Viral News: ಒಂದಲ್ಲ, ಎರಡಲ್ಲ… ಈತ ಬರೋಬ್ಬರಿ 138 ಮಕ್ಕಳಿಗೆ ತಂದೆ! ಎಲ್ಲಿದ್ದಾನೆ ಗೊತ್ತಾ ಈ ಮಹಾ ‘ಪಿತ‘?

ಇವರು ಇದುವರೆಗೂ 138 ಮಕ್ಕಳಿಗೆ ತಂದೆಯಾಗಿದ್ದಾರಂತೆ! ವಿಶೇಷ ಅಂದ್ರೆ ಇವ್ರ ವಯಸ್ಸು ಈಗ 66! ಅಷ್ಟಕ್ಕೂ ಈ ವ್ಯಕ್ತಿ ಎಲ್ಲಿದ್ದಾರೆ? ಅಷ್ಟೊಂದು ಮಕ್ಕಳಿಗೆ ತಂದೆಯಾಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ವೀರ್ಯ ದಾನಿ ಕ್ಲೈವ್ ಜೋನ್ಸ್

ವೀರ್ಯ ದಾನಿ ಕ್ಲೈವ್ ಜೋನ್ಸ್

  • Share this:
ನೀವೆಲ್ಲ 'ವಿಕ್ಕಿ ಡೋನರ್' (Vicky Donor) ಸಿನಿಮಾದ ಬಗ್ಗೆ ಕೇಳೇ ಇರ್ತೀರಿ. ವೀರ್ಯದಾನದ ಬಗ್ಗೆ ಕಥೆ ಇರುವ ಸಿನಿಮಾ ಅದು. ದಾನಿಗಳ ಮೂಲಕ ವೀರ್ಯ (Sperm) ಪಡೆದು ಮಕ್ಕಳಿಲ್ಲದ ದಂಪತಿ ತಂದೆ-ತಾಯಿಗಳಾಗಬಹುದು ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ ಇಂಗ್ಲೆಂಡ್‌ನಲ್ಲಿ (England) 66ರ ಹರೆಯದ ನಿವೃತ್ತ ಶಾಲಾ ಶಿಕ್ಷಕರೊಬ್ಬರು ವೀರ್ಯದಾನದಿಂದಾಗಿಯೇ ಸಖತ್ ವೈರಲ್ ಆಗಿದ್ದಾರೆ. ಅವರ ಹೆಸರು ಕ್ಲೈವ್ ಜೋನ್ಸ್ (Clive Jones) ತನ್ನನ್ನು ವಿಶ್ವದ ಅತ್ಯಂತ ಸಮೃದ್ಧ ವೀರ್ಯ ದಾನಿ (Sperm Donor) ಎಂಬುದಾಗಿ ಕರೆದುಕೊಂಡಿದ್ದು ತನ್ನ ವೀರ್ಯವನ್ನು ದಾನ ಮಾಡುವ ಮೂಲಕ 129 ಮಕ್ಕಳಿಗೆ ತಂದೆಯಾಗಿದ್ದು, ಇನ್ನೂ 9 ಮಕ್ಕಳು ಇನ್ನೇನು ವೀರ್ಯದಿಂದ ಜನಿಸಲಿದ್ದು ಒಟ್ಟು 138 ಮಕ್ಕಳ ತಂದೆ ಎಂದು ಹೇಳಿಕೊಂಡಿದ್ದಾರೆ. 

ವೀರ್ಯ ದಾನಕ್ಕಾಗಿ ಫೇಸ್‌ಬುಕ್ ಬಳಸಿಕೊಳ್ಳುವ ಕ್ಲೈವ್ 

ತಮ್ಮ ವೀರ್ಯ ದಾನಕ್ಕಾಗಿ ಫೇಸ್‌ಬುಕ್ ಜಾಲತಾಣವನ್ನು ಬಳಸಿಕೊಂಡರುವ ಕ್ಲೈವ್, ತನ್ನ ಸೇವೆಯ ಅಗತ್ಯವಿರುವ ಹಲವಾರು ಜನರ ಜಾಹೀರಾತನ್ನು ತಾಣದಲ್ಲಿ ನೋಡುತ್ತಾರೆ. ನಂತರ ಅವರನ್ನು ಭೇಟಿಯಾಗುತ್ತಾರೆ. ಕ್ಲೈವ್ ತಮ್ಮ 129 ಮಕ್ಕಳಲ್ಲಿ ಇದುವರೆಗೆ 20 ಮಕ್ಕಳನ್ನು ಭೇಟಿಯಾಗಿದ್ದಾರೆ ಎಂಬುದಾಗಿ ವಿದೇಶಿ ಪತ್ರಿಕೆಗಳು ವರದಿ ಮಾಡಿವೆ..

138 ಮಕ್ಕಳಿಗೆ ಇವರೇ ತಂದೆ! 

ಇದುವರೆಗೂ ಇವರು ವೀರ್ಯ ದಾನ ಮಾಡಿ 129 ಮಕ್ಕಳಿಗೆ ತಂದೆಯಾಗಿದ್ದಾರೆ. 9 ಮಕ್ಕಳು ಇವರ ವೀರ್ಯದಿಂದ ಇನ್ನೇನು ಜನಿಸಲಿದ್ದು ಒಟ್ಟು 138 ಮಕ್ಕಳನ್ನು ಹೊಂದಿರುವ ವಿಶ್ವದ ಸಮೃದ್ಧ ವೀರ್ಯ ದಾನಿ ತಾನು ಎಂಬುದಾಗಿ ಕ್ಲೈವ್ ಹೇಳಿಕೊಂಡಿದ್ದಾರೆ. ಇನ್ನು ಕೆಲವು ವರ್ಷಗಳ ಕಾಲ ತನ್ನ ಈ ಸೇವೆಯನ್ನು ಮುಂದುವರಿಸುವ ಬಯಕೆ ಹೊಂದಿರುವ ಕ್ಲೈವ್, ಒಟ್ಟು 150 ಮಕ್ಕಳಿಗೆ ವೀರ್ಯದಾನದ ಮೂಲಕ ತಂದೆಯಾಗಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Parenting: ಮಕ್ಕಳನ್ನು ಹೇಗೆ ಬೆಳೆಸೋದು? ಉತ್ತಮ ಪೋಷಕರಾಗಲು ಏನ್ ಮಾಡ್ಬೇಕು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ

ಉಚಿತವಾಗಿ ವೀರ್ಯದಾನ ಮಾಡುವ ಕ್ಲೈವ್ 

ವೀರ್ಯದಾನ ಕಾರ್ಯವನ್ನು ಉಚಿತವಾಗಿ ಮಾಡುವ ಜೋನ್ಸ್, ಇದಕ್ಕಾಗಿ ಶುಲ್ಕವನ್ನು ಪಡೆದುಕೊಳ್ಳುವುದು ಕಾನೂನು ಬಾಹಿರ ಎಂದು ತಿಳಿಸುತ್ತಾರೆ. ಅದಾಗ್ಯೂ ತನ್ನ ಬಳಿ ಜೀವನ ನಿರ್ವಹಣೆಗೆ ಬೇಕಾಗಿರುವಷ್ಟು ಹಣ ಇರುವಾಗ ಇನ್ನಷ್ಟು ಹಣದಾಸೆಗಾಗಿ ದುಡಿಯುವುದು ನ್ಯಾಯಯುತವಲ್ಲ ಎಂಬುದು ಕ್ಲೈವ್ ವಾದವಾಗಿದೆ. ಹಣದ ಬದಲಿಗೆ ಅವರು ಕೆಲವೊಮ್ಮೆ ಕೇಳುವ ಒಂದೇ ಒಂದು ಎಂದರೆ ಸ್ವಲ್ಪ ಪೆಟ್ರೋಲ್ ಆಗಿದೆ!

ದಂಪತಿಯ ಮನೆಗೇ ತೆರಳಿ ವೀರ್ಯದಾನ

ವೀರ್ಯ ದಾನ ಮಾಡುವ ಪ್ರಕ್ರಿಯೆ ಕೂಡ ಒಮ್ಮೊಮ್ಮೆ ವಿಸ್ತಾರ ಕಾರ್ಯವಾಗಿರುತ್ತದೆ ಎಂಬುದು ಕ್ಲೈವ್ ಅಭಿಪ್ರಾಯವಾಗಿದೆ. ಮೊದಲಿಗೆ ಕ್ಲೈವ್ ಪೋಷಕರಾಗ ಬಯಸುವ ಗ್ರಾಹಕರನ್ನು ಭೇಟಿಯಾಗುತ್ತಾರೆ ಹಾಗೂ ದಿನಾಂಕವನ್ನು ನಿಗದಿಪಡಿಸುತ್ತಾರೆ. ಅಂಡೋತ್ಪತ್ತಿಗೆ ಕೆಲವೇ ಗಂಟೆಗಳಿರುವಾಗ, ಕ್ಲೈವ್ ಗ್ರಾಹಕರ ನಿವಾಸದ ಬಳಿ ತಮ್ಮ ವ್ಯಾನ್ ಅನ್ನು ಕೊಂಡೊಯ್ಯುತ್ತಾರೆ ಮತ್ತು ತಮ್ಮ ವ್ಯಾನ್‌ನಲ್ಲಿಯೇ ಕಪ್, ಒಂದು ಸಿರಿಂಜ್ ಹಾಗೂ ಬ್ಯಾಗ್ ಬಳಸಿಕೊಂಡು ಕೆಲಸವನ್ನು ಮುಗಿಸುತ್ತಾರೆ.

ಪತ್ನಿಗೆ ಕ್ಲೈವ್ ಕೆಲಸದ ಬಗ್ಗೆ ಇಷ್ಟವಿಲ್ಲ!

9 ವರ್ಷಗಳಿಂದ ಈ ಕೆಲಸ ಮಾಡುತ್ತಿರುವ ಕ್ಲೈವ್ ಮನೆಯಲ್ಲಿ ಅವರ ಮೂರು ಮಕ್ಕಳು ಇದ್ದಾರೆ. ಆದ್ರೆ 1978ರಲ್ಲಿ ವಿವಾಹವಾಗಿದ್ದರೂ ಕ್ಲೈವ್ ಪತ್ನಿಯೊಂದಿಗೆ ವಾಸಿಸುತ್ತಿಲ್ಲ. ಏಕೆಂದರೆ ಪತ್ನಿಗೆ ಕ್ಲೈವ್‌ ಅವರ ವೀರ್ಯದಾನದ ಕೆಲಸದ ಬಗ್ಗೆ ಇಷ್ಟವಿಲ್ಲವಂತೆ.

ಇದನ್ನೂ ಓದಿ: Postpartum Depression: ಪ್ರಸವ ನಂತರದ ಖಿನ್ನತೆ ತಡೆಯಲು ಇಲ್ಲಿದೆ ಟಿಪ್ಸ್

ವೈದ್ಯಕೀಯ ಎಚ್ಚರಿಕೆ

ಹ್ಯೂಮನ್ ಫರ್ಟಿಲೈಸೇಶನ್ ಮತ್ತು ಎಂಬ್ರಿಯಾಲಜಿ ಸಂಸ್ಥೆಯು ಕ್ಲೈವ್ ಮಾಡುತ್ತಿರುವ ಕೆಲಸದ ಕುರಿತು ವೈದ್ಯಕೀಯ ಎಚ್ಚರಿಕೆ ನೀಡಿದೆ. ಅಥಾರಿಟಿ ತಿಳಿಸಿರುವಂತೆ ಎಲ್ಲಾ ರೋಗಿಗಳು ಹಾಗೂ ದಾನಿಗಳು ಇಂಗ್ಲೆಂಡ್ ಪರವಾನಗಿ ಪಡೆದಿರುವ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. ವೀರ್ಯವನ್ನು ದಾನ ಮಾಡುವುದು ಹಾಗೂ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡುವುದರಿಂದ ತಡೆಯುವುದು ಸಂಸ್ಥೆಯ ಅಧಿಕಾರ ವ್ಯಾಪ್ತಿಗೆ ಒಳಪಡದೇ ಇದ್ದರೂ ಜನರಿಗೆ ಈ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
Published by:Annappa Achari
First published: