Recipe: ಮಿಕ್ಕಿರುವ ಅನ್ನದಿಂದ ಗುಜರಾತಿ ತಿಂಡಿ ಮಾಡಿದ ಚೆಫ್ ಸಂಜೀವ್ ಕಪೂರ್

ಈ ಮುಥಿಯಾ ಸಾಂಪ್ರದಾಯಿಕವಾಗಿ ಕಡಲೆಹಿಟ್ಟು, ಮೆಂತ್ಯೆ, ಉಪ್ಪು, ಅರಿಶಿನ ಮತ್ತು ಇತರೆ ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವ ಭಕ್ಷ್ಯವಾಗಿದೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಹುತೇಕರ ಮನೆಯಲ್ಲಿ ರಾತ್ರಿ ಹೊತ್ತಿನಲ್ಲಿ ಎಲ್ಲರೂ ಊಟ ಮಾಡಿ ಮುಗಿಸಿದ ನಂತರ ಪಾತ್ರೆಯಲ್ಲಿ ಸ್ವಲ್ಪವಾದರೂ ಅನ್ನ, ಪಲ್ಯ ಮತ್ತು ಸಾರು ಮಿಕ್ಕಿರುತ್ತದೆ ಮತ್ತು ಗೃಹಿಣಿಯರು(Housewives) ಮರುದಿನ ಬೆಳಗ್ಗೆ(Morning) ಆ ಮಿಕ್ಕಿರುವ ಅನ್ನವನ್ನು ಬಿಸಾಡುವುದೇ ಅಥವಾ ಅದರಿಂದ ಯಾವುದಾದರೂ ತಿಂಡಿ ಮಾಡಬಹುದೇ ಎಂದು ಆಲೋಚಿಸುತ್ತಾರೆ.ಕೆಲವರು ರಾತ್ರಿ ಮಿಕ್ಕ ಅನ್ನವನ್ನು ಬಳಸಿಕೊಂಡು ಮರುದಿನ ಬೆಳಗ್ಗೆ ಉಪಾಹಾರಕ್ಕೆ(Breakfast) ಚಿತ್ರಾನ್ನ ಮಾಡಿಕೊಳ್ಳುತ್ತಾರೆ. ಹೀಗೆ ರಾತ್ರಿ (Using Rice) ಮಿಕ್ಕಿರುವ ಅನ್ನದಿಂದ ಅನೇಕ ರೀತಿಯ ತಿಂಡಿಗಳನ್ನು ನಾವು ಮಾಡಿಕೊಳ್ಳಬಹುದು. ಕೆಲವರು ಇದರಿಂದ ಚಿತ್ರಾನ್ನ ಮಾಡಿದರೆ, ಇನ್ನೂ ಕೆಲವರು ಈ ಮಿಕ್ಕಿರುವ ಅನ್ನಕ್ಕೆ ಪುಳಿಯೋಗರೆ ಮಿಶ್ರಣ ಹಾಕಿಕೊಂಡು ಬಿಸಿ ಬಿಸಿ ಪುಳಿಯೋಗರೆ ಮಾಡಿಕೊಳ್ಳುತ್ತಾರೆ.

3 ನಿಮಿಷದ ಪುಟ್ಟ ವಿಡಿಯೋ
ಆದರೆ ತುಂಬಾ ಕಡಿಮೆ ಜನರಿಗೆ ಈ ಮಿಕ್ಕಿರುವ ಅನ್ನದಿಂದ ಹೀಗೊಂದು ಗುಜರಾತಿ ಸ್ವಾದಿಷ್ಟಕರವಾದ ತಿಂಡಿಯಾದ ಮುಥಿಯಾವನ್ನು ಮಾಡಿಕೊಳ್ಳಬಹುದು ಎಂದು ತಿಳಿದಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಥಿಯಾ ಗುಜರಾತ್ ರಾಜ್ಯದಲ್ಲಿ ಜನರು ಮಾಡಿಕೊಳ್ಳುವ ಪ್ರಸಿದ್ದ ತಿಂಡಿ ಪದಾರ್ಥ ಮತ್ತು ಬಹುತೇಕರಿಗೆ ಇದು ತುಂಬಾನೇ ಇಷ್ಟ ಎಂದು ಹೇಳಲಾಗುತ್ತದೆ.

ವಿಡಿಯೋ ನೋಡಿ:




ಪ್ರಸಿದ್ಧ ಚೆಫ್ ಆದ ಸಂಜೀವ್ ಕಪೂರ್ ಇತ್ತೀಚೆಗೆ ಈ ಮಿಕ್ಕಿರುವಂತಹ ಅನ್ನದಿಂದ ಹೇಗೆ ಮುಥಿಯಾವನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈ ಜನಪ್ರಿಯ ಗುಜರಾತಿ ಖಾದ್ಯದ ಪಾಕ ವಿಧಾನದ 3 ನಿಮಿಷದ ಪುಟ್ಟ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Breakfast Recipe: ಉಳಿದ ಇಡ್ಲಿಯಲ್ಲೂ ಸಖತ್ ತಿಂಡಿ ಮಾಡ್ಬಹುದು, ಇಡ್ಲಿ ಮಂಚೂರಿ ಟ್ರೈ ಮಾಡಿ ನೋಡಿ

ಮಿಕ್ಕಿರುವ ಅನ್ನದಿಂದ ಮುಥಿಯಾ
ಈ ಮುಥಿಯಾ ಸಾಂಪ್ರದಾಯಿಕವಾಗಿ ಕಡಲೆಹಿಟ್ಟು, ಮೆಂತ್ಯೆ, ಉಪ್ಪು, ಅರಿಶಿನ ಮತ್ತು ಇತರೆ ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವ ಭಕ್ಷ್ಯವಾಗಿದೆ. ಇದನ್ನು ಹಬೆಯಲ್ಲಿ ಬೇಯಿಸಿಕೊಳ್ಳಬಹುದು ಅಥವಾ ಹುರಿದುಕೊಳ್ಳಬಹುದು. ಇಲ್ಲಿ ಚೆಫ್ ಸಂಜೀವ್ ಕಪೂರ್ ಈ ಖಾದ್ಯಕ್ಕೆ ವಿಶಿಷ್ಟ ಮೇಕ್ ಓವರ್ ನೀಡಿರುವುದನ್ನು ನೋಡಬಹುದು ಮತ್ತು ಅದಕ್ಕೆ ಮಿಕ್ಕಿದ ಅನ್ನದ ಮುಥಿಯಾ ಎಂದು ಹೆಸರಿಟ್ಟಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 80,000ಕ್ಕೂ ಹೆಚ್ಚು ಜನರು ನೋಡಿದ್ದಾರೆ.
ಜನಪ್ರಿಯ ಚೆಫ್ ಸಂಜೀವ್ ಕಪೂರ್ ಅವರ ಮಿಕ್ಕಿರುವ ಅನ್ನದಿಂದ ಮುಥಿಯಾ ಹೇಗೆ ಮಾಡುವುದೆಂದು ಹೇಳಿದ್ದಾರೆ. ಈ ಪಾಕ ವಿಧಾನವನ್ನು ನೋಡಿಕೊಂಡು ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.

ಮುಥಿಯಾ ಮಾಡುವ ವಿಧಾನ:
ಮೊದಲಿಗೆ ಮಿಕ್ಕಿರುವ ಎರಡು ಕಪ್‌ನಷ್ಟು ಅನ್ನವನ್ನು ತೆಗೆದುಕೊಳ್ಳಿರಿ. ನಂತರ ಅರ್ಧ ಕಪ್ ಕಡಲೆಹಿಟ್ಟು, ಶುಂಠಿ, ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಪುಡಿ, ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಸಕ್ಕರೆ ಮತ್ತು ಮೊಸರನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿಕೊಳ್ಳಿರಿ.

ಒಂದು ಚಿಟಿಕೆ ಅಡುಗೆ ಸೋಡಾ ಮತ್ತು ಎಣ್ಣೆಯನ್ನು ಆ ಮಿಶ್ರಣಕ್ಕೆ ಸೇರಿಸಿ ಮತ್ತು ಎಲ್ಲವನ್ನೂ ಮತ್ತೊಮ್ಮೆ ಚನ್ನಾಗಿ ಕಲಸಿಕೊಳ್ಳಿರಿ. ಈ ಮಿಶ್ರಣಕ್ಕೆ ಮೃದುವಾದ ಹಿಟ್ಟನ್ನು ಸೇರಿಸಿಕೊಳ್ಳಿರಿ. ಈಗ, ಆ ಮಿಶ್ರಣವನ್ನು ಕೈಗೆ ಎಣ್ಣೆ ಹಾಕಿಕೊಂಡು ಚಿಕ್ಕದಾಗಿ ಉದ್ದನೆಯ ಆಕಾರದಲ್ಲಿ ಮಾಡಿಕೊಳ್ಳಿ. ನಂತರ ಆ ಮುಥಿಯಾಗಳನ್ನು ಹಬೆಯಲ್ಲಿ ಬೇಯಿಸಿ ಮತ್ತು ಅದನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ತೆಗೆದುಕೊಂಡು ಗೋಲಾಕಾರದಲ್ಲಿ ತುಂಡುಗಳಾಗಿ ಕತ್ತರಿಸಿಕೊಳ್ಳಿರಿ.

ಇದನ್ನೂ ಓದಿ: Food Tips: ಮನೆಯಲ್ಲಿಯೇ ಸುಲಭವಾಗಿ ಮೊಳಕೆಕಾಳು ಹೀಗೂ ಮಾಡ್ಬೋದು

ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಎಲೆ ಮತ್ತು ಹಸಿ ಮೆಣಸಿನಕಾಯಿಯ ಒಗ್ಗರಣೆಯನ್ನು ತಯಾರಿಸಿಕೊಳ್ಳಿರಿ ಮತ್ತು ಅದಕ್ಕೆ ಈ ತಣ್ಣಗಾದ ಮುಥಿಯಾಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಬೇಯಿಸಿರಿ. ನಿಮ್ಮ ರುಚಿಕರವಾದ ಮಿಕ್ಕಿದ ಅನ್ನದ ಮುಥಿಯಾವನ್ನು ಸೇವಿಸಲು ನಿಮ್ಮ ತಟ್ಟೆಗೆ ಹಾಕಿಕೊಳ್ಳಿ
Published by:vanithasanjevani vanithasanjevani
First published: