Black Hole Pizza: ನೀವು ಎಂದಾದ್ರೂ ಬ್ಲ್ಯಾಕ್ ಪಿಜ್ಜಾ ನೋಡಿದ್ದೀರಾ? ಇಲ್ಲಿದೆ ನೋಡಿ

ಈ ಪಿಜ್ಜಾಗಳಲ್ಲಿ ಚೀಸ್‌ ಪಿಜ್ಜಾ, ವೈಟ್‌ ಕ್ರಿಮ್‌ ಪಿಜ್ಜಾ, ನಾನ್‌ವೆಜ್‌ ಪಿಜ್ಜಾ ಹೀಗೆಯೇ ಹೇಳ್ತಾ ಹೋದರೆ ಲಿಸ್ಟ್‌ಗೆ ಸಿಗಲ್ಲ ಅಷ್ಟೊಂದು ವಿಧದ ಪಿಜ್ಜಾಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಈಗ ನಾವು ಹೇಳಕ್ಕೆ ಹೋಗ್ತಾ ಇರೋ ಪಿಜ್ಜಾ, ತುಂಬಾ ವಿಶೇಷತೆಯಿಂದ ಕೂಡಿದೆ ಎಂದು ಹೇಳಿದರೆ ತಪ್ಪಲ್ಲ, ಈ ಪಿಜ್ಜಾದ ಬಣ್ಣವನ್ನು ನೀವು ಒಮ್ಮೆ ನೋಡಿದರೆ ಸ್ವಲ್ಪ ಸಮಯ ಆಶ್ಚರ್ಯಗೊಂಡರೂ ಸಹ, ನಂತರ ಅದನ್ನು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದು ನಿಮಗೆ ಅನಿಸುವುದರಲ್ಲಿ ಸಂಶಯವಿಲ್ಲ.

ಬ್ಲ್ಯಾಕ್ ಪಿಜ್ಜಾ

ಬ್ಲ್ಯಾಕ್ ಪಿಜ್ಜಾ

  • Share this:
ಪಿಜ್ಜಾ (Pizza) ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಈಗಂತೂ ನಗರವಾಸಿಗಳಿಗೆ ಈ ಪಿಜ್ಜಾ ಇಲ್ಲದೇ ಬದುಕೇ ಇಲ್ಲವೆಂಬಂತೆ ಪಿಜ್ಜಾ ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಬೇರೆ-ಬೇರೆ ಆಹಾರಗಳನ್ನು (Food) ಎಲ್ಲರೂ ಅವರವರ ಅಭಿರುಚಿಗೆ ತಕ್ಕಂತೆ ಇಷ್ಟಪಟ್ಟರೂ ಕೂಡ, ಈ ಪಿಜ್ಜಾವನ್ನು ಮಾತ್ರ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿವರೆಗೂ ಎಲ್ಲರೂ ಸಮಾನ ಮನಸ್ಥಿತಿಯಿಂದ ಇಷ್ಟ ಪಡುತ್ತಾರೆ. ಅದು ಏಕೆ ಎಂದು ಯಾರಿಗೂ ಇನ್ನು ಅರ್ಥವಾಗುತ್ತಿಲ್ಲ. ಹಾಗೆಯೇ ದಿನ-ದಿನಕ್ಕೆ ಪಿಜ್ಜಾಗಳಲ್ಲೂ ವಿಧ-ವಿಧಗಳು ಮಾರುಕಟ್ಟೆಗೆ (Market) ಬರುತ್ತಿವೆ. ಈ ಪಿಜ್ಜಾಗಳಲ್ಲಿ ಚೀಸ್‌ ಪಿಜ್ಜಾ, ವೈಟ್‌ ಕ್ರಿಮ್‌ ಪಿಜ್ಜಾ, ನಾನ್‌ವೆಜ್‌ ಪಿಜ್ಜಾ ಹೀಗೆಯೇ ಹೇಳ್ತಾ ಹೋದರೆ ಲಿಸ್ಟ್‌ಗೆ ಸಿಗಲ್ಲ ಅಷ್ಟೊಂದು ವಿಧದ ಪಿಜ್ಜಾಗಳು (Types Of Pizza) ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಅದರಲ್ಲೂ ಈಗ ನಾವು ಹೇಳಕ್ಕೆ ಹೋಗ್ತಾ ಇರೋ ಪಿಜ್ಜಾ, ತುಂಬಾ ವಿಶೇಷತೆಯಿಂದ ಕೂಡಿದೆ ಎಂದು ಹೇಳಿದರೆ ತಪ್ಪಲ್ಲ, ಈ ಪಿಜ್ಜಾದ ಬಣ್ಣವನ್ನು ನೀವು ಒಮ್ಮೆ ನೋಡಿದರೆ ಸ್ವಲ್ಪ ಸಮಯ ಆಶ್ಚರ್ಯಗೊಂಡರೂ ಸಹ, ನಂತರ ಅದನ್ನು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದು ನಿಮಗೆ ಅನಿಸುವುದರಲ್ಲಿ ಸಂಶಯವಿಲ್ಲ.

ಹಾಗಿದ್ರೆ ಈ ಹೊಸ ಪಿಜ್ಜಾ ಯಾವುದು?
ಪಿಜ್ಜಾ ಒಂದು ವಿಶೇಷ ರೆಸಿಪಿಯಾಗಿದ್ದು, ಅದು ವರ್ಷದಿಂದ ವರ್ಷಕ್ಕೆ ವಿವಿಧ ರೀತಿಯ ಬದಲಾವಣೆಗಳು ಮತ್ತು ಪ್ರಯೋಗಗಳಿಗೆ ಒಳಪಟ್ಟಿದೆ. ಅನಾನಸ್‌ನಿಂದ ಕೋಸುಗಡ್ಡೆಯವರೆಗೆ ಬಳಸಿ ಈ ಪಿಜ್ಜಾವನ್ನು ತಯಾರಿಸುತ್ತಾರೆ. ಈ ರೆಸಿಪಿಯ ವಿಭಿನ್ನ ಸಂಚಿಕೆಗಳನ್ನು ತೋರಿಸುವ ವಿವಿಧ ವಿಡಿಯೋಗಳು ಆನ್‌ಲೈನ್‌ನಲ್ಲಿವೆ, ದಿನನಿತ್ಯ ಬರುತ್ತಲೇ ಇರುತ್ತವೆ. ಈಗ ಆ ಪಟ್ಟಿಗೆ ಹೊಚ್ಚ ಹೊಸ ಪಿಜ್ಜಾ ಸೆರ್ಪಡೆಗೊಂಡಿದೆ. ಅದು ಯಾವ ಪಿಜ್ಜಾ ಗೊತ್ತಾ? ಅದೇ ಕಪ್ಪು ಬಣ್ಣದ ಚೀಸ್‌ನೊಂದಿಗೆ ತಯಾರಿಸಲಾದ ಬ್ಲ್ಯಾಕ್ ಪಿಜ್ಜಾ.

ಇದನ್ನೂ ಓದಿ: Cooking oil: ಇಲ್ಲಿ ಅಡುಗೆ ಎಣ್ಣೆ ನೀಡಿದ್ರೆ ಬಿಯರ್ ಕೊಡ್ತಾರೆ! ಎಣ್ಣೆ ಅಲ್ಲ, ಅಡುಗೆ ಎಣ್ಣೆಗೆ ಉಂಟಾಗಿದೆ ಮಹಾ ಬಿಕ್ಕಟ್ಟು!

ಈ ಬ್ಲ್ಯಾಕ್ ಪಿಜ್ಜಾದ ವಿಡಿಯೋ ವೈರಲ್  
ಮುಂಬೈನ ಅಂಧೇರಿಯಲ್ಲಿರುವ “ಪಿಜ್ಜಾ ಬೈ ಇಂಜಿನಿಯರ್‌” ಎಂಬ ಕೆಫೆಯಲ್ಲಿ ಈ ಬ್ಲ್ಯಾಕ್ ಪಿಜ್ಜಾವನ್ನು ತಯಾರಿಸಿ, ಮಾರಾಟ ಮಾಡಲಾಗುತ್ತದೆ. ವಾಸ್ತವವಾಗಿ, ಈ ವಿಶಿಷ್ಟ ಬ್ಲ್ಯಾಕ್ ಪಿಜ್ಜಾ ರೆಸಿಪಿಯನ್ನು ತೋರಿಸುವ ಹಲವಾರು ವಿಡಿಯೋಗಳು ಕೂಡ ಆನ್‌ಲೈನ್‌ ಈಗಾಗಲೇ ಸಾಕಷ್ಟು ಇವೆ. ಆದರೆ ಐದು ದಿನಗಳ ಹಿಂದೆ "ಭಾರತದ ಮೊದಲ ಕಪ್ಪು ಚೀಸ್ ಪಿಜ್ಜಾ" ಎಂಬ ಶೀರ್ಷಿಕೆಯೊಂದಿಗೆ ಈ ಬ್ಲ್ಯಾಕ್ ಪಿಜ್ಜಾ ತಯಾರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ ಕೆಲವು ಜನರು ಪಿಜ್ಜಾ ತಿನ್ನುವ ದೃಶ್ಯ ಸೆರೆಯಾಗಿದೆ.
ಬ್ಲ್ಯಾಕ್ ಹೋಲ್ ಪಿಜ್ಜಾ
ಈ ಪಿಜ್ಜಾದಲ್ಲಿ ಇರುವ ಒಂದು ಸ್ಲೈಸ್‌ ಅನ್ನು ಎಳೆದರೆ ಆಗ ಅದರ ಒಳಗೆ ಇರುವ ಕಪ್ಪು ಚೀಸ್‌ ಹೊರಗೆ ಬಂದು ತಿನ್ನುವವರಿಗೆ ಆಶ್ಚರ್ಯ ಮೂಡಿಸುತ್ತದೆ. ಈ ಹೊಸ ಪಿಜ್ಜಾ ರೆಸಿಪಿಯನ್ನು ಬ್ಲ್ಯಾಕ್ ಹೋಲ್ ಪಿಜ್ಜಾ ಎಂದು ಕರೆಯಲಾಗುತ್ತದೆ ಮತ್ತು ಇದರ ಬೆಲೆ 445 ರೂ. ಆಗಿದೆ ಎಂದು ಮತ್ತೊಂದು ವಿಡಿಯೋದಲ್ಲಿ ಇದರ ಬೆಲೆಯನ್ನು ವಿವರಿಸಿದ್ದಾರೆ. ಪಿಜ್ಜಾವು ಕ್ರಸ್ಟ್ ಕಪ್ಪು ಬಣ್ಣದಲ್ಲಿದೆ ಎಂದು ವಿಡಿಯೋ ನೋಡಿದರೆ ಗೊತ್ತಾಗುತ್ತೆ. ಈ ಪಿಜ್ಜಾದಲ್ಲಿ ಬಳಸುವ ಬಣ್ಣವು ನೈಸರ್ಗಿಕವಾಗಿದೆ ಮತ್ತು ಯಾವುದೇ ಕೃತಕ ವಸ್ತುವನ್ನು ಬಳಸಲಾಗುವುದಿಲ್ಲ ಎಂದು ವಿಡಿಯೋದಲ್ಲಿ ಪಠ್ಯದ ಇನ್ಸರ್ಟ್ ವಿವರಿಸುತ್ತದೆ.

ಇದನ್ನೂ ಓದಿ:  Chicken biryani ಅಂದ್ರೆ ಈ ದೇವರಿಗೆ ಇಷ್ಟ! ಭಾರತದಲ್ಲಿ ನಾನ್ ವೆಜ್ ಪ್ರಸಾದ ನೀಡುವ ಈ ದೇವಸ್ಥಾನಗಳಿಗೆ ಭೇಟಿ ನೀಡಿ

ನೋಡಿದೀರಲ್ಲ ಈ ಹೊಸ ಪಿಜ್ಜಾ ಅವತಾರವನ್ನು, ನಿಮಗೂ ಈ ಹೊಸ ಪಿಜ್ಜಾವನ್ನು ತಿನ್ನಬೇಕು ಅನಿಸ್ತಾ ಇದೀಯಾ? ಹಾಗಿದ್ರೆ ಇನ್ನು ಸ್ವಲ್ಪ ದಿನ ತಡಿರಿ, ನಮ್ಮ ರಾಜ್ಯದಲ್ಲೂ ಈ ಬ್ಲ್ಯಾಕ್ ಪಿಜ್ಜಾ ಪ್ರಸಿದ್ಧಿ ಪಡೆಯುತ್ತದೆ. ಆಗ ಮನೆಗೆ ಆರ್ಡರ್‌ ಮಾಡಿಕೊಂಡು ಚೆನ್ನಾಗಿ ತಿನ್ನುವಂತಿರಿ. ಅಷ್ಟು ದಿನ ಕಾಯಕ್ಕೆ ಆಗಲ್ಲ ಅನ್ನೋರು ನಿಮ್ಮ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ತಿನ್ನಿ ಅಷ್ಟೆ.
Published by:Ashwini Prabhu
First published: