ಒಂದು ಬಾರಿ ಕೋವಿಡ್ ಪಾಸಿಟಿವ್ (Covid Positive) ಕಾಣಿಸಿಕೊಂಡರೆ ಇಲ್ಲದ ಟೆನ್ಶನ್ (Tension) ಶುರುವಾಗುತ್ತದೆ. ಕೊರೋನಾ (Corona) ಏನೋ ಹೀಗೆ ಬಂದು ಹಾಗೆ ಹೋಗುತ್ತೆ ಅಂತ ಕೆಲವರು ಉಡಾಫೆ (Neglect) ಮಾಡಬಹುದು. ಆದ್ರೆ ಅದು ಬಂದು ಹೋದ ಮೇಲೆ ಶುರುವಾಗುವ ಯಾತನೆ ಇದೆಯಲ್ಲ, ಅದು ಯಾರಿಗೂ ಬೇಡ. ಉಸಿರಾಟದ ಸಮಸ್ಯೆ (Breathing Problem), ಶ್ವಾಸಕೋಶದ ಸಮಸ್ಯೆ, ಗ್ಯಾಸ್ಟ್ರಿಕ್ (Gastric) ಇತ್ಯಾದಿಗಳು ಕಟ್ಟಿಟ್ಟ ಬುತ್ತಿ. ಜೊತೆಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳೂ ಕೆಲವರನ್ನು ಕಾಡಿದ್ದುಂಟು. ಪರಿಸ್ಥಿತಿ ಹೀಗಿರುವಾಗ ಅಲ್ಲೊಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಮೇಲೆ ಪಾಸಿಟಿವ್ ಬರ್ತಾನೇ ಇದೆಯಂತೆ. ಅದೂ ಒಂದೆರಡಲ್ಲ, ಬರೋಬ್ಬರಿ 78 ಬಾರಿ ಕೋವಿಡ್ ಪಾಸಿಟಿವ್ ಬಂದಿದ್ಯಂತೆ. ಪಾಪ ಆತ ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅಂದರೆ 14 ತಿಂಗಳುಗಳಿಂದ ಕ್ವಾರಂಟೈನ್ನಲ್ಲೇ (Quarantine) ಇದ್ದಾನಂತೆ. ಹಾಗಿದ್ರೆ ಯಾರಾತ? ಏನಿದು ಕರೋನಾ ವ್ಯಥೆ ಅನ್ನೋ ಬಗ್ಗೆ ಇಲ್ಲಿದೆ ಒಂದು ವರದಿ…
ಟರ್ಕಿಯ ವ್ಯಕ್ತಿಯನ್ನು ಬಿಡದೇ ಕಾಡುತ್ತಿರುವ ಕೊರೋನಾ
ಕೋವಿಡ್ ಏರುತ್ತಿರುವ ವೇಗ, ಅದು ತಾಳುತ್ತಿರುವ ರೂಪ ನೋಡಿದ್ರೆ ಪ್ರಪಂಚದ ಪ್ರತಿಯೊಬ್ಬರಿಗೂ ಒಮ್ಮೆಯಾದ್ರುೂ ಬಂದು ಹೋಗಬಹುದು ಅಂತ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಟರ್ಕಿಯ ನಿವಾಸಿಯಾಗಿರುವ ಓರ್ವ ವ್ಯಕ್ತಿಗೆ ಕೊರೋನಾ ಇನ್ನಿಲ್ಲದಂತೆ ಕಾಡುತ್ತಿದೆಯಂತೆ.
ಒಂದಲ್ಲ, ಎರಡಲ್ಲ ಬರೋಬ್ಬರಿ 78 ಬಾರಿ ಪಾಸಿಟಿವ್
ಪ್ರತಿ ಬಾರಿ ಪರೀಕ್ಷೆಗೆ ಒಳಗಾದಾಗಲೂ ಕೋವಿಡ್ ಪಾಸಿಟಿವ್ ಆಗಿದೆ. ಅಚ್ಚರಿ ಅಂದ್ರೆ ಆತ ಒಂದಲ್ಲ.. ಎರಡಲ್ಲ.. ಆತ 78 ಬಾರಿ ಕೊರೋನಾ ಸೋಂಕಿಗೆ ಒಳಗಾಗಿದ್ದಾನೆ. ಹೀಗಾಗಿ ಆತನಿಗೆ 1 ವರ್ಷಗಳಿಗಿಂತ ಹೆಚ್ಚು ಕಾಲ ಮನೆಯವರ ಜೊತೆ ಬೆರೆಯಲು ಆಗಲೇ ಇಲ್ಲ. ಯಾಕೆಂದ್ರರೆ ಆತ ಬರೋಬ್ಬರಿ 14 ತಿಂಗಳಿಂದ ಕ್ವಾರಂಟೈನ್ನಲ್ಲೇ ಇದ್ದಾನೆ.
ಇದನ್ನೂ ಓದಿ: Death Rate: ಈ ಸಮಯದಲ್ಲೇ ಅತಿ ಹೆಚ್ಚು ಸಾವು ಸಂಭವಿಸುವುದು; ಅಧ್ಯಯನ ಏನು ಹೇಳತ್ತೆ?
2020ರಲ್ಲಿ ಮೊದಲ ಬಾರಿ ಸೋಂಕು
ಟರ್ಕಿ ದೇಶದ ಇಸ್ತಾನ್ಬುಲ್ನಲ್ಲಿ ವಾಸಿಸುವ 56 ವರ್ಷದ ಮುಜಾಫರ್ ಕಯಾಸನ್ ಎನ್ನುವವರೇ 78 ಬಾರಿ ಕೊರೋನಾ ಪಾಸಿಟಿವ್ಗೆ ಒಳಗಾದ ವ್ಯಕ್ತಿ. ಇವರು ಮೊದಲ ಬಾರಿಗೆ ನವೆಂಬರ್ 2020ರಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾಗ ಮೊದಲ ಬಾರಿ ಸೋಂಕಿಗೆ ತುತ್ತಾಗಿದ್ದು ಪತ್ತೆಯಾಯಿತು.
ಅಂದಿನಿಂದ ಔಷಧಿ ಸೇವಿಸುತ್ತಿದ್ದರಾದ್ರೂ ಗುಣಮುಖವಾಗಲಿಲ್ಲ. ಹಾಗಾಗಿ ಅಂತಿಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ತೀವ್ರತೆ ಕಡಿಮೆಯಾದ ನಂತ್ರ ಮನೆಗೆ ಬಂದ್ರು. ಆದ್ರೂ ಕೊವಿಡ್ ಕಡಿಮೆಯಾಗಲಿಲ್ಲ. ರೋಗಲಕ್ಷಣಗಳು ಹಾಗೆಯೇ ಮುಂದುವರಿದಿವೆ.
14 ತಿಂಗಳುಗಳಿಂದ ನಿರಂತರವಾಗಿ ಪಾಸಿಟಿವ್
ಇನ್ನು ಕಳೆದ 14 ತಿಂಗಳಲ್ಲಿ ಎಷ್ಟು ಬಾರಿ ಚಿಕಿತ್ಸೆ ನೀಡಿದರೂ ಪಾಸಿಟಿವ್ ಬರುತ್ತಿದೆ. ಹಾಗಾಗಿ ನಿರಂತರವಾಗಿ ಐಸೋಲೇಶನ್ನಲ್ಲಿ ಇರುತ್ತಾರೆ. ಅದಾದ ಬಳಿಕ ಕ್ವಾರಂಟೈನ್ ವಾಸ. ಮತ್ತೆ ಪರೀಕ್ಷೆ ಮಾಡಿಸಿದ್ರೆ ಮತ್ತೆ ಕೋವಿಡ್ ಪಾಸಿಟಿವ್! ಹೀಗಾಗಿ ಕುಟುಂಬದ ಸದಸ್ಯರೂ ಅವರನ್ನ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಇಲ್ಲದಿದ್ದರೆ ಮನೆ ಹೀಗೆ 14 ತಿಂಗಳಿಂದ ಬೆಡ್ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.
ವೈದ್ಯರು ಹೇಳುವುದೇನು?
ಮುಜಾಫರ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದೇಹದ ರೋಗನಿರೋಧಕ ಶಕ್ತಿ ಸಕ್ರಿಯವಾಗಿಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ. ಟರ್ಕಿಯಲ್ಲಿ, ಕೋವಿಡ್-19 ನೆಗೆಟಿವ್ ಆಗಿದ್ದರೆ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಅದಕ್ಕಾಗಿಯೇ ಮುಜಾಫರ್ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.
ಅವರ ಪತ್ನಿ ಮತ್ತು ಮಗ ಕೋವಿಡ್ನಿಂದ ಸುರಕ್ಷಿತವಾಗಿದ್ದು, ಇಬ್ಬರಿಗೂ ನೆಗೆಟಿವ್ ಬಂದಿದೆ. ಇನ್ನು ಮುಜಾಫರ್ ಕೂಡ ಲ್ಯುಕೇಮಿಯಾದಿಂದ ಬಳಲುತ್ತಿದ್ದಾರೆ. ಇದರಿಂದ ಅವರ ಕುಟುಂಬ ಮುಂದೇನು ಅನ್ನೋ ಭಯದಲ್ಲಿದೆ.
ಇದನ್ನೂ ಓದಿ: Thyroid Problem: ಕೊರೊನಾದಿಂದ ಗುಣಮುಖರಾದವರಿಗೆ ಕಾಡುತ್ತಿದೆ ಥೈರಾಯ್ಡ್ ಸಮಸ್ಯೆ.. ಇದನ್ನು ತಪ್ಪಿಸಲು ಏನ್ಮಾಡ್ಬೇಕು?
ನಿರಂತರ ಕ್ವಾರಂಟೈನ್ ವಾಸದಿಂದ ಬೇಸರ
ನಿರಂತರ ಕ್ವಾರಂಟೈನ್ನಿಂದಾಗಿ ನನಗೆ ನನ್ನ ಕುಟುಂಬದೊಂದಿಗೆ ಶಾಶ್ವತವಾಗಿ ಇರಲು ಸಾಧ್ಯವಾಗುತ್ತಿಲ್ಲ ಎಂಬ ನೋವು ನನ್ನನ್ನ ಕಾಡುತ್ತಿದೆ ಅಂತ ಮುಜಾಫರ್ ಹೇಳಿದ್ದಾರೆ. ಕೋವಿಡ್ ಏಕೆ ಕಡಿಮೆಯಾಗುತ್ತಿಲ್ಲ ಎಂದು ತನಗೆ ತಿಳಿದಿಲ್ಲ ಎಂದು ಬೇಸರಪಟ್ಟುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ