ಹನಾನ್ ಹಮೀದ್: ಸೋಷಿಯಲ್​ ಮೀಡಿಯಾದಿಂದ ಬೆಳ್ಳಿತೆರೆಗೆ

news18
Updated:July 30, 2018, 8:15 PM IST
ಹನಾನ್ ಹಮೀದ್: ಸೋಷಿಯಲ್​ ಮೀಡಿಯಾದಿಂದ ಬೆಳ್ಳಿತೆರೆಗೆ
news18
Updated: July 30, 2018, 8:15 PM IST
-ನ್ಯೂಸ್ 18 ಕನ್ನಡ

ಕಾಲೇಜು ಅವಧಿ ಬಳಿಕ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುತ್ತಿದ್ದ ಹನಾನ್ ಹಮೀದ್ ಎಂಬ ಬಡ ವಿದ್ಯಾರ್ಥಿನಿಯ ಜೀವನ ಶೈಲಿ ಇತ್ತೀಚೆಗೆ ಸುದ್ದಿ ಮಾಧ್ಯಮದ ಗಮನ ಸೆಳೆದಿತ್ತು. ಈ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಹನಾನ್ ನೆರವಿಗೆ ಹಲವರು ಮುಂದೆ ಬಂದಿದ್ದರು.

ಬಿಎಸ್​​ಸಿ ಪದವಿ ಓದುತ್ತಿರುವ ಹನಾನ್​ಗೆ ಅದೃಷ್ಟ ಖುಲಾಯಿಸುತ್ತಿದೆ. ತನ್ನ ಕಷ್ಟ ದಿನಗಳನ್ನು ದೂರ ಮಾಡುವ ಸಕಾಲ ಶೀಘ್ರ ಬರಲಿದೆ. ಸಿನಿಮಾದಲ್ಲಿ ಅಭಿನಯಿಸಬೇಕೆಂದು ಹನಾನ್ ಕನಸು ಕಟ್ಟಿಕೊಂಡಿದ್ದಳು. ಅದರಂತೆ ಈಗ ಸಿನಿಮಾಗಳೇ ಈ ಮುಗ್ಧ ಹುಡುಗಿಯನ್ನು ಹುಡುಕಿ ಬರುತ್ತಿದೆ.

ಹನಾನ್​ಳ ಮನಮಿಡಿಯುವ ಜೀವನಕಥೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಓದಿದ್ದ ನಿರ್ದೇಶಕ ಅರುಣ್ ಗೋಪಿ ಮುಂದಿನ ಚಿತ್ರದಲ್ಲಿ ಅವಕಾಶ ನೀಡಲು ಮುಂದಾಗಿದ್ದರು. ಅದರಂತೆ ಮೋಹನ್ ಲಾಲ್ ಮಗ ಪ್ರಣವ್ ಲಾಲ್ ಅಭಿನಯದ ಮುಂಬರುವ ಸಿನಿಮಾ 'ಇರುವದಾಮ್ ನೂಟಾಂಡ್'​ ಚಿತ್ರದಲ್ಲಿ ಹನಾನ್​ಗೆ ಪಾತ್ರವೊಂದು ಲಭಿಸಿದೆ. ಇಲ್ಲಿ ಪ್ರಣವ್ ಜೊತೆ ಹನಾನ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ತಾರಾ ಪಟ್ಟಕ್ಕೇರಿರುವ ಹನಾನ್​ಗೆ ಈಗ ಮತ್ತೊಂದು ಚಿತ್ರತಂಡ ಕೂಡ ತಮ್ಮ ಸಿನಿಮಾಗಳಲ್ಲಿ ಅಭಿನಯಿಸಲು ಆಫರ್ ನೀಡಿದೆ. ಅದೂ ಕೂಡ ಬರೋಬ್ಬರಿ ಮೂರು ಸಿನಿಮಾಗಳಲ್ಲಿ.

ಮಲಯಾಳಂ ಚಿತ್ರ ನಿರ್ಮಾಪಕ ನೌಷಾದ್ 'ವೈರಲ್ 2019', 'ಅರೆಕಳ್ಳನ್ ಮುಕ್ಕಾಕಳ್ಳನ್' ಮತ್ತು 'ಮಿಠಾಯಿ ತೆರಿವ್' ಎಂಬ ಮೂರು ಚಿತ್ರಗಳನ್ನು ನಿರ್ಮಿಸುತ್ತಿದ್ದು, ಈ ಮೂರು ಸಿನಿಮಾಗಳಲ್ಲಿ ಹನಾನ್​ಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಿರ್ಮಾಪಕರು ಈಗಾಗಲೇ ಹನಾನ್​ಳನ್ನು ಭೇಟಿಯಾಗಿ ಮುಂಗಡ ಸಂಭಾವನೆಯನ್ನೂ ಪಾವತಿಸಿದ್ದಾರೆ.
Loading...

ತನ್ನ ಬಾಲ್ಯದ ಕನಸು ವಿವಿಧ ಮಜಲುಗಳನ್ನು ಪಡೆದುಕೊಂಡು ಸಕಾರಗೊಳ್ಳುತ್ತಿರುವುದಕ್ಕೆ ಹನನ್ ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಹಿಂದೆ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್​ ಆಗಿ ಕಾಣಿಸಿಕೊಂಡಿರುವ ಹನಾನ್​ಗೆ ಈಗ ಮುಖ್ಯ ಪಾತ್ರಗಳು ಲಭಿಸುತ್ತಿದೆ.  ಕಷ್ಟಪಟ್ಟು ಕುಟುಂಬವನ್ನು ನೋಡಿಕೊಳ್ಳುತ್ತಿದ್ದ ಹನಾನ್ ಹಮೀದ್ ಎಂಬ ವಿದ್ಯಾರ್ಥಿನಿಯ ಕಷ್ಟದ ದಿನಗಳು ಕೊನೆಗೊಳ್ಳುವ ಸೂಚನೆಯಂತು ಲಭಿಸಿದೆ. ಬಾಲ್ಯದಿಂದಲೇ ಹೋರಾಟದ ಬದುಕನ್ನು ಕಂಡಿರುವ ಹನಾನ್ ಇನ್ನು ಮಾಲಿವುಡ್​ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮುಂದುವರಿಸಲಿದ್ದಾಳೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...