Viral News: ಹೃದಯ ಬಡಿತ ನಿಂತಿದ್ದ ಒಂದೂವರೆ ವರ್ಷದ ಕಂದಮ್ಮನ ಜೀವ ಕಾಪಾಡಿದ ವೈದ್ಯರು!

ವೈರಲ್​ ಮಗು

ವೈರಲ್​ ಮಗು

ಇತ್ತೀಚಿಗಿನ ಕಾಲದಲ್ಲಿ ಹೃದಯಕ್ಕೆ ಸಂಬಂಧ ಪಟ್ಟಂತಹ ಕಾಯಿಲೆಗಳು ಬರೋದು ಕಾಮನ್​ ಆಗಿದೆ. ಅದು ಯಾವ ವಯಸ್ಸು ಅಂತ ಇಲ್ಲ. ಸಣ್ಣವರಿಗಾಗಲೀ, ದೊಡ್ಡವರಿಗಾಗಲೀ ಹೃದಾಯಾಘಾತ ಆಗೋದು ಕಾಮನ್​ ಆಗಿ ಬಿಟ್ಟಿದೆ.

  • Share this:

ಆರೋಗ್ಯಕರ ಮನುಷ್ಯನ ಹೃದಯದ (Heart Beat) ಮಿಡಿತ ನಿಮಿಷಕ್ಕೆ 60 ರಿಂದ 90 ಬಾರಿ ಬಡೆದುಕೊಳ್ಳುತ್ತದೆ. ಈ ಹೃದಯ ಎಂಬುದು ನಮ್ಮ ದೇಹದಲ್ಲಿ ಎಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ರಕ್ತವನ್ನು ಶುದ್ಧಗೊಳಿಸುವುದರಿಂದ ಹಿಡಿದು ನಮ್ಮ ದೇಹದ (Body) ಇತರ ಭಾಗಗಳಿಗೆ ರಕ್ತವನ್ನು ಪರಿಚಲನ ಮಾಡಿಸುತ್ತದೆ. ಅದುವೇ ಮಗುವಿಗೆ ಇನ್ನೂ ಫಾಸ್ಟ್​ ಆಗಿ ಈ ಹೃದಯ ಬಡಿದು ಕೊಳ್ಳುತ್ತದೆ. ಒಟ್ಟಿನಲ್ಲಿ ನಮ್ಮ ಇಡೀ ದೇಹವು ಹೃದಯದ ಮೇಲೆ ಅವಲಂಬಿತವಾಗಿದೆ ಅಂತ ಹೇಳಿದ್ರೂ ತಪ್ಪಾಗೋಲ್ಲ ಬಿಡಿ. ಇದಕ್ಕೆ ಸಂಬಂಧ ಪಟ್ಟಂತೆ ಇದೀಗ ಒಂದು ವಿಷಯ ಸಖತ್​ ವೈರಲ್ (Viral)​ ಆಗ್ತಾ ಇದೆ.


ಇತ್ತೀಚಿಗಿನ ಕಾಲದಲ್ಲಿ ಹೃದಯಕ್ಕೆ ಸಂಬಂಧ ಪಟ್ಟಂತಹ ಕಾಯಿಲೆಗಳು ಬರೋದು ಕಾಮನ್​ ಆಗಿದೆ. ಅದು ಯಾವ ವಯಸ್ಸು ಅಂತ ಇಲ್ಲ. ಸಣ್ಣವರಿಗಾಗಲೀ, ದೊಡ್ಡವರಿಗಾಗಲೀ ಹೃದಾಯಾಘಾತ ಆಗೋದು ಕಾಮನ್​ ಆಗಿ ಬಿಟ್ಟಿದೆ. ಅದಕ್ಕೆ ಮುಖ್ಯವಾಗಿ ನಮ್ಮ ಜೀವನ ಶೈಲಿಯೇ ಕಾರಣ ಅಂತ ಹೇಳಿದರೂ ತಪ್ಪಾಗಲಾರದು.


ಒಂದು ಸೆಕೆಂಡ್ ಹೃದಯ ಬಡೊಯೋದು ನಿಂತರು ಜೀವನ್ಮರಣ ಹೋರಾಟವೇ ಮಾಡಬೇಕಾಗುತ್ತೆ. ICU ನಲ್ಲಿ ಕೂಡ ಇಡುತ್ತಾರೆ. ಅದೃಷ್ವಿದ್ರೆ ಬದುಕುತ್ತಾರೆ, ಇಲ್ಲದಿದ್ದಲ್ಲಿ ಸಾವು ಕಟ್ಟಿಟ್ಟ ಬುತ್ತಿ.


ಆದರೆ, ಇಲ್ಲೊಂದು ಶಾಕಿಂಗ್​ ಕೇಸ್​ ನಡೆದು ಬಿಟ್ಟಿದೆ. ಈ ಘಟನೆಯು ವೈದ್ಯರ ಲೋಕಕ್ಕೇ ಅಚ್ಚರಿಯನ್ನುಂಟು ಮಾಡಿದೆ. ಅದು ಕೂಡ ಒಂದು ಮಗುವಿನ ಕೇಸ್. ಹೌದು.


ಮಗು ತುಂಬಾ ಸೂಕ್ಷ್ಮ. ನವಜಾತ ಶಿಶುವನ್ನು ಎಷ್ಟು ಕೇರ್​ ಮಾಡಿದ್ರೂ ಸಾಲದು. ಆಗ ತಾನೆ ತಾಯಿಯ ಗರ್ಭದಿಂದ ಹೊರಬಂದಿರುತ್ತದೆ. ಹೊಸ ಲೋಕವನ್ನು ನೋಡುತ್ತಾ ಇರುತ್ತದೆ. ಅದಕ್ಕೆ ತಾಯಿಯ ಎದೆ ಹಾಲೇ ಒಂದು ವರ್ಷಗಳ ಕಾಲ ಆಹಾರ.


ಇಲ್ಲಿ ವೈರಲ್​ ಆಗ್ತಾ ಇರುವ ಮಗು ನಿಜಕ್ಕೂ ಮ್ಯಾಜಿಕ್​ ಬೇಬಿ ಅಂತ ಹೇಳಬಹುದು. ಯಾಕಂದ್ರೆ, 3 ಗಂಟೆ ಹೃದಯ ಬಡಿತ ನಿಂತರೂ ಒಂದೂವರೆ ವರ್ಷದ ಮಗುವನ್ನು ವೈದ್ಯರು ಬದುಕುಳಿಸಿದ್ದಾರೆ. ಈ ಘಟನೆ ಕೆನಡಾದ ನೈಋತ್ಯ ಒಂಟಾರಿಯೊದ ಪಟ್ರೋಲಿಯಾದಲ್ಲಿ ನಡೆದಿದೆ.


ಇದನ್ನೂ ಓದಿ: ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ! ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!


ವೇಲಾನ್​ ಸೌಂಡರ್ಸ್​ ಎಂಬ ಒಂದೂವರೆ ವರ್ಷದ ಮಗು ಡೇ ಕೇರ್​ನಲ್ಲಿ ಆಡುತ್ತಿರುವಾಗ ಜನವರಿ 24 ರಂದು ಸ್ವಿಮ್ಮಿಂಗ್​ ಪೂಲ್​ನಲ್ಲಿ ಬಿದ್ದಿದೆ. 5 ನಿಮಿಷ ನೀರಿನಲ್ಲೇ ಇದ್ದ ಮಗುವಿನ ದೇಹದಲ್ಲಿ ಸಂಪೂರ್ಣವಾಗಿ ನೀರು ತುಂಬಿಕೊಂಡಿತ್ತು. ಇದರಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಅಲ್ಲಿ ತಿಳಿದ ನಂತರ ಈ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಸೇರಿಸಿ ಆಸ್ಪತ್ರೆಯಲ್ಲಿ ಸೌಲಭ್ಯ ಮತ್ತು ಡಾಕ್ಟರ್​ ಇರಲಿಲ್ಲ. ನರ್ಸ್​ನಿಂದ ಹಿಡಿದು, ಯಾರೆಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ  ಪ್ರಮುಖರಿದ್ದರೋ ಅವರೆಲ್ರೂ ಮಗುವಿಹೆ ಚಿಕಿತ್ಸೆ ನೀಡಲು ಮುಂದಾದರು.


ಮಗುವಿಗೆ ಸಿಪಿಆರ್​ನೀಡಿದ್ದಾರೆ ಯಾಕೆಂದರೆ ಅದರ ಹೃದಯ ಬಡಿತ ನಿಂತಿತ್ತು. ಲಂಡನ್​ನಿಂದ ವೈದ್ಯರ ತಂಡವೊಂದು, ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಮಾರ್ಗದರ್ಶನ ನೀಡಲಾಗುತ್ತಿತ್ತು.




ಸಿಪಿಆರ್​ ಕೊಟ್ಟ ಪರಿಣಾಮದಿಂದಾಗಿ ಒಂದೂವರೆ ವರ್ಷದ ಮಗುವಿಗೆ ಉಸಿರು ಬಂದಿದೆ. ಫೆಬ್ರವರಿ 06 ರಂದು ವೇಲಾನ್​ ಸೌಂಡರ್ಸ್​ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾನೆ. ಈ ಘಟನೆಯ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿದ್ದರಿಂದ ಮಗು ಉಳಿದಿದೆ ಎಂದು ಪೋಷಕರು ಹೇಳಿಕೊಳ್ಳುತ್ತಾರೆ. ಇಂದು ವೇಲಾನ್​ ಸೌಂಡರ್ಸ್​ ಬದುಕಲು ಇವರೆಲ್ಲರೂ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ನಿಜಕ್ಕೂ ಇದು ಆಶ್ಚರ್ಯ ಅಲ್ವಾ?  ಒಂದು ನಿಮಿಷ ಹೃದಯ ಬಡಿಯಲಿಲ್ಲ ಅಂದ್ರೆನೇ ಉಳಿಯೋಲ್ಲ ಅಂತದ್ರಲ್ಲಿ 3 ಗಂಟೆ ಅಂದ್ರೆ ತಮಾಷೆಯ ಮಾತೆ ಅಲ್ಲ ಬಿಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು