150 ಮಕ್ಕಳ ತಂದೆಯ ಪ್ರೀತಿಗೆ ಬಿದ್ದಾಕೆ ಈಗ ಗರ್ಭಿಣಿ; ಸಖತ್ ಇದೆ ಇವರ ಲವ್ ಸ್ಟೋರಿ!

ಪ್ರಾರಂಭದಲ್ಲಿ ಎಲಿಗೆ ವೀರ್ಯ ದಾನಿಯ ಬಗ್ಗೆ ಅಷ್ಟೇನು ತಿಳಿದಿರಲಿಲ್ಲ. ಆದರೆ ಆಕೆ ಎರಡನೇ ಬಾರಿ ಗರ್ಭ ಧರಿಸಿದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಇದೀಗ ಇವರಿಬ್ಬರ ಲವ್​ ಸ್ಟೋರಿ ವೈರಲ್​​​ ಆಗುತ್ತಿದೆ.

Ellie Ellison

Ellie Ellison

 • Share this:
  ವೀರ್ಯ ದಾನ ಎಂಬುದು ಹೊಸ ಪರಿಕಲ್ಪನೆ. ವಿದೇಶದಲ್ಲಿ ಇದು ಸಾಮಾನ್ಯವಾಗಿದ್ದು, ವೀರ್ಯ ದಾನ ಮಾಡುವುವವರನ್ನು ವಿಕಿ ದಾನಿ ಎಂದು ಕರೆಯುವುದುಂಟು. ವೈದ್ಯಕೀಯ ಚಿಕಿತ್ಸಾಲಯದಲ್ಲಿ ಸರಿಯಾದ ನೋಂದಣಿ ನಂತರ ಮಕ್ಕಳಾಗದ ಪೋಷಕರು ವೀರ್ಯ ದಾನದ ಮೂಲಕ ಮಕ್ಕಳನ್ನು ಪಡೆಯಬಹುದಾಗಿದೆ. ಅದರಂತೆ ಇಂಗ್ಲೆಂಡ್​ನಲ್ಲಿ ವೀರ್ಯ ದಾನದ ಮೂಲಕ 150 ಮಕ್ಕಳ ಹುಟ್ಟಿಗೆ ಕಾರಣವಾದ ವ್ಯಕ್ತಿಯೊಬ್ಬನ ಪ್ರೀತಿಗೆ ಬಿದ್ದ ಹುಡುಗಿ ಆತನನ್ನು ವಿವಾಹವಾಗಿದ್ದಾಳೆ. ಅವರಿಬ್ಬರ ಲವ್​ ಸ್ಟೋರಿ ಸದ್ಯ ವೈರಲ್​ ಆಗುತ್ತಿದೆ.

  ಎಲಿ ಎಲ್ಲಿಸನ್​ ಎಂಬಾಕೆಗೆ ಆನ್​ಲೈನ್​ ಮೂಲಕ ವೀರ್ಯದಾನ ಮಾಡುವ ವ್ಯಕ್ತಿಯೊಬ್ಬರ ಪರಿಚಯವಾಗುತ್ತದೆ. ಪ್ರಾರಂಭದಲ್ಲಿ ಇಬ್ಬರು ಒಂದು ದಿನವನ್ನು ನಿಗದಿ ಪಡಿಸಿಕೊಂಡು ಭೇಟಿಯಾಗುತ್ತಾರೆ. ಮಾತುಕತೆ ಮಾಡುತ್ತಾರೆ. ಅದರಂತೆ ಹೋಟೆಲ್​ ಒಂದರ ಕೋಣೆಯಲ್ಲಿ ಇಬ್ಬರು ಭೇಟಿಯಾಗುತ್ತಾರೆ. ಕೇವಲ 10 ನಿಮಿಷಗಳ ಭೇಟಿಯಷ್ಟೆ. ನಂತರ ಇವರಿಬ್ಬರು ಕೂಡುತ್ತಾರೆ. ಆದರೆ ಮೊದಲ ಬಾರಿಗೆ ಎಲಿ ಗರ್ಭಿಣಿಯಾಗಲಿಲ್ಲ.

  ಎರಡನೇ ಬಾರಿಗೆ ಎಲಿ ವೀರ್ಯದಾನಿಯನ್ನ ಮತ್ತೆ ಕರೆಸಿಕೊಳ್ಳುತ್ತಾಳೆ. ಎರಡನೇ ಬಾರಿಗೆ ಎಲಿ ಗರ್ಭ ಧರಿಸಿದ್ದು, ಅಕ್ಟೋಬರ್​ನಲ್ಲಿ ಮಗುವಿನ ಜನ್ಮ ನೀಡಲಿದ್ದಾಳೆ.

  ಪ್ರಾರಂಭದಲ್ಲಿ ಎಲಿಗೆ ವೀರ್ಯ ದಾನಿಯ ಬಗ್ಗೆ ಅಷ್ಟೇನು ತಿಳಿದಿರಲಿಲ್ಲ. ಆದರೆ ಆಕೆ ಎರಡನೇ ಬಾರಿ ಗರ್ಭ ಧರಿಸಿದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಇದೀಗ ಇವರಿಬ್ಬರ ಲವ್​ ಸ್ಟೋರಿ ವೈರಲ್​​​ ಆಗುತ್ತಿದೆ.

  ಇನ್ನು ವೀರ್ಯ ದಾನಿಯು 50 ವಷ ಪ್ರಾಯದವರಾಗಿದ್ದು, ಉದ್ಯಮಿಯಾಗಿದ್ದಾರೆ. ಗರ್ಭಿಯಾಗಲು ಬಯಸುವವರಿಗೆ ವೀರ್ಯ ದಾನ ಮಾಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ ಸುಮಾರು 150 ಮಹಿಳೆಯರಿಗೆ ಸಹಾಯ ಮಡಿದ್ದಾರೆ.

  ಪ್ರತಿ ವರ್ಷ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಮಕ್ಕಳಿಗೆ ಜನ್ಮ ನೀಡುವ ಸಲುವಾಗಿ ಲೈಂಗಿಕತೆ ನಡೆಸದೆ ಸಾವಿರಾರು ಶಿಶುಗಳ ಜನಿಸುತ್ತವೆ. ಅದರ ಜತೆಗೆ ವೀರ್ಯ ದಾನವನ್ನು ಮಾಡುತ್ತಾರೆ. ಇದೊಂದು ಪರಿಕಲ್ಪನೆ ಪಾಶ್ಚಾತ್ಯ ದೇಶದಲ್ಲಿ ಹುಟ್ಟಿಕೊಂಡಿದೆ. ಅನೇಕರು ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವೀರ್ಯ ದಾನ ಮಾಡುತ್ತಾರೆ. ಅಷ್ಟು ಮಾತ್ರವಲ್ಲದೆ ವಿದೇಶದಲ್ಲಿ ಮದುವೆಯಾದವರು ಕೂಡ  ಮಕ್ಕಳನ್ನು ಬಯಸುತ್ತಾರೆ.
  First published: