Haunted Place: ಅಧಿಕಾರದ ಆಸೆಯಿಂದ ಪುಟ್ಟ ರಾಜಕುಮಾರನ ತುಂಡು ತುಂಡು ಮಾಡಿ ಎಸೆದರು! ಈಗ ಈ ಕೋಟೆ ಹೇಗಿದೆ?

Shaniwar Wada: ಶನಿವಾರ ವಾಡ ಕೋಟೆ ಬಗ್ಗೆ ಗೊತ್ತೇ? ಪುಟ್ಟ ರಾಜ ಕುಮಾರನ ಕೊಂದು ತುಂಡು ತುಂಡುಗಳಾಗಿ ಎಸೆದಿದ್ದರು. ಕ್ರೂರ ಅಂತ್ಯ ಕಂಡ ಮುಗ್ಧ ರಾಜಕುಮಾರನ ಆತ್ಮ ಮರಳಿ ಬಂದಿದ್ದು ಮಾತ್ರ ಭೀಕರವಾಗಿ.

ಶನಿವಾರ ವಾಡ ಕೋಟೆ

ಶನಿವಾರ ವಾಡ ಕೋಟೆ

  • Share this:
ಭಾರತದಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ. ಕೆಲವೊಂದು ಪ್ರದೇಶಗಳು ಸೌಂದರ್ಯದಿಂದ ಹೆಸರುವಾಸಿಯಾದರೆ ಇನ್ನು ಕೆಲವು ಪ್ರವಾಸಿ ತಾಣಗಳು (Tourist Place) ಅಲ್ಲಿನ ವಿಚಿತ್ರ ಕಾರಣಗಳಿಂದಾಗಿ ಸುದ್ದಿಯಾಗಿವೆ. ಪ್ರಪಂಚದಾದ್ಯಂತ ಬಹಳಷ್ಟು ಕಡೆಗಳಲ್ಲಿ ಪ್ರೇತ ಬಾಧಿತ ಸ್ಥಳಗಳಿವೆ. ಹಾಂಟೆಡ್ ಪ್ಲೇಸ್ (Haunted Place) ಎಂದು ಕರೆಯಲ್ಪಡುವ ನಿಗೂಢ ರಹಸ್ಯ ಸ್ಥಳಗಳಿಗೆ ಭಾರತದಲ್ಲಿ ಕೊರತೆ ಇಲ್ಲ. ಇಂಥಹ ಭಯಹುಟ್ಟಿಸುವ, ಬೆಚ್ಚಿಬೀಳಿಸುವ ಅತ್ಯಂತ ರೊಚಕ ಕಥೆಗಳನ್ನು ತಮ್ಮಲ್ಲಿ ಹುದುಗಿಸಿಕೊಂಡಿರುವ ಕೋಟೆಗಳು (Fort) ಅರಮನೆಗಳೂ ಭಾರತದಲ್ಲಿ ಕಾಣಸಿಗುತ್ತವೆ. ಇದೊಂದು ರೀತಿ ಎಂದೂ ಬಯಲಾಗದ ಸತ್ಯ. ಇಲ್ಲಿನ ನಿಗೂಢವನ್ನು ಪತ್ತೆ ಹಚ್ಚುವುದು ಹಾಗಿರಲಿ, ಆದರೆ ಸಾಮಾನ್ಯ ಪ್ರವಾಸಿ ತಾಣವಾಗಿ ಇವೆಲ್ಲವೂ ಅಭಿವೃದ್ಧಿಯಾಗಿವೆ. ಆದರೂ ಇದರೊಳಗಿನ ಸತ್ಯ ಇಂದಿಗೂ ಜನರನ್ನು ಬೆಚ್ಚಿ ಬೀಳಿಸುವಂತಿದೆ.

ಪುಣೆಯು ಪಶ್ಚಿಮ ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ವಿಶಾಲವಾದ ನಗರ. ಇದು ಒಮ್ಮೆ ಮರಾಠಾ ಸಾಮ್ರಾಜ್ಯದ ಪೇಶ್ವೆಗಳ ಅಂದರೆ ಪೇಶ್ವೆ ಪ್ರಧಾನ ಮಂತ್ರಿಗಳ ನೆಲೆಯಾಗಿತ್ತು. ಇದು 1674 ರಿಂದ 1818 ರವರೆಗೆ ಇತ್ತು. ಇದು 1892 ರಲ್ಲಿ ನಿರ್ಮಿಸಲಾದ ಭವ್ಯವಾದ ಅಗಾ ಖಾನ್ ಅರಮನೆಗೆ ಹೆಸರುವಾಸಿಯಾಗಿದೆ. ಇಲ್ಲಿ ಬಹಳಷ್ಟು ಪ್ರವಾಸಿ ತಾಣಗಳು, ಹಳೆಯ ರಾಜರ ಅರಮನೆ, ಕಟ್ಟಡ, ಕೋಟೆಗಳೂ ಇವೆ.

ರಾಜಕುಮಾರ ನಾರಾಯಣರಾವ್

ಶನಿವಾರ ವಾಡಾ (Shaniwar Wada) ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆಯಲ್ಲಿರುವ ಅತ್ಯಂತ ಭಯಾನಕ ಹಾಗೂ ಹಾಂಟೆಡ್ ಸ್ಥಳಗಳಲ್ಲಿ ಒಂದಾಗಿದೆ. ಪುಣೆಯ ಶನಿವಾರ ವಾಡಾ ಕೋಟೆಯ ಗೋಡೆಗಳು ಸುಮೇರ್ ಸಿಂಗ್ ಗಾರ್ಡಿಯಿಂದ ಕೊಲ್ಲಲ್ಪಟ್ಟ ಚಿಕ್ಕ ಹುಡುಗ ರಾಜಕುಮಾರ ನಾರಾಯಣರಾವ್ ನೋವಿನ ಕಥೆಯನ್ನು ಹೇಳುತ್ತವೆ.

ಚಿಕ್ಕಪ್ಪಾ ನನ್ನ ಕಾಪಾಡಿ

ಪ್ರತಿ ಅಮಾವಾಸ್ಯೆಯ ರಾತ್ರಿ ಈ ಕೋಟೆಯು ಭೂತಗಳ ತಾಣವಾಗುತ್ತದೆ. ರಾಜಕುಮಾರ ನಾರಾಯಣರಾವ್ ಅವರ ಆತ್ಮವು ಅವರ ಹಿಂದಿನ ಮರಣದ ಜೀವನದ ಕೊನೆಯ ಮಾತುಗಳನ್ನು ಹೇಳುವುದನ್ನು ಜನ ಕೇಳಿದ್ದಾರೆ ಎನ್ನಲಾಗುತ್ತದೆ. ಕೋಟೆಯಿಂದ ಜನರು "ಕಾಕಾ ಮಾಲಾ ವಾಚ್ವಾ" (ಚಿಕ್ಕಪ್ಪ ನನ್ನನ್ನು ಉಳಿಸಿ) ಎಂಬ ಶಬ್ದವನ್ನು ಆಗಾಗ್ಗೆ ಕೇಳುತ್ತಾರೆ.

ಶನಿವಾರದಂದು 30 ಜನವರಿ 1730 ರಂದು ಕೋಟೆಯ ವಿಧ್ಯುಕ್ತ ಅಡಿಪಾಯವನ್ನು ಪ್ರಾರಂಭಿಸಿದ್ದರಿಂದ ಶನಿವಾರ ವಾಡದ ಹೆಸರು ಶನಿವಾರ (ಶನಿವಾರ) ಪದದಿಂದ ಹುಟ್ಟಿಕೊಂಡಿದೆ.

ಇದನ್ನೂ ಓದಿ:   Haunted Places: ಜಗತ್ತಿನಲ್ಲಿಯೇ ಅತ್ಯಂತ ಭಯಾನಕ ಸ್ಥಳಗಳಿವು! ಇಲ್ಲಿ ಹಗಲಲ್ಲೂ ಓಡಾಡಲ್ಲ ಜನ

ಒಂದು ಕಾಲದಲ್ಲಿ ಪೇಶ್ವೆಗಳ ವಾಸಸ್ಥಾನವಾಗಿದ್ದ, ಈ ಭದ್ರವಾದ ಕೋಟೆಗೆ ಇಂದು ಜನ ಕಾಲಿಡಲು ಹೆಸರುತ್ತಾರೆ. ಇದೀಗ ದೆವ್ವದ ಕೋಟೆಯಾಗಿ ಜನಪ್ರಿಯವಾಗಿದೆ. ಪೇಶ್ವೆಗಳ 13 ಅಂತಸ್ತಿನ ಕೋಟೆಯ ಅರಮನೆಯೇ ಭವ್ಯವಾದ ಈ ಶನಿವಾರ ವಾಡಾ. ಈ ಸುಂದರವಾದ ಕೋಟೆಯನ್ನು ಬಾಜಿರಾವ್ 1 ರವರು ನಿರ್ಮಿಸಿದರು.

ಈ ಕೋಟೆ ಸಾಧನೆ, ಪರಾಕ್ರಮ ಮಾತ್ರವಲ್ಲ, ಸಾವು, ನೋವು ಅಧಿಕಾರ ದಾಹದ ಬಗ್ಗೆಯೂ ಮಾತನಾಡುತ್ತೆ

ಈ ಅಸಾಧಾರಣ ಕೋಟೆಯು ಪೇಶ್ವೆಗಳ ಇತಿಹಾಸದ ಅನೇಕ ಅಧ್ಯಾಯವನ್ನು ತೆರೆದಿಡುತ್ತದೆ. ಅದರಲ್ಲಿ ಪೇಶ್ವೆಗಳ ವೀರತ್ವ, ಸಾಹಸ, ಆಡಳಿತ ಮಾತ್ರವಲ್ಲ ಅಧಿಕಾರ ದಾಹದ ವಂಚನೆಗಳ, ಕೊಲೆಯ, ಭೀಕರ ಹತ್ಯೆಗಳು, ಹಲವಾರು ನೋವಿನ ಸಾವುಗ ಬಗ್ಗೆಯೂ ತಿಳಿಸುತ್ತದೆ.

ಅಣ್ಣನ ಮಗನ ಕೊಲ್ಲಲು ಸಂಚು

ಇತಿಹಾಸದ ಮಾಹಿತಿಯ ಪ್ರಕಾರ, 18 ವರ್ಷದ ನಾರಾಯಣ ರಾವ್‌ ಅನುವಂಶಿಕವಾಗಿ ಅಧಿಕಾರಕ್ಕೆ ಬಂದಾಗ, ಇದರ ಬಗ್ಗೆ ಅತೃಪ್ತಗೊಂಡಿದ್ದ ಬಾಲಕನ ಚಿಕ್ಕಪ್ಪ ರಘುನಾಥ್ ರಾವ್‌ ಕೊಲೆಗೆ ಸಂಚು ರೂಪಿಸುತ್ತಾನೆ. ಇದಕ್ಕೆ ರಘುನಾಥ್‌ ರಾವ್‌ ರ ಹೆಂಡತಿ ಕೂಡ ಸಾಥ್‌ ನೀಡುತ್ತಾಳೆ.

ಇದನ್ನೂ ಓದಿ: Haunted Places in Karnataka: ದೆವ್ವಗಳಿರೋ ಅನುಭವವಾಗಲು ಕರ್ನಾಟಕದ ಈ ಜಾಗಗಳಿಗೆ ಭೇಟಿ ನೀಡಬಹುದಂತೆ!

ರಘುನಾಥ್‌ ರಾವ್‌, ನಾರಾಯಣ ರಾವ್‌ ನನ್ನು ಅಪಹರಿಸಿ ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದಿದ್ದರಂತೆ. ಈ ಸಮಯದಲ್ಲಿ ಪೇಶ್ವೆ ನಾರಾಯಣ ರಾವ್‌ ತನ್ನ ಚಿಕ್ಕಪ್ಪನನ್ನು ಕುರಿತು “ಕಾಕ ಮಲಾ ವಾಚವಾ” (ಚಿಕ್ಕಪ್ಪ ನನ್ನನ್ನು ಕಾಪಾಡಿ) ಎಂದು ಕೇಳಿಕೊಳ್ಳುತ್ತಾನೆ.

ಆರೂವರೆ ನಂತರ ನೋ ಎಂಟ್ರಿ

ಪುಟ್ಟ ರಾಜಕುಮಾರ ಸಾವನ್ನಪ್ಪಿ ಆತನ ದಾರುಣ ಸಾವಿನ ನೋವು ಇಂದಿಗೂ ಪ್ರತಿಧ್ವನಿಸುತ್ತದೆ ಎನ್ನಲಾಗಿದೆ. ಸಂಜೆ 6 ಗಂಟೆಯ ನಂತರ ಈ ಕೋಟೆಗೆ ಪ್ರವೇಶ ನಿರ್ಭಂದಿಸಲಾಗಿದೆ. ಕೋಟೆಯಲ್ಲಿ ಐದು ದ್ವಾರಗಳಿವೆ. ಅವು ದೆಹಲಿ ದರ್ವಾಜಾ, ಖಿಡ್ಕಿ ದರ್ವಾಜಾ, ಗಣೇಶ್ ದರ್ವಾಜಾ, ನಾರಾಯಣ ದರ್ವಾಜಾ ಮತ್ತು ಮಸ್ತಾನಿ ದರ್ವಾಜಾ. ಬ್ಲಾಕ್‌ ಬಸ್ಟರ್‌ ಮೂವಿ ಬಾಜಿ ರಾವ್ ಮಸ್ತಾನಿ ಸಿನಿಮಾವನ್ನು ಇಲ್ಲಿಯೇ ಚಿತ್ರೀಸಲಾಗಿದೆ.
Published by:Divya D
First published: