆ. ಅದು ಬಸ್ ಪ್ರಯಾಣ (Bus Journey) ಇರಬಹುದು ಇಲ್ಲವೇ ಇನ್ಯಾವುದೇ ವಾಹನಗಳಲ್ಲಿ (Vehicle) ಪ್ರಯಾಣಿಸಬಹುದು. ಆದರೆ ಅದು ಅವನ ನೆಮ್ಮದಿಯ ಮೇಲೆ, ಸಂತೋಷದ ಮೇಲೆ ಪ್ರಭಾವ ಬೀರುತ್ತದೆ. ಇದೀಗ ತಮ್ಮ ಬಸ್ಸಿನಲ್ಲಿ ಪ್ರಯಾಣಿಸುವವರ ಸಂತೋಷಕ್ಕಾಗಿ, ಅವರ ಸುರಕ್ಷತೆಗಾಗಿ (Safety) ಬಸ್ಸಿನಲ್ಲಿ ಸಿಸಿಟಿವಿ (CCTV) ಮತ್ತು ಮ್ಯೂಸಿಕ್ (Music) ಹಾಕಿಸಿದ ಕೇರಳದ (Kerala) ದಂಪತಿಗಳ (Couples) ಕಥೆ ವೈರಲ್ ಆಗುತ್ತಿದ್ದು. ಅವರ ಕಾಯಕ ಜೀವನದ ಕತೆ ಜನರ ಹೃದಯ ಸ್ಪರ್ಶಿಸುತ್ತಿದೆ.

ದಂಪತಿಗಳಿಬ್ಬರು ಕೆಎಸ್ಆರ್ಟಿಸಿ ಬಸ್ ಕೆಲಸಗಾರರು

ಗಿರಿ ಗೋಪಿನಾಥ್ ಮತ್ತು ಥಾರಾ ಎಂಬ ದಂಪತಿಗಳು ಕೇರಳದ ಕೆಎಸ್ಆರ್ಟಿಸಿ ಬಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಿರಿ ಬಸ್ ಚಾಲಕನಾಗಿ ಮತ್ತು ತಾರಾ ಅದೇ ಬಸ್ ನಲ್ಲಿ ಕಂಡಕ್ಟರ್ ಆಗಿದ್ದಾರೆ. ಈ ದಂಪತಿಗಳು ತಮ್ಮ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂತೋಷ ಮತ್ತು ಸುರಕ್ಷತೆಗಾಗಿ ಕೈಗೊಂಡ ಕ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Woman Drives Truck: ನಗು ಮುಖದ ಟ್ರಕ್ ಲೇಡಿ ಡ್ರೈವರ್! ವಿಡಿಯೋ ವೈರಲ್

ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮಾರ ಅಳವಡಿಕೆ

ಪ್ರಯಾಣಿಕರ ಸುರಕ್ಷತೆಗಾಗಿ ಆರು ಸಿಸಿಟಿವಿ ಕ್ಯಾಮೆರಾಗಳು, ತುರ್ತು ಸ್ವಿಚ್‌ಗಳು, ಆರಾಮದಾಯಕ ಪ್ರಯಾಣಕ್ಕಾಗಿ ಸಂಗೀತ ವ್ಯವಸ್ಥೆ, ಸ್ವಯಂಚಾಲಿತ ಏರ್ ಫ್ರೆಶನರ್, ಮಕ್ಕಳ ಮನರಂಜನೆಗಾಗಿ ಗೊಂಬೆಗಳು ಮತ್ತು ಅಲಂಕಾರಗಳು ಮತ್ತು ವಾಹನದಲ್ಲಿ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್ ಅಳವಡಿಸಲಾಗಿದೆ.



20ವರ್ಷಗಳ ಪ್ರೇಮಕಥೆ

ಥಾರಾ ಮತ್ತು ಗಿರಿ ಅವರು 20 ವರ್ಷಗಳ ಹಳೆಯ ಪ್ರೇಮಕಥೆಯನ್ನು ಹೊಂದಿದ್ದಾರೆ. ಗಿರಿಗೆ 26 ವರ್ಷದವಳಿದ್ದಾಗ ಮತ್ತು ಥಾರಾ 24 ವರ್ಷದವರಾಗಿದ್ದಾಗ ಭೇಟಿಯಾದರು. ಅವರ ಮದುವೆಯು ಬಹುತೇಕ ಖಚಿತವಾಗಿದ್ದು ಆದರೆ ಅವರ ಜಾತಕ ಹೊಂದಿಕೆಯಾಗಿಲ್ಲ ಎಂಬ ಕಾರಣದಿಂದ ಮದುವೆ ನಿಂತುಹೋಗಿತ್ತು. ಆದರೂ, ಅವರು ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ವಿವಾಹವಾದರು.

10ವರ್ಷಗಳಿಂದ ಒಂದೇ ಡಿಪೋದಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳು

2000 ರಲ್ಲಿ ಇವರಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಲೇ ಇವರು ಪ್ರೇಮಿಸುತ್ತಿದ್ದರು. 2007ರಲ್ಲಿ ಕೆಎಸ್‌ಆರ್‌ಟಿಸಿ ಹರಿಪಾದ ಡಿಪೋದಲ್ಲಿ ಗಿರಿಗೆ ಚಾಲಕನಾಗಿ ಕೆಲಸ ಸಿಕ್ಕಿತು. ಮೂರು ವರ್ಷಗಳ ನಂತರ ಥರಾ ಕೂಡ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಟರ್‌ ಆಗಿ ಕೆಲಸ ಪಡೆದರು. ಇದೀಗ 10 ವರ್ಷಗಳಿಂದ ಒಂದೇ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರತಿದಿನ ನಾವು ರಾತ್ರಿ 1.15 ಕ್ಕೆ ಎದ್ದು 2 ಗಂಟೆಗೆ ಡಿಪೋ ತಲುಪುತ್ತೇವೆ" ಎಂದು ಥಾರಾ ವೀಡಿಯೊದಲ್ಲಿ ಹೇಳಿದ್ದಾರೆ. "ನಂತರ ಗಿರಿ ಬಸ್ ಅನ್ನು ಸ್ವಚ್ಛಗೊಳಿಸುತ್ತಾನೆ ಮತ್ತು ನಮ್ಮ ಕೆಲಸವು 5.50 ಕ್ಕೆ ಪ್ರಾರಂಭವಾಗುತ್ತದೆ," ಎಂದು ಥಾರಾ ನಗುತ್ತಾ ನಗುತ್ತಾ ವೀಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Viral Wedding: ಹಳೆ ಡ್ರೆಸ್ ಧರಿಸಿ ಮದುವೆಯಾದ ಯುವತಿ! ಎಲ್ಲವೂ ಸಿಂಪಲ್ ಸಿಂಪಲ್, ಕಾರಣ?

ವ್ಯಾಟ್ಸ್ ಆ್ಯಪ್ ಗ್ರೂಪ್ ಅಭಿಮಾನಿಗಳು

ಗಿರಿ ಮತ್ತು ಥರಾ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಈ ಬಸ್ಸನ್ನು ತುಂಬಾ ಸುಂದರಗೊಳಿಸಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ. ವಾಸ್ತವವಾಗಿ, ಈ ಬಸ್‌ನಲ್ಲಿ ನಿಯಮಿತವಾಗಿ ಪ್ರಯಾಣಿಸುವ ಪ್ರಯಾಣಿಕರು ಹಲವಾರು ವಾಟ್ಸಾಪ್ ಗುಂಪುಗಳನ್ನು ಸಹ ಪ್ರಾರಂಭಿಸಿದ್ದಾರೆ.
Published by:Nalini Suvarna
First published: