HOME » NEWS » Trend » HARBHAJAN KAUR STARTED HER ENTREPRENEURIAL JOURNEY AT THE AGE OF 90 STG SESR

90ನೇ ಇಳಿ ವಯಸ್ಸಿನಲ್ಲಿ ಯಶಸ್ವಿ ಉದ್ಯಮಿ; ಸಾಧನೆಗೆ ಬೇಕಿರುವುದು ಛಲ, ವಯಸ್ಸಲ್ಲ

ವಯಸ್ಸನ್ನು ನಂಬಿ ಕೆಲಸ ಮಾಡದೇ ಮನಸ್ಸು, ಆತ್ಮವಿಶ್ವಾಸವನ್ನು ನಂಬಿ ಶ್ರಮವಹಿಸಿದರೆ ಸಾಧನೆ, ಯಶಸ್ಸು ಅಸಾಧ್ಯವಾಗದು

Trending Desk
Updated:June 19, 2021, 4:39 PM IST
90ನೇ ಇಳಿ ವಯಸ್ಸಿನಲ್ಲಿ ಯಶಸ್ವಿ ಉದ್ಯಮಿ; ಸಾಧನೆಗೆ ಬೇಕಿರುವುದು ಛಲ, ವಯಸ್ಸಲ್ಲ
ವಯಸ್ಸನ್ನು ನಂಬಿ ಕೆಲಸ ಮಾಡದೇ ಮನಸ್ಸು, ಆತ್ಮವಿಶ್ವಾಸವನ್ನು ನಂಬಿ ಶ್ರಮವಹಿಸಿದರೆ ಸಾಧನೆ, ಯಶಸ್ಸು ಅಸಾಧ್ಯವಾಗದು
  • Share this:

ಮನುಷ್ಯನಿಗೆ ವಯಸ್ಸಾಗುವುದು ಸಹಜ. ಹಾಗಾಗಿ ಇಳಿವಯಸ್ಸಿನಲ್ಲಿ ಯಾವುದೇ ತೊಂದರೆಯಾಗಬಾರದೆಂದು ಯವ್ವನಾವಸ್ಥೆಯಲ್ಲೇ ಹೆಚ್ಚು ಸಂಪಾದನೆ ಮಾಡಿ ಉಳಿತಾಯ ಮಾಡಿಕೊಳ್ಳುತ್ತಾರೆ. ಭವಿಷ್ಯದ ದೃಷ್ಟಿಯಿಂದ ದಣಿವರಿಯದೆ ಶ್ರಮವಹಿಸಲಾಗುತ್ತದೆ. ಏಕೆಂದರೆ ಇಳಿವಯಸ್ಸಿನಲ್ಲಿ ನಮ್ಮ ಮನಸ್ಸು ಕೆಲಸ ಮಾಡಲು ಹವಣಿಸಿದರೂ ದೇಹ ಮಾತ್ರ ಸಹಕರಿಸುವುದಿಲ್ಲ. ಆದರೆ ಇಲ್ಲೊಬ್ಬ 90 ವಯೋಮಾನದ ಅಜ್ಜಿ ಉದ್ಯಮಿಯಾಗಿ ಬದಲಾಗಿದ್ದಾರೆ. ಯಾವಾಗಲೂ ವಯಸ್ಸು ಕೇವಲ ಸಂಖ್ಯೆ ಎಂದು ಪುನಃ ಪುನಃ ಸಾಬೀತಾಗುತ್ತಲೇ ಇರುತ್ತದೆ. ಇವರ ವಿಷಯದಲ್ಲೂ ಇದು ಸಾಬೀತಾಗಿದೆ. ಇದು ನಂಬಲು ಅಸಾಧ್ಯವಾದರೂ ನಂಬಲೇ ಬೇಕು.


90ರ ಇಳಿವಯಸ್ಸಿನಲ್ಲೂ ತಮ್ಮ ಉತ್ಸಾಹ ಕಳೆದುಕೊಳ್ಳದ ಚಿರವೃದ್ಧೆಯೇ ಹರ್ಭಜನ್ ಕೌರ್. ಯೌವ್ವನಾವಸ್ಥೆಯಲ್ಲಿ ಒಂದು ರೂಪಾಯಿ ಹಣವನ್ನು ಸಂಪಾದಿಸದೆ ಕಳೆದೆ ಎನ್ನುವ ಇವರು ತಮ್ಮ ಉದ್ಯಮವನ್ನು ಸಣ್ಣ ಮಟ್ಟದಲ್ಲೂ ಪ್ರಾರಂಭಿಸಿದರೂ ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುವ ಅಭಿಲಾಷೆ ಹೊಂದಿದ್ದಾರೆ.ಹ್ಯೂಮನ್ಸ್ ಆಫ್ ಬಾಂಬೆ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇವರ ಯಶೋಗಾಥೆ ಶೇರ್ ಆಗಿದ್ದು, ಹತ್ತಿರ ಎರಡೂ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.


ಯಾವ ಉದ್ಯಮ? ಆರಂಭವಾಗಿದ್ದು ಹೇಗೆ?


ಸುಮಾರು ಐದು ವರ್ಷಗಳ ಹಿಂದೆ ಕೌರ್ ಅವರು ತಮಗೆ ಯಾವಾಗಲೂ ಪ್ರಿಯವಾಗಿದ್ದ ಅಡುಗೆ ಮಾಡುವ ಕಲೆಯಲ್ಲಿಯೇ ತಮ್ಮ ಉದ್ಯಮ ಚಿಂತನೆಯನ್ನು ವಿಸ್ತರಿಸಿದರು. ಹೌದು ತಮ್ಮ ಮಗಳ ಮಾತನ್ನು ಕೇಳಿದ ಇವರು ತಮ್ಮ ಉದ್ಯಮ ಆರಂಭಿಸಿಯೇ ಬಿಟ್ಟರು. ಮಗಳು ಒಮ್ಮೆ ನೀವು ಯಾಕೆ ಬರ್ಫಿಯನ್ನು ಮಾಡಿ ಮಾರಾಟ ಮಾಡಬಾರದು ಎಂದು ಕೇಳಿದರು. ಆಗಲೇ ಉದಯವಾಯಿತು ವೃದ್ಧೆಯ ಉದ್ಯಮ.

ಇವರು ತಯಾರಿಸಿದ ಮೊದಲ ದಿನದಲ್ಲೇ ಬರ್ಫಿ ಕೆಲವೇ ಗಂಟೆಗಳಲ್ಲೇ ಮಾರಾಟವಾದವು. ಮೊದಲ ದಿನವೇ 2000 ಹಣವನ್ನೂ ಸಂಪಾದಿಸಿದರು. ನಂತರ ನಿರಂತರವಾಗಿ ವ್ಯಾಪಾರ ಪ್ರಸಿದ್ಧಿ ಪಡೆಯಿತು. ಇನ್ನು 2020ರಲ್ಲಿ ವರ್ಷದ ಉತ್ತಮ ಉದ್ಯಮಿ ಎಂಬ ಕೀರ್ತಿಗೂ ಭಾಜನರಾದರು.


ಕೊರೋನಾ ಎರಡನೇ ಅಲೆಯಲ್ಲಿ ಕೌರ್ ಅವರಿಗೂ ಕೊರೋನಾ ಕಾಣಿಸಿಕೊಂಡಿತು. ಇಳಿವಯಸ್ಸಿನಲ್ಲೂ ಕೊರೋನಾವನ್ನು ಜಯಿಸಿದರು. ಇದೀಗ ಇವರು ಕೇವಲ ಉದ್ಯಮಿ ಮಾತ್ರವಲ್ಲ, ಇನ್‍ಸ್ಟಾಗ್ರಾಮ್‍ನ ಸ್ಟಾರ್ ಆಗಿದ್ದಾರೆ. ಇವರನ್ನು ಸಾಮಾಜಿಕ ಜಾಲತಾಣದಲ್ಲಿ ಸುಮಾರು 12 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.


ಅಜ್ಜಿ ಮಾಡುವ ಆಹಾರವನ್ನು ಅವರ ಮೊಮ್ಮಕಳು ವಿಡಿಯೋ ಮಾಡಿ ಅವರ ಖಾತೆಯಲ್ಲಿ ಅಪ್‍ಲೋಡ್ ಮಾಡುತ್ತಿದ್ದಾರೆ.


ಕಳೆದ ವಾರ ವಿಶೇಷವಾದ ಟ್ಯಾಂಗರಿನ್ ಪಾನೀಯ ತಯಾರು ಮಾಡುತ್ತಿರುವ ವಿಡಿಯೋವನ್ನು ಅಪ್‍ಲೋಡ್ ಮಾಡಿದ್ದರು. ಇದನ್ನು ಈಗಾಗಲೇ 14 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಟ್ಯಾಂಗರೀನ್ ಹಣ್ಣು ಕಿತ್ತಳೆ ಹಣ್ಣಿನ ಪ್ರಭೇದಕ್ಕೆ ಸೇರಿದ್ದು, ಇದು ಹೆಚ್ಚು ವಿಟಮಿನ್, ಖನಿಜಾಂಶ, ಪೋಷಕಾಂಶಗಳನ್ನು ಒಳಗೊಂಡಿದ್ದು, ಆರೋಗ್ಯ ವೃದ್ಧಿಗೆ ಬಹಳ ಉಪಯುಕ್ತವಾದುದಾಗಿದೆ.


ಒಟ್ಟಿನಲ್ಲಿ ವಯಸ್ಸನ್ನು ನಂಬಿ ಕೆಲಸ ಮಾಡದೇ ಮನಸ್ಸು, ಆತ್ಮವಿಶ್ವಾಸವನ್ನು ನಂಬಿ ಶ್ರಮವಹಿಸಿದರೆ ಸಾಧನೆ, ಯಶಸ್ಸು ಅಸಾಧ್ಯವಾಗದು ಎಂಬುದಕ್ಕೆ ಹರ್ಭಜನ್ ಕೌರ್ ಉತ್ತಮ ನಿದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ.Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು
First published: June 19, 2021, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories