ನಾವೆಲ್ಲರೂ ಮಳೆಗಾಲವನ್ನು ಇಷ್ಟಪಡುತ್ತೇವೆ,ಅದರಲ್ಲೂ ತಂಪಾದ ಗಾಳಿಯೆಂದರೆ ಎಲ್ಲಾರಿಗೂ ಅಚ್ಚು ಮೆಚ್ಚು. ಅದರೆ ಋತುಮಾನವು ಬದಲಾದಂತೆ, ಜ್ವರ, ಕೆಮ್ಮು, ಶೀತ ಮತ್ತು ಜ್ವರ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತವೆ. ನಮ್ಮ ದೇಹವನ್ನು ಆರೋಗ್ಯವಾಗಿಡಲು ನಾವು ಎಷ್ಟೇ ಪ್ರಯತ್ನಿಸಿದರೂ,ಋತುಮಾನವು ಬದಲಾದ ಸಮಯದಲ್ಲಿ ನಾವು ಜ್ವರಕ್ಕೆ ತುತ್ತಹಾಗುತ್ತೇವೆ .
ಈ ವೇಳೆಯಲ್ಲಿ ಜನರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಪ್ರಾಯೋಗಿಸುತ್ತಾರೆ.ಇಂದಿನ ಜಗತ್ತಿನಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಆರೋಗ್ಯ ಪ್ರಜ್ಞೆ ಹೊಂದಿದ್ದಾರೆ, ಮತ್ತು ನಮ್ಮ ದೈನಂದಿನ ಕೆಲಸದ ಮಧ್ಯ ಅನೇಕ ಆರೋಗ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದೇವೆ. ನಮ್ಮ ಆರೋಗ್ಯ ಮತ್ತು ಸುತ್ತಮುತ್ತಲಿನ ಪರಿಸರದ ಬಗ್ಗೆ ನಾವು ಹೆಚ್ಚು ಹೆಚ್ಚು ಗಮನ ಹರಿಸುತ್ತಿದ್ದೇವೆ.ಅಲ್ಲವೇ, ಬನ್ನಿ ನಾವು ನಿಮಗಾಗಿ ಒಂದು ಆರೋಗ್ಯ ಪದ್ಧತಿಯ ಕುರಿತು ಮಾಹಿತಿ ನೀಡಲು ಬಯುಸುತ್ತೇವೆ ಅದು ಏನೆಂದು ತಿಳಿಯೋಣ. ಅದುವೇ ಕೆಮ್ಮಿನ ಸಿರಪ್
ಮನೆಯಲ್ಲಿ ತಯಾರಿಸಬಹುದಾದ ಕೆಮ್ಮು ಸಿರಪ್ ಭಾರತೀಯ ಕುಟುಂಬಗಳಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ, ಜೊತೆಗೆ ವಿವಿಧ ರೋಗಲಕ್ಷಣಗಳಿಗೆ ಪರಿಹಾರವಾಗಿದೆ. ಈ ಕೆಮ್ಮಿನ ಸಿರಪ್ ಯಾವುದೇ ರೀತಿಯ ಜ್ವರವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ಆದರೆ ಅವು ನಿಮ್ಮ ಗಂಟಲ ಕೆರೆತ, ನೋವನ್ನು ಶಮನಗೊಳಿಸಲು ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. “ಶುಂಠಿ, ಕಾಳಿ ಮಿರ್ಚಿ, ಅರಿಶಿನ ಮತ್ತು ಇತರ ಪದಾರ್ಥಗಳಿಂದ ಮಾಡಿದ ಮನೆಮದ್ದುಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ನಮ್ಮ ದೇಹವನ್ನು ಸದೃಡವಾಗಿಸಲು ಸಹಾಯ ಮಾಡುತ್ತದೆ. ಗಂಟಲು ಮತ್ತು ಮೂಗಿನ ಸಮಸ್ಯೆಯನ್ನು ನಿವಾರಿಸಲು ಹಾಗೂ ಉತ್ತಮವಾಗಿ ಉಸಿರಾಡಲು ನಮಗೆ ಸಹಾಯ ಮಾಡುತ್ತವೆ" ಎಂದು ಜೋಧಪುರದ ಎಸ್ ಆರೋಗ್ಯ ಕೇಂದ್ರದ ಡಾ. ಬಲ್ವಂತ್ ಮರ್ಡಿಯಾ ಹೇಳಿದ್ದಾರೆ.
ನೀವು ಜೇನುತುಪ್ಪ ಹಾಗೂ ನಿಂಬೆಯನ್ನು ಬಳಸಿ ಕೆಮ್ಮುಸಿರಪ್ ಅನ್ನು ತಯರಿಸಬಹುದು. ಜೇನುತುಪ್ಪವು ಪ್ರಬಲವಾದ ಆಂಟಿ-ಆಕ್ಸಿಡೆಂಟ್ ಎಂದು ತಿಳಿದುಬಂದಿದೆ, ಇದು ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ, ಗಂಟಲ ನೋವನ್ನು ಶಮನಗೊಳಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಸುಧಾರಿಸುತ್ತದೆ. ಮೂಗು ಕಟ್ಟಿಕೊಂಡಿರುವುದನ್ನು ತೆರೆಯಲು ಶುಂಠಿಯು ಹೆಚ್ಚು ಪ್ರಸಿದ್ಧವಾಗಿದೆ, ಹಾಗೂ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊನೆಯದಾಗಿ, ನಿಂಬೆ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ, ಇದು ನೆಗಡಿ ಅಥವಾ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮನೆಯಲ್ಲಿ ತಯಾರಿಸಬಹುದಾದ ಕೆಮ್ಮು ಸಿರಪ್ ಪಾಕ ವಿಧಾನ
ಮನೆಯಲ್ಲಿ ಕೆಮ್ಮು ಸಿರಪ್ ಅನ್ನು ತಯಾರಿಸಲು, ನಿಮಗೆ ನೀರು, ಜೇನುತುಪ್ಪ, ಸಕ್ಕರೆ, ನಿಂಬೆ ಮತ್ತು ಶುಂಠಿ ಬೇಕಾಗುತ್ತದೆ. ಮೊದಲು, ಬಾಣಲೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಸೇರಿಸಿ ಕುದಿಯಲು ಬಿಡಿ. ನಂತರ ಸ್ವಲ್ಪ ಶುಂಠಿಯನ್ನು ಬೆರೆಸಿ ನಂತರ ಆ ಮಿಶ್ರಣಕ್ಕೆ ನಿಂಬೆ ರಸ ಸೇರಿಸಿ.ನಂತರ ಚೆನ್ನಾಗಿ ಕುದಿಸಿ. ದಪ್ಪವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನಂತರ ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ.ನಂತರ ಗಟ್ಟಿಯಾದಾಗ ಹನಿಗಳನ್ನು ಜಾರ್ನಲ್ಲಿ ಸಂಗ್ರಹಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ