ರಿಯಾಯಿತಿ ಸಾಲ ಕೊಡುಗೆಗಳಿಗೆ ಅಂತ್ಯ ಘೋಷಿಸಿದ ಎಸ್‌ಬಿಐ, ಎಚ್‌ಡಿಎಫ್‌ಸಿ: ಇತರ ಬ್ಯಾಂಕ್‌ಗಳಿಂದಲೂ ಇದೇ ಕ್ರಮ..?

ಮಾರ್ಚ್ 4, 2021 ರಿಂದ ಈ ಯೋಜನೆ ಜಾರಿಗೆ ಬಂದಿತ್ತು. ಈ ವೇಳೆ ಗೃಹ ಸಾಲ ಬಡ್ಡಿ ದರ ಶೇ. 6.8 ರಿಂದ 6. 75 ಕ್ಕೆ ಇಳಿಕೆಯಾಗಿತ್ತು. ಆದರೆ, ಈ ಬಡ್ಡಿ ದರ ಸಹ ಹೆಚ್ಚಲಿದೆ ಎಂದು ತಿಳಿದುಬಂದಿದೆ.

ಹೆಚ್​ಡಿಎಫ್​ಸಿ.

ಹೆಚ್​ಡಿಎಫ್​ಸಿ.

  • Share this:
ಇತ್ತೀಚೆಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಹಲವು ಬ್ಯಾಂಕ್‌ಗಳು ಮುಂದಾಗಿದ್ದವು. ಆರ್‌ಬಿಐ ವಿತ್ತೀಯ ನೀತಿ, ಬ್ಯಾಂಕ್‌ಗಳ ನಡುವಿನ ಸ್ಪರ್ಧಾತ್ಮಕತೆ, ಕೋವಿಡ್ - 19, ಲಾಕ್‌ಡೌನ್‌ - ಇವೆಲ್ಲವೂ ಇದಕ್ಕೆ ಕಾರಣವಾಗಿತ್ತು. ಆದರೆ, ಏಪ್ರಿಲ್‌ 1 ರಿಂದ ನೂತನ ಹಣಕಾಸು ವರ್ಷಕ್ಕೆ ಕಾಲಿಡುತ್ತಿದ್ದಂತೆ ಈಗ ಹಲವು ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳಕ್ಕೆ ಮುಂದಾಗಿರುವ ಸೂಚನೆಗಳು ಕಂಡುಬಂದಿವೆ. ಪ್ರಮುಖ ಬ್ಯಾಂಕ್‌ಗಳಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಾಗೂ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನಂತಹ ಪ್ರಮುಖ ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿ ದರವನ್ನು ಹೆಚ್ಚಿಸಿವೆ.

ಕಳೆದ ತಿಂಗಳು ಅಂದರೆ ಮಾರ್ಚ್ 2021 ರಲ್ಲಷ್ಟೇ ಎಸ್‌ಬಿಐ ಗೃಹ ಸಾಲವನ್ನು ಶೇಕಡಾ 6.7 ರ ಬಡ್ಡಿ ದರದಿಂದ ಪ್ರಾರಂಭಿಸಿತ್ತು. ಆದರೆ ಆ ಪ್ಲ್ಯಾನ್‌ ಅನ್ನು ಮಾರ್ಚ್ 31 ರಂದೇ ಸ್ಥಗಿತಗೊಳಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್  5,00,000 ಕೋಟಿ ರೂ. ಗೃಹ ಸಾಲದ ಬಂಡವಾಳವನ್ನು ಹೊಂದಿದ್ದು, ಇದು ಮಾರುಕಟ್ಟೆಯಲ್ಲೇ ಮುಂಚೂಣಿಯಲ್ಲಿದೆ.
ಆದರೆ, ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಗೃಹ ಸಾಲ ದರಗಳು ಏಪ್ರಿಲ್ 1 ರಿಂದ ಶೇಕಡಾ 6.95 ರಿಂದ ಪ್ರಾರಂಭವಾಗಲಿವೆ ಎಂದು ವೆಬ್‌ಸೈಟ್‌ ಮಾಹಿತಿ ನೀಡಿದೆ.

ನೂತನ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ ಈ ಬಡ್ಡಿ ದರ ಹೆಚ್ಚಳವಾಗಿದೆ.
ಇದೇ ರೀತಿ, ಕಳೆದ ತಿಂಗಳು ಎಚ್‌ಡಿಎಫ್‌ಸಿ ಲಿಮಿಟೆಡ್ ರಿಯಾಯಿತಿ ಕೊಡುಗೆಯನ್ನು ಹೊಂದಿದ್ದು, ಅದರ ಅಡಿಯಲ್ಲಿ ಆರಂಭಿಕ ಬಡ್ಡಿದರವು ಶೇಕಡಾ 6.7 ರಷ್ಟಿತ್ತು. ಈ ಪ್ರಸ್ತಾಪವು ಮಾರ್ಚ್ 31, 2021 ರಂದು ಕೊನೆಗೊಳ್ಳಬೇಕಿತ್ತು. ಆದರೂ, ಎಚ್‌ಡಿಎಫ್‌ಸಿ ಲಿಮಿಟೆಡ್‌ನ ವೆಬ್‌ಸೈಟ್ ಇನ್ನೂ ಶೇಕಡಾ 6.7 ರಷ್ಟು ಆರಂಭಿಕ ದರವನ್ನು ತೋರಿಸುತ್ತಿದೆ.
ಎಚ್‌ಡಿಎಫ್‌ಸಿ ತನ್ನ ಆರ್‌ಪಿಎಲ್‌ಆರ್ (ಚಿಲ್ಲರೆ ಅವಿಭಾಜ್ಯ ಸಾಲ ದರ) ವನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತ್ತು.

ಮಾರ್ಚ್ 4, 2021 ರಿಂದ ಈ ಯೋಜನೆ ಜಾರಿಗೆ ಬಂದಿತ್ತು. ಈ ವೇಳೆ ಗೃಹ ಸಾಲ ಬಡ್ಡಿ ದರ ಶೇ. 6.8 ರಿಂದ 6. 75 ಕ್ಕೆ ಇಳಿಕೆಯಾಗಿತ್ತು. ಆದರೆ, ಈ ಬಡ್ಡಿ ದರ ಸಹ ಹೆಚ್ಚಲಿದೆ ಎಂದು ತಿಳಿದುಬಂದಿದೆ. ಎಚ್‌ಡಿಎಫ್‌ಸಿ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲವಾದರೂ ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಮೇ 2ರ ಬಳಿಕ ಯಡಿಯೂರಪ್ಪ ಕೆಳಗಿಳಿಯುವುದು ಗ್ಯಾರಂಟಿ, ಸ್ವಲ್ಪ ದಿನಗಳಲ್ಲೇ ಅಪ್ಪ-ಮಗನ ಬಣ್ಣ ಬಯಲಾಗಲಿದೆ; ಯತ್ನಾಳ್ ಹೊಸ ಬಾಂಬ್!

ಅಂತೆಯೇ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಶೇ. 6.65), ಐಸಿಐಸಿಐ ಬ್ಯಾಂಕ್ (ಶೇ. 6.70), ಮತ್ತು ಬ್ಯಾಂಕ್ ಆಫ್ ಬರೋಡಾ (ಶೇ. 6.75) ಆರಂಭಿಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಬ್ಯಾಂಕ್‌ಗಳು ಸಹ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಾದಿ ಹಿಡಿದು ತಮ್ಮ ಬಡ್ಡಿ ದರ ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ.

ಆದರೂ, ನೂತನ ಹಣಕಾಸು ವರ್ಷದ ಹೆಸರಲ್ಲಿ ಹಲವು ವಸ್ತುಗಳ ಬೆಲೆ ಏರಿಕೆ ಉಂಟಾಗುತ್ತಿದ್ದು, ಇದೀಗ ಸಾಲದ ಬಡ್ಡಿ ದರವೂ ಸಹ ಹೆಚ್ಚಾಗುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ಮತ್ತಷ್ಟು ಶಾಕ್‌ ಆಗಿರುವುದಂತೂ ಸುಳ್ಳಲ್ಲ.
Published by:MAshok Kumar
First published: