Viral News: ರಸ್ತೆಬದಿಯ Benchನಲ್ಲಿ ಕುಳಿತ ಮಹಿಳೆ ನೋಡಿ ಭಯಭೀತರಾದ ಜನ? ಮುಂದೇನಾಯ್ತು?

ರಸ್ತೆ ಬದಿಯಲ್ಲಿ ಕುಳಿತಿದ್ದ ಮಹಿಳೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ವಿಚಾರಣೆಗಾಗಿ ಮಹಿಳೆಯ ಸಮೀಪ ಹೋದಾಗ ಅವರಿಗೆ ಅಚ್ಚರಿ ಕಾದಿತ್ತು. ಅದು ನಿಜವಾದ ಮನುಷ್ಯನಾಗಿರದೆ ಕೇವಲ ಒಂದು ಪ್ರತಿಮೆಯಾಗಿತ್ತು ಎಂದು ಮಿರರ್ ವರದಿ ಮಾಡಿದೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನೀವು ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬೆಂಚಿನ (Bench) ಮೇಲೆ ಒಬ್ಬಂಟಿಯಾಗಿ ಕುಳಿತಿರುವ ಮಹಿಳೆಯನ್ನು ಕಂಡರೆ ಏನು ಮಾಡುತ್ತೀರಿ..? ಹೆಚ್ಚಿನ ಜನರು ನಿಸ್ಸಂದೇಹವಾಗಿ ಮಹಿಳೆಗೆ ಏನಾದರೂ ಸಹಾಯ ಬೇಕೆ..? ಎಂದು ನೋಡಲು ಹೋಗುತ್ತಾರೆ. ಯುನೈಟೆಡ್ (United Kingdom) ಕಿಂಗ್‌ಡಮ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ(Birmingham) ಇದೇ ರೀತಿಯ ಒಂದು ಘಟನೆ ಇತ್ತೀಚೆಗೆ ಸಂಭವಿಸಿದೆ. ಅಲ್ಲಿಯ ದಾರಿಹೋಕರು, ಮಹಿಳೆಯೊಬ್ಬಳು ರಸ್ತೆಯ (Woman Sitting) ಬದಿಯಲ್ಲಿ ಕುಳಿತಿರುವುದನ್ನು ಗಮನಿಸಿದ್ದಾರೆ.

ಅಚ್ಚರಿ ಕಾದಿತ್ತು
ರಸ್ತೆಯ ಪಕ್ಕದಲ್ಲಿ ಬೆಂಚಿನ ಮೇಲೆ ಮಗುವಿನ ತಳ್ಳು ಬಂಡಿಯೊಂದಿಗೆ ಕುಳಿತಿರುವ ಮಹಿಳೆಯೊಬ್ಬಳನ್ನು ಜನ ಗಮನಿಸಿ, ಕುತೂಹಲಗೊಂಡು ಕೆಲವರು ತಮ್ಮ ಕಾರಿನೊಳಗಿಂದ ಅವಳನ್ನು ಮಾತನಾಡಿಸಿದರೆ, ಮತ್ತೆ ಕೆಲವರು ಹೊರಬಂದು ಆಕೆಯನ್ನು ಮಾತನಾಡಿಸಿದ್ದಾರೆ ಮತ್ತೆ ಆಕೆಯ ಕಥೆ ಕೇಳಿ ಭಯಭೀತರಾಗಿದ್ದಾರೆ.

ರಸ್ತೆ ಬದಿಯಲ್ಲಿ ಕುಳಿತಿದ್ದ ಮಹಿಳೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ವಿಚಾರಣೆಗಾಗಿ ಮಹಿಳೆಯ ಸಮೀಪ ಹೋದಾಗ ಅವರಿಗೆ ಅಚ್ಚರಿ ಕಾದಿತ್ತು. ಅದು ನಿಜವಾದ ಮನುಷ್ಯನಾಗಿರದೆ ಕೇವಲ ಒಂದು ಪ್ರತಿಮೆಯಾಗಿತ್ತು ಎಂದು ಮಿರರ್ ವರದಿ ಮಾಡಿದೆ. ಜನರು ಭಯಭೀತರಾಗಿ ಪ್ರತಿಮೆಯನ್ನು ಹಾದು ಹೋಗುತ್ತಾರೆ, ಕೆಲವರು ಅವಳು ಕ್ಷೇಮವಾಗಿದ್ದಾಳೆಯೇ..? ಎಂದು ತಿಳಿಯಲು ಹತ್ತಿರ ಹೋಗಿ ಆ ಆಕೃತಿಯು ಮನುಷ್ಯನಲ್ಲ, ಕೇವಲ ಪ್ರತಿಮೆ ಎಂದು ತಿಳಿದುಕೊಳ್ಳುತ್ತಾರೆ.

ಹಾಗಾದರೆ ಮಹಿಳೆಯ ಪ್ರತಿಮೆ ಅಲ್ಲಿ ಕುಳಿತಿರುವುದರ ಉದ್ದೇಶವಾದರೂ ಏನು..?

ಆಹಾರ ಟ್ರಕ್ ಮಾಲೀಕರೊಬ್ಬರು ಜನರ ಗಮನ ಸೆಳೆಯಲು ಮಹಿಳೆಯ ಈ ಪ್ರತಿಮೆಯನ್ನು ರಸ್ತೆಯ ಮೇಲೆ ಇರಿಸಿದ್ದಾರೆ. 58ರ ಹರೆಯದ ನಿಕ್ ಅವರು ಅನೇಕ ವರ್ಷಗಳಿಂದ ಈ ಪ್ರತಿಮೆಯನ್ನು ಹೊಂದಿದ್ದು ಅವರು ತಮ್ಮ ಆಹಾರ ಟ್ರಕ್‌ ಅನ್ನು ಎಲ್ಲಿ ನಿಲ್ಲಿಸಿದರೂ ಅದರ ಅಕ್ಕ ಪಕ್ಕದಲ್ಲಿ ಈ ಪ್ರತಿಮೆಯನ್ನು ಇರಿಸುತ್ತಾರೆ.

ಇದನ್ನೂ ಓದಿ: ಮನೆ ಮುಂದೆ ಖಾಲಿ ರಟ್ಟಿನ ಡಬ್ಬ ಎಸೆದಿದ್ದಕ್ಕೆ 40,000 ರೂಪಾಯಿ ದಂಡ! ಕಸ ಎಸೆಯುವ ಮುನ್ನ ಜೋಪಾನ

ನಿಕ್ ಈ ಪ್ರತಿಮೆಗೆ ಇಟ್ಟಿರುವ ಹೆಸರು ಬೆಟ್ಟಿ ಎಂದು. ಹತ್ತು ವರ್ಷಗಳಿಂದ ಅವರ ಬಳಿಯಿರುವ ಈ ಪ್ರತಿಮೆ ನೋಡಿ ಜನರು ಆಗಾಗ ಗೊಂದಲಕ್ಕೆ ಒಳಗಾಗುತ್ತಾರೆ. ಮಹಿಳೆಯ ಸುರಕ್ಷತೆಯನ್ನು ವಿಚಾರಿಸಲು ಹತ್ತಿರ ಬಂದವರು ಪ್ರತಿಮೆಯನ್ನು ನೋಡಿ ಆಶ್ಚರ್ಯಗೊಳ್ಳುತ್ತಾರೆ .

ಈ ಕಥೆಯು ನಿಕ್‌ನೊಂದಿಗೆ ಪ್ರಾರಂಭವಾಗುತ್ತದೆ. ನಿಕ್ ರೂಬೆರಿ, ಹೈ ಸ್ಟ್ರೀಟ್‌ನಲ್ಲಿರುವ PDSA ಚಾರಿಟಿ ಅಂಗಡಿಯಿಂದ 'ಬೆಟ್ಟಿ' ಎಂದು ಹೆಸರಿಸಲಾದ ಮನುಷ್ಯಾಕೃತಿಯನ್ನು ಖರೀದಿಸಿ, ತನ್ನ ಆಹಾರ ವ್ಯಾನ್‌ನ ಪಕ್ಕದಲ್ಲಿ ಮಗುವಿನ ತಳ್ಳುಬಂಡಿಯೊಂದಿಗೆ ಅವಳನ್ನು ವಿವಿಧ ಸ್ಥಾನಗಳಲ್ಲಿ ಇರಿಸಿದರು.

ಪ್ರತಿದಿನ ಯಾರಾದರೂ ಬೆಟ್ಟಿ ಬಗ್ಗೆ ವಿಚಾರಿಸುತ್ತಲೇ ಇರುತ್ತಾರೆ. ಕೆಲವರಿಗೆ ಅವಳು ನಿಜವಾದ ವ್ಯಕ್ತಿಯಾಗಿದ್ದು ಅವಳೊಂದಿಗೆ ತಮ್ಮ ಚಿತ್ರಗಳನ್ನು ತೆಗೆಸಿಕೊಳ್ಳುತ್ತಾರೆ. ಇನ್ನೂ ಕೆಲವರು ಅವಳು ನಿರಾಶ್ರಿತಳಾಗಿದ್ದಾಳೆಂಬ ಕಳಕಳಿಯಿಂದ ಆಕೆಗೆ ಸಹಾಯ ಮಾಡಲು ಬಯಸುತ್ತಾರೆ” ಎಂದು ನಿಕ್ ಹೇಳುತ್ತಾರೆ.

ಇದನ್ನೂ ಓದಿ: Weird News: ಗಿಡ-ಮರ, ಸಾಕು ಪ್ರಾಣಿಗಳ ಜತೆ ಗಂಟೆಗಟ್ಟಲೆ ಮಾತನಾಡುತ್ತಾರಂತೆ ಬ್ರಿಟನ್‌ ಜನ!

 ಕಣ್ಣುಗಳನ್ನೇ ನಂಬಲಾಗಲಿಲ್ಲ
ಹಲವಾರು ವರ್ಷಗಳ ಹಿಂದೆ, ಕೌನ್ಸಿಲ್ ಅಧಿಕಾರಿಯೊಬ್ಬರು ಈ 'ಮಹಿಳೆ' ಬಗ್ಗೆ ಕಳವಳ ವ್ಯಕ್ತಪಡಿಸಿ , ಮುಂದಿನ ಸಭೆಯಲ್ಲಿ ಅವಳನ್ನು ಚರ್ಚಿಸಲು ಅಜೆಂಡಾದಲ್ಲಿದೆ ಎಂದು ತಿಳಿಸಿದರು“. ಈ ಪಾನೀಯವನ್ನು ಅವಳಿಗೆ ಕೊಡಿ ಎಂದು ನಾನು ಅವರಿಗೆ ಹೇಳಿದೆ, ಮತ್ತು ತಾನು ನೋಡುತ್ತಿರುವುದು ಪ್ರತಿಮೆ..! ಎಂದು ಅರಿವಾದಾಗ ಆತನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. 'ಓಹ್ ನೋ ' ಎಂಬ ಉದ್ಗಾರ ಆತನ ಬಾಯಿಯಿಂದ ಹೊರಡಿತು, 'ಮತ್ತೀಗ ವರದಿಯನ್ನು ಪೂರ್ಣಗೊಳಿಸಲಾಗಿದೆ!' ಎಂದು ನಿಕ್ ನಗುತ್ತ ಹೇಳಿದರು .

ಕೆಲವೊಮ್ಮೆ ನಾನು ಮಗುವಿನ ತಳ್ಳುಬಂಡಿಯನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ಅಲ್ಲಿಂದ ಸರಿಸಿದಾಗ ಜನರು 'ಮಗು ಎಲ್ಲಿದೆ?' ಎಂದು ಕೇಳುವುದು ಮತ್ತು ನಾನು 'ಅದು ಬೆಳೆದು ಶಾಲೆಗೆ ಹೋಗಿದೆ ಎಂದು ಉತ್ತರಿಸುವುದು ತುಂಬಾ ಬಾರಿ ನಡೆದಿದೆ ಎಂದವರು ಹೇಳಿಕೊಂಡರು .
Published by:vanithasanjevani vanithasanjevani
First published: