Street Food: ಇನ್ನೂ ಏನೇನ್ ಮಾಡ್ತಾರಪ್ಪಾ! ಚೀಸ್ ಚಾಕೊಲೇಟ್ ಸ್ಯಾಂಡ್ವಿಚ್ ಎಲ್ಲಾದ್ರೂ ನೋಡಿದ್ದೀರಾ?

ಈಗ ಇಂತಹದೇ ವೀಡಿಯೋಗಳ ಸಾಲಿಗೆ ಮತ್ತೊಂದು ಹೊಸ ವೀಡಿಯೋ ಬಂದು ಸೇರಿಕೊಂಡಿದೆ ನೋಡಿ. ಇತ್ತೀಚೆಗೆ ನಾವು ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಅನ್ನು ಚೀಸ್ ನಿಂದ ತಯಾರಿಸಿದ್ದು ನೋಡಿದ್ದೆವು. ಐಸ್‌ಕ್ರೀಂ ತುಂಬಿದ ಸ್ಯಾಂಡ್ವಿಚ್ ನ ಪರಿಕಲ್ಪನೆಯು ಬಹುತೇಕ ನೆಟ್ಟಿಗರಿಗೆ ಹೊಸತು ಅನ್ನಿಸಿಲ್ಲವಾದರೂ, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಈ ಹೊಸ ವೀಡಿಯೋವು ಏನೆಲ್ಲಾ ಒಳಗೊಂಡಿದೆ ನೋಡಿ.

ಚೀಸ್ ಚಾಕೊಲೇಟ್ ಸ್ಯಾಂಡ್ವಿಚ್

ಚೀಸ್ ಚಾಕೊಲೇಟ್ ಸ್ಯಾಂಡ್ವಿಚ್

  • Share this:
ಸುಮಾರು ಒಂದು ವರ್ಷದಿಂದ ಎಂದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಲಾಕ್‌ಡೌನ್ (Lockdown) ಸಮಯದಿಂದ ಕೆಲವು ಈ ಬೀದಿ ಬದಿಯಲ್ಲಿರುವ ಚಿಕ್ಕ ಪುಟ್ಟ ಫುಡ್ ಸ್ಟಾಲ್ ಗಳಲ್ಲಿ (Food Stall) ಮತ್ತು ತಳ್ಳು ಗಾಡಿಯಲ್ಲಿರುವ ಫಾಸ್ಟ್ ಫುಡ್ ಸ್ಟಾಲ್ ಗಳಲ್ಲಿ ಈ ಚಿತ್ರ-ವಿಚಿತ್ರವಾದ ತಿಂಡಿ ತಿನಿಸುಗಳು ಮಿಕ್ಸ್ ಮಾಡಿ ಬೇರೆಯದ್ದೆ ಭಕ್ಷ್ಯವನ್ನು ತಯಾರಿಸುವ ಟ್ರೆಂಡ್ (Trend) ಶುರುವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಿಮಗೆ ನೆನಪಿದೆಯಾ ಕಳೆದ ವರ್ಷ ಮಾವಿನ ಹಣ್ಣಿನ ಐಸ್ ಕ್ರೀಮ್ (Mango Ice cream), ಚೀಸ್ ಮತ್ತು ಚಾಟ್ ನೊಂದಿಗೆ ಸೇರಿಸಿ ಮಾಡಿದ ವಿಚಿತ್ರ ತಿಂಡಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾನೇ ವೈರಲ್ (Viral) ಆಗಿದ್ದವು. 

ಹೀಗೆ ಈ ಬೀದಿ ಬದಿಯ ಫುಡ್ ಜಾಯಿಂಟ್ ಗಳಲ್ಲಿ ಅಡುಗೆ ಮಾಡುವ ಬಾಣಸಿಗರು ಸದಾ ಹೊಸದನ್ನು ಮತ್ತು ಅನನ್ಯವಾದ ಅಡುಗೆ ಮತ್ತು ತಿಂಡಿಗಳನ್ನು ತಯಾರಿಸುವ ಪ್ರಯತ್ನದಲ್ಲಿರುತ್ತಾರೆ. ಈ ಬಾಣಸಿಗರು ಆಗಾಗ್ಗೆ ಸೃಜನಶೀಲರಾಗುತ್ತಾರೆ ಮತ್ತು ಇಂತಹ ವಿಡಿಯೋಗಳು ಅವರಿಂದ ಹೊರ ಹೊಮ್ಮುತ್ತವೆ ಎಂದು ಹೇಳಬಹುದು.

ವೈರಲ್ ವಿಡಿಯೋಗಳ ಸಾಲಿಗೆ ಮತ್ತೊಂದು ಹೊಸ ವೀಡಿಯೋ ಸೇರ್ಪಡೆ
ಇಂತಹ ಅನೇಕ ಚಿತ್ರ-ವಿಚಿತ್ರವಾದ ಭಕ್ಷ್ಯಗಳನ್ನು ತಯಾರಿಸಿ ಅವುಗಳ ವಿಡಿಯೋ ಮಾಡಿ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು. ಅದನ್ನು ಹೆಚ್ಚು ಜನರು ನೋಡಿ ಆ ವಿಡಿಯೋವನ್ನು ವೈರಲ್ ಮಾಡುವುದು. ಹೀಗೆ ಅನೇಕ ವಿಡಿಯೋಗಳಿಗೆ ನೆಟ್ಟಿಗರು ‘ಸಾಕ್ರಪ್ಪಾ ಸಾಕು, ನೀವು ಇಂತಹ ಚಿತ್ರ-ವಿಚಿತ್ರವಾದ ಭಕ್ಷ್ಯಗಳನ್ನು ಮಾಡಿದ್ದು ಅಂತ ಹೇಳಿದ್ದು ಇದೆ.

ಇದನ್ನೂ ಓದಿ:   Onion Peeling: ಸುಲಭವಾಗಿ ಈರುಳ್ಳಿ ಸಿಪ್ಪೆ ತೆಗೆಯೋಕೆ ಇಲ್ಲಿವೆ ಟ್ರೆಂಡಿಂಗ್ ಟಿಪ್ಸ್

ಈಗ ಇಂತಹದೇ ವೀಡಿಯೋಗಳ ಸಾಲಿಗೆ ಮತ್ತೊಂದು ಹೊಸ ವಿಡಿಯೋ ಬಂದು ಸೇರಿಕೊಂಡಿದೆ ನೋಡಿ. ಇತ್ತೀಚೆಗೆ ನಾವು ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಅನ್ನು ಚೀಸ್ ನಿಂದ ತಯಾರಿಸಿದ್ದು ನೋಡಿದ್ದೆವು. ಐಸ್‌ಕ್ರೀಂ ತುಂಬಿದ ಸ್ಯಾಂಡ್ವಿಚ್ ನ ಪರಿಕಲ್ಪನೆಯು ಬಹುತೇಕ ನೆಟ್ಟಿಗರಿಗೆ ಹೊಸತು ಅನ್ನಿಸಿಲ್ಲವಾದರೂ, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಈ ಹೊಸ ವಿಡಿಯೋವು ಏನೆಲ್ಲಾ ಒಳಗೊಂಡಿದೆ ನೋಡಿ.

ಹೌದು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಬೀದಿಬದಿಯಲ್ಲಿರುವ ಹೊಟೇಲ್ ನ ಬಾಣಸಿಗನೊಬ್ಬ ಬಿಳಿ ಬ್ರೆಡ್ ಅನ್ನು ಹೃದಯದ ಆಕಾರದಲ್ಲಿ ಮೊದಲು ಕತ್ತರಿಸಿಕೊಳ್ಳುವುದನ್ನು ಮತ್ತು ಅದರ ಮೇಲೆ ಚೀಸ್ ಮತ್ತು ಸ್ಟ್ರಾಬೆರಿ ಜಾಮ್ ಅನ್ನು ಹಚ್ಚುವುದನ್ನು ಕಾಣಬಹುದು.

ಚೀಸ್ ಚಾಕೊಲೇಟ್ ಸ್ಯಾಂಡ್ವಿಚ್
ನಂತರ ಆ ವ್ಯಕ್ತಿಯು ಧಾರಾಳವಾಗಿ ಸಣ್ಣ ಚಾಕೊಲೇಟ್ ಬಾರ್ ಅನ್ನು ಆ ಎರಡು ಬ್ರೆಡ್ ಗಳ ನಡುವೆ ತುರುಕುವುದನ್ನು ಮತ್ತು ಆ ಬ್ರೆಡ್ ಗಳ ಎರಡು ಮೇಲ್ಮೈಗಳನ್ನು ಮುಚ್ಚುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವನು ಅದನ್ನು ದೊಡ್ಡ ಪ್ರಮಾಣದ ತುರಿದ ಚೀಸ್ ನೊಂದಿಗೆ ಲೋಡ್ ಮಾಡುತ್ತಿರುವುದು ಮತ್ತು ಅದು ಸಾಕಾಗುವುದಿಲ್ಲವೆಂಬಂತೆ, ಎರಡು ಹಾಲು ಚಾಕೊಲೇಟ್ ಐಸ್‌ಕ್ರೀಮ್ ಬಾರ್ ಗಳನ್ನು ಕತ್ತರಿಸಿ ಅದರ ಮೇಲೆ ಜಾಗರೂಕತೆಯಿಂದ ಇಡುವುದನ್ನು ಸಹ ನೋಡಬಹುದಾಗಿದೆ.

ಇದನ್ನೂ ಓದಿ:   Weird Food: ಕಪ್ಪೆ ಕಾಲಿನ ಫ್ರೈ, ಹಂದಿ ರಕ್ತದ ಖಾದ್ಯ - ಭಾರತದಲ್ಲೂ ತಿಂತಾರೆ ಚಿತ್ರವಿಚಿತ್ರ ತಿನಿಸುಗಳು

ನಂತರ ಅಲಂಕಾರಿಕ ಉದ್ದೇಶಗಳಿಗಾಗಿ ಈ ಸಣ್ಣ ಹೃದಯದ ಆಕಾರದ ಬ್ರೆಡ್ ಸ್ಲೈಸ್ ಗಳನ್ನು ನೀಟಾಗಿ ಕತ್ತರಿಸಿ, ಅವುಗಳನ್ನು ಮುಚ್ಚಿ ಆ ಸ್ಯಾಂಡ್ವಿಚ್ ಅನ್ನು ತನ್ನ ಗ್ರಾಹಕರಿಗೆ ಬಡಿಸುತ್ತಾನೆ. ಇದನ್ನು ತಯಾರಿಸಿದ್ದು ಗುಜರಾತ್ ನ ಭಾವನಗರದ ಹಿತೇಶ್ ಸ್ಯಾಂಡ್ವಿಚ್ ಎಂಬ ಅಂಗಡಿಯಲ್ಲಿ ಎಂದು ಈ ವಿಡಿಯೋ ತೋರಿಸುತ್ತದೆ. ಹೆಚ್ಚಿನವರು ಇದನ್ನು ನೋಡಿ ಗೊಂದಲಕ್ಕೊಳಗಾದರು. ವೀಡಿಯೋ ಐಸ್‌ಕ್ರೀಮ್ ಮತ್ತು ಸ್ಯಾಂಡ್ವಿಚ್ ಎರಡನ್ನೂ ಹಾಳುಮಾಡಿದೆ ಎಂದು ಹೇಳಿದರು.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ನೋಡಿ
ಈ ವಿಡಿಯೋ ನೋಡಿದ ನೆಟ್ಟಿಗರು “ಇಂತಹ ಆಹಾರಗಳನ್ನು ತಯಾರಿಸಿ ವಿಡಿಯೋ ಮಾಡುವುದು ಕಾನೂನು ರೀತಿಯಲ್ಲಿ ಸರಿಯಾಗಿದೆಯೇ” ಮತ್ತು “ಹೀಗೆ ಮಾಡುವವರನ್ನು ಜೈಲಿಗೆ ಹಾಕಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. “ಹೀಗೆ ಮಾಡುವವರಿಗೆ ಗರುಡ ಪುರಾಣದಲ್ಲಿ ಬೇರೆಯೇ ಶಿಕ್ಷೆ ಇದೆ” ಅಂತ ಅಪರಿಚಿತ ಚಿತ್ರದ ದೃಶ್ಯದ ಫೋಟೋ ಹಾಕಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: