Happy Birthday Amitabh Bachchan: 79ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್​ ಬಚ್ಚನ್​: ಆರೋಗ್ಯಕ್ಕಾಗಿ ಸಿಹಿ-ಮಾಂಸಾಹಾರದಿಂದ ದೂರ ಇರ್ತಾರಂತೆ ಬಿಗ್ -ಬಿ

ಈ ವಯಸ್ಸಿನಲ್ಲೂ ಅಮಿತಾಭ್​ ಬಚ್ಚನ್ ಅವರು ಸಾಲು ಸಾಲು ಸಿನಿಮಾಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿರುತ್ತಾರೆ. ಇಂತಹ ನಟನ ಫಿಟ್ನೆಸ್​ ಗುಟ್ಟು ಈಗ ರಟ್ಟಾಗಿದೆ. ಅವರ ಡಯಟ್​ ಪ್ಲಾನ್ ಹಾಗೂ ನಿತ್ಯದ ಅಭ್ಯಾಸಗಳ ಕುರಿತಾದ ಮಾಹಿತಿ ಇಲ್ಲಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಅಮಿತಾಬ್​​ ಬಚ್ಚನ್​​

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಅಮಿತಾಬ್​​ ಬಚ್ಚನ್​​

  • Share this:
ಬಾಲಿವುಡ್​ನಲ್ಲಿ ಬಿಗ್​-ಬಿ ಎಂದೇ ಖ್ಯಾತರಾಗಿರುವ ನಟ ಅಮಿತಾಭ್​ ಬಚ್ಚನ್ (Happy Birthday Amitabh Bachchan) ಅವರ ಹುಟ್ಟುಹಬ್ಬವಿಂದು. 79ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 1942ರ ಅಕ್ಟೋಬರ್​ 11ರಂದು ಅಲಹಾಬಾದ್​ನಲ್ಲಿ ಆಗಿತ್ತು. ಈ ಇಳಿವಯಸ್ಸಿನಲ್ಲೂ ಅಮಿತಾಭ್ ಬಚ್ಚನ್​ ಅವರು ತುಂಬಾ ಉತ್ಸಾಹದಿಂದ ಇರುತ್ತಾರೆ. ಅವರ ಫಿಟ್ನೆಸ್​ ನೋಡಿದರೆ, ಅವರಿಗೆ ಇಷ್ಟು ವಯಸ್ಸಾಗಿದೆ ಎಂದು ಅಂದಾಜಿಸಲು ಆಗುವುದಿಲ್ಲ. ಇವರ ವಯಸ್ಸಿನವರು ಮನೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿರುತ್ತಾರೆ. ಆದರೆ, ಈ ವಯಸ್ಸಿನಲ್ಲೂ ಅಮಿತಾಭ್​ ಬಚ್ಚನ್ ಅವರು ಸಾಲು ಸಾಲು ಸಿನಿಮಾಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿರುತ್ತಾರೆ. ಈಗಲೂ ಅವರು ದಿನದಲ್ಲಿ 16 ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿಯೇ ಈಗಲೂ ಇವರು ಯುವ ನಟನರಿಗೆ ಮಾದರಿ ಹಾಗೂ ಸ್ಫೂರ್ತಿ ಎಂದರೆ ತಪ್ಪಾಗದು.

ಈಗಲೂ ಸಹ ಅಮಿತಾಭ್​ ಬಚ್ಚನ್ ಅವರ ಕೈಯಲ್ಲಿ ಸಿನಿಮಾಗಳ ಜತೆಗೆ ಜಾಹೀರಾತುಗಳೂ ಸಹ ಇವೆ. ಹೊಸ ಹಾಗೂ ದಿಗ್ಗಜದ ನಿರ್ದೇಶಕರ ಜೊತೆ ಕೆಲಸ ಮಾಡುತ್ತಾರೆ. ಇಂತಹ ನಟನ ಆರೋಗ್ಯ (Health) ಹಾಗೂ ಫಿಟ್ನೆಸ್ (Fitness)​ ವಿಷಯಕ್ಕೆ ಬಂದರೆ, ತುಂಬಾ ಜನರಿಗೆ ಅವರ ಆರೋಗ್ಯದ ಗುಟ್ಟಿನ ಬಗ್ಗೆ ತಿಳಿಯುವ ಕಾತರವಿದೆ. ಅವರ ಹುಟ್ಟುಹಬ್ಬದಂದು ನಟನ ಫಿಟ್ನೆಸ್ ಸೀಕ್ರೆಟ್​ ಅನ್ನು ನಿಮಗಾಗಿ ತಂದಿದ್ದೇವೆ.

Happy birthday my handsome paapajiiiii♥️ @SrBachchan 🌸ಸಿಹಿ ತಿನಿಸುಗಳಿಂದ ದೂರ ಇರ್ತಾರೆ ಬಿಗ್​-ಬಿ

ಸೆಲೆಬ್ರಿಟಿ ಡೈಲಿ ರೂಟೀನ್​ ಪ್ರಕಾರ ಅಮಿತಾಭ್ ಬಚ್ಚನ್​ ಅವರು ಸಿಹಿ ತಿನಿಸುಗಳಿಂದ ದೂರ ಇರ್ತಾರಂತೆ. ಚಾಕೊಲೆಟ್ ಹಾಗೂ ಬೇಕರಿ ಐಟಂಗಳನ್ನೂ ಸೇವಿಸುವುದಿಲ್ಲವಂತೆ. ಈ ಪದಾರ್ಥಗಳಲ್ಲಿ ಸ್ಯಾಚುರೇಟೆಸ್​ ಕೊಬ್ಬು ಹಾಗೈ ಕ್ಯಾಲೋರಿ ಹೆಚ್ಚಾಗಿ ಇರುತ್ತದೆಯಂತೆ. ಇದರಿಂದಾಗಿ ಆರೋಗ್ಯಕ್ಕೆ ಹಾನಿಯಾಗೋದು ಖಂಡಿತ.

ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ ಚಿತ್ರೀಕರಣ ಮಾಡಿದ ದಿನಗಳನ್ನ ನೆನಪಿಸಿಕೊಂಡ ಅಮಿತಾಭ್‌ ಬಚ್ಚನ್‌..!

ಧೂಮಪಾನ-ಮದ್ಯಪಾನ ಮಾಡುವುದಿಲ್ಲ

ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್ ಅವರು ಧೂಮಪಾನ ಮಾಡಿರುವುದನ್ನು ನೋಡಿರಬಹುದು. ಆದರೆ, ಅವರು ನಿಜ ಜೀವನದಲ್ಲಿ ಸಿಗರೇಟ್​ ಸೇದುವುದಿಲ್ಲವಂತೆ. ಇನ್ನು ಮದ್ಯಪಾನದ ವಿಷಯಕ್ಕೆ ಬಂದರೆ ಅದರಿಂದಲೂ ದೂರ ಇರುತ್ತಾರಂತೆ ಅಮಿತಾಭ್​.

ನಿತ್ಯ ವ್ಯಾಯಾಮ: ಅಮಿತಾಭ್​ ಬಚ್ಚನ್ ಅವರು ನಿತ್ಯ ವ್ಯಾಯಾಮ ತಪ್ಪದೇ ಮಾಡುತ್ತಾರಂತೆ. ಬೆಳಿಗ್ಗೆ ವಾಕಿಂಗ್​ ಜತೆಗೆ ಯೋಗ ಮಾಡುವುದು ಅವರ ಜೀವನದಲ್ಲಿ ಒಂದು ಭಾಗವಾಗಿದೆಯಂತೆ. ನಿಯಮಿತ ವ್ಯಾಯಮ ಅವರ ಫಿಟ್ನೆಸ್​ನ ದೊಡ್ಡ ಗುಟ್ಟು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಅವರು ನಿತ್ಯ ಧ್ಯಾನ ಮಾಡುತ್ತಾರಂತೆ.

ಟೀ-ಕಾಫಿ ಸಹ ಕುಡಿಯೋದಿಲ್ಲ ಅಮಿತಾಭ್​

ಮದ್ಯಪಾನ, ಧೂಮಪಾನದ ಜೊತೆಗೆ ಕಾಫಿ ಹಾಗೂ ಟೀ ಸಹ ಕುಡಿಯೋದಿಲ್ಲವಂತೆ. ಅವರಿಗೆ ಟೀ-ಕಾಫಿ ಇಷ್ಟವಿಲ್ಲವಂತೆ. ತುಂಬಾ ವರ್ಷಗಳ ಮೊದಲು ಅವರು ಕಾಫಿ ಇಷ್ಟಪಡುತ್ತಿದ್ದರಂತೆ. ಆದರೆ ಕೆಲ ಸಮಯದಿಂದ ಅದನ್ನೂ ಅವರು ಬಿಟ್ಟಿದ್ದಾರಂತೆ. ಕಾಫಿಯಲ್ಲಿರುವ ಕೆಫಿನ್​ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

ಇದನ್ನೂ ಓದಿ: Amitabh Bachchan: ಅಮಿತಾಭ್​ ಬಚ್ಚನ್​-ಜಯಾ ಬಚ್ಚನ್​ ದಾಂಪತ್ಯಕ್ಕೆ 48ರ ಸಂಭ್ರಮ...!

ಮಾಂಸಾಹಾರ ಸೇವಿಸುವುದಿಲ್ಲ: ಅಮಿತಾಭ್​ ಬಚ್ಚನ್ ಅವರು ಮಾಂಸಾಹಾರಿ. ಆದರೆ ಈಗ ಅದರ ಸೇವನೆಯನ್ನೂ ನಿಲ್ಲಿಸಿದ್ದಾರೆ. ಕೆಲ ಸಮಯದ ಹಿಂದೆ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್​ ಮಾಡಿದ್ದು, ಅದರಲ್ಲಿ ಅವರು ಹಾಗೂ ಪತ್ನಿ ಜಯಾ ಬಚ್ಚನ್ ಸಹ ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿರುವುದಾಗಿ ತಿಳಿಸಿದ್ದರು.

ಅಮಿತಾಭ್​ ಬಚ್ಚನ್ ಅವರ ನಿತ್ಯದ ಡಯಟ್ ಪ್ಲಾನ್​ ಹೀಗಿದೆ...

ಅವರು ಬೆಳಿಗ್ಗೆ ತುಳಸಿ ದಳದ ಮೂಲಕ ಡಯಟ್​ ಆರಂಭಿಸುತ್ತಾರೆ. ನಂತರ ಪ್ರೋಬಯೊಟಿಕ್​ ಫುಡ್ಸ್​, ಪ್ರೋಟೀನ್​ ಡ್ರಿಂಕ್ಸ್​, ಅನ್ನು ನಿತ್ಯ ತೆಗೆದುಕೊಳ್ಳುತ್ತಾರೆ. ಜೊತೆಗೆ ಎಳನೀರು, ನೆಲ್ಲಿಕಾಯಿ ಜ್ಯೂಸ್​, ಬಾಳೆಹಣ್ಣು, ಖರ್ಜೂರವನ್ನು ಸ್ಯ್ನಾಕ್ಸ್ ರೂಪದಲ್ಲಿ ಸೇವಿಸುತ್ತಾರೆ. ಹೆಚ್ಚಾಗಿ ನೀರನ್ನೂ ಕುಡಿಯುತ್ತಾರೆ. ಇದೇ ಅವರ ಫಿಟ್ನೆಸ್​ ಗುಟ್ಟು.
Published by:Anitha E
First published: