• Home
 • »
 • News
 • »
 • trend
 • »
 • Viral Video: ಕಿವಿ ಕೇಳದ ಹುಡುಗಿಗೆ ಮತ್ತೆ ಕಿವಿ ಕೇಳಿಸುತ್ತಿದೆ ಎಂದು ಖುಷಿ ಪಡುವ ಹುಡುಗಿಯ ವಿಡಿಯೋ ವೈಲರ್!

Viral Video: ಕಿವಿ ಕೇಳದ ಹುಡುಗಿಗೆ ಮತ್ತೆ ಕಿವಿ ಕೇಳಿಸುತ್ತಿದೆ ಎಂದು ಖುಷಿ ಪಡುವ ಹುಡುಗಿಯ ವಿಡಿಯೋ ವೈಲರ್!

ಕ್ಯಾನ್ಯನ್ ಗರ್ಲ್ ಹೇರ್ಸ್

ಕ್ಯಾನ್ಯನ್ ಗರ್ಲ್ ಹೇರ್ಸ್

ಈ ಜೀವನ ಅನ್ನೋದು ತುಂಬಾ ಅನಿರೀಕ್ಷಿತವಾದ ಘಟನೆಗಳಿಂದ ಕೂಡಿರುತ್ತದೆ ಅಂತ ಹೇಳಬಹುದು. ಕೆಲವೊಬ್ಬರಿಗೆ ತಮ್ಮ ಬಳಿ ಏನೆಲ್ಲಾ ಇದೆ ಅನ್ನೋದರ ಬಗ್ಗೆ ಸ್ವಲ್ಪವೂ ಕೃತಜ್ಞತೆ ಇರುವುದಿಲ್ಲ. ಅದರೆ ಕೆಲವೊಬ್ಬರಿಗೆ ಬೇರೆಯವರ ಬಳಿ ಇರುವಂತದ್ದು ಏನೂ ಇಲ್ಲವಲ್ಲ ಅಂತ ಅನ್ನೋ ಕೊರಗು ಸದಾ ಕಾಡುತ್ತಿರುತ್ತದೆ. ಈ ವೈರಲ್​ ವಿಡಿಯೋವನ್ನು ನೀವು ನೋಡಿದ್ರೆ ಭಾವುಕರಾಗುತ್ತಿರಾ.

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

  ಈ ಜೀವನ ( Life)  ಅನ್ನೋದು ತುಂಬಾ ಅನಿರೀಕ್ಷಿತವಾದ (Unexpected) ಘಟನೆಗಳಿಂದ (Situation) ಕೂಡಿರುತ್ತದೆ ಅಂತ ಹೇಳಬಹುದು. ಕೆಲವೊಬ್ಬರಿಗೆ ತಮ್ಮ ಬಳಿ ಏನೆಲ್ಲಾ ಇದೆ ಅನ್ನೋದರ ಬಗ್ಗೆ ಸ್ವಲ್ಪವೂ ಕೃತಜ್ಞತೆ (Gratitude) ಇರುವುದಿಲ್ಲ ಮತ್ತು ಸಂತೋಷವಿರುವುದಿಲ್ಲ. ಅದೇ ಇನ್ನೂ ಕೆಲವರಿಗೆ ತಮ್ಮ ಬಳಿ ಬೇರೆಯವರ ಬಳಿ ಇರುವಂತದ್ದು ಏನೂ ಇಲ್ಲವಲ್ಲ ಅಂತ ಅನ್ನೋ ಕೊರಗು ಸದಾ ಕಾಡುತ್ತಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದು ಬರೀ ಆಸ್ತಿ (Asset), ಅಂತಸ್ತು, ಮನಸ್ಸಿನ ನೆಮ್ಮದಿಗೆ (Peace Of Mind) ಸಂಬಂಧಪಟ್ಟಿದ್ದಲ್ಲ, ಇದು ನಮ್ಮ ದೇಹದಲ್ಲಿರುವ ಅಂಗಗಳಿಗೂ ಸಹ ಸಂಬಂಧಪಟ್ಟಿರುವ ವಿಷಯ ಅಂತ ಹೇಳಬಹುದು.


  ಒಟ್ಟಿನಲ್ಲಿ ಹೇಳುವುದಾದರೆ ಕಣ್ಣು, ಕಿವಿ ಮತ್ತು ಬಾಯಿ ಚೆನ್ನಾಗಿ ಕೆಲಸ ಮಾಡುವವರಿಗೆ ಇವೆಲ್ಲದರ ಮಹತ್ವ ಅಷ್ಟಾಗಿ ತಿಳಿದಿರುವುದಿಲ್ಲ. ಇದರಲ್ಲಿ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವವರಿಗೆ ಕೇಳಿ ನೋಡಿ ಅವರಿಗೆ ಇದರ ಬಗ್ಗೆ ಎಷ್ಟು ಕುತೂಹಲ ಮತ್ತು ಹಂಬಲ ಇರುತ್ತೆ ಅಂತ ಅರ್ಥವಾಗುತ್ತದೆ. ಎಷ್ಟೋ ಜನರಿಗೆ ತಮ್ಮ ಕಣ್ಣುಗಳಿಂದ ಈ ಜಗತ್ತನ್ನು ಮತ್ತು ತನ್ನವರನ್ನು ನೋಡಲು ಸಹ ಸಾಧ್ಯವಾಗಿರುವುದಿಲ್ಲ, ಇನ್ನೆಷ್ಟೊ ಜನರಿಗೆ ಯಾರ ಮಾತು ಕೇಳಿಸಿಕೊಳ್ಳಲು ಕಿವಿ ಕೇಳುತ್ತಿರುವುದಿಲ್ಲ ಮತ್ತು ತನ್ನವರೊಂದಿಗೆ ಮಾತಾಡಲು ಸಹ ಇನ್ನೂ ಕೆಲವರಿಗೆ ಆ ಶಕ್ತಿ ಇರುವುದಿಲ್ಲ ಅಂತ ಹೇಳಬಹುದು.


  Hearing impaired Kenyan girl hears for the first time viral video
  ಕ್ಯಾನ್ಯನ್ ಗರ್ಲ್ ಹೇರ್ಸ್


  ಅದಕ್ಕೆ ಹಿರಿಯರು ಮನೆಯಲ್ಲಿ ಹೇಳುತ್ತಿರುತ್ತಾರೆ..ನಮಗೆ ಆ ಭಗವಂತ ಏನು ಕೊಟ್ಟಿರುತ್ತಾನೋ, ಅದರಲ್ಲಿ ತೃಪ್ತಿಯನ್ನು ಕಂಡುಕೊಳ್ಳಬೇಕು ಮತ್ತು ಯಾವುದರ ಬಗ್ಗೆಯೂ ನಾವು ದೂರು ನೀಡಬಾರದು ಅಂತ. ನಾವು ಜೀವಿಸುತ್ತಿರುವ ಜೀವನ ಎಷ್ಟೋ ಜನರಿಗೆ ಅದು ಕೇವಲ ಕನಸಾಗಿ ಉಳಿದಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಆನ್ಲೈನ್ ನಲ್ಲಿ ವೈರಲ್ ಆಗಿರುವ ಆ ವೀಡಿಯೋದಲ್ಲಿ ಏನಿದೆ?


  ನಾವು ಇದ್ದಕ್ಕಿದ್ದಂತೆ ಇದಲ್ಲೆದರ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರಬಹುದು. ಆನ್ಲೈನ್ ನಲ್ಲಿ ಇತ್ತೀಚೆಗೆ ವೈರಲ್ ಆಗಿರುವ ಒಂದು ವೀಡಿಯೋದಲ್ಲಿ ಒಬ್ಬ ಪುಟ್ಟ ಹುಡುಗಿ ತನ್ನ ಜೀವನದಲ್ಲಿ ಮೊದಲ ಬಾರಿಗೆ ತನ್ನ ಕಿವಿಯಿಂದ ಮಾತುಗಳನ್ನು ಕೇಳುತ್ತಿರುವುದನ್ನು ನೋಡಬಹುದು. ಆ ಕ್ಷಣದಲ್ಲಿ ಆಕೆ ನೀಡಿದ ಆ ಪ್ರತಿಕ್ರಿಯೆ ಎಷ್ಟು ಅಮೂಲ್ಯವಾಗಿತ್ತು ಅಂತ ಹೇಳಿದರೆ, ಅದನ್ನು ನೋಡಿ ಎಂತವರಿಗೂ ಸಹ ಅವರ ಕಣ್ಣಂಚಿನಲ್ಲಿ ನೀರು ತುಂಬುವುದು ಗ್ಯಾರೆಂಟಿ.


  ಇದನ್ನೂ ಓದಿ: Food Delivery: ಲಾಂಗೆಸ್ಟ್‌ ಫುಡ್‌ ಡೆಲಿವರಿ ಮಾಡಿದ ಮಹಿಳೆಯ ಸಾಹಸ ಕೇಳಿದ್ರೆ ಶಾಕ್​ ಆಗ್ತಿರಾ!


  ಈಗ ವೈರಲ್ ಆಗಿರುವ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ‘ವೇರ್ ದಿ ಪೀಸ್’ ಎಂಬ ಬ್ರ್ಯಾಂಡ್ ಹಂಚಿಕೊಂಡಿದೆ. ಇದರಲ್ಲಿ ನೆಸ್ತಾಯ್ಹಾ ಎಂಬ 7 ವರ್ಷದ ಕೀನ್ಯಾದ ಹುಡುಗಿಯನ್ನು ನೀವು ನೋಡಬಹುದು. ವಾಸ್ತವವಾಗಿ, ಅವಳು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅವಳ ಕಿವಿಯ ತಮಟೆಗಳು ಛಿದ್ರಗೊಂಡಿದ್ದವು. ಆದಾಗ್ಯೂ, ನೆಸ್ತಾಯ್ಹಾ ಮತ್ತೆ ತನ್ನ ಕಿವಿಯಿಂದ ಕೇಳಿಸಿಕೊಳ್ಳುವ ಅವಕಾಶವನ್ನು ಪಡೆದ ಅದೃಷ್ಟಶಾಲಿ ಅಂತ ಹೇಳಬಹುದು. ಸಣ್ಣ ಕ್ಲಿಪ್ ನಲ್ಲಿ ತಜ್ಞರೊಬ್ಬರು ಅವಳ ಕಿವಿಗಳಲ್ಲಿ ಇಂಪ್ಲಾಂಟ್ ಗಳನ್ನು ಅಳವಡಿಸಿದರು ಮತ್ತು ಅವಳು ಕೇಳಿಸಿಕೊಳ್ಳಬಹುದೇ ಅಂತ ನೋಡಲು ಆಕೆಯ ಕಿವಿಯ ಹಿಂದೆ ಚಪ್ಪಾಳೆ ತಟ್ಟಿ ಪರೀಕ್ಷೆ ಮಾಡಿದರು. ಆಕೆಗೆ ಮತ್ತೆ ಕಿವಿ ಕೇಳಿಸಿದ್ದಕ್ಕೆ ಸಂತೋಷದಿಂದ ಅಳು ಬಂದು ತನ್ನ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಳು.
  ಸಿಕ್ಕಾಪಟ್ಟೆ ವೈರಲ್ ಆಗಿದೆ ವೀಡಿಯೋ..


  "ವಾಜಿರ್ ನ 7 ವರ್ಷದ ಬಾಲಕಿ ನೆಸ್ತಾಯ್ಹಾ, ಅನಾರೋಗ್ಯಕ್ಕೆ ತುತ್ತಾದ ನಂತರ ಆಕೆಯ ಕಿವಿಯ ತಮಟೆಗಳು ಹಾಳಾಗಿದ್ದವು ಮತ್ತು ತನ್ನ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಳು. ಅವಳು ಇಂದಿನವರೆಗೆ ಕೇಳಲು ಸಾಧ್ಯವಾಗಲಿಲ್ಲ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
  ಈ ವೀಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಸ್ತಾಯ್ಹಾ ಅವರ ಪ್ರತಿಕ್ರಿಯೆಯಿಂದ ನೆಟ್ಟಿಗರು ಭಾವಪರವಶರಾದರು ಮತ್ತು ಕಾಮೆಂಟ್ಸ್ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು.


  "ನನ್ನ ಹೃದಯ ತುಂಬಿ ಬಂತು.. ನನ್ನ ಕಣ್ಣಲ್ಲಿ ನೀರು ತರಿಸಿತು. ಅದ್ಭುತ ಕೆಲಸಗಳನ್ನು ಮಾಡಿದ್ದಕ್ಕಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.

  Published by:Gowtham K
  First published: