Weight Loss: ನಿಂಬೆರಸ ಮತ್ತು ಜೇನುತುಪ್ಪ ಸೇವಿಸಿದರೆ ನಿಜವಾಗ್ಲೂ ತೆಳ್ಳಗಾಗ್ತಾರಾ ? ತಜ್ಞರು ಉತ್ತರಿಸಿದ್ದಾರೆ...

Weight Loss Tips: ಅನೇಕರು ಪ್ರತಿದಿನ ಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದರಿಂದ ದೇಹತೂಕ ಇಳಿಯುತ್ತದೆ ಎನ್ನುವುದು ಹಲವರ ನಂಬಿಕೆ. ನಿಜವಾಗಲೂ ನಿಂಬೆರಸ ಮತ್ತು ಜೇನುತುಪ್ಪ ದೇಹತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆಯಾ? ತಜ್ಞರು ವಿವರಿಸಿದ್ದಾರೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Weight Loss Tips: ಆರೋಗ್ಯ ಮತ್ತು ವೆಲ್‍ನೆಸ್ ಜಗತ್ತಿನಲ್ಲೂ, ನಿಂಬೆ ಮತ್ತು ಜೇನುತುಪ್ಪ ಸೇವಿಸಿದ ನೀರನ್ನು ಸೇವಿಸುವುದರ ಕುರಿತು ವಿಶೇಷ ಒತ್ತು ನೀಡಲಾಗುತ್ತದೆ. ಅದು ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕುವುದು ಮಾತ್ರವಲ್ಲ, ಕೊಬ್ಬನ್ನು ನಿವಾರಿಸುತ್ತದೆ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಿಂಬೆ ಮತ್ತು ಜೇನುತುಪ್ಪ ಹಾಕಿದ ನೀರನ್ನು ಸೇವಿಸುವುದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಜೇನು ತುಪ್ಪ ಮತ್ತು ನಿಂಬೆ ಸೇರಿಸಿದ ನೀರು ಕುಡಿಯಲು ರುಚಿಯಾಗಿರುತ್ತದೆ ಮಾತ್ರವಲ್ಲ, ಆಹ್ಲಾದಕರವಾಗಿರುತ್ತದೆ ಕೂಡ.


ಎರಡು ನೈಸರ್ಗಿಕ ಮತ್ತು ಶಕ್ತಿಶಾಲಿ ಪದಾರ್ಥಗಳು
ಜೇನು ತುಪ್ಪವನ್ನು ಸಕ್ಕರೆಗೆ ಪರ್ಯಾಯವಾಗಿ ಮತ್ತು ಕೆಲವು ಚಿಕಿತ್ಸೆಗಳಲ್ಲಿ ಬಳಸುತ್ತಾರೆ. ಲಿಂಬೆ ಹಣ್ಣಿನಲ್ಲಿ ವಿಟಮಿಮ್ ಸಿ ಹೇರಳವಾಗಿದ್ದು, ಅದರ ರಸ ಮಾತ್ರ ಸಿಪ್ಪೆಯನ್ನು ಕೂಡ ಬಳಸುತ್ತಾರೆ. ಜೇನು ಮತ್ತು ಲಿಂಬೆ ರಸವನ್ನು ಜೊತೆಯಾಗಿ ಬಳಸಿದರೆ, ಜೀರ್ಣದ ಸಮಸ್ಯೆಗಳು, ಮೊಡವೆ ಸಮಸ್ಯೆಗಳು ಮತ್ತು ಬೊಜ್ಜಿನ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂಬುದು ಸಾಮಾನ್ಯ ನಂಬಿಕೆ.


ಜೇನು ತುಪ್ಪದ ಪ್ರಯೋಜನಗಳು
ಜೇನು ತುಪ್ಪ ಪ್ರಪಂಚದ ಅತ್ಯಂತ ಹಳೆಯ ಆಹಾರ ಪದಾರ್ಥಗಳಲ್ಲಿ ಒಂದು. ಶಿಲಾಯುಗದ ಕಾಲದಿಂದಲೂ, ಸಾವಿರಾರು ವರ್ಷಗಳಿಂದ ಅದನ್ನು ಆಹಾರ ಮತ್ತು ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ.ಸಂಸ್ಕರಿತ ಜೇನು ತುಪ್ಪಕ್ಕಿಂತ, ಫಿಲ್ಟರ್ ಮಾಡದೇ ಇರುವ ,ಕಚ್ಚಾ ಜೇನುತುಪ್ಪದಲ್ಲಿ ಆರೋಗ್ಯಕರ ಸಂಯುಕ್ತಗಳು ಹೆಚ್ಚಾಗಿರುತ್ತವೆ.


ಇದನ್ನೂ ಓದಿ: Lockdown Unlock: ಲಾಕ್​ಡೌನ್ ಮುಗಿದ ನಂತರ ಹೀಗೆ ಮಾಡಿದ್ರೆ ಯಾವ ಆರೋಗ್ಯ ಸಮಸ್ಯೆಗೂ ನೀವು ಹೆದರಬೇಕಾಗಿಲ್ಲ !

ಇತಿಹಾಸ ಕಾಲದಿಂದಲೂ ಜೇನು ತುಪ್ಪವನ್ನು ಸುಟ್ಟ ಮತ್ತು ಇತರ ಗಾಯಗಳ ಚಿಕಿತ್ಸೆಗೆ ಬಳಸುತ್ತಾರೆ. ಪ್ರಾಚೀನ ಗ್ರೀಕರು, ಈಜಿಪ್ಟಿಯನ್ನರು ಮತ್ತು ರೋಮನ್ನರು ಜೇನು ತುಪ್ಪವನ್ನು ಚರ್ಮಕ್ಕೆ ಆರೈಕೆ ಮಾಡಲು ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಗಾಯಗಳ ಗುಣಪಡಿಸುವ ವಿಷಯದಲ್ಲಿ ಜೇನು ತುಪ್ಪದ ಪ್ರಯೋಜನಗಳು ಅನೇಕ ಅಧ್ಯಯನಗಳಿಂದಲೂ ದೃಢಪಟ್ಟಿವೆ. ಅದರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಮತ್ತು ಅ್ಯಂಟಿ ಇನ್‍ಫ್ಲಮೇಟರಿ ಸಂಯುಕ್ತಗಳೇ ಅದಕ್ಕೆ ಕಾರಣ. ಜೇನುತುಪ್ಪ 60 ವಿವಿಧ ಪ್ರಭೇಧದ ಬ್ಯಾಕ್ಟೀರಿಯಾಗಳಿಂದ ಅದು ನಮ್ಮನ್ನು ರಕ್ಷಿಸಬಲ್ಲದು ಎಂದು ಸಂಶೋಧನೆಗಳು ತಿಳಿಸಿವೆ.


ನಮ್ಮಲ್ಲಿ, ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುವ ಶೀತ , ಕಫ ಸಂಬಂಧಿ ಸಮಸ್ಯೆಗಳಿಗೆ ಜೇನು ತುಪ್ಪ ಅತ್ಯಂತ ಪ್ರಯೋಜನಕಾರಿ. ಮಕ್ಕಳಿಗೆ ಕಫದ ಸಮಸ್ಯೆ ಉಂಟಾದಾಗ ಜೇನು ತುಪ್ಪ ಕೊಟ್ಟರೆ, ಅದು ಕಡಿಮೆಯಾಗುತ್ತದೆ ಮಾತ್ರವಲ್ಲ, ಅವರು ಸುಖವಾಗಿ ನಿದ್ರಿಸುವಂತೆ ಮಾಡುತ್ತದೆ ಎಂಬುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಚಿಕ್ಕ ಮಕ್ಕಳು ಮಾತ್ರವಲ್ಲ ದೊಡ್ಡ ಮಕ್ಕಳ ಕಫದ ಸಮಸ್ಯೆಗೂ ಜೇನು ತುಪ್ಪ ಅತ್ಯಂತ ಲಾಭದಾಯಕ. ಆದರೆ ಒಂದು ವರ್ಷದ ಕೆಳಗಿನ ಮಕ್ಕಳಿಗೆ ಯಾವತ್ತೂ ಜೇನು ತುಪ್ಪ ತಿನ್ನಿಸಬಾರದು. ಅದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.


ಲಿಂಬೆಯ ಪ್ರಯೋಜನಗಳು
ಲಿಂಬೆ ತನ್ನ ಒಗರು ರಸ ಮತ್ತು ರುಚಿಕರವಾದ ಸಿಪ್ಪೆಗೆ ಹೆಸರುವಾಸಿ. ಲಿಂಬೆಯಲ್ಲಿ ಹೇರಳ ವಿಟಮಿನ್ ಸಿ ಮಾತ್ರವಲ್ಲ, ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಬಿ ಮತ್ತು ಪೊಟಾಶಿಯಂ ಕೂಡ ಇದೆ. ಲಿಂಬೆಯಲ್ಲಿ ಆರೋಗ್ಯಕ್ಕೆ ಲಾಭದಾಯಕವಾದ ಸಿಟ್ರಿಕ್ ಆ್ಯಸಿಡ್ ಮತ್ತು ಪ್ಲೇವನಾಯಿಡ್‍ಗಳು ಕೂಡ ಇವೆ.


ಲಿಂಬೆಯಲ್ಲಿರುವ ಸಿಟ್ರಿಕ್ ಅ್ಯಸಿಡ್ ಕಿಡ್ನಿಯ ಹರಳುಗಳಿಂದ ರಕ್ಷಿಸಬಲ್ಲದು. ಹೆಚ್ಚು ಲಿಂಬೆ ಪಾನೀಯ ಕುಡಿಯುವುದರಿಂದ ಅದು ಸಾಧ್ಯ ಎನ್ನಲಾಗುತ್ತದೆಯಾದರೂ, ಈ ಕುರಿತು ಇನ್ನಷ್ಟು ಅಧ್ಯಯನದ ಅಗತ್ಯವಿದೆ. ಲಿಂಬೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಲಿಂಬೆಯ ಸೇವನೆಯಿಂದ ಹೃದಯದ ಕಾಯಿಲೆ ಮತ್ತು ಹೃದಯಾಘಾತದ ಸಾಧ್ಯತೆಗಳು ಕಡಿಮೆ ಇರುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಲಿಂಬೆ ರಸ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ. ಲಿಂಬೆ ಹಣ್ಣಿನಲ್ಲಿ ಕಂಡು ಬರುವ ಲಿಮೊನಿನ್ ಎಂಬ ಸಂಯುಕ್ತವು, ಟ್ರೈಗ್ಲಿಸರೈಡ್ಸ್ ಮತ್ತು ಕೆಟ್ಟ ಎಲ್‍ಡಿಎಲ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಲಿಂಬೆ, ಅನ್ನನಾಳದ ಕ್ಯಾನ್ಸರ್, ಮಧುಮೇಹ ಮತ್ತು ಚರ್ಮದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ತೂಕ ಇಳಿಸಲು ಸಹಕಾರಿ
ಜೇನು ತುಪ್ಪ ಮತ್ತು ಲಿಂಬೆ ರಸ ಹಾಕಿದ ನೀರಿನ ಸೇವನೆಯಿಂದ ತೂಕ ಇಳಿಯುತ್ತದೆ. ಅದು ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಊಟಕ್ಕೆ ಮುನ್ನ ಅದನ್ನು ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ, ಮತ್ತು ನೀವು ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದನ್ನು ಅದು ತಡೆಯುತ್ತದೆ.


ಅನಾರೋಗ್ಯದ ಸಂದರ್ಭದಲ್ಲಿ ಲಾಭದಾಯಕ
ನಿಮಗೆ ಅನಾರೋಗ್ಯವಾಗಿದ್ದಾಗ , ಲಿಂಬೆ –ಜೇನಿನ ನೀರು ಕುಡಿಯುವುದರಿಂದ ದೇಹಕ್ಕೆ ಆರಾಮವೆನಿಸಬಹುದು. ವಿಟಮಿನ್ ಸಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದು ನಿಮ್ಮ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡಲು ಉತ್ತೇಜನ ನೀಡುತ್ತದೆ. ಶೀತ, ಗಂಟಲು ಕೆರೆತ, ಕಫ ಇತ್ಯಾದಿಗಳಿಗೆ ಲಿಂಬೆ-ಜೇನು ನೀರು ಲಾಭದಾಯಕ.
ಲಿಂಬೆ-ಜೇನು ನೀರು ಕುಡಿಯುವುದರಿಂದ, ಅತಿಸಾರ, ಮಲಬದ್ಧತೆ ಮುಂತಾದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಲಿಂಬೆ-ಜೇನು ನೀರು, ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ, ಕೊಬ್ಬು ಇಳಿಸುತ್ತದೆ ಮತ್ತು ಚರ್ಮದ ಕಪ್ಪು ಕಲೆಗಳನ್ನು ನಿವಾರಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.ಲಿಂಬೆ-ಜೇನು ತುಪ್ಪದ ನೀರನ್ನು ಸುಲಭವಾಗಿ ತಯಾರಿಸಬಹದು ಮತ್ತು ದಿನದ ಯಾವ ವೇಳೆಯಲ್ಲು ಕೂಡ ಸೇವಿಸಬಹುದು.

Published by:Soumya KN
First published: