ಜೀವನದಲ್ಲಿ ಮನುಷ್ಯರು (Humans) ಅಂದಾಗ ಆಟವಾಡೋದು, ಆಕಳಿಸೋದು ಇವೆಲ್ಲಾ ಸಾಮಾನ್ಯ. ಅದ್ರೆ ಪ್ರಾಣಿಗಳು (Animals) ಸಹ ಈ ರೀತಿಯ ಕೆಲಸಗಳನ್ನು ಮಾಡುತ್ತೆ ಅಂದ್ರೆ ನೀವು ನಂಬ್ತೀರಾ?. ಇನ್ನು ಸಾಕುಪ್ರಾಣಿಗಳಾದ ನಾಯಿ, ಬೆಕ್ಕು ಆಕಳಿಸೋದನ್ನು ನೋಡಿರ್ತೇವೆ. ಆದ್ರೆ ಹಾವು ಆಕಳಿಸೋದನ್ನು (Snake Yawns) ನೀವು ಎಂದಾದರು ನೋಡಿದ್ದೀರಾ. ಹಾವು ಎಂದಾಗ ಯಾರೇ ಆಗಲಿ ಒಮ್ಮೆಗೆ ಬೆಚ್ಚಿಬೀಳ್ತಾರೆ. ಹಾವಿನ ಬಾಲದಿಂದ ಹಿಡಿದು ಅವುಗಳ ಸ್ವಲ್ಪ ಶಬ್ದ ಕೇಳಿದ್ರೆ ಸಾಕು ಒಂದು ಮೈಲು ದೂರ ಹೋಗಿ ನಿಲ್ಲುತ್ತಾರೆ. ಇನ್ನು ಹಾವುಗಳಿಗೆ (Snake) ಹಿಂದೂ ಸಂಪ್ರದಾಯದಲ್ಲಿ ಮಹತ್ತರವಾದ ಸ್ಥಾನವಿದೆ. ಅವುಗಳಿಗೆಂದೇ ಕೆಲವೊಂದು ಪೂಜೆಗಳನ್ನು ಸಹ ಮಾಡುತ್ತಾರೆ.
ಹೌದು, ಸಾಮಾನ್ಯವಾಗಿ ಎಲ್ಲರೂ ನಾಯಿ, ಬೆಕ್ಕು ಆಕಳಿಸೋದನ್ನು ನೋಡಿರ್ತಾರೆ. ಆದ್ರೆ ಹಾವು ಆಕಳಿಸೋದನ್ನು ನೋಡಿದ್ದೀರಾ. ಇಲ್ಲೊಬ್ಬರು ಕ್ಯಾಮೆರಾ ಮ್ಯಾನ್ ಹಾವು ಆಕಳಿಸೋದನ್ನು ಸೆರೆಹಿಡಿದಿದ್ದಾರೆ ನೋಡಿ.
ವೈರಲ್ ವಿಡಿಯೋ
ಇತ್ತೀಚೆಗೆ ನಾವು ಸೋಶಿಯಲ್ ಮೀಡಿಯಾದಲ್ಲಿ ಹಾವುಗಳ ಬಗೆಗಿನ ಹಲವಾರು ವಿಡಿಯೋಗಳನ್ನು ನೋಡಿರುತ್ತೇವೆ. ಹಾವಿನೊಂದಿಗೆ ಆಟವಾಡೋದು, ಹಾವಿಗೆ ಮುತ್ತಿಡೋದು ಅಥವಾ ಹಾವು ಹಿಡಿಯೋದು ಈ ರೀತಿಯ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಇದೀಗ ಅಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ನಾವು ಹಾವಿಗೆ ಆಕಳಿಕೆ ಬಂದಾಗ ಹಾವುಗಳು ಹೇಗೆ ಆಕಳಿಸುತ್ತವೆ ಎಂದು ನೋಡಬಹುದಾಗಿದೆ.
Have you ever seen a snake yawn? pic.twitter.com/zgbYJhtYVs
— Terrifying Nature (@TerrifyingNatur) May 2, 2023
ಸೀಲಿಂಗ್ನಲ್ಲಿದ್ದ ದೈತ್ಯಾಕಾರದ ಹಾವುಗಳು
ಎಷ್ಟೋ ಜನರು ಆಕಸ್ಮಿಕವಾಗಿ ಹಾವುಗಳನ್ನು ದೂರದಿಂದ ನೋಡಿದರೆ ಭಯಭೀತರಾಗಿರುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಮನೆಯಲ್ಲಿಯೇ ಹಾವು ಇದೆ ಅಂತ ಗೊತ್ತಾದರೆ ಎಂತವರಿಗಾದರೂ ಕೈ ಕಾಲುಗಳಲ್ಲಿ ನಡುಕ ಹುಟ್ಟುವುದು ಸಾಮಾನ್ಯ. ಇಲ್ಲಿ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ, ಇದರಲ್ಲಿ ಒಂದಲ್ಲ ಎರಡಲ್ಲ, ಮೂರು ದೊಡ್ಡ ಹಾವುಗಳು ಮನೆಯಲ್ಲಿನ ಸೀಲಿಂಗ್ ಓಪನ್ ಮಾಡಿದ ತಕ್ಷಣ ಹೇಗೆ ಕೆಳಕ್ಕೆ ಇಳಿದಿವೆ ಎಂದು ನೋಡಬಹುದು.
ಇದನ್ನು ನೋಡಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಈ ಭಯಾನಕ ವಿಡಿಯೋವನ್ನು ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯ ಕಾಮೆಂಟ್ಗಳು, ಲೈಕ್ ಗಳು ಮತ್ತು ವೀಕ್ಷಣೆಗಳನ್ನು ಇದು ಗಳಿಸಿದೆ. ವರದಿಗಳ ಪ್ರಕಾರ, ಈ ವಿಡಿಯೋ ಮಲೇಷ್ಯಾದಿಂದ ಬಂದಿದೆ. ಹಾವು ಹಿಡಿಯುವವನು ಆರಂಭದಲ್ಲಿ ತನ್ನ ಹಾವು ಹಿಡಿಯುವ ಕೊಕ್ಕೆ ಅಥವಾ ಕೋಲನ್ನು ಬಳಸಿಕೊಂಡು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
At that point you gotta burn the house pic.twitter.com/BGzbQ06kPv
— Lance🇱🇨 (@Bornakang) February 13, 2023
ಛಾವಣಿಯಲ್ಲಿದ್ದ ಮೂರು ದೊಡ್ಡ ಹಾವುಗಳು
ಅಲ್ಲಿದ್ದುದ್ದು ಕೇವಲ ಒಂದು ಸಣ್ಣ ಹಾವು ಅಲ್ಲ, ಅಲ್ಲಿದ್ದುದು ಮೂರು ದೊಡ್ಡ ಭಯಾನಕ ಹಾವುಗಳು. ಕೆಲವೇ ಸಮಯದಲ್ಲಿ ಛಾವಣಿಯ ಮೂಲಕ ಬಿದ್ದು ಆಘಾತಕಾರಿ ದೃಶ್ಯವನ್ನು ಸೃಷ್ಟಿಸುತ್ತವೆ. ದೊಡ್ಡ ಹಾವುಗಳು ಪತ್ತೆಯಾದ ನಂತರ ಹಾವು ಹಿಡಿಯುವವರು ಮತ್ತು ಮನೆಯಲ್ಲಿ ವಾಸವಾಗಿರುವ ಮನೆಯವರು ಭಯದಿಂದ ಚರ್ಚಿಸುವುದನ್ನು ಇಲ್ಲಿ ಕೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ