Viral Video: ಅಮೆ ಜೊತೆ ಚಿರತೆ ಆಟ? ಇಲ್ಲಿದೆ ನೋಡಿ ವೈರಲ್ ವಿಡಿಯೋ

ಆಮೆ ಮತ್ತು ಚಿರತೆ ಅಕ್ಕಪಕ್ಕ ಒಂದು ಹುಲ್ಲು ಹಾಸಿನ ಮೇಲೆ ಕುಳಿತಿವೆ. ಆ ಆಮೆ ಸುಮ್ಮನೆ ಕುಳಿತಿದೆ, ಆದರೆ ಈ ಚಿರತೆ ನಿಧಾನವಾಗಿ ತನ್ನ ಆಟ ಶುರು ಮಾಡಿಕೊಂಡಿದೆ. ಆಮೆಯ ಮೇಲೆ ಇರುವ ಗಟ್ಟಿಯಾದ ಚಿಪ್ಪಿಗೆ ಚಿರತೆ ತನ್ನ ತಲೆಯಿಂದ ಮೆಲ್ಲಗೆ ಉಜ್ಜುತ್ತಿರುವುದನ್ನು ನೋಡಬಹುದು.

ಅಮೆ ಮತ್ತು ಚಿರತೆ

ಅಮೆ ಮತ್ತು ಚಿರತೆ

  • Share this:
ಕಾಡು ಪ್ರಾಣಿಗಳಾದ ಹುಲಿ, ಸಿಂಹ ಮತ್ತು ಚಿರತೆಗಳು ಭಯಾನಕವಾಗಿ ಘರ್ಜಿಸುವುದು, ಬೇಟೆಯ ಹಿಂದೆ ವೇಗವಾಗಿ ಓಡುವುದರ ಮೂಲಕ ಬೇಟೆಯಾಡುವುದನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಅನೇಕ ಸಲ ನೋಡಿರುತ್ತೇವೆ. ಮೊನ್ನೆ ತಾನೇ ನಾವು ಒಂದು ಸಿಂಹ ಮಲಗಿರುವ ಒಂದು ಸಿಂಹಿಣಿಯ ಜೊತೆ ಸ್ವಲ್ಪ ತುಂಟಾಟ ಮಾಡಲು ಹೋಗಿ ಎಂತಹ ಸಮಸ್ಯೆಯನ್ನು ತನ್ನ ತಲೆಯ ಮೇಲೆ ತಂದುಕೊಂಡಿತ್ತು ಅಂತ ವಿಡಿಯೋದಲ್ಲಿ ನೋಡಿದ್ದೆವು. ಆ ನಿದ್ದೆಯಲ್ಲಿದ್ದ ಸಿಂಹಿಣಿ ಥಟ್ಟನೆ ಎದ್ದು ಸಿಂಹ ಅಂತಾನೂ ನೋಡದೆ ಜೋರಾಗಿ ಘರ್ಜಿಸಿ ಅದರ ಮೇಲೆ ದಾಳಿ ಮಾಡಲು ಹೋಗಿದ್ದ ಆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.

ಹೀಗೆ ಈ ಕಾಡು ಪ್ರಾಣಿಗಳು ತಮ್ಮ ನಿದ್ದೆ, ಹಸಿವು ಮತ್ತು ತಮ್ಮ ಬೇಟೆಯ ವಿಷಯಕ್ಕೆ ಬಂದರೆ ಸಾಮಾನ್ಯಕ್ಕಿಂತಲೂ ಸ್ವಲ್ಪ ಹೆಚ್ಚೆ ಭಯಾನಕವಾಗುತ್ತವೆ ಮತ್ತು ಆಕ್ರಮಣಕಾರಿಯಾಗುತ್ತವೆ ಎಂದು ಹೇಳಬಹುದು.

ಆದರೆ ಶಾಂತವಾಗಿ ಒಂದು ಕಡೆ ಕುಳಿತು, ಅದರಲ್ಲೂ ಇನ್ನೊಂದು ಚಿಕ್ಕ ಪ್ರಾಣಿಯೊಂದಿಗೆ ಕೂತು ಹಾಗೆಯೇ ತುಂಟಾಟ ಮಾಡುತ್ತಾ ಆರಾಮಾಗಿ ವಿಶ್ರಮಿಸುವ ವಿಡಿಯೋ ನೋಡಿರುವುದು ತುಂಬಾನೇ ಅಪರೂಪ. ಇಂತಹ ವೀಡಿಯೋ ನೋಡಿಲ್ಲ ಅಂತ ನಿಮಗೆ ಬೇಸರವಿದ್ದರೆ, ನಿಮ್ಮ ಆ ಬೇಸರಕ್ಕೆ ಈ ವಿಡಿಯೋ ಬ್ರೆಕ್ ಹಾಕಬಹುದು ನೋಡಿ.

ಆಮೆ ಮತ್ತು ಚಿರತೆ ಮೊಜಿನ ಆಟ ನೋಡಿ ಹೇಗಿದೆ ಅಂತ..
ಈ ವಿಡಿಯೋ ತುಣುಕಿನಲ್ಲಿ ಒಂದು ಆಮೆ ಮತ್ತು ಚಿರತೆ ಅಕ್ಕಪಕ್ಕ ಒಂದು ಹುಲ್ಲು ಹಾಸಿನ ಮೇಲೆ ಕುಳಿತಿವೆ. ಆ ಆಮೆ ಸುಮ್ಮನೆ ಕುಳಿತಿದೆ, ಆದರೆ ಈ ಚಿರತೆ ನಿಧಾನವಾಗಿ ತನ್ನ ಆಟ ಶುರು ಮಾಡಿಕೊಂಡಿದೆ. ಆಮೆಯ ಮೇಲೆ ಇರುವ ಗಟ್ಟಿಯಾದ ಚಿಪ್ಪಿಗೆ ಚಿರತೆ ತನ್ನ ತಲೆಯಿಂದ ಮೆಲ್ಲಗೆ ಉಜ್ಜುತ್ತಿರುವುದನ್ನು ನಾವು ನೋಡಬಹುದು.

ಇದನ್ನೂ ಓದಿ: Viral Video: ಮುನಿಸಿಕೊಂಡ ನಾಯಿಯನ್ನು ಖುಷಿಪಡಿಸಿದ ಕೀಟ! ಈ ಕ್ಯೂಟ್ ವಿಡಿಯೋ ನೀವೂ ನೋಡಿ
ಉದ್ಯಾನವನದಲ್ಲಿ ಆಮೆಯೊಂದಿಗೆ ಆಟವಾಡುತ್ತಿರುವ ಚಿರತೆಯೊಂದರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನ ಸೆಳೆಯುತ್ತಿದೆ. ಸ್ವಲ್ಪ ಸಮಯದ ನಂತರ ಚಿರತೆ ಮತ್ತೆ ತಲೆ ಎತ್ತಿ ಉದ್ಯಾನವನದ ಸುತ್ತಲೂ ಒಮ್ಮೆ ನೋಡುತ್ತದೆ, ನಂತರ ಮತ್ತೆ ಚಿರತೆ ತನ್ನ ತಲೆಯನ್ನು ಮತ್ತೊಮ್ಮೆ ಆಮೆಯ ಮೇಲಿನ ಗಟ್ಟಿಯಾದ ಚಿಪ್ಪಿಗೆ ಉಜ್ಜುತ್ತದೆ. ಆಮೆ ಕೂಡ ತನ್ನ ಸ್ನೇಹಿತನೊಂದಿಗೆ ಮೋಜು ಮಾಡುತ್ತಿರುವಂತೆ ತೋರುತ್ತದೆ, ಏಕೆಂದರೆ ಅದು ಆ ಜಾಗ ಬಿಟ್ಟು ಸ್ವಲ್ಪವೂ ಅಲುಗಾಡಿರುವುದಿಲ್ಲ.

ಏನಿದು ಕಾರ್ಸನ್ ಸ್ಪ್ರಿಂಗ್ಸ್ ವೈಲ್ಡ್ಲೈಫ್
ಕಾರ್ಸನ್ ಸ್ಪ್ರಿಂಗ್ಸ್ ವೈಲ್ಡ್‌ಲೈಫ್ ಕಳೆದ ವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋ ಶೀರ್ಷಿಕೆಯಲ್ಲಿ "ಟ್ಯೂಸ್ಡೇ ಮತ್ತು ಪೆಂಜಿ ಉತ್ತಮ ಸ್ನೇಹಿತರು. ಕಾರ್ಸನ್ ಸ್ಪ್ರಿಂಗ್ಸ್ ನಲ್ಲಿ ಅವರನ್ನು ನೋಡಲು ಬನ್ನಿ" ಅಂತ ಬರೆದಿದ್ದಾರೆ.

ಕಾರ್ಸನ್ ಸ್ಪ್ರಿಂಗ್ಸ್ ಒಂದು ಲಾಭರಹಿತ ಪ್ರಾಣಿ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಪ್ರಾಣಿ ಉದ್ಯಾನವನವಾಗಿದ್ದು, ಯುನೈಟೆಡ್ ಸ್ಟೇಟ್ಸ್ ನ ಫ್ಲೋರಿಡಾದ ಗೈನೆಸ್ ವಿಲ್ಲೆಯಲ್ಲಿದೆ.

ತುಂಬಾನೇ ವೈರಲ್ ಆಗುತ್ತಿರುವ ವಿಡಿಯೋ
ಈ ವೈರಲ್ ಕ್ಲಿಪ್ ಇದುವರೆಗೂ 1.1 ಮಿಲಿಯನ್ ವೀಕ್ಷಕರನ್ನು ಆಕರ್ಷಿಸಿದೆ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಾಗಿನಿಂದ ಇದಕ್ಕೆ 62,000 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಪೋಸ್ಟ್ ಕಾಮೆಂಟ್ ವಿಭಾಗದಲ್ಲಿ ಕೆಲವು ಬಳಕೆದಾರರು ಆಮೆ ಮತ್ತು ಚಿರತೆಯ ಸ್ನೇಹವನ್ನು ಇಷ್ಟ ಪಟ್ಟರೆ, ಇತರರು ಅದನ್ನು ತಮಾಷೆಯಾಗಿ ಕಂಡುಕೊಂಡಿದ್ದಾರೆ.

ಇದನ್ನೂ ಓದಿ:  Viral Video: ಮಲಗಿರುವ ಸಿಂಹಿಣಿಯ ಬಳಿ ಹೋಗಿ ಕೀಟಲೆ ಮಾಡಿದ್ರೆ ಏನ್ ಆಗುತ್ತೆ ಗೊತ್ತೇ? ಈ ವೀಡಿಯೋ ನೋಡಿ

ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ನೋಡಿ "ಚಿರತೆ ಸಹ ಇದು ಎಂತಹ ತಮಾಷೆಯ ತಲೆ ಕೆರೆದುಕೊಳ್ಳುವ ಬಂಡೆ ಅಂತ ಆಶ್ಚರ್ಯ ಪಡುತ್ತಿರಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಅತ್ಯುತ್ತಮ ಒಡನಾಡಿಗಳು” ಎಂದು ಬರೆದಿದ್ದಾರೆ.
Published by:Ashwini Prabhu
First published: