Security Guard: ಈ ಕುರ್ಚಿ ಮೇಲೆ ಕೂತಿರುವ ಸೆಕ್ಯೂರಿಟಿ ಗಾರ್ಡ್​ನ ನೋಡಿ! ನೀವು ಭಯ ಬೀಳೋದು ಗ್ಯಾರೆಂಟಿ

ಕೆಲವೊಮ್ಮೆ ಅನೇಕರು ಮನೆಯಲ್ಲಿ ಒಬ್ಬರೇ ಇದ್ದಾಗ ರಾತ್ರಿ ಸಮಯದ ಕತ್ತಲೆಯಲ್ಲಿ ಬಿದ್ದಂತಹ ಒಂದು ಹಗ್ಗವನ್ನು ನೋಡಿ ಹಾವು ಎಂದು ಅಂದು ಕೊಳ್ಳುವುದು ಮತ್ತು ಕಿಟಕಿ ಮತ್ತು ಬಾಗಿಲುಗಳು ಗಾಳಿಗೆ ಸದ್ದು ಮಾಡಿದರೆ ಅಲ್ಲಿ ಯಾರೋ ಇದ್ದಾರೆ ಎಂದು ಕೊಳ್ಳುವುದು ಮತ್ತು ಜೋರಾಗಿ ಬಿರುಗಾಳಿ ಬೀಸಿದರೆ ಅದರ ಭಯಾನಕ ಶಬ್ದ ನಮಗೆ ಸಿಕ್ಕಾಪಟ್ಟೆ ಭಯ ತರಿಸುವುದನ್ನು ನಾವು ನೋಡಿರುತ್ತೇವೆ.

  • Share this:
ಕೆಲವೊಮ್ಮೆ ಅನೇಕರು ಮನೆಯಲ್ಲಿ ಒಬ್ಬರೇ ಇದ್ದಾಗ ರಾತ್ರಿ ಸಮಯದ ಕತ್ತಲೆಯಲ್ಲಿ ಬಿದ್ದಂತಹ ಒಂದು ಹಗ್ಗವನ್ನು ನೋಡಿ ಹಾವು (Snake) ಎಂದು ಅಂದು ಕೊಳ್ಳುವುದು ಮತ್ತು ಕಿಟಕಿ (Window) ಮತ್ತು ಬಾಗಿಲುಗಳು (Door) ಗಾಳಿಗೆ ಸದ್ದು ಮಾಡಿದರೆ ಅಲ್ಲಿ ಯಾರೋ ಇದ್ದಾರೆ ಎಂದು ಕೊಳ್ಳುವುದು ಮತ್ತು ಜೋರಾಗಿ ಬಿರುಗಾಳಿ (Storm) ಬೀಸಿದರೆ ಅದರ ಭಯಾನಕ ಶಬ್ದ ನಮಗೆ ಸಿಕ್ಕಾಪಟ್ಟೆ ಭಯ ತರಿಸುವುದನ್ನು ನಾವು ನೋಡಿರುತ್ತೇವೆ. ‘ಅಲ್ಲಿ ಯಾರೋ ಇದ್ದಾರೆ’ ಮತ್ತು ದೂರದಿಂದ ನಮ್ಮ ಕಣ್ಣಿಗೆ ಕಾಣಿಸುವ ಕೆಲವು ವಸ್ತುಗಳು ಬೇರೆ ರೂಪದಲ್ಲಿ ನಮಗೆ ಕಾಣಬಹುದು. ಇದನ್ನು ನಾವು ಭಯದಿಂದ ಕೂಡಿದಂತಹ ಭ್ರಮೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಾಗೆಯೇ ಕತ್ತಲಲ್ಲಿ ಗಾಡಿಯ ಮೇಲೆ ಹೋಗಬೇಕಾದರೆ ಎಲ್ಲೋ ಯಾರೋ ಒಬ್ಬರು ನಿಂತ ಹಾಗೆ ಅನ್ನಿಸುವುದು ಮತ್ತು ಅದು ದೆವ್ವ ಇರಬಹುದಾ ಅಂತ ಅನೇಕ ಸಾರಿ ನಮಗೆ ಅನ್ನಿಸಿರುತ್ತದೆ. ಹತ್ತಿರ ಹೋಗಿ ನೋಡಿದರೆ ಆ ಕತ್ತಲೆಯಲ್ಲಿ ಏನು ಇರುವುದಿಲ್ಲ, ಅದು ಕೇವಲ ನಮ್ಮ ಭ್ರಮೆ ಆಗಿರುತ್ತದೆ. ಎಷ್ಟೋ ಬಾರಿ ನಮಗೆ ಒಂದು ಘಟನೆ ಸಂಪೂರ್ಣವಾಗಿ ಬೇರೆ ತರಹನೆ ಕಾಣುತ್ತದೆ, ಅದೇನಿರಬಹುದು ಎಂದು ಅದರ ಹತ್ತಿರ ಹೋಗಿ ನೋಡಿದರೆ ಅದರ ಅಸಲಿಯತ್ತು ಅರ್ಥವಾಗುತ್ತದೆ. ಈ ರೀತಿಯ ಭ್ರಮೆ ಹುಟ್ಟಿಸುವ ಅನೇಕ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತೇವೆ.

ಕುರ್ಚಿಯ ಮೇಲೆ ಕುಳಿತಿರುವ ಸೆಕ್ಯುರಿಟಿ ಗಾರ್ಡ್ ಹೇಗಿದ್ದಾನೆ ಗೊತ್ತಾ?
ಇಂತಹದೇ ಒಂದು ವಿಚಿತ್ರ ಎಂದೆನಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡುತ್ತಿದೆ. ಅದರಲ್ಲಿ ಒಬ್ಬ ಸೆಕ್ಯೂರಿಟಿ ಗಾರ್ಡ್ ಒಂದು ಮುಚ್ಚಿದ ಅಂಗಡಿಯ ಮುಂದೆ ಕುರ್ಚಿ ಹಾಕಿಕೊಂಡು ಅದರ ಮೇಲೆ ಆರಾಮಾಗಿ ಕುಳಿತು ಕೊಂಡಿದ್ದಾನೆ. ಆದರೆ ಕುರ್ಚಿಯಲ್ಲಿರುವ ಸೆಕ್ಯೂರಿಟಿ ಗಾರ್ಡ್ ದೇಹ ಇದೆ, ಆದರೆ ತಲೆ ಭಾಗವೇ ಇಲ್ಲ! ಹಾಗೆಯೇ ಕುರ್ಚಿ ಮೇಲೆ ಕುಳಿತ ಮನುಷ್ಯನ ತಲೆ ಕಣ್ಮರೆಯಾಗಿದೆ ಎಂದು ಹೇಳಬಹುದು.

‘ಹೆಡ್‌ಲೆಸ್ ಸೆಕ್ಯೂರಿಟಿ ಗಾರ್ಡ್’
ನೋಡಿದ ತಕ್ಷಣವೇ ಎಂತವರಿಗಾದರೂ ಭಯ ಹುಟ್ಟಿಸುವ ಈ ಫೋಟೋ ಈಗಾಗಲೇ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ಹೆಸರು ‘ಹೆಡ್‌ಲೆಸ್ ಸೆಕ್ಯೂರಿಟಿ ಗಾರ್ಡ್’ ಎಂದರೆ ತಲೆಯ ಭಾಗವಿಲ್ಲದ ಸೆಕ್ಯೂರಿಟಿ ಗಾರ್ಡ್ ಎಂದರ್ಥ.

ಇದನ್ನೂ ಓದಿ:  Netflix ನಲ್ಲಿ ಕೆಲ್ಸ ಬೋರ್ ಅಂತೆ, ಹಾಗಂತ ರಾಜೀನಾಮೆ ಕೊಟ್ಟು ಹೊರಗೆ ಬಂದ್ಬಿಟ್ಟಿದ್ದಾನೆ ಭೂಪ!

ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾದ ಈ ವೈರಲ್ ಫೋಟೋದಲ್ಲಿ ಮುಚ್ಚಿದ ಅಂಗಡಿಯ ಮುಂದೆ ಕುರ್ಚಿಯ ಮೇಲೆ ಕುಳಿತಿರುವ ಸೆಕ್ಯೂರಿಟಿ ಗಾರ್ಡ್ ನೀಲಿ ಬಣ್ಣದ ಅಂಗಿಯನ್ನು ಧರಿಸಿದ್ದು ತನ್ನೆರಡು ಕೈಗಳನ್ನು ಕಟ್ಟಿಕೊಂಡು ಕುಳಿತು ನಿದ್ರೆ ಮಾಡುತ್ತಿರುವುದನ್ನು ನೋಡಬಹುದು. ಆದರೆ ಈತನ ತಲೆ ಎಲ್ಲಿ ಹೋಯಿತು ಎಂಬುದು ಈ ಫೋಟೋ ನೋಡಿದವರಿಗೆ ಕಾಡುವ ಮೊಟ್ಟ ಮೊದಲ ಪ್ರಶ್ನೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನೀವು ಇದನ್ನು ನೋಡಿ ತುಂಬಾನೇ ಗೊಂದಲಕ್ಕೊಳಗಾಗಿದ್ದೀರಿ ಅಲ್ಲವೇ? ಈ ಫೋಟೋದ ಹಿಂದಿನ ರಹಸ್ಯವನ್ನು ಅರ್ಥಮಾಡಿಕೊಳ್ಳಲು ನೆಟ್ಟಿಗರು ತುಂಬಾನೇ ಕಷ್ಟ ಪಟ್ಟಿದ್ದಾರೆ. ನೀವು ಈ ಫೋಟೋವನ್ನು ಜಾಗರೂಕತೆಯಿಂದ ನೋಡಿದರೆ, ಇಡೀ ವಿಷಯವು ವಾಸ್ತವವಾಗಿ ದೃಷ್ಟಿಯ ಭ್ರಮೆ ಎಂದು ನಿಮಗೆ ಅರ್ಥವಾಗುತ್ತದೆ.

20,000 ಕ್ಕೂ ಹೆಚ್ಚು ಫೋಟೋಗೆ ಲೈಕ್ಸ್
ಸೆಕ್ಯೂರಿಟಿ ಗಾರ್ಡ್ ನಿಜವಾಗಿಯೂ ಕುರ್ಚಿಯ ಮೇಲೆ ಕುಳಿತು ನಿದ್ರೆಗೆ ಜಾರಿದ್ದಾನೆ, ಗಾಢವಾದ ನಿದ್ರೆಯಲ್ಲಿ ಆತನ ತಲೆ ಹಿಂದಕ್ಕೆ ವಾಲಿದೆ. ಆಗ ಮುಂಭಾಗದಿಂದ ಈ ಫೋಟೋವನ್ನು ಕ್ಲಿಕ್ಕಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಳ್ಳಲಾಗಿದೆ. ಹಿಂದಕ್ಕೆ ಬಾಗಿದ ತಲೆ ಆ ಫೋಟೋದಲ್ಲಿ ಕಾಣಿಸುತ್ತಿಲ್ಲ ಮತ್ತು ದೂರದಿಂದ ನೋಡಿದರೆ ಆ ಸೆಕ್ಯೂರಿಟಿ ಗಾರ್ಡ್ ಗೆ ತಲೆಯ ಭಾಗ ಇಲ್ಲವಂತೆ ಅನ್ನಿಸುತ್ತಿದೆ.

ಇದನ್ನೂ ಓದಿ:  Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಈಗಾಗಲೇ 20,000 ಕ್ಕೂ ಹೆಚ್ಚು ಜನರು ಈ ಫೋಟೋವನ್ನು ನೆಟ್ ನಲ್ಲಿ ಲೈಕ್ ಮಾಡಿದ್ದಾರೆ. ಯಾರೋ ಹೆದರಿದಂತೆ, ಸೆಕ್ಯೂರಿಟಿ ಗಾರ್ಡ್ ತನ್ನ ತಲೆಯನ್ನು ಮನೆಯಲ್ಲಿ ಬಿಟ್ಟಿದ್ದಾನೆ ಎಂದು ಯಾರೋ ತಮಾಷೆಯಾಗಿ ಬರೆದಿದ್ದಾರೆ.
Published by:Ashwini Prabhu
First published: