ಈ ರೈಲು ನಿಲ್ದಾಣಗಳ ಹೆಸರು ಕೇಳಿದರೆ ನೀವು ಶಾಕ್ ಆಗೋದು ಖಂಡಿತ!

ಭಾರತದಲ್ಲಿರುವ ಕೆಲವು ರೈಲು ನಿಲ್ದಾಣಗಳ ಹೆಸರುಗಳು ವಿಶೇಷವಾಗಿರುತ್ತವೆ, ಇಲ್ಲ ವಿಚಿತ್ರವಾಗಿರುತ್ತವೆ. ಅದೇನೇ ಇರಲಿ, ಸಂಬಂಧಗಳ ಹೆಸರುಳ್ಳ ರೈಲು ನಿಲ್ದಾಣಗಳ ಬಗ್ಗೆ ಕೇಳಿದ್ದೀರಾ..?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಬಂಧಗಳ ಹೆಸರುಳ್ಳ ರೈಲು ನಿಲ್ದಾಣಗಳ ಬಗ್ಗೆ ಕೇಳಿದ್ದೀರಾ? ಇಲ್ಲವಾದರೆ ಅಂತಹ ಕೆಲವು ರೈಲು ನಿಲ್ದಾಣಗಳ ಮಾಹಿತಿಯನ್ನು ಇಲ್ಲಿ ನಿಮಗಾಗಿ ಹೊತ್ತು ತಂದಿದ್ದೇವೆ. ರೈಲು ಸಂಚಾರ ಭಾರತೀಯ ಸಾರಿಗೆ ವ್ಯವಸ್ಥೆಯ ಬೆನ್ನೆಲುಬು. ದೇಶದುದ್ದಕ್ಕೂ ಸಂಪರ್ಕ ಜಾಲವನ್ನು ಹೊಂದಿದೆ. ಭಾರತದಲ್ಲಿರುವ ಕೆಲವು ರೈಲು ನಿಲ್ದಾಣಗಳ ಹೆಸರುಗಳು ವಿಶೇಷವಾಗಿರುತ್ತವೆ, ಇಲ್ಲ ವಿಚಿತ್ರವಾಗಿರುತ್ತವೆ. ಅದೇನೇ ಇರಲಿ, ಸಂಬಂಧಗಳ ಹೆಸರುಳ್ಳ ರೈಲು ನಿಲ್ದಾಣಗಳ ಬಗ್ಗೆ ಕೇಳಿರುವಿರಾ? ಇಲ್ಲವಾದರೆ ಅಂತಹ ಕೆಲವು ರೈಲು ನಿಲ್ದಾಣಗಳ ಮಾಹಿತಿ ಇಲ್ಲಿದೆ. 

ಬಾಪ್​ ಎನ್ನುವುದು ಹಿಂದಿಯ ಪದ. ಹಿಂದಿಯಲ್ಲಿ ಬಾಪ್ ಎಂದರೆ ಅಪ್ಪ ಎಂದರ್ಥ. ವಾಯುವ್ಯ ರೈಲ್ವೇಯ ಭಾಗವಾಗಿರುವ ಬಿಕನೇರ್ ವಿಭಾಗದಲ್ಲಿ ಈ ರೈಲು ನಿಲ್ದಾಣ ಇದೆ. ದಾಖಲೆಗಳ ಪ್ರಕಾರ, ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿರುವ ಬಾಪ್ ಗ್ರಾಮಕ್ಕೆ ಹತ್ತಿರದಲ್ಲಿ ಇರುವುದರಿಂದ,ಈ ನಿಲ್ದಾಣಕ್ಕೆ ಆ ಹೆಸರು ಬಂದಿದೆ. ಆ ಗ್ರಾಮಕ್ಕೆ ಯಾಕೆ ಆ ಹೆಸರು ಬಂದಿದೆ ಎಂಬುದಕ್ಕೆ ದಾಖಲೆಗಳಿಲ್ಲ.

ಮತ್ತೊಂದು ಹಿಂದಿ ಪದ ನಾನಾ. ಹಿಂದಿಯಲ್ಲಿ ನಾನಾ ಎಂದರೆ ಅಜ್ಜ ಎಂದರ್ಥ. ವಾಯುವ್ಯ ರೈಲ್ವೆಯ ಅಜ್ಮೇರ್ ವಿಭಾಗದ ಅಡಿಯಲ್ಲಿ ಈ ನಿಲ್ದಾಣ ಬರುತ್ತದೆ. ರಾಜಸ್ಥಾನದ ಪಾಟೀಲ್ ಜಿಲ್ಲೆಯಲ್ಲಿರುವ ನಾನಾ ಗ್ರಾಮ , ಈ ರೈಲು ನಿಲ್ದಾಣಕ್ಕೆ ಹತ್ತಿರ ಇರುವುದರಿಂದ ಈ ಹೆಸರು ಬಂದಿದೆ. ನಾನಾ ಗ್ರಾಮಕ್ಕೆ ನಾನಾಕ ಎಂಬ ಪುರಾತನ ಹೆಸರಿತ್ತು.

2 trains collide in Pakistan; 30 killed, 50 injured.
ಸಾಂದರ್ಭಿಕ ಚಿತ್ರ


ಬಿಟಿಯಾ ಎಂದರೆ ಹಿಂದಿಯಲ್ಲಿ ಮಗಳು ಅಂತಾರೆ. ಆದರೆ, ಮಗಳಿಗೂ ಈ ನಿಲ್ದಾಣದ ಹೆಸರಿಗೂ ಯಾವ ಸಂಬಂಧವೂ ಇಲ್ಲ. ದಾಖಲೆಗಳ ಪ್ರಕಾರ ಬಿಹಾರದ ಪಶ್ಚಿಮ ಚಂಪರಣ್ ಜಿಲ್ಲೆಯಲ್ಲಿ ಹಿಂದೊಮ್ಮೆ ಬ್ರಾಹ್ಮಣರ ಆಳ್ವಿಕೆ ಇತ್ತು, ಅದನ್ನು ಬಿಟಿಯಾ ರಾಜ್ ಎಂದು ಕರೆಯುತ್ತಿದ್ದರು. ಅವರ ಆಳ್ವಿಕೆಯಲ್ಲಿ ನಗರದ ಉದ್ಧಾರವಾಗಿದ್ದರಿಂದ, ಜನ ಪ್ರೀತಿಯಿಂದ ನಗರಕ್ಕೂ ರಾಜ ಮನೆತನದ ಹೆಸರನ್ನೇ ಇಟ್ಟರು.ಅದೇ ಕಾರಣಕ್ಕೆ ರೈಲು ನಿಲ್ದಾಣಕ್ಕೆ ಆ ಹೆಸರು ಬಂದಿದೆ.

ಇದನ್ನೂ ಓದಿ: Bigg Boss 8 Kannada: ಟಾಸ್ಕ್​ನಲ್ಲಿ ಅರವಿಂದನ್ನೇ ಸೋಲಿಸಿ ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆದ ದಿವ್ಯಾ ಉರುಡುಗ

ಓಡನಿಯಾ ಚಾಚಾ ಹಿಂದಿಯಲ್ಲಿ ಚಾಚಾ ಎಂದರೆ ಚಿಕ್ಕಪ್ಪ ಅಥವಾ ಅಂಕಲ್ ಎಂದರ್ಥ. ಈ ನಿಲ್ದಾಣ ಜೈಸಲ್ಮೇರ್ ಜಿಲ್ಲೆಯಲ್ಲಿದೆ. ಜೋಧಪುರ ಮತ್ತು ಜೈಸಲ್ಮೇರ್ ನಡುವೆ ಹಾದು ಹೋಗುವ ರೈಲುಗಳು ಇಲ್ಲಿ ನಿಲ್ಲುತ್ತವೆ. ಈ ಮಾರ್ಗದಲ್ಲಿ ಸಾಕಷ್ಟು ರೈಲುಗಳು ಹಾದು ಹೋದರೂ , ನಿಲ್ಲುವುದು ಕೇವಲ ಎರಡು ರೈಲುಗಳು ಮಾತ್ರ.

ಸಾಲಿ... ಹಿಂದಿಯಲ್ಲಿ ಸಾಲಿ ಎಂದರೆ ನಾದಿನಿ. ವಾಯುವ್ಯ ರೈಲ್ವೇ ವಿಭಾಗದ ಜೈಪುರ್ ವಿಭಾಗದಲ್ಲಿ ಈ ನಿಲ್ದಾಣ ಬರುತ್ತದೆ. ದಾಖಲೆಗಳ ಪ್ರಕಾರ, ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಈ ನಿಲ್ದಾಣದಲ್ಲಿ  ಕೇವಲ ಎರಡು ಪ್ಯಾಸೆಂಜರ್ ರೈಲುಗಳು ನಿಲ್ಲುತ್ತವೆ.

ಇದನ್ನೂ ಓದಿ: Aamir Khan-Kiran Rao: ರಾಜಮನೆತನದ ಹುಡುಗಿಯನ್ನು ಪ್ರೀತಿ ಮದುವೆಯಾದ ಆಮೀರ್ ಖಾನ್​​: ಹೇಗಿದೆ ಗೊತ್ತಾ ಇವರ ಲವ್​ ಸ್ಟೋರಿ..!

ಸಹೇಲಿ... ಹಿಂದಿಯಲ್ಲಿ ಸಹೇಲಿ ಎಂದರೆ ಗೆಳತಿ. ಭೋಪಾಲ್ -ನಾಗಪುರ  ರೈಲ್ವೇ ವಿಭಾಗದ ಅಡಿಯಲ್ಲಿ ಈ ನಿಲ್ದಾಣ ಬರುತ್ತದೆ. ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿರುವ ಸಹೇಲಿ ಎಂಬ ಚಿಕ್ಕ ಗ್ರಾಮಕ್ಕೆ ಹತ್ತಿರ ಇರುವುದರಿಂದ ಈ ಹೆಸರು ಬಂದಿದೆ. ಆ ಗ್ರಾಮಕ್ಕೆ ಸಹೇಲಿ ಎಂಬ ಹೆಸರು ಏಕೆ ಬಂದಿದೆ ಎಂಬುದು ಯಾರಿಗೂ ಗೊತ್ತಿಲ್ಲ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: