Peanut : ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು

Benefits of peanut :ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಕಪ್ಪು ದ್ರಾಕ್ಷಿ ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿಯಾಕ್ಸಿಡಂಟ್ ಕಡಲೆ ಬೀಜದಲ್ಲೂ ದೊರೆಯುತ್ತೆ. ಸೇಬು, ಕ್ಯಾರೆಟ್ ಮತ್ತು ಬೀಟ್‌ರೂಟ್‌ಗಿಂತ ಕಡಲೆ ಕಾಯಿಯಿಂದಲೇ ಹೆಚ್ಚಿನ ಉಪಯೋಗ ಪಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಡವರ ಬಾದಾಮಿ ಕಡಲೆ ಕಾಯಿಯನ್ನು(Peanut) ಒಮ್ಮೆ ತಿನ್ನಹೊರಟರೆ ಕೈಗೂ ಬಾಯಿಗೂ ನಡುವಣ ಜಗಳಕ್ಕೆ ಅಂತ್ಯವೇ ಇಲ್ಲ. ಎದುರಿನಲ್ಲಿಟ್ಟ ಕಡ್ಲೆಕಾಯಿ ಮುಗಿಯುವ ತನಕ ಯಾವುದಕ್ಕೂ ಬಿಡುವಿಲ್ಲ. ಶೇಂಗಾದ ಆ ರುಚಿ ನಾಲಗೆಯಲ್ಲಿ(Tongue) ನಲಿಯುವಾಗ ಜಗತ್ತೇ ಮುಳುಗಿಹೋದರೂ ಗಮನಕ್ಕೆ ಬಾರದು. ಕಡಲೇಕಾಯಿಯ ಮಾಯೆಯೇ ಅಂಥದ್ದು. ಕಡಲೆ ಕಾಯಿಯನ್ನು ಹೇಗೆ ತಿಂದರೂ ರುಚಿಯೇ(Taste). ಹಸಿಯಾಗಿ, ಬೇಯಿಸಿ, ಹುರಿದು, ಹೇಗೆ ತಿಂದರೂ ಈ ಬಡವರ ಬಾದಾಮಿ ಬಾಯಿಗೆ ರುಚಿ ನೀಡುವುದರಲ್ಲಿ ಸಂದೇಹವಿಲ್ಲ... ಇಂತಹ ಕಡಲೆಕಾಯಿ ಶ್ರೀಮಂತರಿಂದ(Rich) ಹಿಡಿದು ಬಡವರವರೆಗೂ(Poor) ಅಚ್ಚುಮೆಚ್ಚು.

  ಸಂಜೆಯಾಗಲಿ ರಾತ್ರಿಯಾಗಲಿ ಯಾವ ವೇಳೆಗೂ ಕಡಲೆಕಾಯಿ ಸಿಕ್ರೆ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.. ಹೀಗೆ ಬಾಯಿ ಚಪ್ಪರಿಸಿಕೊಂಡು ತಿನ್ನುವವರಿಗೆ ಕಡಲೆ ಕಾಯಿಯಲ್ಲಿ ಎಷ್ಟೆಲ್ಲಾ ಆರೋಗ್ಯಕಾರಿ ಅದ್ಭುತ ಪ್ರಯೋಜನಗಳಿವೆ ಎಂಬುದು ಗೊತ್ತೇ ಇರುವುದಿಲ್ಲ.. ಒಂದು ವೇಳೆ ಕಡಲೆಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನವಿದೆ ಎಂದು ತಿಳಿದುಬಂದರೆ ಖಂಡಿತ ಅವರು ಇನ್ನೆಂದು ಕಡಲೆಕಾಯಿ ಸೇವನೆ ನಿಲ್ಲಿಸುವುದಿಲ್ಲ.. ಹಾಗಿದ್ರೆ ಕಡಲೆಕಾಯಿ ಇಂದ ಅಂತ ಯಾವ ಆರೋಗ್ಯಕಾರಿ ಪ್ರಯೋಜನ ಇದೆ ಎನ್ನುವ ಮಾಹಿತಿ ಇಲ್ಲಿದೆ..

  * ಕಡಲೆಕಾಯಿಯಲ್ಲಿದೆ ಹೃದಯದ ಆರೋಗ್ಯ

  ಡ್ರೈಫ್ರೂಟ್ಸ್ ಗಳಂತೆ ಕಡಲೇಕಾಯಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು..ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿನ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.. ಹಾಗೂ ಸಣ್ಣ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ಸಹ ಕಡಲೇಕಾಯಿ ಸೇವನೆ ತಡೆಯುತ್ತದೆ ಮತ್ತು ಹೃದಯಾಘಾತ ಆಗುವುದರಿಂದ ರೂಪಿಸುತ್ತದೆ..

  ಇದನ್ನೂ ಓದಿ :ಬಾದಾಮಿ, ಗೋಡಂಬಿಯಂತಹ ನಟ್ಸ್​ಗಳನ್ನು ಹೆಚ್ಚು ತಿಂದ್ರೆ ಅಪಾಯ ಗ್ಯಾರೆಂಟಿ

  * ತೂಕ ನಷ್ಟಕ್ಕೆ ಸಹಕಾರಿ

  ಪ್ರತಿ ನಿತ್ಯ ಬೆಳಗಾದರೆ ಸಾಕು ದಪ್ಪಗಿರುವವರಿಗೆ ಹೇಗೆ ತೂಕ ಇಳಿಸುವುದು ಎನ್ನುವ ಚಿಂತೆ.. ಇದಕ್ಕಾಗಿ ಇವರು ಮಾಡುವ ಪ್ರಯತ್ನವಿಲ್ಲ.. ತಿನ್ನದ ಆಹಾರವಿಲ್ಲ.. ತೂಕ ಇಳಿಕೆಗೆ ಪ್ರಯತ್ನಪಡುತ್ತಿರುವವರು ಬಡವರ ಬಾದಾಮಿ ಎನಿಸಿಕೊಂಡಿರುವ ಕಡಲೆ ಕಾಯಿ ತಿನ್ನುವುದರಿಂದ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು..

  * ಜೀವಿತಾವಧಿ ಹೆಚ್ಚಳ

  ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮರಣದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಿದೆ.. ಅನಾರೋಗ್ಯದಿಂದ ಅಕಾಲಿಕವಾಗಿ ಮರಣ ಹೊಂದುವುದನ್ನು ತಪ್ಪಿಸಿ ನಮ್ಮ ದೇಹವನ್ನು ಆರೋಗ್ಯದಿಂದ ಇಟ್ಟುಕೊಳ್ಳಬೇಕು ಎಂದರೆ ನಿಯಮಿತವಾಗಿ ಕಡಲೇಕಾಯಿ ಸೇವನೆ ಮಾಡಲೇಬೇಕು.. ಹೌದು ನೆಲಗಡಲೆ ಸೇವನೆ ಮಾಡುವುದರಿಂದ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಸಂಶೋಧನೆ ಹೇಳಿದೆ..

  * ಟೈಪ್ -2 ಮಧುಮೇಹ ಕಡಿಮೆ ಮಾಡುತ್ತದೆ

  ಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಹೊಂದಿರುವ ಆಹಾರ ಆಗಿದೆ.. ಹೀಗಾಗಿ ಕಡಲೇಕಾಯಿ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುವುದಿಲ್ಲ.. ಅದರಲ್ಲೂ ಮಹಿಳೆಯರಲ್ಲಿ ಕಂಡುಬರುವ ಟೈಪ್ -2 ಮಧುಮೇಹ ನಿಯಂತ್ರಣ ಮಾಡಲು ಕಡಲೇಕಾಯಿ ಸಹಾಯಕಾರಿಯಾಗಿದೆ..

  *ಉರಿಯೂತ ಕಡಿಮೆ ಮಾಡುತ್ತದೆ

  ಅತ್ಯಧಿಕ ನಾರಿನಾಂಶವನ್ನು ಒಳಗೊಂಡ ಕಾರಣ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಊರಿಯೂತವನ್ನು ನಿಯಂತ್ರಣದಲ್ಲಿಡುತ್ತದೆ.

  *ಜೀವ ಕಣಗಳ ರಕ್ಷಣೆ

  ಜೀವ ಕಣಗಳು ತೊಂದರೆಗೀಡಾಗಿದ್ದರೆ ಕಡಲೆಕಾಯಿ ಸೇವನೆಯಿಂದ ಅದಕ್ಕೆ ಚೈತನ್ಯ ನೀಡಬಹುದು. ಇದರಲ್ಲಿನ ನಿಯಾಸಿನ್ ಅಂಶ ವ್ಯಕ್ತಿ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಮರೆವು ರೋಗ ಮತ್ತು ಇನ್ನಿತರ ವಯಸ್ಸಿನ ಸಂಬಂಧಿ ರೋಗಗಳನ್ನು ದೂರವಿರಿಸಲು ಸಹಕಾರಿ

  ಇದನ್ನೂ ಓದಿ :ತೊಗರಿ ನಂತರ ಕಡಲೆಯ ಸರದಿ; ಕಲಬುರ್ಗಿಯ 64 ಕಡೆ ಖರೀದಿ ಕೇಂದ್ರ ಸ್ಥಾಪನೆ

  *ಕ್ಯಾನ್ಸರ್ ತಡೆಯುತ್ತದೆ

  ಕಡಲೆಕಾಯಿ ಬೆಣ್ಣೆ / ಪೀನಟ್ ಬಟರ್ ತಿನ್ನುವುದು ಕೆಲವು ವಿಧದ ಹೊಟ್ಟೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ವಯಸ್ಸಾದವರಲ್ಲಿ ಗ್ಯಾಸ್ಟ್ರಿಕ್ ಅಲ್ಲದ ಅಡೆನೊಕಾರ್ಸಿನೋಮ ಎನ್ನುವ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

  *ಕ್ಯಾನ್ಸರ್ ತಡೆಯುತ್ತದೆ

  ಕಡಲೆಕಾಯಿ ಬೆಣ್ಣೆ / ಪೀನಟ್ ಬಟರ್ ತಿನ್ನುವುದು ಕೆಲವು ವಿಧದ ಹೊಟ್ಟೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ವಯಸ್ಸಾದವರಲ್ಲಿ ಗ್ಯಾಸ್ಟ್ರಿಕ್ ಅಲ್ಲದ ಅಡೆನೊಕಾರ್ಸಿನೋಮ ಎನ್ನುವ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

  *ಲಕ್ವ ಸಮಸ್ಯೆ

  ಕಡಲೆ ಕಾಯಿಯಲ್ಲಿನ ಬಯೋಫ್ಲೇವನಾಯ್ಡ್ ಅಂಶ ಮೆದುಳಿನಲ್ಲಿ ರಕ್ತಸಂಚಲನವನ್ನು ಶೇಕಡಾ 30 ರಷ್ಟು ಹೆಚ್ಚಾಗಿಸಿ ಲಕ್ವ ಹೊಡೆಯುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆಹಾರದಲ್ಲಿ ಸ್ವಲ್ಪವೇ ಕಡಲೆ ಕಾಯಿ ಅಥವಾ ಬೀಜ ಬಳಸಿದರೂ ಸರಿ ದೇಹದಲ್ಲಿ ತುಂಬಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲನ್ನು ಶೇಕಡಾ 14 ರಷ್ಟು ಕರಗಿಸುತ್ತದೆ.
  Published by:ranjumbkgowda1 ranjumbkgowda1
  First published: