ಶಾರ್ಕ್ ಅನ್ನು ನುಂಗಲು ಬೃಹತ್ ಮೊಸಳೆಯೊಂದು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯವೊನೆ ಪಾಮರ್ ಎಂಬ ಮಹಿಳೆ ಮೀನು ಹಿಡಿಯುತ್ತಿದ್ದ ವೇಳೆ ಈ ದೃಶ್ಯವನ್ನು ಕಣ್ಣಾರೆ ಕಂಡಿದ್ದಾಗಿ ನ್ಯೂಜಿಲೆಂಡ್‌ನ ಮಾಧ್ಯಮದಲ್ಲಿ ವರದಿಯಾಗಿದೆ.
''ಮೀನು ಹಿಡಿಯುವಾಗ ಒಂದೆರಡು ಸಣ್ಣ ಶಾರ್ಕ್‌ಗಳನ್ನು ಕಂಡೆ. ಅದರಲ್ಲಿ ಒಂದು ಶಾರ್ಕ್ ಮೀನಿನ ಜತೆಯಲ್ಲಿದ್ದನ್ನು ಗಮನಿಸಿದೆ. ಆ ವೇಳೆ, ಮೊಸಳೆಯನ್ನೂ ನೋಡಿ, ಅದು ಬಂದು ಶಾರ್ಕ್ ಅನ್ನು ತಿನ್ನುತ್ತದೆ ಎಂಬ ಕಾರಣಕ್ಕೆ ಅದನ್ನು ನೀರಿಗೆ ವಾಪಸ್ ಬಿಡಲು ನಿರ್ಧರಿಸಿದೆ'' ಎಂದು ಮಹಿಳೆ ಹೇಳಿದ ಬಗ್ಗೆ ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.
13 ಅಡಿ ಉಪ್ಪುನೀರಿನ ಮೊಸಳೆ ಗಮನಿಸಿದಾಗ ಶಾರ್ಕ್‌ಗಳನ್ನು ಮತ್ತೆ ಸಮುದ್ರಕ್ಕೆ ಬಿಡುಗಡೆ ಮಾಡಲು ಯೋಜಿಸುತ್ತಿದ್ದೆ. ಅವುಗಳನ್ನು ಆಹಾರವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದೆ ಎಂಬುದನ್ನೂ ಅರಿತುಕೊಂಡೆ. "ನಾನು ಶಾರ್ಕ್ ಅನ್ನು ಹಿಡಿದಿದ್ದೇನೆ. ಆದರೆ, ಅದನ್ನು ಮತ್ತೆ ನೀರಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಏಕೆಂದರೆ ಮೊಸಳೆ ಬರುತ್ತಿದೆ ಮತ್ತು ಈಗ ಅದು ಬಂದು ಶಾರ್ಕ್ ಅನ್ನು ತಿನ್ನಲು ಹೊರಟಿದೆ" ಎಂದು ಅವರು ಹೇಳಿದರು.
ಇನ್ನು, ಪಾಮರ್ ಹಂಚಿಕೊಂಡ ವಿಡಿಯೋ ತುಣುಕಿನಲ್ಲಿ ಮೊಸಳೆ ನೀರಿನಿಂದ ಹೊರಬರುತ್ತಿರುವುದನ್ನು ನೋಡಬಹುದು. ಮೊಸಳೆ ನೋಡಿದ ಜನರು ದಿಗ್ಭ್ರಮೆಗೊಂಡಿದ್ದಾರೆ. ಮತ್ತು ಎರಡು ಶಾರ್ಕ್‌ಗಳಲ್ಲಿ ಒಂದನ್ನು ಬಾಯೊಳಗೆ ಹಾಕಿಕೊಂಡಿದೆ. ಈ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಹಲವರು ಈ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನು, ಮೊಸಳೆ ಎರಡೂ ಶಾರ್ಕ್ ಅನ್ನು ತಿಂದಿದ್ದು, ಬೀಚ್ ಬಳಿ ಜನರಿದ್ದರೂ ಅದರ ಬಗ್ಗೆ ಗಮನವೇ ಇರಲಿಲ್ಲ ಎಂದೂ ತಿಳಿದುಬಂದಿದೆ. ಅಲ್ಲದೆ, ಅದು ನಾಲ್ಕು ಮೀಟರ್‌ಗಳಷ್ಟು ದೊಡ್ಡದಿತ್ತು. ಅಷ್ಟು ದೊಡ್ಡ ಮೊಸಳೆಯನ್ನು ನಾನು ಈವರೆಗೆ ನಾಡೊಯೇ ಇಲ್ಲ ಎಂದೂ ವಿಡಿಯೋ ಮಾಡಿದ ಆ ಮಹಿಳೆ ಹೇಳಿಕೊಂಡಿದ್ದಾಳೆ.
ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋವನ್ನು ಸಾವಿರಾರು ಬಾರಿ ವೀಕ್ಷಿಸಲಾಗಿದೆ.
"ಈ ಜನರು ಮೊಸಳೆಗಳಿಂದ ತುಂಬಿರುವ ನೀರಿನ ಅಂಚಿನಲ್ಲಿ ಏಕೆ ನಿಂತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
"ನಾವು ಅಲ್ಲಿ ವಾಸಿಸದಿದ್ದಕ್ಕೆ ತುಂಬಾ ಖುಷಿಯಾಗಿದೆ" ಎಂದು ಇನ್ನೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಫಾರ್ ನಾರ್ತ್ ಕ್ವೀನ್ಸ್‌ಲ್ಯಾಂಡ್ ಪ್ರದೇಶದಲ್ಲಿ ಮೀನುಗಾರಿಕೆಯನ್ನು ಏಕೆ ನಿಷೇಧಿಸಲಾಗಿದೆ ಎಂದು ವಿಡಿಯೋ ವಿವರಿಸುತ್ತದೆ ಎಂದು ವೆಬ್‌ಸೈಟ್ ಪರ್ತ್ ನೌ ಹೇಳಿದೆ. ಈ ವಿಡಿಯೋ ವೈರಲ್ ಆದ ಬಳಿಕ ಆಸ್ಟ್ರೇಲಿಯಾದಲ್ಲಿ ಬೀಚ್‌ಗೆ ಹೋಗುವವರಿಗೆ ಮೊಸಳೆಗಳಿಗೆ ಆಹಾರ ನೀಡುವುದು ಕಾನೂನುಬಾಹಿರ ಎಂದು ಎಚ್ಚರಿಕೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ